AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​​ಟಿಆರ್ ಪತ್ನಿ, ಮಹೇಶ್ ಬಾಬು ಪತ್ನಿಯ ಬಗ್ಗೆ ಉಪಾಸನಾ ಹೇಳಿದ್ದೇನು?

ಸ್ಟಾರ್ ನಟ ರಾಮ್ ಚರಣ್ ಪತ್ನಿ ಜೊತೆಗೆ ತಮ್ಮ ಪತಿಯ ಗೆಳೆಯರ ಪತ್ನಿಯರೊಟ್ಟಿಗೆ ಒಳ್ಳೆಯ ಸ್ನೇಹ, ಅನುಬಂಧವನ್ನು ಸಹ ಉಪಾಸನಾ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಅವರು, ಜೂ ಎನ್​​ಟಿಆರ್ ಪತ್ನಿ, ಮಹೇಶ್ ಬಾಬು ಪತ್ನಿ ನಮ್ರತಾ, ಸಮಂತಾ ಋತ್ ಪ್ರಭು ಇನ್ನೂ ಕೆಲವರ ಬಗ್ಗೆ, ಅವರ ವಿಶೇಷತೆಗಳ ಬಗ್ಗೆ ಅವರು ಮಾತನಾಡಿದ್ದರು.

ಜೂ ಎನ್​​ಟಿಆರ್ ಪತ್ನಿ, ಮಹೇಶ್ ಬಾಬು ಪತ್ನಿಯ ಬಗ್ಗೆ ಉಪಾಸನಾ ಹೇಳಿದ್ದೇನು?
Ram Charan Ram Charan
ಮಂಜುನಾಥ ಸಿ.
|

Updated on: Oct 28, 2026 | 1:01 PM

Share

ಉಪಾಸನಾ ಕೋನಿಡೆಲ, ಸ್ಟಾರ್ ನಟ ರಾಮ್ ಚರಣ್ ಪತ್ನಿ ಮತ್ತು ಮೆಗಾ ಕುಟುಂಬದ ಸೊಸೆ. ಖುದ್ದು ‘ಅಪೊಲೊ’ ಉದ್ಯಮದ ಒಡತಿಯೂ ಆಗಿರುವ ಉಪಾಸನಾ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಜೊತೆಗೆ ತಮ್ಮ ಪತಿಯ ಗೆಳೆಯರ ಪತ್ನಿಯರೊಟ್ಟಿಗೆ ಒಳ್ಳೆಯ ಸ್ನೇಹ, ಅನುಬಂಧವನ್ನು ಸಹ ಉಪಾಸನಾ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಅವರು, ಜೂ ಎನ್​​ಟಿಆರ್ ಪತ್ನಿ, ಮಹೇಶ್ ಬಾಬು ಪತ್ನಿ ನಮ್ರತಾ, ಸಮಂತಾ ಋತ್ ಪ್ರಭು ಇನ್ನೂ ಕೆಲವರ ಬಗ್ಗೆ, ಅವರ ವಿಶೇಷತೆಗಳ ಬಗ್ಗೆ ಅವರು ಮಾತನಾಡಿದ್ದರು.

ಚಿತ್ರರಂಗದೊಂದಿಗೆ ನೇರ ಸಂಬಂಧ ಇಲ್ಲದೇ ಇದ್ದರೂ ಚಿತ್ರರಂಗದ ಹಲವರೊಟ್ಟಿಗೆ, ವಿಶೇಷವಾಗಿ ಸ್ಟಾರ್ ನಟರುಗಳ ಪತ್ನಿಯರೊಟ್ಟಿಗೆ ತಮ್ಮ ಗೆಳೆತನ ಇದೆ ಎಂದು ಉಪಾಸನಾ ಹೇಳಿಕೊಂಡಿದ್ದರು. ಸಮಂತಾ ಬಗ್ಗೆ ಮಾತನಾಡಿದ್ದ ಉಪಾಸನಾ, ‘ಸಮಂತಾ ನನಗೆ ಪ್ರತಿದಿನವೂ ಸ್ಪೂರ್ತಿ ತುಂಬುತ್ತಾರೆ. ಅವರಿಂದ ನಾನು ಪ್ರತಿದಿನವೂ ಕಲಿಯುತ್ತೇನೆ. ಸಮಂತಾ ಅವರ ವ್ಯಕ್ತಿತ್ವ ಹಾಗೂ ವಿಷಯಗಳು ತಮ್ಮ ಮೇಲೆ ಪ್ರಭಾವ ಬೀರುತ್ತವೆ ಎಂದ ಅವರು, ಸಮಂತಾ ಅವರ ಪರಿಶ್ರಮ ಹಾಗೂ ಬದ್ಧತೆ ಅತ್ಯದ್ಭುತ ಎಂದು ಪ್ರಶಂಸಿಸಿದರು. ಸಮಂತಾದಿಂದ ತಾನು ನಿಜವಾಗಿಯೂ ಕಲಿಯುತ್ತಿರುವುದಾಗಿ ಅವರು ಹೇಳಿದರು.

ಜೂ ಎನ್​​ಟಿಆರ್ ಪತ್ನಿ ಪ್ರಣತಿ ಬಗ್ಗೆ ಮಾತನಾಡುತ್ತಾ, ‘ಪ್ರಣತಿಯನ್ನು ನೋಡಿದ ಕೂಡಲೇ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ನನಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾದರೂ ಬಹಳ ಗಟ್ಟಿ ವ್ಯಕ್ತಿತ್ವದ ಮಹಿಳೆ. ಎಂಥಹುದೇ ಸನ್ನಿವೇಶವನ್ನು ಅವರು ನಿಭಾಯಿಸಬಲ್ಲರು. ನಾವು ಬಹಳ ಆಪ್ತರು. ನಾನು ಇಲ್ಲದೇ ಇದ್ದಾಗ ನನ್ನ ಮನೆಯನ್ನು ಅದ್ಭುತವಾಗಿ ಅವರು ನೋಡಿಕೊಳ್ಳುತ್ತಾರೆ. ಜೂ ಎನ್​​ಟಿಆರ್ ಪ್ರಣಿತಯನ್ನು ಪತ್ನಿಯನ್ನಾಗಿ ಪಡೆದಿರುವುದು ಅವರ ಅದೃಷ್ಟ’ ಎಂದಿದ್ದಾರೆ ಉಪಾಸನಾ.

ಇದನ್ನೂ ಓದಿ:ಶ್ರೀಕೃಷ್ಣನ ಪಾತ್ರದಲ್ಲಿ ರಾಮ್ ಚರಣ್? ‘ಲಾಲೋ’ ತೆಲುಗು ರಿಮೇಕ್‌ ಬಗ್ಗೆ ಗಾಸಿಪ್

ಇನ್ನು ಮಹೇಶ್ ಬಾಬು ಪತ್ನಿ ನಮ್ರತಾ ಬಗ್ಗೆ ಮಾತನಾಡಿರುವ ಉಪಾಸನಾ, ‘ನನಗೆ ಚಿತ್ರರಂಗದಲ್ಲಿ ಯಾರು ಏನು ಎಂಬುದು ಗೊತ್ತಾಗುವುದಿಲ್ಲ. ಆದರೆ ನಮ್ರತಾ ಅವರಿಗೆ ಎಲ್ಲ ಮಾಹಿತಿ ಇರುತ್ತದೆ. ಅವರು ನನಗೆ ಎಲ್ಲವನ್ನೂ ಹೇಳಿಕೊಡುತ್ತಾರೆ. ಇತ್ತೀಚೆಗೆ ನಾವು ಪ್ರವಾಸ ಹೋಗಿದ್ದೆವು ಆಗ ಅವರು ಚಿತ್ರರಂಗದ ಇಂಚಿಂಚಿನ ಮಾಹಿತಿಯನ್ನು ನೀಡಿದರು. ಅವರ ಜೊತೆ ಸಮಯ ಕಳೆಯುವುದು ನನಗೆ ಬಹಳ ಇಷ್ಟ. ನಮ್ರತಾರ ಪುತ್ರಿ ಸಿತಾರ ಹುಟ್ಟುಹಬ್ಬ ಹಾಗೂ ನನ್ನ ಹುಟ್ಟುಹಬ್ಬ ಒಂದೇ ದಿನ ಆದ್ದರಿಂದ ಸಿತಾರ ಜೊತೆಗೆ ನನಗೆ ವಿಶೇಷ ನಂಟು ಇದೆ’ ಎಂದರು ಉಪಾಸನಾ.

ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಬಗ್ಗೆ ಕೇಳಿದಾಗ, ‘ಅವರು ನನ್ನ ಕ್ಲೋಸ್ ಫ್ರೆಂಡ್, ಅವರೆಂದರೆ ನನಗೆ ಬಹಳ ಇಷ್ಟ, ಅವರು ನೆಕ್ಸ್ಟ್ ಲೆವೆಲ್ ವ್ಯಕ್ತಿ’ ಎಂದರು ಉಪಾಸನಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More