Malaria Symptoms: ಮಲೇರಿಯಾ ರೋಗ ಲಕ್ಷಣ, ಚಿಕಿತ್ಸೆಗಳೇನು? ಇಲ್ಲಿದೆ ಮಾಹಿತಿ

World Malaria Day 2022: ಮಲೇರಿಯಾವನ್ನು ತಡೆಗಟ್ಟಲು ಆದಷ್ಟೂ ಸೊಳ್ಳೆಗಳಿಂದ ದೂರವಿರಿ. ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಇದಲ್ಲದೇ ಎಲ್ಲೆಂದರಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ. ದಿನವೂ ಸೊಳ್ಳೆ ಪರದೆಯೊಂದಿಗೆ ಮಲಗಿಕೊಳ್ಳಿ.

Malaria Symptoms: ಮಲೇರಿಯಾ ರೋಗ ಲಕ್ಷಣ, ಚಿಕಿತ್ಸೆಗಳೇನು? ಇಲ್ಲಿದೆ ಮಾಹಿತಿ
ಸೊಳ್ಳೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 25, 2022 | 3:38 PM

ಇಂದು ವಿಶ್ವ ಮಲೇರಿಯಾ ದಿನ (World Malaria Day). ಮಲೇರಿಯಾ ರೋಗವನ್ನು ತಡೆಗಟ್ಟಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮಲೇರಿಯಾಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಅದು ಮಾರಣಾಂತಿಕವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರಬೇಕಾದ ಸಂಗತಿ. ವಾಸ್ತವವಾಗಿ, ಮಲೇರಿಯಾ ರೋಗ ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಮಲೇರಿಯಾ ರೋಗ ಹೇಗೆ ಸಂಭವಿಸುತ್ತದೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಮಲೇರಿಯಾವು ಮಾನ್ಸೂನ್ ಮತ್ತು ಬೇಸಿಗೆಯ ಋತುವಿನಲ್ಲಿ ಕಂಡುಬರುತ್ತದೆ. ಏಕೆಂದರೆ ಈ ದಿನಗಳಲ್ಲಿ ಸೊಳ್ಳೆಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ.

ಮಲೇರಿಯಾ ಸೊಳ್ಳೆಗಳು ಹೆಚ್ಚಾಗಿ ಕೊಳಕು ಇರುವ ಸ್ಥಳಗಳಲ್ಲಿ ಬೆಳೆಯುತ್ತವೆ. ಜೊತೆಗೆ, ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಬರುತ್ತದೆ. ವಾಸ್ತವವಾಗಿ, ಅನಾಫಿಲಿಸ್ ಸೊಳ್ಳೆಯು ಪ್ಲಾಸ್ಮೋಡಿಯಂ ಪರಾವಲಂಬಿಯಿಂದ ಸೋಂಕಿಗೆ ಒಳಗಾಗಿದೆ ಮತ್ತು ಈ ಸೊಳ್ಳೆ ಯಾರನ್ನಾದರೂ ಕಚ್ಚಿದಾಗ, ಈ ವೈರಸ್ ರಕ್ತವನ್ನು ಪ್ರವೇಶಿಸುತ್ತದೆ. ಇದು ಕೆಂಪು ರಕ್ತ ಕಣಗಳನ್ನು ಹಾನಿ ಮಾಡಲು ಪ್ರಾರಂಭಿಸುತ್ತದೆ.

ಮಲೇರಿಯಾ ರೋಗನಿರ್ಣಯ ಮತ್ತು ಚಿಕಿತ್ಸೆ ಹೇಗೆ?: ಇದಕ್ಕಾಗಿ ಲ್ಯಾಬ್ ಪರೀಕ್ಷೆಯನ್ನು ಮಾಡಬೇಕು. ಮಲೇರಿಯಾ ಪರಾವಲಂಬಿಯಾಗಿದ್ದು, ಇದನ್ನು ಪತ್ತೆಹಚ್ಚಲು ಮಲೇರಿಯಾ ಪ್ರತಿಜನಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳ ಮೂಲಕ ಪ್ರಯೋಗಾಲಯದ ಜನರು ಯಾವ ರೀತಿಯ ಮಲೇರಿಯಾದಿಂದ ಬಳಲುತ್ತಿದ್ದಾರೆ ಎಂಬುದನ್ನು ತಿಳಿಸುತ್ತಾರೆ. ಸಾಮಾನ್ಯವಾಗಿ ಮಲೇರಿಯಾ ಸಂಭವಿಸಿದಲ್ಲಿ, ಚಿಕಿತ್ಸೆಯನ್ನು ಸರಿಯಾಗಿ ಮಾಡಿದರೆ ನಂತರ ವ್ಯಕ್ತಿಯು ಮೂರರಿಂದ ಐದು ದಿನಗಳಲ್ಲಿ ಚೇತರಿಸಿಕೊಳ್ಳಬಹುದು.

ಮಲೇರಿಯಾದ ಲಕ್ಷಣಗಳು: ಮೂತ್ರ ಪಿಂಡಗಳ ಹಾನಿ, ತಲೆ ನೋವು, ಭೇದಿ, ಮೈಕೈ ನೋವು, ವಿಪರೀತ ಆಯಾಸ, ಅತಿವ ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುವುದು, ಅನಿಮಿಯಾ, ಮಲದಲ್ಲಿ ರಕ್ತ ಮತ್ತು ಸೆಳೆತ ಇವು ಮಲೇರಿಯಾದ ಲಕ್ಷಣಗಳಾಗಿವೆ.

ಮಲೇರಿಯಾವನ್ನು ತಡೆಗಟ್ಟುವ ಕ್ರಮಗಳು: ಆದಷ್ಟೂ ಸೊಳ್ಳೆಗಳಿಂದ ದೂರವಿರಿ. ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಇದಲ್ಲದೇ ಎಲ್ಲೆಂದರಲ್ಲಿ ನೀರು ಸಂಗ್ರಹವಾಗಲು ಬಿಡಬೇಡಿ. ದಿನವೂ ಸೊಳ್ಳೆ ಪರದೆಯೊಂದಿಗೆ ಮಲಗಿಕೊಳ್ಳಿ. ಜಾಗತಿಕ ಮಟ್ಟದಲ್ಲಿ ಈಗ ಮಲೇರಿಯಾ ರೋಗವನ್ನು ತಡೆಗಟ್ಟಬಹುದು ಹಾಗೂ ಗುಣಪಡಿಸಲೂ ಸಾಧ್ಯವಿದೆ. ಆದರೆ, ಸೋಂಕಿತರ ಸಂಖ್ಯೆಯಲ್ಲಿ ಮಾತ್ರ ಯಾವುದೇ ಇಳಿಕೆ ಕಂಡು ಬಂದಿಲ್ಲ ಎನ್ನುವುದು ಅಂಕಿ-ಅಂಶಗಳ ಸಹಿತ ಸಾಬೀತಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಕಳೆದ 2020ರಲ್ಲಿ ಜಗತ್ತಿನಾದ್ಯಂತ ಸುಮಾರು 241 ದಶಲಕ್ಷ ಮಂದಿಗೆ ಮಲೇರಿಯಾ ರೋಗ ತಗುಲಿರುವುದು ವರದಿಯಾಗಿದೆ. ಇದೇ ಮಾರಣಾಂತಿಕ ಕಾಯಿಲೆಯಿಂದ 2020ರಲ್ಲಿ ವಿಶ್ವದಾದ್ಯಂತ 6.27 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳು ಮಲೇರಿಯಾವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡುವಲ್ಲಿ ಸಮರ್ಥವಾಗಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು 40 ದೇಶಗಳು ಮತ್ತು ಪ್ರಾಂತ್ಯಗಳಿಗೆ ಮಲೇರಿಯಾ ಮುಕ್ತ ಪ್ರಮಾಣಪತ್ರವನ್ನು ನೀಡಿದೆ. ಚೀನಾವನ್ನು WHO ಮಲೇರಿಯಾ ಮುಕ್ತ ಎಂದು ಇತ್ತೀಚೆಗೆ ಘೋಷಿಸಿದೆ.

ಒಂದು ಸಲ ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್ ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುತ್ತದೆ. ಇದು ಕೆಂಪು ರಕ್ತದ ಕಣಗಳನ್ನು ನಾಶ ಪಡಿಸುತ್ತದೆ. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಾವು ಸಂಭವಿಸುತ್ತದೆ.

ಮಲೇರಿಯಾವನ್ನು ತಡೆಗಟ್ಟಲು ಲೆಮನ್ ಗ್ರಾಸ್ ಕತ್ತರಿಸಿ, ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕುಡಿಯಬೇಕು. ಕಿತ್ತಳೆ ಹಣ್ಣು ಮತ್ತು ದ್ರಾಕ್ಷಿ ಹಣ್ಣುಗಳು ವಿಟಮಿನ್ ‘ಸಿ’ ಅಂಶಗಳನ್ನು ಹೊಂದಿದೆ. ಪ್ರತಿ ದಿನ ಕಿತ್ತಳೆ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ದ್ರಾಕ್ಷಿ ಹಣ್ಣಿನ ಜ್ಯೂಸ್ ಕುಡಿಯುವ ಮುಂಚೆ ಅದನ್ನು ಚೆನ್ನಾಗಿ ಕುದಿಸಿ ಸೋಸಿ ನಂತರ ಕುಡಿಯಬೇಕು ಹಾಗೇ, ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವಂತಹ ಶುಂಠಿಯನ್ನು ವಿವಿಧ ರೀತಿಯ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಶೀತ, ಜ್ವರ, ವಾಂತಿ ಮತ್ತು ವಾಕರಿಕೆ ನಿವಾರಣೆಗೆ ಇದು ಪರಿಣಾಮಕಾರಿ. ಶುಂಠಿಯಲ್ಲಿ ಇರುವಂತಹ ವಿವಿಧ ರೀತಿಯ ಅಂಶಗಳು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಕಾಯಿಲೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾದಿಂದ ಕಾಪಾಡುತ್ತದೆ.

ಶುಂಠಿ ಹಾಕಿದ ನೀರನ್ನು ಕುದಿಸಿ, ಕುಡಿದರೆ ಮಲೇರಿಯಾದಿಂದ ಪಾರಾಗಬಹುದು. ದಾಲ್ಚಿನ್ನಿಯಲ್ಲಿ ಉರಿಯೂತ ಶಮನಕಾರಿ, ಆಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಮಲೇರಿಯಾದ ಲಕ್ಷಣಗಳ ವಿರುದ್ಧ ಹೋರಾಡುತ್ತದೆ. ತುಳಸಿ ಮಲೇರಿಯಾದ ತೀವ್ರತೆ ಮತ್ತು ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ತುಳಸಿಯಲ್ಲಿ ಮಲೇರಿಯಾ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ತುಳಸಿಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗುತ್ತದೆ. ಮೆಂತೆ ಮಲೇರಿಯ ಜ್ವರವನ್ನು ಹೋಗಲಾಡಿಸುವ ಇನ್ನೊಂದು ನೈಸರ್ಗಿಕ ಮನೆ ಮದ್ದಾಗಿದೆ. ಆರಂಭಿಕ ಹಂತದಲ್ಲಿ ಮಲೇರಿಯಾ ಜ್ವರವನ್ನು ಹೊಂದಿರುವವರು 5 ಗ್ರಾಂ ಮೆಂತೆ ಕಾಳುಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಇದನ್ನೂ ಓದಿ: ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ವೈರಸ್​ ಸೋಂಕನ್ನು ತಪ್ಪಿಸುವುದು ಹೇಗೆ?

ಆ್ಯಂಟಿ ಬಯೋಟಿಕ್​ ಪ್ರತಿರೋಧಕ ಸೋಂಕುಗಳಿಂದ 2019ರಲ್ಲಿ 12 ಲಕ್ಷ ಮಂದಿ ಸಾವು; ಔಷಧಕ್ಕೂ ಬಗ್ಗದ ಸೂಪರ್​ಬಗ್ಸ್​ಗಳ ಅಪಾಯ ತೆರೆದಿಟ್ಟ ಅಧ್ಯಯನ !

Published On - 3:37 pm, Mon, 25 April 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್