Stroke: ಫಿಟ್ ಆಗಿದ್ದರೂ ಪಾರ್ಶ್ವವಾಯುಗೊಳಗಾದ ಝೆರೋಧಾ ಸಿಇಓ ನಿತಿನ್ ಕಾಮತ್​​; ಇಲ್ಲಿದೆ ಕಾರಣ

Nithin Kamath: ಇತ್ತೀಚೆಗೆ ಯುವಜನತೆಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಉಂಟಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಶಿವಮೊಗ್ಗ ಮೂಲದ ಉದ್ಯಮಿಯಾಗಿರುವ ನಿತಿನ್ ಕಾಮತ್ ಅವರಿಗೆ ಕೂಡ ಕೆಲವು ವಾರಗಳ ಹಿಂದೆ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಉಂಟಾಗಿತ್ತು. ತಮಗೆ ಈ ರೀತಿ ಸಮಸ್ಯೆ ಉಂಟಾಗಲು ಕಾರಣವೇನೆಂಬುದರ ಬಗ್ಗೆ ನಿತಿನ್ ಕಾಮತ್ ಅವರೇ ಹೇಳಿಕೊಂಡಿರುವ ಮಾಹಿತಿ ಇಲ್ಲಿದೆ.

Stroke: ಫಿಟ್ ಆಗಿದ್ದರೂ ಪಾರ್ಶ್ವವಾಯುಗೊಳಗಾದ ಝೆರೋಧಾ ಸಿಇಓ ನಿತಿನ್ ಕಾಮತ್​​; ಇಲ್ಲಿದೆ ಕಾರಣ
ನಿತಿನ್ ಕಾಮತ್
Follow us
ಸುಷ್ಮಾ ಚಕ್ರೆ
|

Updated on:Feb 26, 2024 | 4:04 PM

ನಮ್ಮ ಮೆದುಳಿಗೆ ರಕ್ತ ಪೂರೈಕೆಯು ಸ್ಥಗಿತಗೊಂಡಾಗ ಪಾರ್ಶ್ವವಾಯು ಸಂಭವಿಸುತ್ತದೆ. ಇತ್ತೀಚೆಗೆ 30 ವರ್ಷದ ಆಸುಪಾಸಿನವರಲ್ಲೂ ಈ ಸ್ಟ್ರೋಕ್ ಅಥವಾ ಪಾರ್ಶ್ವವಾಯುವಿನ (Stroke) ಸಮಸ್ಯೆ ಹೆಚ್ಚಾಗುತ್ತಿದೆ. ಇದರ ರೋಗಲಕ್ಷಣಗಳು ರಕ್ತದ ಪೂರೈಕೆಯ ಸಮಸ್ಯೆಯಿಂದ ಪ್ರಭಾವಿತವಾಗಿರುವ ಮೆದುಳಿನ ಭಾಗ ಯಾವುದು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕರ್ನಾಟಕದ ಶಿವಮೊಗ್ಗ ಮೂಲದ ಉದ್ಯಮಿ ಹಾಗೂ ಝೆರೋಧಾ (Zerodha) ಕಂಪನಿಯ ಸಂಸ್ಥಾಪಕ ನಿತಿನ್ ಕಾಮತ್ (Nithin Kamath) ಅವರಿಗೆ 6 ವಾರಗಳ ಹಿಂದೆ ಸಣ್ಣ ಪ್ರಮಾಣದ ಸ್ಟ್ರೋಕ್ ಉಂಟಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಝೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ತಾವು “ಸೌಮ್ಯ ಪಾರ್ಶ್ವವಾಯು”ವಿಗೆ ಒಳಗಾಗಿದ್ದಕ್ಕೆ ಕಾರಣವೇನೆಂಬುದರ ಬಗ್ಗೆ ಅವರು ಸ್ಪಷ್ಟವಾಗಿ ದೃಢೀಕರಿಸದಿದ್ದರೂ, ತಮ್ಮ ಆರೋಗ್ಯ ಸಮಸ್ಯೆಗೆ ಕಾರಣವಾಗಿರುವ ಅಂಶಗಳ ಬಗ್ಗೆ ಅವರು ಕೆಲವು ಮುಖ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. “ಸುಮಾರು 6 ವಾರಗಳ ಹಿಂದೆ ನಾನು ಸೌಮ್ಯವಾದ ಪಾರ್ಶ್ವವಾಯು ಸಮಸ್ಯೆಯನ್ನು ಎದುರಿಸಿದ್ದೆ. ನನ್ನ ತಂದೆ ನಿಧನರಾಗಿದ್ದು, ಕಳಪೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ ಮತ್ತು ಅತಿಯಾದ ಕೆಲಸ ಇವುಗಳಲ್ಲಿ ಯಾವುದಾದರೂ ಒಂದು ಅಂಶ ನನಗೆ ಸೌಮ್ಯವಾದ ಸ್ಟ್ರೋಕ್ ಉಂಟಾಗಲು ಕಾರಣವಾಗಿರಬಹುದು” ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಬಿಲಿಯನೇರ್ ವಾಣಿಜ್ಯೋದ್ಯಮಿಯಾಗಿರುವ ನಿತಿನ್ ಕಾಮತ್ ಅವರು 3ರಿಂದ 6 ತಿಂಗಳೊಳಗೆ ಪಾರ್ಶ್ವವಾಯುವಿನಿಂದ ಪೂರ್ಣ ಚೇತರಿಕೆ ಹೊಂದುವ ನಿರೀಕ್ಷೆಯಲ್ಲಿದ್ದಾರೆ. ಅವರ ತಂದೆ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಸರಿಯಾಗಿ ನಿದ್ರೆ ಮಾಡದೆ ಹಲವು ದಿನಗಳಾಗಿದ್ದವು. ನಿಶ್ಯಕ್ತಿ, ನಿರ್ಜಲೀಕರಣ ಮತ್ತು ಕಠಿಣ ವ್ಯಾಯಾಮಗಳು ಅವರ ಆರೋಗ್ಯದ ಸಮಸ್ಯೆಗೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಯುವಕರಲ್ಲಿ ಉಂಟಾಗುವ ಪಾರ್ಶ್ವವಾಯುವಿನಲ್ಲಿ ಒತ್ತಡ, ಹೈಪರ್​ಟೆನ್ಷನ್ ಪಾತ್ರವೇನು?

ನನ್ನ ಮುಖದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನನಗೆ ಈಗೀಗ ಓದಲು, ಬರೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾನು ಮಾನಸಿಕವಾಗಿ ಕುಸಿದುಹೋಗಿದ್ದೇನೆ. ಯಾವುದರ ಬಗ್ಗೆಯೂ ಆಸಕ್ತಿ ಇಲ್ಲದಂತಾಗಿದೆ. ಆದ್ದರಿಂದ, ಪೂರ್ಣ ಚೇತರಿಕೆಗೆ 3ರಿಂದ 6 ತಿಂಗಳುಗಳು ಬೇಕಾಗಬಹುದು ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಮತ್ ಅವರು ಫಿಟ್ನೆಸ್ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬಹಿರಂಗವಾಗಿ ಹಲವು ಬಾರಿ ಪೋಸ್ಟ್​ಗಳನ್ನು ಮಾಡಿದ್ದರು. ಆದರೂ ಪಾರ್ಶ್ವವಾಯು ಅನುಭವಿಸಿದ ಅವರು ಜನರು ತಮ್ಮ ಅಭ್ಯಾಸಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ನಮ್ಮನ್ನು ನಾವು ಬಹಳ ಆರೋಗ್ಯಕರವಾಗಿದ್ದೇವೆ ಎಂದುಕೊಂಡಿರುತ್ತೇವೆ. ಫಿಟ್ ಆಗಿದ್ದೇವೆ ಎಂಬ ಭ್ರಮೆಯಲ್ಲಿರುತ್ತೇವೆ. ಆದರೆ, ನೀವು ಯಾವಾಗ ಗೇರ್ ಅನ್ನು ಸ್ವಲ್ಪ ಕೆಳಗೆ ಬದಲಾಯಿಸಬೇಕು ಎಂದು ನೀವು ತಿಳಿದುಕೊಳ್ಳಬೇಕು ಎಂದು ವೈದ್ಯರು ನನಗೆ ಹೇಳಿದರು. ನಾನಿನ್ನು ಹೆಚ್ಚು ಎಚ್ಚರಿಕೆಯಿಂದ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಟ್ರೋಕ್ ತಡೆಯಲು ನಿಮ್ಮ ಡಯೆಟ್​ನಲ್ಲಿ ಈ ಆಹಾರ ಸೇವಿಸಿ

ಸ್ಟ್ರೋಕ್‌ನ ಲಕ್ಷಣಗಳು ಮೆದುಳಿನ ಅಂಗಾಂಶವು ಎಷ್ಟು ರಕ್ತ ಪೂರೈಕೆಯಿಂದ ವಂಚಿತವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಸೌಮ್ಯವಾದ ಪಾರ್ಶ್ವವಾಯು ಹೊಂದಿರುವವರು ತೋಳು ಅಥವಾ ಕಾಲಿನ ತಾತ್ಕಾಲಿಕ ದೌರ್ಬಲ್ಯವನ್ನು ಅನುಭವಿಸಬಹುದು. ಆದರೆ ಹೆಚ್ಚು ತೀವ್ರವಾದ ಪಾರ್ಶ್ವವಾಯು ಹೊಂದಿರುವವರು ತಮ್ಮ ದೇಹದ ಒಂದು ಬದಿಯಲ್ಲಿ ಶಾಶ್ವತವಾಗಿ ಪಾರ್ಶ್ವವಾಯುವಿಗೆ ಒಳಗಾಗಬಹುದು ಅಥವಾ ಮಾತನಾಡಲು ಅಸಮರ್ಥರಾಗಬಹುದು. ಸರಿಯಾದ ಸಮಯಕ್ಕೆ ಸೂಕ್ತವಾದ ಚಿಕಿತ್ಸೆ ನೀಡದಿದ್ದರೆ ಶಾಶ್ವತವಾಗಿ ಇದರ ಪರಿಣಾಮಗಳು ಗಂಭೀರವಾಗಬಹುದು. ಕೆಲವು ಜನರು ಪಾರ್ಶ್ವವಾಯುಗಳಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಆದರೆ ಪಾರ್ಶ್ವವಾಯುವಿನಿಂದ ಬದುಕುಳಿದವರಲ್ಲಿ ಮೂರನೇ ಎರಡರಷ್ಟು ಜನರು ಕೆಲವು ವಿಧದ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.

ಪಾರ್ಶ್ವವಾಯು ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ಇದಕ್ಕೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮುಖ್ಯ. ತುರ್ತು ವೈದ್ಯಕೀಯ ಸಹಾಯವನ್ನು ಎಷ್ಟು ಬೇಗ ಪಡೆಯುತ್ತೇವೋ ಅಷ್ಟು ಮೆದುಳಿನ ಹಾನಿ ಮತ್ತು ಇತರ ಸ್ಟ್ರೋಕ್ ತೊಡಕುಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Mon, 26 February 24

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ