ಕ್ಯಾನ್ಸರ್ ಸಂಬಂಧಿತ ಪರೀಕ್ಷೆ ಮಾಡಬೇಕಾದ ಸರಿಯಾದ ಸಮಯ ಯಾವುದು?; ಮಾಹಿತಿ ಇಲ್ಲಿದೆ
ಕ್ಯಾನ್ಸರ್ ಒಂದು ಗಂಭೀರ ಕಾಯಿಲೆಯಾಗಿದ್ದು, ಇದು ಜೀವಕ್ಕೆ ಮಾರಕವಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವ ಮೂಲಕ ಈ ರೋಗದಿಂದ ಗುಣಮುಖವಾಗಬಹುದು. ಹಾಗಾಗಿ ಕ್ಯಾನ್ಸರ್ ಸಂಬಂಧಿತ ಪರೀಕ್ಷೆಗಳನ್ನು ಸಮಯಕ್ಕೆ ಸರಿಯಾಗಿ ಮಾಡುವುದು ಬಹಳ ಮುಖ್ಯ.

ಕ್ಯಾನ್ಸರ್ ಒಂದು ಗಂಭೀರ ಕಾಯಿಲೆಯಾಗಿದ್ದು, ಇದು ಜೀವಕ್ಕೆ ಮಾರಕವಾಗಿದೆ. ಈ ಕಾಯಿಲೆಯು ಅಸಂಖ್ಯಾತ ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ದೇಹದ ಯಾವುದೇ ಭಾಗದಲ್ಲಿಯೂ ಕ್ಯಾನ್ಸರ್ ಬರಬಹುದು. ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾದ ಮತ್ತು ಅವುಗಳು ಗಡ್ಡೆಗಳ ಸ್ವರೂಪವನ್ನು ಪಡದುಕೊಂಡಾಗ ಕ್ಯಾನ್ಸರ್ ಉಂಟಾಗುತ್ತದೆ. ಈ ಗಡ್ಡೆಗಳು ದೇಹದೊಳಗೆ ಹರಡಿ ಅಂಗಾಂಗಗಳಿಗೆ ಹಾನಿಯನ್ನು ಉಂಟುಮಾಡುತ್ತವೆ. ಆದ್ದರಿಂದ ಕ್ಯಾನ್ಸರ್ ನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚುವುದು ಮತ್ತು ಅದಕ್ಕೆ ಸರಿಯಾದ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಕ್ಯಾನ್ಸರ್ ನಿಂದ ಸಂಭವಿಸುವ ಸಾವುಗಳನ್ನು ತಪ್ಪಿಸಲು ಆರೋಗ್ಯಕರ ಜೀವನಶೈಲಿಯ ಪಾಲನೆಯೊಂದಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆಯೂ ಇದೆ. ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿದ್ದಾಗ, ಇದರ ಚಿಕಿತ್ಸೆಯು ಸುಲಭವಾಗಿರುತ್ತದೆ. ಮತ್ತು ರೋಗಿಯು ಬದುಕುಳಿಯುವ ಸಾಧ್ಯತೆಯು ಹೆಚ್ಚಿರುತ್ತದೆ. ಹಾಗಾಗಿ ಈ ಹಂತದಲ್ಲಿಯೇ ರೋಗಿಗೆ ಸರಿಯಾದ ಚಿಕಿತ್ಸೆಯ ಅವಶ್ಯಕವಾಗಿದೆ.
ಕ್ಯಾನ್ಸರ್ ಸಂಬಂಧಿತ ಪರೀಕ್ಷೆಗಳನ್ನು ಯಾವಾಗ ಮಾಡಬೇಕೆಂಬ ಸರಿಯಾದ ಸಮಯದ ಬಗ್ಗೆ ತಿಳಿದುಕೊಳ್ಳಿ:
- ಗಣನೀಯ ಪ್ರಮಾಣದ ತೂಕ ನಷ್ಟ
- ಆಹಾರಗಳನ್ನು ನುಂಗಲು ಕಷ್ಟವಾಗುವಂತಹದ್ದು
- ಜ್ವರ ಅಥವಾ ರಾತ್ರಿ ಸಮಯದಲ್ಲಿ ವಿಪರೀತವಾಗಿ ಬೆವರುವುದು
- ಕೆಮ್ಮು ಅಥವಾ ಉಸಿರಾಟದ ತೊಂದರೆ
- ತೀವ್ರ ಹೊಟ್ಟೆ ನೋವು ಅಥವಾ ಮಲಬದ್ಧತೆ
- ಕಲೆಗಳು, ಗೀರುಗಳು ಮತ್ತು ಗಾಯಗಳು ಮುಂತಾದ ಚರ್ಮದಲ್ಲಿ ಕಂಡುಬರುವ ಬದಲಾವಣೆ
- ಅಸಹಜ ರಕ್ತಸ್ರಾವ
- ಸುಸ್ತು
ನೀವು ಎರಡು ವಾರಗಳಿಗಿಂತ ಹೆಚ್ಚು ಕಾಲ ಈ ಮೇಲಿನನ ರೋಗಲಕ್ಷಣಗಳನ್ನು ಹೊಂದಿದ್ದರೆ, ಅದು ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು. ಈ ರೀತಿಯ ರೋಗಲಕ್ಷಣಗಳು ಕಂಡುಬಂದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಿ ಮತ್ತು ಕ್ಯಾನ್ಸರ್ ಗೆ ಸಂಬಂಧಿಸಿದ ಸೂಕ್ತ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಈ ಹಂತದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ರೋಗವನ್ನು ಗುಣಪಡಿಸಬಹುದು ಮತ್ತು ಸಾವಿನ ಅಪಾಯವನ್ನು ತಪ್ಪಿಸಬಹುದು.
ಇದನ್ನೂ ಓದಿ: ಮುಖದಲ್ಲಾಗುವ ಈ ಬದಲಾವಣೆಗಳು ನಿಮ್ಮ ರೋಗದ ಸಂಕೇತವೂ ಆಗಿರಬಹುದು!
ಕ್ಯಾನ್ಸರ್ ನಲ್ಲಿ ನಾಲ್ಕು ಹಂತಗಳಿವೆ:
ಹಂತ 0:
ಈ ಹಂತದಲ್ಲಿ ನೀವು ಕ್ಯಾನ್ಸರ್ ಲಕ್ಷಣವನ್ನು ಹೊಂದಿರುದಿಲ್ಲ. ಇದು ಆರಂಭಿಕ ಹಂತವಾಗಿದೆ. ಈ ಹಂತದಲ್ಲಿ ಕ್ಯಾನ್ಸರ್ ಕೋಶಗಳು ಅವುಗಳು ಉತ್ಪತ್ತಿಯಾದ ಮೂಲ ಸ್ಥಳದಲ್ಲಿರುತ್ತದೆ ಮತ್ತು ಗಡ್ಡೆಗಳು ದೇಹದ ಯಾವುದೇ ಭಾಗಕ್ಕೂ ಹರಡಿರುವುದಿಲ್ಲ. ಹಾಗಾಗಿ ಈ ಹಂತದಲ್ಲಿ ಕ್ಯಾನ್ಸರ್ ನ್ನು ಪತ್ತೆಹಚ್ಚುವುದು ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸುವುದು ಉತ್ತಮ. ಈ ಹಂತದಲ್ಲಿ ಕ್ಯಾನ್ಸರ್ ನ್ನು ಪತ್ತೆ ಮಾಡಲು ನೀವು ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಅವುಗಳೆಂದರೆ;
- ಮ್ಯಾಮೊಗ್ರಫಿ ಮತ್ತು ಮ್ಯಾಮೊಗ್ರಫಿ ಅಲ್ಟ್ರಾಸೌಂಡ್
- ಪ್ಯಾಪ್ ಸ್ಮೀಯರ್ ಪರೀಕ್ಷೆ
- ಪಿ.ಎಸ್.ಎ ರಕ್ತ ಪರೀಕ್ಷೆ
- ಕೊಲೊನೋಸ್ಕೋಪಿ ಮತ್ತು ಎಂಡೋಸ್ಕೋಪಿ
ಹಂತ 1:
ಈ ಹಂತದಲ್ಲಿ ಗಡ್ಡೆಯು ಸ್ವಲ್ಪ ದೊಡ್ಡದಾಗುತ್ತದೆ ಆದರೆ ಇನ್ನೂ ಮೂಲ ಸ್ಥಳದಿಂದ ದೇಹದ ಇತರ ಅಂಗಾಶವನ್ನು ಆವರಿಸಿರುವುದಿಲ್ಲ. ಹೀಗಿದ್ದರೂ ಕೂಡಾ ಈ ಹಂತದಲ್ಲಿ ಕ್ಯಾನ್ಸರ್ ಗಡ್ಡೆ ಅದರ ಸುತ್ತಮುತ್ತಲಿನ ಅಂಗಾಶಗಳನ್ನು ಹಾನಿಗೊಳಿಸಬಹುದು.
ಹಂತ 2 ಮತ್ತು 3:
ಈ ಒಂದು ಹಂತದಲ್ಲಿ ಕ್ಯಾನ್ಸರ್ ಗೆಡ್ಡೆ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ ಹಾಗೂ ದುಗ್ಧರಸ ಗ್ರಂಥಿಗಳು ಮತ್ತು ದೇಹದ ಇತರ ಅಂಗಾಂಶಗಳಿಗೆ ಅದು ಹರಡಲು ಪ್ರಾರಂಭಿಸುತ್ತದೆ.
ಹಂತ 4:
ಇದು ಕ್ಯಾನ್ಸರ್ ನ ಕೊನೆಯ ಮತ್ತು ಅತ್ಯಂತ ಅಪಾಯಕಾರಿ ಹಂತವಾಗಿದೆ. ಈ ಸಂದರ್ಭದಲ್ಲಿ ಕ್ಯಾನ್ಸರ್ ಮೂಳೆಗಳು, ಯಕೃತ್ತು, ಶ್ವಾಸಕೋಶಗಳು ಮುಂತಾದ ದೇಹದ ಪ್ರಮುಖ ಭಾಗಗಳನ್ನು ಆವರಿಸುತ್ತದೆ. ಈ ಹಂತದಲ್ಲಿ ಕ್ಯಾನ್ಸರ್ ಪೀಡಿತ ವ್ಯಕ್ತಿ ಸಾಯುವ ಅಪಾಯ ಹೆಚ್ಚಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
