ಕನ್ನಡದಲ್ಲಿ ನಟಿಸಿದ್ದ ಈ ನಟಿಯ ಅದ್ದೂರಿ ವಿವಾಹ; 16 ದಿನಕ್ಕೆ ಗಂಡನಿಂದ ದೂರವಾದ ಹೀರೋಯಿನ್

ಕನ್ನಡದಲ್ಲಿ ನಟಿಸಿರೋ ಎಸ್ತರ್ ನೊರೊನಾ ಅವರು 2019ರಲ್ಲಿ ನೋಯೆಲ್ ಎಂಬುವವರನ್ನು ಮದುವೆಯಾಗಿ 16 ದಿನಗಳಲ್ಲೇ ವಿಚ್ಛೇದನ ಪಡೆದ ಘಟನೆ ಸುದ್ದಿಯಾಗಿದೆ. ಮದುವೆ ಆದ ಬಳಿಕ ಅವರ ನಿಜವಾದ ಸ್ವಭಾವ ಗೊತ್ತಾಗದಿರುವುದು ವಿಚ್ಛೇದನಕ್ಕೆ ಕಾರಣ ಎಂದು ಎಸ್ತರ್ ಹೇಳಿದ್ದಾರೆ. ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಯಶಸ್ವಿಯಾಗುತ್ತಿರುವ ಅವರು ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ

ಕನ್ನಡದಲ್ಲಿ ನಟಿಸಿದ್ದ ಈ ನಟಿಯ ಅದ್ದೂರಿ ವಿವಾಹ; 16 ದಿನಕ್ಕೆ ಗಂಡನಿಂದ ದೂರವಾದ ಹೀರೋಯಿನ್
ಎಸ್ತರ್
Follow us
ರಾಜೇಶ್ ದುಗ್ಗುಮನೆ
|

Updated on:Nov 30, 2024 | 2:54 PM

ಸೆಲೆಬ್ರಿಟಿಗಳ ವಿಚ್ಛೇದನ ವಿಚಾರ ಯಾವಾಗಲೂ ಸದಾ ಚರ್ಚೆಯಲ್ಲಿ ಇರುತ್ತದೆ. ಸಮಂತಾ-ನಾಗ ಚೈತನ್ಯ ವಿಚ್ಛೇದನ ನಡೆದು ಮೂರು ವರ್ಷಗಳೇ ಕಳೆದರೂ ಈಗಲೂ ಸುದ್ದಿ ಆಗುತ್ತಿದೆ. ಇತ್ತೀಚೆಗೆ ಸಂಗೀತ ಸಂಯೋಜಕ ಎಆರ್​ ರೆಹಮಾನ್ ಅವರು ಪತ್ನಿ ಸೈರಾ ಬಾನುಗೆ ವಿಚ್ಛೇದನ ನೀಡಿದ್ದು ಸುದ್ದಿ ಆಗಿತ್ತು. ಈ ದಂಪತಿ ಮದುವೆ ಆಗಿ 29 ವರ್ಷಗಳು ಕಳೆದಿದ್ದವು. ಅಚ್ಚರಿಯ ಸಂಗತಿ ಎಂದರೆ ಕನ್ನಡದಲ್ಲಿ ನಟಿಸಿದ್ದ ಎಸ್ತರ್ ನೊರೋನಾ ಕೇವಲ 16 ದಿನಕ್ಕೆ ಗಂಡನಿಂದ ದೂರ ಆಗಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಎಸ್ತರ್ ನೊರೋನಾ 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲು ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ 2014ರಲ್ಲಿ ‘ಉಸಿರಿಗಿಂತ ನೀನೆ ಹತ್ತಿರ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ‘ನಾವಿಕ’, ‘ಅತಿರಥ’ ‘ಲಂಕೆ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಎಸ್ತರ್ ಹಲವು ವರ್ಷಗಳ ಕಾಲ ಹುಡುಗನೊಬ್ಬನ ಜೊತೆ ಡೇಟ್ ಮಾಡಿದ್ದರು. ಮದುವೆ ಆದ ಬಳಿಕ ಇವರ ಸಂಸಾರ ಹೆಚ್ಚುದಿನ ನಡೆಯಲಿಲ್ಲ.

ಎಸ್ತರ್ ಅವರು 2019ರಲ್ಲಿ ನೋಯೆಲ್ ಸೀನ್ ಎಂಬುವವರನ್ನು ಮದುವೆ ಆದರು. ಇವರ ನಿಶ್ಚಿತಾರ್ಥ ನಡೆದು ವರ್ಷವೇ ಕಳೆದಿತ್ತು. ಇವರ ಮದುವೆ ಅದ್ದೂರಿಯಾಗಿ ನಡೆಯಿತು. ಮದುವೆ ಆಗಿ 16 ದಿನಕ್ಕೆ ಪತಿಯ ಅಸಲಿ ವಿಚಾರ ಗೊತ್ತಾಯಿತು ಎಂದಿರೋ ಅವರು ಮೂರು ತಿಂಗಳಿಗೆ ವಿಚ್ಛೇದನ ಪಡೆದರು.

‘16 ದಿನಕ್ಕೆ ಆತನ ನಿಜವಾದ ಬಣ್ಣ ಗೊತ್ತಾಯಿತು. ಹೀಗಾಗಿ ಬೇರೆ ಆಗುವ ನಿರ್ಧಾರ ತೆಗೆದುಕೊಂಡೆ’ ಎಂದು ಎಸ್ತರ್ ಅವರು ಹೇಳಿದ್ದರು. ಮದುವೆ ಆಗಿ ಮೂರು ತಿಂಗಳಲ್ಲಿ ವಿಚ್ಛೇದನ ಪಡೆದ ವಿಚಾರ ಘೋಷಣೆ ಮಾಡಿದ್ದರು. ವಿಚ್ಛೇದನಕ್ಕೂ ಮೊದಲೇ ಇವರು ದೂರ ಆಗುವ ನಿರ್ಧಾರಕ್ಕೆ ಬಂದಿದ್ದರು.

ಇದನ್ನೂ ಓದಿ: ‘ಕರ್ಮ ಬಡ್ಡಿ ಸಮೇತ ಬರುತ್ತೆ’; ಧನುಷ್ ವಿಚ್ಛೇದನಕ್ಕೆ ಟಾಂಗ್ ಕೊಟ್ರಾ ನಯನತಾರಾ?

ಇತ್ತೀಚೆಗೆ ತೆಲುಗಿನಲ್ಲಿ ‘ಟೆನೆಂಟ್’ ಹೆಸರಿನ ಸಿನಿಮಾ ಬಂದಿದೆ. ಈ ಚಿತ್ರ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಸಿನಿಮಾ ಏಪ್ರಿಲ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ಮೆಚ್ಚುಗೆ ಪಡೆದಿದೆ. ಈ ಚಿತ್ರದಿಂದ ಅವರು ಗೆಲುವು ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:54 pm, Sat, 30 November 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್