ಖಡಕ್ ಲುಕ್​ನಲ್ಲಿ ಬಂದ ವಿಜಯ್ ದೇವರಕೊಂಡ; ಫಸ್ಟ್​ ಲುಕ್​​ಗೆ ರಶ್ಮಿಕಾ ಕೂಡ ಫಿದಾ

ವಿಜಯ್ ದೇವರಕೊಂಡ ಅವರು ಬಿಗ್ ಬಜೆಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಅವರು ಈ ಮೊದಲು ಬಿಗ್ ಬಜೆಟ್ ಸಿನಿಮಾ ‘ಲೈಗರ್’ನಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರ ‘VD 12’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ಖಡಕ್ ಲುಕ್​ನಲ್ಲಿ ಬಂದ ವಿಜಯ್ ದೇವರಕೊಂಡ; ಫಸ್ಟ್​ ಲುಕ್​​ಗೆ ರಶ್ಮಿಕಾ ಕೂಡ ಫಿದಾ
ವಿಜಯ್-ರಶ್ಮಿಕಾ
Follow us
|

Updated on:Aug 03, 2024 | 7:33 AM

ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಸೈಲೆಂಟ್ ಆಗಿದ್ದರು. ಅವರ ಸಿನಿಮಾಗಳು ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ನೆಲಕಚ್ಚಿದೆ. ಈ ಬೆನ್ನಲ್ಲೇ ಅವರು ‘ವಿಡಿ 12’ ಚಿತ್ರದ ಪೋಸ್ಟರ್ ಅನಾವರಣ ಮಾಡಿದ್ದಾರೆ. ಈ ಪೋಸ್ಟರ್​ನಲ್ಲಿ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಮಾರ್ಚ್ 28ಕ್ಕೆ ಥಿಯೇಟರ್​ಗೆ ಅಪ್ಪಳಿಸಲಿದೆ. ಚಿತ್ರದ ಮೊದಲ ಪೋಸ್ಟರ್ ಗಮನ ಸೆಳೆದಿದೆ.

ವಿಜಯ್ ದೇವರಕೊಂಡ ಅವರು ಬಿಗ್ ಬಜೆಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಅವರು ಈ ಮೊದಲು ಬಿಗ್ ಬಜೆಟ್ ಸಿನಿಮಾ ‘ಲೈಗರ್’ನಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈಗ ಅವರು ‘ವಿಡಿ 12’ ಚಿತ್ರದ ಮೂಲಕ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಮೊದಲ ಲುಕ್​ನಲ್ಲಿ ಅವರ ಗೆಟಪ್ ಸಖತ್ ರಗಡ್ ಆಗಿದೆ. ಅವರು ಕೂದಲನ್ನು ಕಟ್ ಮಾಡಿಸಿದ್ದಾರೆ. ‘ಅವನ ಡೆಸ್ಟಿನಿ ಅವನಿಗೆ ಕಾಯುತ್ತಿದೆ’ ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.

ವಿಜಯ್ ದೇವರಕೊಂಡ ಅವರ ಈ ಫೋಟೋಗೆ ರಶ್ಮಿಕಾ ಮಂದಣ್ಣ, ರಾಶಿ ಖಾನ್ ಸೇರಿ ಅನೇಕರು ಫೈಯರ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರ ಸಿನಿಮಾಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಲೀಕ್ ಆಗಿತ್ತು. ಅವರು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ತಂಡ ಶ್ರೀಲಂಕಾದಲ್ಲಿ ಶೂಟ್ ಮಾಡಿದೆ.

ಇದನ್ನೂ ಓದಿ: ವಿಜಯ್ ದೇವರಕೊಂಡಗೆ ಬರ್ತ್​ಡೆ ವಿಶ್ ಮಾಡಲೇ ಇಲ್ಲ ರಶ್ಮಿಕಾ; ಮೂಡಿದೆ ಅನುಮಾನ

‘ಸಿತಾರಾ ಎಂಟರ್​ಟೇನ್​ಮೆಂಟ್’ ಮೂಲಕ ಈ ಸಿನಿಮಾ ಸಿದ್ಧವಾಗುತ್ತಿದೆ. ವಿಜಯ್ ಜೊತೆ ಭಾಗ್ಯಶ್ರೀ ಬೋರ್ಸೆ ಅವರು ಜೊತೆಯಾಗುತ್ತಾರೆ ಎನ್ನುವ ಮಾತಿದೆ. ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.  ಗೌತಮ್ ತಿನ್ನನುರಿ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಜೆರ್ಸಿ’ ಸಿನಿಮಾ ನಿರ್ದೇಶನ ಮಾಡಿ ಅವರು ಗಮನ ಸೆಳೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Sat, 3 August 24

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ