AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು-ಎಚ್ಚರ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಇಂದಿನ (ಮಾರ್ಚ್​​​​​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು-ಎಚ್ಚರ
ರಾಶಿ ಭವಿಷ್ಯ
TV9 Web
| Edited By: |

Updated on: Mar 06, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ವ್ಯತಿಪಾತ್, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:44 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:16 ರಿಂದ 09:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:15 ರಿಂದ 12:44ರ ವರೆಗೆ.

ಧನು ರಾಶಿ : ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನಗಳು ಸಫಲವಾಗುವುದು.ಇಂದು ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಬಯಸಿದರೆ ಸರಳ ಉಪಾಯಗಳು ಸ್ಫುರಿಸಬಹುದು. ಇಂದು ನೀವು ಹಣದ ವಿಷಯಗಳಲ್ಲಿ ಜಾಗರೂಕತೆ ಇರಲಿ. ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಿ. ಭೂವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಸೂಕ್ತವಾಗಿದೆ. ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಆರೋಪ ಪ್ರತ್ಯಾರೋಪಗಳಿಂದ ಪರಸ್ಪರ ಕಲಹವೂ ಆಗುವುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ.

ಮಕರ ರಾಶಿ : ಇಂದು ನೀವು ಯಾರದೋ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ವೇಗದ ಚಾಲನೆ ಬೇಡ. ನಿಮ್ಮನ್ನು ಯಾವುದಾದರೂ ಕಾರ್ಯಕ್ಕೆ ಮುಖ್ಯರನ್ನಾಗಿ ಮಾಡಬಹುದು. ಅತಿಯಾದ ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಸಂಗಾತಿಯ ಜೊತೆ ಸಾಮರಸ್ಯ ಇರುತ್ತದೆ. ನಿಮ್ಮ ನಿರ್ಧಾರಗಳಿಗೆ ಪ್ರೀತಿಪಾತ್ರರ ಬೆಂಬಲವಿರುಬುದು. ಅಸಮಾಧಾನವನ್ನು ಯಾವುದಾದರೂ ತಂತ್ರದಿಂದ ಸರಿಮಾಡಿಕೊಳ್ಳುವಿರಿ. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಬೇಕಾದಷ್ಟು ಕೆಲಸಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಉದ್ಯಮದ ಮಿತ್ರನನ್ನು ಮನೆಗೆ ಆಹ್ವಾನಿಸುವಿರಿ. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು. ಚಾಲಕರಿಗೆ ಕರ್ತವ್ಯಕ್ಕೆ ಪ್ರಶಂಸೆ ಸಿಗುವುದು. ಅರಿವಿಲ್ಲದೆ ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ.

ಕುಂಭ ರಾಶಿ : ಇಂದು ನಿಮ್ಮ ಸಾಮರ್ಥ್ಯವನ್ನು ಪೂರ್ಣ ಬಳಸಿಕೊಂಡು ಕೆಲಸವನ್ನು ಮಾಡುವಿರಿ.‌ ಹೊಸ ಅನುಭವವು ನಿಮ್ಮದಾಗಲಿದೆ. ನಿಮ್ಮ ಆತ್ಮವಿಶ್ವಾಸಕ್ಕೆ ಯಾವ ಆತಂಕವೂ ಬರದು. ಬಂದರೂ ಅದು ಕ್ಷಣಕಾಲದ್ದು ಮಾತ್ರ. ವ್ಯಾಪಾರಿಗಳು ಇಂದು ದೊಡ್ಡಮಟ್ಟಿನ ಆದಾಯವನ್ನು ಪಡೆಯವರು. ನೀವು ಗ್ರಾಹಕರನ್ನು ಗೆಲ್ಲುವಿರಿ. ಕೌಟುಂಬಿಕ ಜೀವನದಲ್ಲಿ ಇರುವ ಸಂತೋಷ ಇಂದು ನಿಮ್ಮ ವರ್ತನೆಯಲ್ಲಿ ಕಾಣಿಸುತ್ತದೆ. ಮನೆಯಲ್ಲಿ ನಡೆವ ಶುಭ ಕಾರ್ಯಗಳಿಗೆ ಮಕ್ಕಳ ಸಹಕಾರವಿರುವುದು. ಸರ್ಕಾರದ ಕಡೆಯಿಂದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು. ಕಾರಣದಿಂದ ವೃಥಾ ಕಾಲಹರಣವಾಗಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರುವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಆದಾಯವು ಕಡಿಮೆ ಆದಂತೆ ಅನ್ನಿಸುವುದು.

ಮೀನ ರಾಶಿ : ಇಂದು ನಿಮಗೆ ಕಾರ್ಯದ ಸ್ಥಳದಲ್ಲಿ ಉತ್ತಮ ಬೆಂಬಲವಿರುವುದು. ಉದ್ಯೋಗವನ್ನು ಕಷ್ಟಪಟ್ಟು ಖುಷಿಯಿಂದ ಮಾಡಿ ಮುಗಿಸುವಿರಿ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಇಂದು ಉತ್ತಮ ಲಾಭಾಂಶ ಗಳಿಸುವರು. ಹೂಡಿಕೆಯಲ್ಲಿ ಅಧಿಕ ಸಂಪಾದನೆ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ. ಮಹಿಳೆಯರ ಜೊತೆ ಹೆಚ್ಚು ಸಮಯವನ್ನು ಸಂತೋಷದಿಂದ ಕಳೆಯುವಿರಿ. ಇರುವ ಒಂದು ವ್ಯಾಪಾರವನ್ನು ಕ್ರಮಬದ್ಧವಾಗಿ ನೋಡಿಕೊಳ್ಳಲಾಗದು. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಭೂಮಿಯ ಮೇಲೆ ಸಾಲವನ್ನು ಮಾಡಬೇಕಾದೀತು. ಸಹೋದ್ಯೋಗಿಗಳು ನಿಮ್ಮನ್ನು ಎಲ್ಲದಕ್ಕೂ ಬೊಟ್ಟು ಮಾಡಿ ತೋರಿಸಿಯಾರು‌. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕಳ್ಳುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)