AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ನಿರ್ಮಾಣ ತ್ಯಜಿಸಿದ ವೆಟ್ರಿಮಾರನ್, ಕಾರಣ ಏನು?

Vetrimaran movies: ವೆಟ್ರಿಮಾರನ್ ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ನಿರ್ದೇಶಕರಾಗಿ ಮಾತ್ರವೇ ಅಲ್ಲದೆ ನಿರ್ಮಾಪಕರಾಗಿಯೂ ಸಹ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಈಗ ವೆಟ್ರಿಮಾರನ್ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಬಂದ್ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಕಾರಣವೇನು? ಅವರೇ ವಿವರಿಸಿದ್ದಾರೆ ಓದಿ...

ಸಿನಿಮಾ ನಿರ್ಮಾಣ ತ್ಯಜಿಸಿದ ವೆಟ್ರಿಮಾರನ್, ಕಾರಣ ಏನು?
Vetrimaran
ಮಂಜುನಾಥ ಸಿ.
|

Updated on: Sep 02, 2025 | 3:58 PM

Share

ವೆಟ್ರಿಮಾರನ್ (Vetrimaran), ಭಾರತದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಈಗಿನ ಹಲವು ಹಿಟ್ ನಿರ್ದೇಶಕರ ರೀತಿ ಕೇವಲ ಮಾಸ್ ಮಸಾಲಾ ಸಿನಿಮಾಗಳನ್ನು ಮಾಡದ ವೆಟ್ರಿಮಾರನ್, ಕಮರ್ಶಿಯಲ್ ಅಂಶಗಳನ್ನು ಒಳಗೊಂಡ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸುತ್ತಾ ಬರುತ್ತಿದ್ದಾರೆ. ಆಸ್ಕರ್​​ಗೆ ಭಾರತದ ಎಂಟ್ರಿ ಆಗಿದ್ದ ‘ವಿಸಾರನೈ’ ಸೇರಿದಂತೆ ರಾಷ್ಟ್ರಪ್ರಶಸ್ತಿ ವಿಜೇತ ‘ಆಡುಕುಲಂ’, ‘ವಿಡುದಲೈ’, ‘ಅಸುರನ್’, ‘ವಡ ಚೆನ್ನೈ’ ಇನ್ನೂ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ವೆಟ್ರಿಮಾರನ್ ನಿರ್ದೇಶಿಸಿದ್ದಾರೆ.

ದಮನಿತರ ಪರವಾಗಿಯೇ ಸಿನಿಮಾಗಳನ್ನು ಮಾಡುವುದು ವೆಟ್ರಿಮಾರನ್ ಶೈಲಿ. ವೆಟ್ರಿಮಾರನ್ ನಿರ್ದೇಶಕರಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಕೆಲವು ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಭಿನ್ನ ದನಿಯುಳ್ಳ ನಿರ್ದೇಶಕರಿಗೆ ಅವಕಾಶಗಳನ್ನು ನಿರ್ಮಾಣ ಸಂಸ್ಥೆಯ ಮೂಲಕ ವೆಟ್ರಿಮಾರನ್ ನೀಡಿದ್ದಾರೆ. ಆದರೆ ಇದೀಗ ಅವರೇ ಹೇಳಿರುವಂತೆ ಸಿನಿಮಾ ನಿರ್ಮಾಣ ಸಂಸ್ಥೆಯನ್ನೇ ಮುಚ್ಚುತ್ತಿದ್ದಾರಂತೆ ವೆಟ್ರಿಮಾರನ್.

ವೆಟ್ರಿಮಾರನ್ ಸಂದರ್ಶನವೊಂದರಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದು, ತಮ್ಮ ನಿರ್ಮಾಣ ಸಂಸ್ಥೆಯನ್ನು ಬಂದ್ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಅದೂ ಅವರ ನಿರ್ಮಾಣದ ಸಿನಿಮಾಕ್ಕೆ ಸಿಬಿಎಫ್​ಸಿ ಸಮಸ್ಯೆ ಎದುರಾದ ಬೆನ್ನಲ್ಲೆ ವೆಟ್ರಿಮಾರನ್ ಈ ರೀತಿಯ ಘೋಷಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಜೂ ಎನ್​ಟಿಆರ್ ಮನವಿಗೆ ಸ್ಪಂದಿಸಿದ ನಿರ್ದೇಶಕ ವೆಟ್ರಿಮಾರನ್

ವೆಟ್ರಿಮಾರನ್ 2012 ರಲ್ಲಿ ಗ್ರಾಸ್ ರೂಟ್ ಫಿಲಂ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ‘ಕಾಕ ಮೊಟ್ಟೈ’ ಸೇರಿದಂತೆ ಹಲವಾರು ಸಿನಿಮಾಗಳನ್ನು ವೆಟ್ರಿಮಾರನ್ ಅವರು ನಿರ್ಮಾಣ ಮಾಡಿದ್ದರು. ಆದರೆ ಇತ್ತೀಚೆಗೆ ಅವರ ನಿರ್ಮಾಣದ ‘ಬ್ಯಾಡ್ ಗರ್ಲ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಲು ತಕರಾರು ಮಾಡಿತ್ತು. ವೆಟ್ರಿಮಾರನ್ ಕೋರ್ಟ್ ಮೆಟ್ಟಿಲೇರಿ ಪ್ರಮಾಣ ಪತ್ರ ತೆಗೆದುಕೊಂಡರು. ಆ ಸಿನಿಮಾದ ಬಿಡುಗಡೆಗೆ ಮುಂಚೆಯೇ ನಿರ್ಮಾಣ ಸಂಸ್ಥೆಯನ್ನು ಬಂದ್ ಮಾಡುತ್ತಿದ್ದಾರೆ.

‘ಬ್ಯಾಡ್ ಗರ್ಲ್’ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ವೆಟ್ರಿಮಾರನ್, ‘ನಿರ್ದೇಶಕನದ್ದು ಕ್ರಿಯಾಶೀಲ ವೃತ್ತಿ ಆದರೆ ನಿರ್ಮಾಪಕನದ್ದು ತೆರಿಗೆ ಅಧಿಕಾರಿ ಮಾದರಿಯ ವೃತ್ತಿ. ನಿರ್ದೇಶಕನಾಗಿರುವುದರಲ್ಲಿ ಹೆಚ್ಚಿನ ಒತ್ತಡ ಇಲ್ಲ, ಅಲ್ಲಿ ಕೆಲಸ ಮಾಡುತ್ತಿದ್ದರೆ ಸಾಕು. ಆದರೆ ನಿರ್ಮಾಪಕನ ಕೆಲಸ ಬಹಳ ಒತ್ತಡದ್ದು, ಟೀಸರ್​​ಗೆ ಬರುವ ಕಮೆಂಟ್​ಗಳ ಮೇಲೂ ಸಹ ಕಣ್ಣಿಡಬೇಕು. ನನ್ನಂಥಹವರು ಹಣ ಸಾಲ ಪಡೆದು ಸಿನಿಮಾ ಮಾಡುತ್ತೇವೆ. ಇದೆಲ್ಲ ಬಹಳ ಒತ್ತಡದ ಕೆಲಸ ಹಾಗಾಗಿ ‘ಬ್ಯಾಡ್ ಗರ್​ಲ್’ ನಮ್ಮ ನಿರ್ಮಾಣ ಸಂಸ್ಥೆಯ ಕೊನೆಯ ಸಿನಿಮಾ’ ಎಂದಿದ್ದಾರೆ ವೆಟ್ರಿಮಾರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ