Scrub Typhus: ಭಾರತದಲ್ಲಿ ವೇಗವಾಗಿ ಹರಡುತ್ತಿದೆ ಸ್ಕ್ರಬ್ ಟೈಫಸ್ ಎಂಬ ಹೊಸ ಸೋಂಕು; ಏನಿದರ ಲಕ್ಷಣ?
ಸ್ಕ್ರಬ್ ಟೈಫಸ್ ಎಂಬ ಈ ಬ್ಯಾಕ್ಟೀರಿಯಾದ ಸೋಂಕು ರಾಜಸ್ಥಾನ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಈ 2 ರಾಜ್ಯಗಳ 700ಕ್ಕೂ ಹೆಚ್ಚು ಜನರಿಗೆ ಸ್ಕ್ರಬ್ ಟೈಫಸ್ ಕಾಣಿಸಿಕೊಂಡಿದೆ. 5 ಜನರು ಈ ಹೊಸ ರೋಗದಿಂದ ಸಾವನ್ನಪ್ಪಿದ್ದಾರೆ.
ಮತ್ತೆ ಮಳೆಗಾಲ ಶುರುವಾಗಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಮಳೆಗಾಲದಲ್ಲಿ ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ನೀರಿನಿಂದ ಹರಡುವ ರೋಗಗಳು ಹೆಚ್ಚಾಗಿರುತ್ತದೆ. ಕಾಯಿಲೆಗಳನ್ನು ತರುತ್ತದೆ. ಇದೀಗ ಭಾರತದಲ್ಲಿ ಸ್ಕ್ರಬ್ ಟೈಫಸ್ ಎಂಬ ಹೊಸ ಬ್ಯಾಕ್ಟೀರಿಯಾ ಸೋಂಕೊಂದು ವೇಗವಾಗಿ ಹರಡುತ್ತಿದೆ. ಇತ್ತೀಚೆಗೆ, ಸ್ಕ್ರಬ್ ಟೈಫಸ್ (scrub typhus) ಎಂಬ ಈ ಬ್ಯಾಕ್ಟೀರಿಯಾದ ಸೋಂಕು ರಾಜಸ್ಥಾನ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಈ 2 ರಾಜ್ಯಗಳ 700ಕ್ಕೂ ಹೆಚ್ಚು ಜನರಿಗೆ ಸ್ಕ್ರಬ್ ಟೈಫಸ್ ಕಾಣಿಸಿಕೊಂಡಿದೆ. 5 ಜನರು ಈ ಹೊಸ ರೋಗದಿಂದ ಸಾವನ್ನಪ್ಪಿದ್ದಾರೆ.
ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನ (ಐಜಿಎಂಸಿ) ತಜ್ಞರ ಪ್ರಕಾರ ಶಿಮ್ಲಾದ ಸೋಲನ್ ಜಿಲ್ಲೆಯಲ್ಲಿ ಐವರು ಸ್ಕ್ರಬ್ ಟೈಫಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಮಹಿಳೆಯರಾಗಿದ್ದಾರೆ.
ಇದನ್ನೂ ಓದಿ: ಬೆಲ್ಲದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಏನಿದು ಸ್ಕ್ರಬ್ ಟೈಫಸ್?: ಸ್ಕ್ರಬ್ ಟೈಫಸ್ ಎಂಬುದು ಓರಿಯೆಂಟಿಯಾ ಸುಟ್ಸುಗಮುಶಿ ಬ್ಯಾಕ್ಟೀರಿಯಂನಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಸಣ್ಣ ಹುಳಗಳ ಕಚ್ಚುವಿಕೆಯ ಮೂಲಕ ಹರಡುತ್ತದೆ. ಇದರ ಸಾಮಾನ್ಯ ರೋಗಲಕ್ಷಣಗಳೆಂದರೆ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಕೆಂಪನೆಯ ಕಜ್ಜಿಗಳು.
ಸ್ಕ್ರಬ್ ಟೈಫಸ್‌ನ ರೋಗಲಕ್ಷಣಗಳು ಯಾವುವು?: ಸ್ಕ್ರಬ್ ಟೈಫಸ್‌ನ ಲಕ್ಷಣಗಳು ಸಾಮಾನ್ಯವಾಗಿ ಹುಳ ವ್ಯಕ್ತಿಯನ್ನು ಕಚ್ಚಿದ 10 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಚಳಿ ಹಾಗೂ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಹುಳ ಕಚ್ಚಿದ ಜಾಗದ ಸುತ್ತ ಕೆಂಪನೆಯ ರಿಂಗ್ ಮೂಡುವುದು ಈ ರೋಗದ ಪ್ರಮುಖ ಲಕ್ಷಣಗಳು. ಈ ಸ್ಕ್ರಬ್ ಟೈಫಸ್ ಸೋಂಕು ತೀವ್ರವಾದರೆ ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ರೋಗಿ ಕೋಮಾಕ್ಕೂ ಹೋಗಬಹುದು. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಈ ರೋಗ ಮಾರಣಾಂತಿಕವೂ ಆಗಬಹುದು.
ಇದನ್ನೂ ಓದಿ: Monsoon Diseases: ಮಳೆಗಾಲದ ಆರಂಭದೊಂದಿಗೆ ದದ್ದು, ಚರ್ಮದ ಸೋಂಕುಗಳು ಹೆಚ್ಚಾಗುತ್ತಿವೆ
ಇದನ್ನು ತಡೆಗಟ್ಟುವುದು ಹೇಗೆ?: ಸ್ಕ್ರಬ್ ಟೈಫಸ್ ಅನ್ನು ತಡೆಗಟ್ಟಲು ಪ್ರಸ್ತುತ ಯಾವುದೇ ಲಸಿಕೆ ಇಲ್ಲ. ಆದರೆ ಸೋಂಕಿತ ಹುಳಗಳ ಸಂಪರ್ಕವನ್ನು ತಪ್ಪಿಸುವ ಮೂಲಕ ನಿಮ್ಮ ಅಪಾಯವನ್ನು ಕಡಿಮೆ ಮಾಡಬಹುದು. ಈ ರೋಗ ಹೆಚ್ಚಾಗಿರುವ ಪ್ರದೇಶಗಳಿಗೆ ಕೆಲ ಕಾಲ ಪ್ರಯಾಣವನ್ನು ಮಾಡಬೇಡಿ. ಹುಳಗಳು ಸಾಮಾನ್ಯವಾಗಿ ಕಂಡುಬರುವ ದಟ್ಟವಾದ ಗಿಡ-ಮರಗಳಿರುವ ಸ್ಥಳಗಳಿಂದ ದೂರವಿರಿ. ಶಿಶುಗಳು ಮತ್ತು ಚಿಕ್ಕ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಅವರ ಕೈ ಮತ್ತು ಕಾಲುಗಳನ್ನು ಮುಚ್ಚಬೇಕು. ಆದಷ್ಟೂ ಕಾಡಿನ ಪ್ರದೇಶದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬೇಡಿ.