ಟೀ ಬ್ಯಾಗ್‌ನಿಂದ ಬಿಡುಗಡೆ ಆಗುತ್ತೇ ಶತಕೋಟಿ ಹಾನಿಕಾರಕ ಮೈಕ್ರೋಪ್ಲಾಸ್ಟಿಕ್‌ಗಳು: ಅಧ್ಯಯನ
ಟೀ ಬ್ಯಾಗ್ ಬಳಸುವ ಮೊದಲು ಈ ಸ್ಟೋರಿ ಓದಲೇಬೇಕು. ಇದು ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮವನ್ನು ಉಂಟು ಮಾಡುತ್ತದೆ ಎಂಬದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಹಾನಿಕಾರಕ ಮೈಕ್ರೋಪ್ಲಾಸ್ಟಿಕ್‌ಗಳು ಬಿಡುಗಡೆ ಮಾಡುತ್ತದೆ. ಹಾಗಾಗಿ ಇದು ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. ಈ ಹಾನಿಕಾರಕ ಮೈಕ್ರೋಪ್ಲಾಸ್ಟಿಕ್‌ಗಳು ಯಾವುದು? ಟೀ ಬ್ಯಾಗ್ ಬಳಸುವುದರಿಂದ ನಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮಗಳು ಯಾವುವು? ದೇಹಕ್ಕೆ ಇದು ಹೇಗೆ ಹಾನಿಕಾರಕ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಟೀ ಬ್ಯಾಗ್ ತುಂಬಾ ಜನ ಬಳಸುವ ಕಾರಣ, ಅದು ಹಿತ ಹಾಗೂ ಅದನ್ನು ತಯಾರಿಸುವುದು ಕೂಡ ಸುಲಭ ಆಗಿದೆ. ಆದರೆ ಇದರ ಹಿಂದೆ ಒಂದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುವ ಅಂಶಗಳು ಇದೆ ಎಂಬುದನ್ನು ಅಧ್ಯಯನ ಒಂದು ಪತ್ತೆ ಮಾಡಿದೆ. ಟೀ ಬ್ಯಾಗ್‌ಗಳ ಹೊರ ಪದರಕ್ಕೆ ಬಳಸುವ ವಸ್ತುವು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಪಾಲಿಮರ್ ಆಧಾರಿತ ವಸ್ತುಗಳಿಂದ ಮಾಡಲ್ಪಟ್ಟ ವಾಣಿಜ್ಯ ಟೀ ಬ್ಯಾಗ್‌ಗಳು ಲಕ್ಷಾಂತರ ನ್ಯಾನೊಪ್ಲಾಸ್ಟಿಕ್‌ಗಳು ಮತ್ತು ಮೈಕ್ರೋಪ್ಲಾಸ್ಟಿಕ್‌ಗಳನ್ನು ಬಿಡುಗಡೆ ಮಾಡುತ್ತವೆ. ಜತೆಗೆ ಅದನ್ನು ಬಳಸಿದಾಗ ಲಕ್ಷಾಂತರ ಮೈಕ್ರೋಪ್ಲಾಸ್ಟಿಕ್‌ಗಳನ್ನು ಬಿಡುಗಡೆ ಮಾಡುತ್ತವೆ.
ಬಾರ್ಸಿಲೋನಾದ ಸ್ವಾಯತ್ತ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ ಆಹಾರ ಪ್ಯಾಕೇಜಿಂಗ್ ಸೂಕ್ಷ್ಮ ಮತ್ತು ನ್ಯಾನೊಪ್ಲಾಸ್ಟಿಕ್ (MNPL) ಮಾಲಿನ್ಯದ ಪ್ರಮುಖ ಮೂಲವಾಗಿದೆ. ಈ ನ್ಯಾನೊಪ್ಲಾಸ್ಟಿಕ್ ಮತ್ತು ಮೈಕ್ರೋಪ್ಲಾಸ್ಟಿಕ್ ಕಣಗಳು ನಮ್ಮ ಕರುಳಿನ ಜೀವಕೋಶಗಳಿಂದ ಹೀರಲ್ಪಡುತ್ತದೆ. ಹೀಗಾಗಿ ಇದು ರಕ್ತ ಕಣಗಳನ್ನು ಸೇರಿ, ದೇಹದ ಬೇರೆ ಜಾಗಕ್ಕೆ ಸೇರಬಹುದು. UAB ಸಂಶೋಧಕರು ಈ ಟೀ ಬ್ಯಾಗ್‌ಗಳನ್ನು ಕಷಾಯಕ್ಕೊಂದು ಬಳಸಿದಾಗ ಬೃಹತ್ ಪ್ರಮಾಣದ ನ್ಯಾನೊ-ಗಾತ್ರದ ಕಣಗಳು ಮತ್ತು ನ್ಯಾನೊಫಿಲೆಮೆಂಟಸ್ ರಚನೆಗಳು ಬಿಡುಗಡೆಯಾಗುತ್ತವೆ ಎಂಬುದನ್ನು ಪತ್ತೆ ಮಾಡಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ದೇಹಕ್ಕೆ ಅಮೃತ ಒಣ ಶುಂಠಿ ಪುಡಿಯ ನೀರು
ಸಂಶೋಧನೆಗೆ ಬಳಸಲಾದ ಟೀ ಬ್ಯಾಗ್‌ಗಳನ್ನು ಪಾಲಿಮರ್‌ಗಳಾದ ನೈಲಾನ್-6, ಪಾಲಿಪ್ರೊಪಿಲೀನ್ ಮತ್ತು ಸೆಲ್ಯುಲೋಸ್‌ನಿಂದ ತಯಾರಿಸಲಾಗಿದೆ. ಚಹಾವನ್ನು ತಯಾರಿಸುವಾಗ, ಪಾಲಿಪ್ರೊಪಿಲೀನ್ ಪ್ರತಿ ಮಿಲಿಲೀಟರ್‌ಗೆ ಸರಿಸುಮಾರು 1.2 ಶತಕೋಟಿ ಕಣಗಳನ್ನು ಬಿಡುಗಡೆ ಮಾಡುತ್ತದೆ, ಸರಾಸರಿ ಗಾತ್ರ 136.7 ನ್ಯಾನೊಮೀಟರ್‌ಗಳು. ಸೆಲ್ಯುಲೋಸ್ ಪ್ರತಿ ಮಿಲಿಲೀಟರ್‌ಗೆ ಸುಮಾರು 135 ಮಿಲಿಯನ್ ಕಣಗಳನ್ನು ಬಿಡುಗಡೆ ಮಾಡುತ್ತದೆ, ಸರಾಸರಿ ಗಾತ್ರ 244 ಹಾಗೂ ನೈಲಾನ್-6 ಪ್ರತಿ ಮಿಲಿಲೀಟರ್‌ಗೆ 8.18 ಮಿಲಿಯನ್ ಕಣಗಳನ್ನು ಬಿಡುಗಡೆ ಮಾಡುತ್ತದೆ, ಸರಾಸರಿ ಗಾತ್ರ 138.4. ಹಾಗಾಗಿ ಇದು ಮಾನವ ಆರೋಗ್ಯದಲ್ಲಿ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ದೇಹಕ್ಕೆ ಅಮೃತ ಒಣ ಶುಂಠಿ ಪುಡಿಯ ನೀರು