AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಲ್ಲಿ ರಕ್ತಹೀನತೆ ಹೆಚ್ಚುತ್ತಿರುವುದಕ್ಕೆ ಕಾರಣಗಳೇನು? ಪೋಷಕರೇ ಈ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬೇಡಿ

ಇತ್ತೀಚಿನ ದಿನಗಳಲ್ಲಿ, ಚಿಕ್ಕ ಮಕ್ಕಳಲ್ಲಿ ರಕ್ತದ ಕೊರತೆ ಅಥವಾ ಅನಿಮಿಯಾ ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಅದರ ಕಾರಣಗಳು ಮತ್ತು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ಕೇವಲ ದೌರ್ಬಲ್ಯಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು. ಹಾಗಾದರೆ ಈ ರೀತಿ ಸಮಸ್ಯೆ ಕಂಡುಬರುವ ಮೊದಲು ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳಲ್ಲಿ ರಕ್ತಹೀನತೆ ಹೆಚ್ಚುತ್ತಿರುವುದಕ್ಕೆ ಕಾರಣಗಳೇನು? ಪೋಷಕರೇ ಈ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬೇಡಿ
AnemiaImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 02, 2026 | 3:33 PM

Share

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ರಕ್ತಹೀನತೆ (Anemia) ಸಮಸ್ಯೆ ಹೆಚ್ಚಾಗುತ್ತಿರುವುದು ವೈದ್ಯರನ್ನೇ ಚಿಂತೆಗೀಡುಮಾಡಿದೆ. ಏಕೆಂದರೆ ಈ ಸಮಸ್ಯೆ ಕೇವಲ ದೌರ್ಬಲ್ಯಕ್ಕೆ ಮಾತ್ರ ಸೀಮಿತವಾಗದೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ರಕ್ತಹೀನತೆಗೆ ಪ್ರಮುಖ ಕಾರಣ ಐರನ್ ಕೊರತೆ. ಹೀಮೋಗ್ಲೋಬಿನ್ ಉತ್ಪಾದನೆಗೆ ಐರನ್ ಅಗತ್ಯವಾಗಿದ್ದು, ಮಕ್ಕಳ ಆಹಾರದಲ್ಲಿ ಇದು ಕಡಿಮೆಯಾಗಿದ್ರೆ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ವಿಟಮಿನ್ ಬಿ 12 ಮತ್ತು ಫೋಲಿಕ್ ಆಸಿಡ್ ಕೊರತೆಯೂ ಅನಿಮಿಯಾಗೆ ಕಾರಣವಾಗಬಹುದು. ಸರಿಯಾದ ಪೌಷ್ಟಿಕಾಂಶವಿಲ್ಲದ ಆಹಾರ ಪದ್ಧತಿ, ಹೆಚ್ಚು ಜಂಕ್ ಫುಡ್ ಸೇವನೆ ಮತ್ತು ಅಸಮತೋಲನ ಆಹಾರ ಸೇರಿದಂತೆ ನಾನಾ ರೀತಿಯ ಕಾರಣಗಳು ಕೂಡ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಈ ರೀತಿ ಅನಿಮಿಯಾ ಕಂಡುಬರುವ ಮೊದಲು ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇನ್ನಿತರ ಕಾರಣಗಳು

ರಕ್ತಹೀನತೆ ಅಥವಾ ಅನಿಮಿಯಾ ಕಂಡುಬರುವುದಕ್ಕೆ ಪುನಃಪುನಃ ಸೋಂಕುಗಳು, ಅಜೀರ್ಣ ಸಮಸ್ಯೆಗಳು ಅಥವಾ ಹೊಟ್ಟೆಯಲ್ಲಿ ಹುಳುಗಳಿರುವುದು ಕೂಡ ಕಾರಣವಾಗಬಹುದು. ಅದರ ಜೊತೆಗೆ ಸಮಯಕ್ಕಿಂತ ಮೊದಲು ಜನಿಸಿದ ಶಿಶುಗಳು ಅಥವಾ ಕಡಿಮೆ ತೂಕದ ಮಕ್ಕಳಲ್ಲಿಯೂ ಈ ಸಮಸ್ಯೆಯ ಅಪಾಯ ಹೆಚ್ಚಾಗಿ ಕಂಡುಬರಬಹುದು.

ಆರಂಭಿಕ ಲಕ್ಷಣಗಳು ಹೇಗಿರುತ್ತವೆ?

ರಕ್ತಹೀನತೆಯ ಲಕ್ಷಣಗಳು ಆರಂಭದಲ್ಲಿ ಸ್ವಲ್ಪಮಟ್ಟಿಗೆ ಕಾಣಿಸಿಕೊಂಡರೂ ಕೂಡ ಗಮನಿಸಿದರೆ ಸರಿಯಾಗಿ ತಿಳಿಯುತ್ತದೆ. ಮಕ್ಕಳಲ್ಲಿ ಸುಸ್ತು, ದೌರ್ಬಲ್ಯ ಮತ್ತು ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು ಸಾಮಾನ್ಯ ಲಕ್ಷಣಗಳು. ಚರ್ಮವು ಬಿಳಿಯಾಗುವುದು, ತುಟಿ ಬಣ್ಣ ಕಳೆದುಕೊಳ್ಳುವುದು ಕೂಡ ಪ್ರಮುಖ ಸೂಚನೆಗಳಾಗಿವೆ. ಕೆಲವು ಸಂದರ್ಭಗಳಲ್ಲಿ ತಲೆ ಸುತ್ತುವುದು, ಉಸಿರಾಟದ ತೊಂದರೆ ಅಥವಾ ಹೃದಯದ ಬಡಿತ ಹೆಚ್ಚಾಗುವಂತಹ ಲಕ್ಷಣಗಳು ಕಾಣಿಸಬಹುದು. ಜೊತೆಗೆ ಚಿಡಿಚಿಡಿ, ಭಕ್ಷ್ಯಾಸಕ್ತಿ ಅಂದರೆ ತಿನ್ನುವ ಆಸಕ್ತಿ ಕಡಿಮೆಯಾಗುವುದು ಮತ್ತು ಓದಿನಲ್ಲಿ ಗಮನ ಇಲ್ಲದಿರುವುದು ಕೂಡ ಈ ಸಮಸ್ಯೆಯ ಲಕ್ಷಣಗಳಾಗಿರಬಹುದು.

ಇದನ್ನೂ ಓದಿ: ಯಾವ ಕೆಲಸ ಮಾಡದಿದ್ರೂ ಸುಸ್ತಾಗುತ್ತಿದ್ದರೆ ಈ ರೋಗ ಬಂದಿದೆ ಎಂದರ್ಥ!

ಹೇಗೆ ತಡೆಗಟ್ಟಬಹುದು?

ಮಕ್ಕಳಿಗೆ ಸಮತೋಲನ ಆಹಾರ ನೀಡುವುದು ಅತ್ಯಂತ ಮುಖ್ಯ. ಹಸಿರು ತರಕಾರಿ, ಬೇಳೆಕಾಳುಗಳು, ಹಣ್ಣುಗಳು ಮತ್ತು ಐರನ್ ಸಮೃದ್ಧ ಆಹಾರಗಳನ್ನು ನೀಡಬೇಕು. ವಿಟಮಿನ್ C ಇರುವ ಆಹಾರಗಳು ಐರನ್ ಪೋಷಣೆಗೆ ಸಹಕಾರಿ. ಅದರ ಜೊತೆಗೆ ಸ್ವಚ್ಛತೆ ಕಾಪಾಡುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸುವುದು ಅಗತ್ಯ. ಸರಿಯಾದ ಆಹಾರ ಮತ್ತು ಆರೈಕೆಯಿಂದ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!
ಭಟ್ಕಳ ದುರಂತ: ಮನಕಲಕುವಂತಿದೆ ಜಲಸಮಾಧಿಯಾದ 11 ಮಂದಿಯ ಕುಟುಂಬದ ಕಥೆಗಳು
ಭಟ್ಕಳ ದುರಂತ: ಮನಕಲಕುವಂತಿದೆ ಜಲಸಮಾಧಿಯಾದ 11 ಮಂದಿಯ ಕುಟುಂಬದ ಕಥೆಗಳು
ಕಾಂಗ್ರೆಸ್ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ನೇರಪ್ರಸಾರ
ಕಾಂಗ್ರೆಸ್ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ನೇರಪ್ರಸಾರ
ಬೈಕ್ ತಡೆದಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ತಲೆಗೆ ಹೊಡೆದು ಪರಾರಿ
ಬೈಕ್ ತಡೆದಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ತಲೆಗೆ ಹೊಡೆದು ಪರಾರಿ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಬೆಂಗಳೂರಿನಲ್ಲಿ ಇಂಧನ ದರದ ಚಾರ್ಟ್ ಇಲ್ಲಿದೆ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಬೆಂಗಳೂರಿನಲ್ಲಿ ಇಂಧನ ದರದ ಚಾರ್ಟ್ ಇಲ್ಲಿದೆ
ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಬಗ್ಗೆ ಡಿಸಿಎಂ ಡಿಕೆಶಿ ಏನಂದ್ರು?
ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಬಗ್ಗೆ ಡಿಸಿಎಂ ಡಿಕೆಶಿ ಏನಂದ್ರು?
ಮಹಾರಾಷ್ಟ್ರದ ರಾಯಗಢದಲ್ಲಿ ಕಂದಕಕ್ಕೆ ಉರುಳಿದ ಕಾರು, ಎಂಟು ಮಂದಿ ಸಾವು
ಮಹಾರಾಷ್ಟ್ರದ ರಾಯಗಢದಲ್ಲಿ ಕಂದಕಕ್ಕೆ ಉರುಳಿದ ಕಾರು, ಎಂಟು ಮಂದಿ ಸಾವು