AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fertility Diet For Women: ಪೌಷ್ಟಿಕಾಂಶ ಆಹಾರ ಸೇವನೆಯಿಂದ ಗರ್ಭಧಾರಣೆಯ ಸಾಧ್ಯತೆ

ಮಹಿಳೆಯರಲ್ಲಿ ಬಂಜೆತನಕ್ಕೆ ಸಾಮಾನ್ಯ ಕಾರಣಗಳೆಂದರೆ ಅಧಿಕ ತೂಕ, ಅಂಡಾನೋತ್ಪತ್ತಿ ಅಸ್ವಸ್ಥತೆಗಳು, ಎಂಡೊಮರಟ್ರಿಯೊಸಿಸ್ ಅಂಡಾಶಯದ ಕೊರತೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮತ್ತು ವ್ಯಾಯಾಮಗಳಂತಹ ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸುವ ಮೂಲಕ ಮಹಿಳೆಯರು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಬಹುದು.

Fertility Diet For Women: ಪೌಷ್ಟಿಕಾಂಶ ಆಹಾರ ಸೇವನೆಯಿಂದ ಗರ್ಭಧಾರಣೆಯ ಸಾಧ್ಯತೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 08, 2023 | 6:03 PM

Share

ಕೆಲವು ಮಹಿಳೆಯರು ಬಂಜೆತನದಿಂದ ಬಳಲುತ್ತಿರುತ್ತಾರೆ. ಪ್ರತಿಯೊಬ್ಬ ಮಹಿಳೆಗೂ ತಾಯ್ತನದ ಸುಖವನ್ನು ಅನುಭವಿಸಬೇಕು ಎನ್ನುವ ಬಯಕೆ ಇರುತ್ತದೆ. ಆದರೆ ಕೆಲವರು ಬಂಜೆತನದ ಸಮಸ್ಯೆಯ ಕಾರಣ ತಾಯ್ತನದ ಸುಖವನ್ನು ಅನುಭವಿಸುವುದರಿಂದ ವಂಚಿತರಾಗಿರುತ್ತಾರೆ. ಆದರೆ ಅಂತಹವರು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವ ಮೂಲಕ ಹಾಗೂ ವ್ಯಾಯಾಮ ಮಾಡುವ ಮೂಲಕ ಗರ್ಭಧಾರಣೆಯನ್ನು ಮಾಡುವ ಸಾಧ್ಯತೆಯನ್ನು ಹೊಂದಬಹುದಾಗಿದೆ. ಎನ್‌ಹೆಚ್‌ಪಿ ಇಂಡಿಯಾ ಪ್ರಕಾರ ಭಾರತದಲ್ಲಿ ಬಂಜೆತನದ ಹರಡುವಿಕೆಯು ಶೇಕಡಾ 3% ದಿಂದ 16.8% ವರೆಗೆ ಇರುತ್ತದೆ. ಮಹಿಳೆಯರಲ್ಲಿ ಬಂಜೆತನ ಉಂಟಾಗಲು ಸಾಮಾನ್ಯ ಕಾರಣಗಳು ಅಧಿಕ ತೂಕ, ಅಂಡಾನೋತ್ಪತ್ತಿ ಅಸ್ವಸ್ಥತೆಗಳು, ಎಂಡೊಮರಟ್ರಿಯೊಸಿಸ್ ಅಂಡಾಶಯದ ಕೊರತೆ. ಈ ಸಮಸ್ಯೆಯನ್ನು ಪರಿಹರಿಸಲು ಹಾರ್ವಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ನ ಡಾ. ಜಾರ್ಜ್ ಚಾವರೊ ಮತ್ತು ಡಾ. ವಾಲ್ಟರ್ ವಿಲೆಟ್ ಅವರು ದಾದಿಯರ ಆರೋಗ್ಯ ಅಧ್ಯಯನದ ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ ಆಹಾರಕ್ರಮಗಳನ್ನು ಅಭಿವೃದ್ಧಿಪಡಿಸಿದರು.

ಇದು ಅಮೇರಿಕಾದಲ್ಲಿ ಮಹಿಳೆಯರ ಆರೋಗ್ಯದ ಕುರಿತ ಅತಿದೊಡ್ಡ ಮತ್ತು ದೀರ್ಘಾವಧಿಯ ಅಧ್ಯಯನಗಳಲ್ಲಿ ಒಂದಾಗಿದೆ. ಈ ಅಧ್ಯಯನದ ಫಲಿತಾಂಶದ ಪುಸ್ತಕ ‘ದಿ ಫರ್ಟಿಲಿಟಿ ಡಯಟ್’ ರಿಸರ್ಚ್- ಅಂಡಾನೋತ್ಪತ್ತಿಯನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗಗಳ ಬಗ್ಗೆ ತಿಳಿಸಿಕೊಡುತ್ತದೆ ಮತ್ತು ಫಲವತ್ತತೆಯನ್ನು ಸುಧಾರಿಸಿ ಗರ್ಭಧಾರಣೆ ಮಾಡಲು ಆರೋಗ್ಯಕರ ಆಹಾರ ಮತ್ತು ವ್ಯಾಯಗಳು ಸಹಾಯ ಮಾಡುತ್ತದೆ ಎಂದು ಸೂಚಿಸಿದೆ.

ಫರ್ಟಿಲಿಟಿ ಡಯೆಟ್ ಸೂಚಿಸಿರುವ ಆಹಾರ ಕ್ರಮದ ಮಾರ್ಗಸೂಚಿಗಳು:

1. ಆರೋಗ್ಯಕರವಲ್ಲದ ಟ್ರಾನ್ಸ್ಕೊಬ್ಬು ಆಹಾರಗಳನ್ನು ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.

2. ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ ಅಥವಾ ಕ್ಯಾನೋಲಾ ಎಣ್ಣೆಯಂತಹ ವೆಜಿಟೇಬಲ್ ಎಣ್ಣೆಗಳನ್ನು ಬಳಸಿ.

3. ಬೀನ್ಸ್, ಕಾಳುಗಳು ಮತ್ತು ಡ್ರೈನಟ್ಸ್​​ಗಳಂತಹ ಹೆಚ್ಚು ತರಕಾರಿ ಪ್ರೋಟಿನ್‌ಗಳನ್ನು ಸೇವಿಸಿ. ಮತ್ತು ಪ್ರಾಣಿ ಪ್ರೋಟೀನ್‌ಗಳನ್ನು ಕಡಿಮೆ ಸೇವಿಸಿ.

4. ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುವ ಸಂಸ್ಕರಿಸಿದ ಕಾಬೋಹೈಡ್ರೇಟ್ ಆಹಾರಗಳ ಬದಲಿಗೆ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟದ ಮೇಲೆ ನಿಧಾನ ಪರಿಣಾಮವನ್ನು ಬೀರುವ ಧಾನ್ಯಗಳು ಮತ್ತು ಕಾರ್ಬೋಹೈಡ್ರೇಟ್ ಆಹಾರಗಳನ್ನು ಸೇವನೆ ಮಾಡಿ.

5. ಪ್ರತಿದಿನ ಒಂದು ಲೋಟ ಹಾಲು ಅಥವಾ ಮೊಸರನ್ನು ಸೇವನೆ ಮಾಡಿ.

6. ಫೋಲಿಕ್ ಆಮ್ಲ ಮತ್ತು ಇತರ ಜೀವಸತ್ವಗಳನ್ನು ಒಳಗೊಂಡಿರುವ ಮಲ್ಟಿ ವಿಟಮಿನ್ ಆಹಾರಗಳನ್ನು ಸೇವಿಸಿ.

7. ಕಬ್ಬಿಣಾಂಶವನ್ನು ಹೊಂದಿರುವ ಹಣ್ಣುಗಳು, ಹಸಿರು ಎಲೆ ತರಕಾರಿಗಳನ್ನು ಸೇವಿಸಿ. ಆದರೆ ಕೆಂಪು ಮಾಂಸವನ್ನು ಸೇವಿಸಬೇಡಿ.

8. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ ಹಾಗೂ ಕಾಫಿ, ಚಹಾ, ಆಲ್ಕೋಹಾಲ್, ಸೋಡಾಗಳಂತಹ ಪಾನೀಯಗಳಿಂದ ಆದಷ್ಟು ದೂರವಿರಿ.

9. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. ನೀವು ಅಧಿಕ ತೂಕ ಹೊಂದಿದ್ದರೆ, ಶೇಕಡಾ 5 ರಿಂದ 10% ನಷ್ಟು ತೂಕ ನಷ್ಟ ಮಾಡುವ ಮೂಲಕ ಅಂಡಾನೋತ್ಪತ್ತಿಯನ್ನು ಪ್ರಾರಂಭಿಸಬಹುದು.

10. ನೀವು ದೈಹಿಕವಾಗಿ ಸದೃಢವಾಗಿಲ್ಲದಿದ್ದರೆ, ದೈನಂದಿನ ವ್ಯಾಯಾಮಗಳನ್ನು ಮಾಡಿ.

11. ಧೂಮಪಾನವನ್ನು ನಿಲ್ಲಿಸಿ.

ಇದನ್ನೂ ಓದಿ: Women Health : 40 ವರ್ಷದ ದಾಟಿದ ಮಹಿಳೆಯರಲ್ಲಿ ಕಂಡುಬರುವ ದೈಹಿಕ, ಮಾನಸಿಕ ಬದಲಾವಣೆ ಯಾವುದು? ಲಕ್ಷಣಗಳೇನು ?

ಈ ಮಾರ್ಗಸೂಚಿಗಳ ಜೊತೆಗೆ, ನಿಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ನಿರ್ಧಿಷ್ಟ ಆಹಾರಗಳನ್ನು ಸೇರಿಸುವುದರಿಂದ ಹಾಮೋನುಗಳನ್ನು ಸಮತೋಲನಗೊಳಿಸಬಹುದು ಹಾಗೂ ಒಟ್ಟಾರೆ ಆರೊಗ್ಯವನ್ನು ಸುಧಾರಿಸಬಹುದು.

ಬೀನ್ಸ್ ಮತ್ತು ಬೇಳೆಕಾಳುಗಳು: ಈ ಸಸ್ಯ ಪ್ರೋಟೀನ್‌ಗಳು ಅಂಡಾನೋತ್ಪತ್ತಿ ಮೇಲೆ ಸಕರಾತ್ಮಕ ಪರಿಣಾಮವನ್ನು ಬೀರುತ್ತವೆ ಮತ್ತು ಇವುಗಳು ಪ್ರೋಟೀನ್, ವಿಟಮಿನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ಫೈಬರ್, ಫೋಲಿಕ್ ಆಮ್ಲಗಳಂತಹ ಪೋಷಕಾಂಶಗಳಿಮದ ಸಮೃದ್ಧವಾಗಿದೆ.

ಹಣ್ಣುಗಳು: ಇವುಗಳು ಫೈಬರ್, ವಿಟಮಿನ್ ಸಿ, ವಿಟಮಿನ್ ಎ, ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಅಂಡಾನೋತ್ಪತ್ತಿಗೆ ಸಹಾಯ ಮಾಡುವುದರ ಜೊತೆಗೆ ತೂಕ ನಿರ್ವಹಣೆಗೂ ಸಹಕಾರಿಯಾಗಿದೆ.

ಡ್ರೈನಟ್ಸ್ ಮತ್ತು ಬೀಜಗಳು: ಇವುಗಳು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳು, ಫೈಬರ್ ಮತ್ತು ಪ್ರೋಟೀನ್‌ಗಳನ್ನು ಹೊಂದಿರುತ್ತವೆ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ