AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಪ್ಪು ಹುಡುಕುವ ಕೆಲಸ ಬೇಡ’: ತೆಲುಗು ಸಿನಿ ಪ್ರಿಯರಿಗೆ ಯಶ್ ಮನವಿ

‘ರಾಮಾಯಣ’ ಚಿತ್ರತಂಡ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಯಶ್. ಈ ವೇಳೆ ಯಶ್ ಅವರು ಆಡಿದ ಮಾತುಗಳು ಬಹುವಾಗಿ ಗಮನ ಸೆಳೆದವು. ಅದರಲ್ಲೂ ಇತ್ತೀಚೆಗಷ್ಟೆ ಯಶ್ ಅವರ ‘ಟಾಕ್ಸಿಕ್’ ಸಿನಿಮಾಕ್ಕೆ ಆಂಧ್ರ-ತೆಲಂಗಾಣದಲ್ಲಿ ಸಾಕಷ್ಟು ಋಣಾತ್ಮಕ ವಿಮರ್ಶೆಗಳು, ಉದ್ದೇಶಪೂರ್ವಕ ಟ್ರೋಲಿಂಗ್ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೆ ಯಶ್ ಅವರು ಇದೀಗ ಹೈದರಾಬಾದ್​​​ನಲ್ಲಿ ತೆಲುಗು ಸಿನಿಮಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

‘ತಪ್ಪು ಹುಡುಕುವ ಕೆಲಸ ಬೇಡ’: ತೆಲುಗು ಸಿನಿ ಪ್ರಿಯರಿಗೆ ಯಶ್ ಮನವಿ
Yash Hyderabad
ಮಂಜುನಾಥ ಸಿ.
|

Updated on: Oct 20, 2026 | 7:31 AM

Share

ಮುಖ್ಯಾಂಶಗಳು

  • ಹೈದರಾಬಾದ್​​ನಲ್ಲಿ ‘ರಾಮಾಯಣ’ ಪ್ರೀ ರಿಲೀಸ್ ಇವೆಂಟ್
  • ತಪ್ಪು ಹುಡುಕುವ ಕೆಲಸ ಮಾಡಬೇಡಿ ಎಂದ ಯಶ್
  • ಪರೋಕ್ಷವಾಗಿ ‘ಟಾಕ್ಸಿಕ್’ ಬಗ್ಗೆಯೂ ಮಾತು

ಯಶ್ ನಟನೆಯ ‘ರಾಮಾಯಣ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಬಲು ಜೋರಿನಿಂದ ನಡೆಯುತ್ತಿದೆ. ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಬಲು ಅಬ್ಬರದಿಂದ ಸಿನಿಮಾ ಪ್ರಚಾರ ಮಾಡಲಾಯ್ತು. ನಿನ್ನೆ (ಅಕ್ಟೋಬರ್ 19) ಹೈದರಾಬಾದ್​​ನಲ್ಲಿ ಯಶ್ ಸೇರಿದಂತೆ ‘ರಾಮಾಯಣ’ ಚಿತ್ರತಂಡ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಿನಿಮಾ ಬಗ್ಗೆ ಮಾತನಾಡಿದರು. ಈ ವೇಳೆ ಯಶ್ ಅವರು ಆಡಿದ ಮಾತುಗಳು ಬಹುವಾಗಿ ಗಮನ ಸೆಳೆದವು. ಅದರಲ್ಲೂ ಇತ್ತೀಚೆಗಷ್ಟೆ ಯಶ್ ಅವರ ‘ಟಾಕ್ಸಿಕ್’ ಸಿನಿಮಾಕ್ಕೆ ಆಂಧ್ರ-ತೆಲಂಗಾಣದಲ್ಲಿ ಸಾಕಷ್ಟು ಋಣಾತ್ಮಕ ವಿಮರ್ಶೆಗಳು, ಉದ್ದೇಶಪೂರ್ವಕ ಟ್ರೋಲಿಂಗ್ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೆ ಯಶ್ ಅವರು ಇದೀಗ ಹೈದರಾಬಾದ್​​​ನಲ್ಲಿ ತೆಲುಗು ಸಿನಿಮಾ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

‘ಸಿನಿಮಾಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಹುಡುಕುವ ಕೆಲಸ ಮಾಡಬೇಡಿ’ ಎಂದ ಯಶ್, ‘ವಿಎಫ್​​ಎಕ್ಸ್ ಹಾಗಿದೆ, ಹೀಗಿದೆ, ಎಂದೆಲ್ಲ ಉದ್ದೇಶಪೂರ್ವಕವಾಗಿ ಕೊಂಕು ತೆಗೆಯುವ ಕೆಲಸ ಮಾಡಬೇಡಿ. ಎಲ್ಲರೂ ಬಹಳ ಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ. ಉದ್ದೇಶ ಒಳ್ಳೆಯದಿದ್ದಾಗ ಬೆಂಬಲಕ್ಕೆ ನಿಲ್ಲಬೇಕು. ನಮಿತ್ ಮಲ್ಹೋತ್ರಾ ಒಬ್ಬ ಅದ್ಭುತ ನಿರ್ಮಾಪಕ. ನಾವು ಅವರಂಥ ನಿರ್ಮಾಪಕರನ್ನು ಉಳಿಸಿಕೊಳ್ಳಬೇಕು. ಈಗ ನಾವು ಅವರ ಜೊತೆ ನಿಲ್ಲದಿದ್ದರೆ ಅವರನ್ನು ಕಳೆದುಕೊಳ್ಳುತ್ತೇವೆ. ನಮಿತ್ ಅವರನ್ನು ಕಳೆದುಕೊಂಡರೆ ನಾವು ಹತ್ತು ವರ್ಷ ಹಿಂದೆ ಹೋದಂತಾಗುತ್ತದೆ’ ಎಂದರು ನಟ ಯಶ್.

ಸಿನಿಮಾದ ತಮ್ಮ ಸಹ ನಟ-ನಟಿಯರ ಬಗ್ಗೆಯೂ ಮಾತನಾಡಿದ ನಟ ಯಶ್, ರಣ್​​ಬೀರ್ ಕಪೂರ್ ಜೊತೆ ಒಟ್ಟಿಗೆ ಇನ್ನೂ ಕೆಲಸ ಮಾಡಿಲ್ಲ, ಆದರೆ ಪ್ರಚಾರದ ಸಂದರ್ಭದಲ್ಲಿ ಅವರೊಟ್ಟಿಗೆ ಸಾಕಷ್ಟು ಮಾತನಾಡಿದ್ದೇನೆ. ಅವರು ಅದ್ಭುತ ವ್ಯಕ್ತಿ ಎಂದರು. ಸಾಯಿ ಪಲ್ಲವಿ ಅವರ ಬಗ್ಗೆಯೂ ಸಹ ಬಹಳ ಕೊಂಡಾಡಿದರು. ನಿರ್ದೇಶಕ ನಮಿತ್ ಮಲ್ಹೋತ್ರಾ ಸರಳವಾದ ವ್ಯಕ್ತಿ, ಅವರು ಸಿನಿಮಾ ಮಾತನಾಡುವಂತೆ ಮಾಡುತ್ತಾರೆ. ‘ರಾಮಾಯಣ’ದಲ್ಲೂ ಸಹ ಅವರು ಅದನ್ನೇ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:‘ರಾಮಾಯಣ 2’ ಜತೆ ‘ಸ್ಪಿರಿಟ್’ ಸಿನಿಮಾ ಕ್ಲ್ಯಾಶ್: ಹೊಸ ರಿಲೀಸ್ ದಿನಾಂಕ ಘೋಷಣೆ

‘ಟಾಕ್ಸಿಕ್’ ಬಗ್ಗೆಯೂ ಪರೋಕ್ಷವಾಗಿ ಮಾತನಾಡಿದ ನಟ ಯಶ್, ‘ನಾನು ಕೆಲವೇ ತಿಂಗಳ ಅವಧಿಯಲ್ಲಿ ಮತ್ತೆ ನಿಮ್ಮ ಮುಂದೆ (ತೆಲುಗು ಪ್ರೇಕ್ಷಕರು) ಬಂದಿದ್ದೇನೆ. ಕೆಲವೇ ತಿಂಗಳ ಹಿಂದೆ ನಾವು ಮಾಡಿದ್ದ ಸಿನಿಮಾ ಅನ್ನು ನಿಮಗೆ ತೋರಿಸಿದ್ದೆ. ಕೆಲವರಿಗೆ ಇಷ್ಟವಾಯ್ತು, ಕೆಲವರಿಗೆ ಇಷ್ಟವಾಗಲಿಲ್ಲ. ಏನೇ ಆದರೂ ಪ್ರೀತಿಯಿಂದ ನನ್ನ ಸಿನಿಮಾ ನೋಡಲು ನೀವು ಬಂದಿರಿ ನನಗೆ ಅದೇ ದೊಡ್ಡದು. ಎಲ್ಲರಿಗೂ ಧನ್ಯವಾದ’ ಎಂದರು. ಬಳಿಕ ತಮ್ಮ ಸಿನಿಮಾ ವಿತರಣೆ ಮಾಡಿದ್ದ ದಿಲ್ ರಾಜು ಅವರಿಗೂ ಸಹ ಯಶ್ ಧನ್ಯವಾದ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಎಣ್ಣೆ ಪಾರ್ಟಿ ಮೆಲುಕು ಹಾಕಿ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು
ಎಣ್ಣೆ ಪಾರ್ಟಿ ಮೆಲುಕು ಹಾಕಿ ಕಾರ್ಯಕ್ರಮವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ಕನ್ನಡಿಗರ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್; ಕರವೇ ನಾರಾಯಣ ಗೌಡ ಪ್ರತಿಕ್ರಿಯೆ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ದುರ್ಗಾ ಪೂಜೆ ವೇಳೆ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಕಿತ್ತೂರು ಉತ್ಸವ ಸಂದರ್ಭದಲ್ಲೇ ರಾಣಿ ಚನ್ನಮ್ಮನ ಮೂರ್ತಿಗೆ ಹಾನಿ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು