ಯುಕೆಯಲ್ಲಿ ಪತ್ತೆಯಾದ ಟಿಕ್ ವೈರಸ್; ಏನಿದು ರೋಗ? ಲಕ್ಷಣಗಳಾವವು? ಇಲ್ಲಿದೆ ಮಾಹಿತಿ
ಯುಕೆಯಲ್ಲಿ ಟಿಕ್ ವೈರಸ್ ಪತ್ತೆಯಾಗಿದ್ದು ಈ ಬಗ್ಗೆ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಏನು? ಏನಿದು ರೋಗ? ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಮಾಹಿತಿ
ಇಂಗ್ಲೆಂಡ್ನಲ್ಲಿ ಪತ್ತೆಯಾಗಿರುವ ಟಿಕ್ ವೈರಸ್ ಗಂಭೀರ ರೋಗಲಕ್ಷಣಗಳನ್ನುಂಟು ಮಾಡುವ ವೈರಸ್ ಆಗಿದೆ. ಇಂಗ್ಲೆಂಡ್‌ನ ಹಲವಾರು ಪ್ರದೇಶಗಳಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಮಾಹಿತಿ ನೀಡಿದೆ. ಟಿಕ್ ವೈರಸ್ ಹರಡುವುದನ್ನು ತಡೆಯಲು ಆಸ್ಪತ್ರೆಗಳಲ್ಲಿ ಹಲವು ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಆರೋಗ್ಯ ಸಂಸ್ಥೆಯು ನೀಡಿದ ಎಚ್ಚರಿಕೆಯ ಮಾಹಿತಿ ಪ್ರಕಾರ, ಈಗ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ವೈರಸ್ ಪತ್ತೆ ಹಚ್ಚಲು ಆರೋಗ್ಯ ತಪಾಸಣೆ ಆರಂಭವಾಗಿದೆ.
ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನ ಕೆಲವು ಭಾಗಗಳಲ್ಲಿ ಈ ವೈರಸ್ ಸೋಂಕಿಗೆ ಒಳಾಗದವರಲ್ಲಿ ಯಾವುದೇ ಗುಣಲಕ್ಷಣಗಳು ಪತ್ತೆಯಾಗಿಲ್ಲ, ಆ ಕಾರಣದಿಂದ ಇಲ್ಲಿಯ ಜನರ ರಕ್ತದ ಮಾದರಿಯನ್ನು ಆರೋಗ್ಯ ಅಧಿಕಾರಿಗಳು ಪರೀಕ್ಷೆ ಮಾಡುತ್ತಿದ್ದಾರೆ. ಈ ವೈರಸ್ 2019ರಲ್ಲಿ ಕೂಡ ಕಂಡುಬಂದಿತ್ತು. ಈಗ ಹ್ಯಾಂಪ್‌ಶೈರ್/ಡಾರ್ಸೆಟ್ ಮತ್ತು ನಾರ್ಫೋಕ್ ಪ್ರದೇಶಗಳಲ್ಲಿಯೂ ವೈರಸ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ವೈರಸ್‌ನ ಬಗ್ಗೆ 2019ರಲ್ಲಿ ಕಾಳಜಿ ವಹಿಸಿದ್ದರೆ, ಈಗ ಇಷ್ಟೊಂದು ಹರಡುತ್ತಿರಲಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು. ಈಗ ಈ ವೈರಸ್ ವೇಗವಾಗಿ ಹಬ್ಬಿರುವುದರಿಂದ ಯುಕೆ ಆರೋಗ್ಯ ಸಂಸ್ಥೆ ಈ ವರದಿಯನ್ನು ನೀಡಿದೆ.
ರೋಗಲಕ್ಷಣಗಳು:
ಈ ವೈರಸ್ ಜಾಗತಿಕವಾಗಿ ಅನೇಕ ದೇಶಗಳಲ್ಲಿ ಹರಡಿದ್ದು, ತಲೆನೋವು, ಕುತ್ತಿಗೆ ಬಿಗಿತ, ಪ್ರಜ್ಞಾಹಿನತೆ, ಮೆದುಳಿನಲ್ಲಿ ನೋವು, ಜ್ವರದಂತಹ ರೋಗ ಲಕ್ಷಣಗಳು ಹೊಂದಿದೆ. ಕೆಲವೊಂದು ಬಾರಿ ಇಂತಹ ರೋಗ ಲಕ್ಷಣ ಕಾಣದೆಯೂ ಇರಬಹುದು. ವೈರಸ್‌ನ ಅಪಾಯ ಕಡಿಮೆ ಎಂದು ಯುಕೆ ಆರೋಗ್ಯ ಸಂಸ್ಥೆ ಹೇಳಿದ್ದರು.
ಸಿಡಿಸಿ ಪ್ರಕಾರ, ಟಿಕ್-ಬೋರ್ನ್ ಎನ್ಸೆಫಾಲಿಟಿಸ್ (ಟಿಬಿಇ) ವೈರಸ್ ಸೋಂಕಿಗೆ ಒಳಗಾದ ಅನೇಕ ಜನರು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಟಿಕ್ ಎನ್ಸೆಫಾಲಿಟಿಸ್ ಅಥವಾ ಉಣ್ಣಿ, ಉಣ್ಣೆ ಕಡಿತದಿಂದ ಒಬ್ಬ ವ್ಯಕ್ತಿಗೆ 7ರಿಂದ 14 ದಿನಗಳ ವರೆಗೆ ಅನಾರೋಗ್ಯ ಇರುಬಹುದು. ಆದರೆ ಕೆಲವರಲ್ಲಿ ಸುಮಾರು 4 ರಿಂದ 28 ದಿನಗಳವರೆಗೆ ಇರಬಹುದು. ಈ ವೈರಸ್ನಿಂದ ತೋಳುಗಳು ಅಥವಾ ಕಾಲುಗಳಲ್ಲಿ ನೋವು ಕಂಡುಬರುತ್ತವೆ. ಇದನ್ನು ಬೈಫಾಸಿಕ್ ಕಾಯಿಲೆ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ:ಭಾರತದಲ್ಲಿ H3N2 ವೈರಸ್, ಇದರಿಂದ ಉಂಟಾಗುವ ದೀರ್ಘಕಾಲದ ಪರಿಣಾಮಗಳು ಯಾವುವು? ಇಲ್ಲಿವೆ ಸಲಹೆಗಳು
ರೋಗವನ್ನು ಪತ್ತೆ ಮಾಡುವುದು ಹೇಗೆ?
ಸಿಡಿಸಿ ಪ್ರಕಾರ, ವೈದ್ಯರು ಟಿಬಿಇ ವೈರಸ್ ಸೋಂಕನ್ನು ಆಧರಿಸಿ ರೋಗದ ಬಗ್ಗೆ ಕಂಡುಹಿಡಿಯಲಾಗುತ್ತದೆ. ನೀವು ಪ್ರಯಾಣ ಮಾಡಿದ್ದಾರಾ? ಪ್ರಯಾಣ ಮಾಡುವಾಗ ಉಣ್ಣಿ ಹುಳಗಳು ಕಚ್ಚಿದೆಯಾ? ಈ ಆದರದ ಮೇಲೆ ರೋಗನಿರ್ಣಯ ಮಾಡಲಾಗುತ್ತದೆ.
ಟಿಕ್-ಬರೇಡ್ ಅಥವಾ ಟಿಕ್ ಎನ್ಸೆಫಾಲಿಟಿಸ್ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?
ಸಿಡಿಸಿ ಪ್ರಕಾರ, ಟಿಬಿಇ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಯಾವುದೇ ಔಷಧಿಗಳಿಲ್ಲ. ಆದರೆ ಸೋಂಕನ್ನು ತಡೆಗಟ್ಟಲು ಲಸಿಕೆ ಲಭ್ಯವಿದೆ. ವಿಶ್ರಾಂತಿ, ನೋವು ನಿವಾರಿಸುವ ಔಷಧಿಗಳು ಕೆಲವು ರೋಗಲಕ್ಷಣಗಳನ್ನು ನಿವಾರಿಸಬಹುದು. ಈ ಕಾಯಿಲೆ ತೀವ್ರವಾದಲ್ಲಿ ಜನರು ಸಾಮಾನ್ಯವಾಗಿ ಉಸಿರಾಟಕ್ಕೆ ತೊಂದರೆ ಆಗದೆ ಇರಲು ಹಾಗೂ ಮೆದುಳಿನಲ್ಲಿ ಊತವನ್ನು ಕಡಿಮೆ ಮಾಡಲು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.
Published On - 6:23 pm, Wed, 5 April 23