White Hair in young age: ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಇದೇ ಕಾರಣ
ಇಂದಿನ ಕಾಲದಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಕೆಲವರು ಕೂದಲಿಗೆ ಬಣ್ಣ ಹಚ್ಚಿದರೆ ಇನ್ನು ಕೆಲವರಿಗೆ ಕೂದಲು ತನ್ನಿಂದ ತಾನಾಗಿಯೇ ಬೆಳ್ಳಗಾಗುತ್ತದೆ. ಮೊದಲು ಈ ಸಮಸ್ಯೆ ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ ಈಗ ಚಿಕ್ಕ ಮಕ್ಕಳು ಇದರಿಂದ ಹೊರತಾಗಿಲ್ಲ ಎಂದರೆ ತಪ್ಪಾಗಲಾರದು. 30 ರಿಂದ 35 ವರ್ಷ ವಯಸ್ಸಿನವರ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿರುವುದು ಮಾತ್ರವಲ್ಲ, ಹತ್ತು ಹನ್ನೆರಡನೇ ವಯಸ್ಸಿಗೆ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮಗೆ ಈ ಸಮಸ್ಯೆ ಇದೆಯೇ? ಇದಕ್ಕೆ ಕಾರಣವೇನು? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಇತ್ತೀಚಿನ ವರ್ಷಗಳಲ್ಲಿ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆ ಹೆಚ್ಚಾಗಿರುವುದನ್ನು ನೀವು ನೋಡಿರಬಹುದು. ಕೆಲವರು ಕೂದಲಿಗೆ ಬಣ್ಣ ಹಚ್ಚಿದರೆ ಇನ್ನು ಕೆಲವರಿಗೆ ಕೂದಲು ತನ್ನಿಂದ ತಾನಾಗಿಯೇ ಬೆಳ್ಳಗಾಗುತ್ತದೆ. ಮೊದಲು ಈ ಸಮಸ್ಯೆ ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ ಈಗ ಚಿಕ್ಕ ಮಕ್ಕಳು ಇದರಿಂದ ಹೊರತಾಗಿಲ್ಲ ಎಂದರೆ ತಪ್ಪಾಗಲಾರದು. 30 ರಿಂದ 35 ವರ್ಷ ವಯಸ್ಸಿನವರ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿರುವುದು ಮಾತ್ರವಲ್ಲ, ಹತ್ತು- ಹನ್ನೆರಡನೇ ವಯಸ್ಸಿಗೆ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮಗೆ ಈ ಸಮಸ್ಯೆ ಇದೆಯೇ? ಇದಕ್ಕೆ ಕಾರಣವೇನು? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ವಿಟಮಿನ್ ಕೊರತೆಯೇ ಕಾರಣ;
ದೇಹದಲ್ಲಿ ಜೀವಸತ್ವಗಳ ಕೊರತೆಯು ಕೂದಲು ಉದುರುವ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರು ಹೇಳುವ ಪ್ರಕಾರ, ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ವಿಟಮಿನ್ ಬಿ 9 ಕೊರತೆಯು ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಕಾರಣವಾಗಬಹುದು. ಈ ಬಗ್ಗೆ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ವರದಿಯೊಂದನ್ನು ಪ್ರಕಟ ಮಾಡಿದ್ದು ಇದರಲ್ಲಿಯೂ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿ ಅಥವಾ ಕಂದು ಬಣ್ಣಕ್ಕೆ ತಿರುಗಿ ಬಳಿಕ ಉದುರಲು ವಿಟಮಿನ್ ಕೊರತೆ ಮುಖ್ಯ ಕಾರಣ ಎಂದು ಸಾಬೀತುಪಡಿಸಿದೆ.
ಪಿತ್ತರಸದ ಅತಿಯಾದ ಉತ್ಪಾದನೆಯು ಕೂದಲು ಬಿಳಿಯಾಗಲು ಕಾರಣವಾಗಬಹುದು!
ಆಯುರ್ವೇದ ವೈದ್ಯ ಡಾ. ಆರ್. ಪಿ. ಪರಾಶರ್ ಅವರು ಹೇಳುವ ಪ್ರಕಾರ, ದೇಹದಲ್ಲಿ ಹೆಚ್ಚು ಪಿತ್ತರಸವನ್ನು ಉತ್ಪಾದಿಸುವವರ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದಲ್ಲದೆ, ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗಲು ಆಹಾರವೂ ಒಂದು ಪ್ರಮುಖ ಕಾರಣವಾಗಿದೆ. ಪಿತ್ತರಸದ ಅತಿಯಾದ ಉತ್ಪಾದನೆಯು ಕೂದಲಿನ ಬೇರುಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. ಪಿತ್ತರಸದ ಅತಿಯಾದ ಉತ್ಪಾದನೆ ದೇಹದಲ್ಲಿ ಮೆಲನಿನ್ ಕೊರತೆಗೆ ಕಾರಣವಾಗುತ್ತದೆ. ಬಳಿಕ ಇದು ಕೂದಲಿನ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ನಿಮಗೂ ಕಂಡು ಬರುತ್ತಿದ್ದರೆ ಪ್ರತಿದಿನ ಪ್ರಾಣಾಯಾಮವನ್ನು ಮಾಡುವುದು ಒಳ್ಳೆಯದು.
ಇದನ್ನೂ ಓದಿ: ಬೆಳಿಗ್ಗೆ ಎದ್ದು ಜೇನುತುಪ್ಪಕ್ಕೆ ಈ ಬೀಜಗಳನ್ನು ಸೇರಿಸಿ ಸೇವನೆ ಮಾಡಿ, ಹೃದಯ ಆರೋಗ್ಯವಾಗಿರುತ್ತೆ
ವಿಟಮಿನ್ ಕೊರತೆ ನಿವಾರಿಸುವುದು ಹೇಗೆ?
ವಿಟಮಿನ್ ಬಿ 12 ಮತ್ತು ಬಿ 9 ಕೊರತೆಯನ್ನು ನಿವಾರಿಸಲು ಸೊಪ್ಪು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇರಿಸುವುದು ಅತ್ಯಗತ್ಯ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದಲ್ಲದೆ, ನೀವು ಮೊಟ್ಟೆ ಮತ್ತು ಸಾಲ್ಮನ್ ಮೀನುಗಳನ್ನು ಸಹ ತಿನ್ನಬಹುದು. ವಿಟಮಿನ್ ಡಿ ಕೊರತೆಯನ್ನು ನಿವಾರಿಸಲು ಹಾಲು, ಮೊಸರು ಮತ್ತು ಮೊಟ್ಟೆಗಳನ್ನು ತಿನ್ನಬಹುದು. ಆದರೆ ಅದಕ್ಕೂ ಮೊದಲು ನೀವು ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ. ಈ ವಿಟಮಿನ್ ಕೊರತೆಯ ಸಂದರ್ಭದಲ್ಲಿ ವೈದ್ಯರ ಸಲಹೆಯ ಪ್ರಕಾರ ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು. ಇದರೊಂದಿಗೆ, ವಿಟಮಿನ್ ಕೊರತೆಯನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ