AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಪರ್ ಪ್ಲೇಟ್‌ನಲ್ಲಿ ಊಟ ಮಾಡುವುದು ಒಳ್ಳೆಯದೋ, ಅಲ್ಲವೋ? ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ಇತ್ತೀಚೆಗೆ, ಪೇಪರ್ ಪ್ಲೇಟ್‌ಗಳ ಬಳಕೆ ಹೆಚ್ಚಾಗಿದೆ. ಯಾವುದೇ ಕಾರ್ಯಕ್ರಮವಾಗಲಿ ಬಾಳೆ ಎಲೆಯ ಬದಲು ಪೇಪರ್ ಪ್ಲೇಟ್‌ಗಳನ್ನೇ ಊಟ ತಿಂಡಿಗೆ ಬಳಸುತ್ತಾರೆ. ಆದರೆ, ಈ ಪ್ಲೇಟ್‌ಗಳಲ್ಲಿ ಬಿಸಿ ಆಹಾರವನ್ನು ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಅಷ್ಟೇಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಈ ಬಗ್ಗೆ ಹಲವು ರೀತಿಯ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಹೇಳಿರುವ ಮಾಹಿತಿ ಕೂಡ ವೈರೆಲ್ ಆಗಿದೆ. ಅವರು ಪೇಪರ್ ಪ್ಲೇಟ್ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅದರಲ್ಲಿ ತಿಳಿಸಿದ್ದಾರೆ. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಪೇಪರ್ ಪ್ಲೇಟ್‌ನಲ್ಲಿ ಊಟ ಮಾಡುವುದು ಒಳ್ಳೆಯದೋ, ಅಲ್ಲವೋ? ತಜ್ಞರು ನೀಡಿದ ಮಾಹಿತಿ ಇಲ್ಲಿದೆ
Dangers Of Eating From Paper PlatesImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Apr 03, 2026 | 4:58 PM

Share

ಇತ್ತೀಚಿನ ದಿನಗಳಲ್ಲಿ ಪೇಪರ್ ಪ್ಲೇಟ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಮನೆಗಳಲ್ಲಿ ನಡೆಯುವ ಕಾರ್ಯಕ್ರಮ, ಹುಟ್ಟುಹಬ್ಬ, ಮದುವೆ ಸೇರಿದಂತೆ ವಿವಿಧ ರೀತಿಯ ಸಮಾರಂಭಗಳಲ್ಲಿ ಆಹಾರ ಸೇವನೆಗೆ ಬಾಳೆ ಎಲೆ ಅಥವಾ ಸ್ಟೀಲ್ ಪ್ಲೇಟ್ ಬದಲು ಜನ ಪೇಪರ್ ಪ್ಲೇಟ್‌ಗಳನ್ನು ಬಳಸುವುದಕ್ಕೆ ಆರಂಭಿಸಿದ್ದಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಬಿಸಿ ಬಿಸಿ ಆಹಾರವನ್ನು ಇಂತಹ ಪ್ಲೇಟ್‌ಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು, ಅಷ್ಟೇಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಈ ಬಗ್ಗೆ ಹಲವು ರೀತಿಯ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಹೇಳಿರುವ ಮಾಹಿತಿ ಕೂಡ ವೈರೆಲ್ ಆಗಿದೆ. ಅವರು ಪೇಪರ್ ಪ್ಲೇಟ್ (Paper Plates) ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅದರಲ್ಲಿ ತಿಳಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಸಾಮಾನ್ಯವಾಗಿ ನಾವು ಬಿಸಿ ಆಹಾರವನ್ನು ಪೇಪರ್ ಪ್ಲೇಟ್ ಅಥವಾ ಪ್ಲಾಸ್ಟಿಕ್ ಲೇಪಿತ ಪ್ಲೇಟ್‌ಗಳಲ್ಲಿ ಸೇವಿಸುತ್ತೇವೆ. ಆದರೆ ಇವು ಸಾಮಾನ್ಯ ಪ್ಲೇಟ್‌ಗಳಲ್ಲ, ಇವುಗಳನ್ನು “ಕ್ಯಾನ್ಸರ್ ಪ್ಲೇಟ್‌ಗಳು” ಎಂದು ಕರೆಯಬಹುದು ಎಂದು ಹೇಳಿದ್ದಾರೆ. ಏಕೆಂದರೆ ಬಿಸಿ ಆಹಾರದಿಂದ ಪ್ಲೇಟ್‌ನ ಮೇಲಿನ ಪ್ಲಾಸ್ಟಿಕ್ ಲೇಪ ಕರಗಿ, ಮೈಕ್ರೋಪ್ಲಾಸ್ಟಿಕ್‌ಗಳು ಮತ್ತು ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಬೆರೆತು ನಮ್ಮ ದೇಹಕ್ಕೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ.

ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

  • ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ
  • ಹಾರ್ಮೋನ್ ಅಸಮತೋಲನ
  • ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
  • ಪರಿಸರದ ಮೇಲೂ ಹಾನಿ

ಇಂತಹ ಪ್ಲೇಟ್‌ಗಳನ್ನು ಬಳಸಿ ಬಿಸಾಡಿದಾಗ, ಅವುಗಳನ್ನು ಹಸು ಮುಂತಾದ ಪ್ರಾಣಿಗಳು ತಿಂದರೆ ಸಾವಿಗೆ ದಾರಿಮಾಡಿಕೊಡಬಹುದು. ಇನ್ನು, ಇವುಗಳನ್ನು ಸುಟ್ಟರೆ ವಿಷಕಾರಿ ಹೊಗೆ ಉಂಟಾಗಿ ಗಾಳಿ ಮಾಲಿನ್ಯವಾಗಬಹುದು. ಇದರಿಂದ ಉಸಿರಾಟ ಸಂಬಂಧಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು.

ಇದನ್ನೂ ಓದಿ: ಊಟ ಮಾಡುವಾಗ ಅಥವಾ ಊಟವಾದ ಎಷ್ಟು ಹೊತ್ತಿನ ನಂತರ ನೀರು ಕುಡಿಯಬೇಕು? ಆಯುರ್ವೇದ ಏನು ಹೇಳುತ್ತದೆ?

ತಜ್ಞರು ಹೇಳುವುದೇನು?

ಪರಿಸರ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪೇಪರ್ ಪ್ಲೇಟ್‌ಗಳ ಬದಲು ನೈಸರ್ಗಿಕ ವಸ್ತುಗಳಿಂದ ತಯಾರಾದ ಪ್ಲೇಟ್‌ಗಳನ್ನು ಬಳಸುವುದು ಉತ್ತಮ. ಉದಾಹರಣೆಗೆ:

  • ಅಡಿಕೆ (Areca) ಎಲೆ ಪ್ಲೇಟ್‌ಗಳು
  • ಬಾಳೆ ಎಲೆಗಳು
  • ಬಿದಿರಿನ ಪ್ಲೇಟ್‌ಗಳು ಒಟ್ಟಿನಲ್ಲಿ, ಸಣ್ಣ ಅಭ್ಯಾಸಗಳು ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆದ್ದರಿಂದ ಪೇಪರ್ ಪ್ಲೇಟ್ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ