ನೀವು ದೈನಂದಿನ ಆಹಾರದಲ್ಲಿ ಸೇರಿಸಬೇಕಾದ ಪೋಷಕಾಂಶಯುಕ್ತ ಆಹಾರ ಪದಾರ್ಥಗಳಿವು
ನೀವು 50ರ ಹರೆಯವನ್ನು ತಲುಪಿದ ಬಳಿಕವೂ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಂಡು ಆರೋಗ್ಯವಂತರಾಗಿ ಬಾಳಲು ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಕೆಲವು ಆಹಾರ ಪದಾರ್ಥಗಳು ಈ ಕೆಳಗಿನಂತಿವೆ.
ನಾವು ಸದೃಢರಾಗಿರಲು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ. ಹಾಗಿರುವಾಗ ನೀವು ಪೌಷ್ಟಿಕ ಆಹಾರಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು. ಜಂಕ್ ಫುಡ್ಗಳ ಸೇವನೆ, ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು ನಿಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು. ಹಾಗಿರುವಾಗ ತಜ್ಞರು ಹೇಳಿರುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು ಈ ಕೆಳಗಿನಂತಿವೆ. ನೀವು ಏನು ಸೇವಿಸುತ್ತೀರೋ ಅದು ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ನಮ್ಮ ಆರೋಗ್ಯವು ನಾವು ಸೇವಿಸುವ ಆಹಾರ ಪದಾರ್ಥದ ಮೇಲೆ ಅವಲಂಬಿತವಾಗಿದೆ. ನಾವು ಸೇವಿಸುವ ಆಹಾರ ಪದಾರ್ಥಗಳಿಂದ ನಾವು ಫಿಟ್ ಆಗಿರುವ ಜೊತೆಗೆ ಸದೃಢತೆಯನ್ನು ಪಡೆಯಲು ಸಾಧ್ಯ ಎಂದು ಪೌಷ್ಟಿಕತಜ್ಞ ಪ್ರಧಾನ್ ಅವರು ಹೇಳಿರುವ ಸಲಹೆಗಳನ್ನು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಉಲ್ಲೇಖಿಸಲಾಗಿದೆ.
ನೀವು 50ರ ಹರೆಯವನ್ನು ತಲುಪಿದ ಬಳಿಕವೂ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಂಡು ಆರೋಗ್ಯವಂತರಾಗಿ ಬಾಳಲು ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಕೆಲವು ಆಹಾರ ಪದಾರ್ಥಗಳು ಈ ಕೆಳಗಿನಂತಿವೆ;
ಮೂಳೆ ಸಾರು ಮೂಳೆ ಸಾರು ಕಾಲಜನ್, ಗ್ಲೈಸಿನ್, ಜೆಲಾಟಿನ್, ಪ್ರೋಲಿನ್, ಗ್ಲುಟಾಮಿನ್ ಮತ್ತು ಅರ್ಜಿನೈನ್ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಕಾಲಜನ್ ಚರ್ಮದ ಆರೋಗ್ಯ ಸುಧಾರಣೆಗೆ ಸಹಾಯಕವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಜೆಲಾಟಿನ್ ಪೋಷಕಾಂಶ ನಿಮ್ಮ ಮೂಳೆಗಳು ಮತ್ತು ಕೀಲುಗಳ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಗ್ಲುಟಾಮಿನ್ ಸ್ನಾಯು ಬಲಗೊಳ್ಳಲು, ಮೆದುಳಿನ ಆರೋಗ್ಯ ಸುಧಾರಣೆ ಮತ್ತು ಯಕೃತ್ತಿನ ಆರೋಗ್ಯಕ್ಕೆ ಸಹಾಯಕವಾಗಿದೆ.
ಮೊಟ್ಟೆಗಳು ಮೊಟ್ಟೆಯನ್ನು ಪ್ರಕೃತಿಯ ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಪ್ರೋಟೀನ್ ಹೊರತುಪಡಿಸಿ ಮೊಟ್ಟೆಗಳಲ್ಲಿ ಅಗತ್ಯ ಪೋಷಕಾಂಶಗಳಿರುತ್ತವೆ. ಇದರಲ್ಲಿ ಆರೋಗ್ಯಕರ ಕೊಬ್ಬಿನಾಂಶ, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿರುತ್ತದೆ. ಇವು ನಿಮ್ಮ ಆರೋಗ್ಯ ಸುಧಾರಣೆಯಲ್ಲಿ ಜೊತೆಗೆ ಸದೃಢರಾಗಿರಲು ಸಹಾಯ ಮಾಡುತ್ತದೆ. ಹಾಗಿರುವಾಗ ನಿಮ್ಮ ದೈನಂದಿನ ಆಹಾರದಲ್ಲಿ ನೀವು ಮೊಟ್ಟೆಯನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
ಮಟನ್, ಚಿಕನ್ ಕೆಂಪು ಮಾಂಸದಲ್ಲಿರುವ ಸ್ಟಿಯರಿಕ್ ಆಮ್ಲವು ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯಕವಾಗಿದೆ. ಜೊತೆಗೆ ಕೋಳಿ ಮಾಂಸದಲ್ಲಿ ವಿಟಮಿನ್ ಕೆ2 ಸಮೃದ್ಧವಾಗಿದ್ದು, ಇದು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುತ್ತದೆ. ಹಾಗಿರುವಾಗ ನೀವು ಮಾಂಸಹಾರಿಗಳಾಗಿದ್ದರೆ ಈ ಕೆಲವು ಆಹಾರ ಪದಾರ್ಥಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬಹುದು.
ತುಪ್ಪ, ಬೆಣ್ಣೆ, ತೆಂಗಿನ ಎಣ್ಣೆ ತುಪ್ಪ, ಬೆಣ್ಣೆ ಮತ್ತು ತೆಂಗಿನ ಎಣ್ಣೆ ಉರಿಯೂತದ ಅಂಶಗಳಿಂದ ದೂರವಿರುತ್ತದೆ. ಈ ಉತ್ತಮ ಕೊಬ್ಬುಗಳು ಅಗತ್ಯವಾದ ಸೆಲ್ಯುಲಾರ್ಅನ್ನು ಹೊಂದಿರುತ್ತದೆ. ಈ ಕೊಬ್ಬುಗಳು ನಿಮ್ಮ ಚರ್ಮದ ಹೊಳಪಿಗೆ, ಜೊತೆಗೆ ಮೃದುವಾದ ಚರ್ಮ ಪಡೆಯಲು ಸಹಾಯಕವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
Health Tips: ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಇಲ್ಲಿವೆ ಸರಳ ಸಲಹೆಗಳು
Health Tips: ವಿಪರೀತ ಬೆನ್ನು ನೋವಿನ ಸಮಸ್ಯೆಯೇ? ಪರಿಹಾರಕ್ಕಾಗಿ ಇಲ್ಲಿದೆ ತಜ್ಞರ ಸಲಹೆಗಳು