AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ, ಈ ರಾಶಿಯರಿಗೆ ಸಹನೆ ಕಡಿಮೆ, ಅಜಾಗರೂಕತೆಯಿಂದ ನಷ್ಟ ಮಾಡಿಕೊಳ್ಳುವಿರಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 07) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯರಿಗೆ ಸಹನೆ ಕಡಿಮೆ, ಅಜಾಗರೂಕತೆಯಿಂದ ನಷ್ಟ ಮಾಡಿಕೊಳ್ಳುವಿರಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Oct 07, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 07 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 17ಕ್ಕೆ, ರಾಹು ಕಾಲ ಬೆಳಿಗ್ಗೆ 09:22 – 10:51ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:50 – 03:19ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:24 – 07:53ರ ವರೆಗೆ.

ಮೇಷ ರಾಶಿ: ಸ್ವಭಾವವು ಉಗ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು. ಕೃಷಿಯಲ್ಲಿ ನೀವು ಹೆಚ್ಚು ಪ್ರಗತಿಯನ್ನು ಸಾಧಿಸುವ ಮನಸ್ಸು ಇರುವುದು. ನೀವು ಇಂದು ಅತಿಥಿಯಾಗಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮಿಂದಾಗಿ ಮನೆಯಲ್ಲಿ‌ ಇಂದು ಸಂತೋಷವು ಇರಲಿದೆ. ‌ಕಳೆದ ದಿನಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಹಂಚಿಕೊಳ್ಳುವಿರಿ. ಬರಬೇಕಾದ ಹಣವು ವಿಳಂಬವಾಗುವುದು.

ವೃಷಭ ರಾಶಿ: ಸಾಹಿತ್ಯಾಸಕ್ತರಿಗೆ ಹೆಚ್ಚು ಅನುಕೂಲಕರ ವಾತಾವರಣವು ಇರುವುದು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ಸಹೋದ್ಯೋಗಿಗಳಿಂದ ಸಹಾಯವನ್ನು ಪಡೆಯುವಿರಿ.‌ ಸ್ವಾರ್ಥವನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಆನಂದದಿಂದ ಈ ದಿನವನ್ನು ಕಳೆಯಬೇಕು ಎನಿಸುವುದು.‌ ಅನಿರೀಕ್ಷಿತ ಪ್ರಯಾಣದಿಂದ ಸುಖವಿರಲಿದೆ.‌ ನಿಮ್ಮ ವಿವಾಹದ ಮಾತುಕತೆ ವಿಳಂಬವಾಗಿ‌ದೆ ಎಂದು ಬೇಸರ ಆಗಬಹುದು. ಮುಖ್ಯ ದಾಖಲೆಗಳನ್ನು ಸರಿಯಾದ ಕಡೆಗಳಲ್ಲಿ ಇಟ್ಟುಕೊಳ್ಳಿ. ನಿಮಗೆ ಸರಿಯಾದ ಸಮಯದಲ್ಲಿ ಹಣವು ಸಿಕ್ಕಿರುವುದು‌ ಖುಷಿ‌ ಕೊಡುವುದು.

ಮಿಥುನ ರಾಶಿ: ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ. ಅದೃಷ್ಟದ ಪರೀಕ್ಷೆಯು ಆಗಬಹುದು. ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶವು ಸಿಗುವುದು. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಅಧಿಕ ಆಲೋಚನೆಯಿಂದ ಮನಸ್ಸು ದುರ್ಬಲವಾಗುವುದು. ಕಾಲು ನೋವಿಗೆ ವೈದ್ಯರ ಸಲಹೆಯನ್ನು ಭೇಟಿ ಮಾಡಿ. ನಿಮ್ಮ ದಿನಚರ್ಯೆಯನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗುವುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಆಗದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಮನೆಯಿಂದ ದೂರ ಹೋಗುವಿರಿ. ಸಮಾಜವು ನಿಮ್ಮ ಸಾಧನೆಗೆ ಮೆಚ್ಚಿಕೊಳ್ಳುವುದು.

ಕರ್ಕಾಟಕ ರಾಶಿ: ಚಾಣಾಕ್ಷತನದಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ನಿಮ್ಮ ಮಾತಿಗೆ ಇಂದು ವಿರೋಧವು ಉಂಟಾಗುವುದು. ‌ಅಪರಿಚರ ಜೊತೆ ವ್ಯವಹಾರವು ಸರಿಯಾಗಿ ಇರಲಿ. ತಂದೆಯ ಮೇಲೆ‌ ನಿಮಗೆ ಬೇಸರ ಬರಬಹುದು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ತರಬಹುದು. ಆಸ್ತಿಯ ವಿಚಾರದಲ್ಲಿ ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಬೇರೆ ದಾರಿಯನ್ನು ಹುಡುಕಿಕೊಳ್ಳುವಿರಿ. ಮನೆಯ ವಾತಾವರಣವು ನಿಮಗೆ ಹಿತಕರ ಎನಿಸದು. ವಿಶೇಷವಾದ ವಸ್ತುವನ್ನು ಕೊಳ್ಳುವಿರಿ.

Follow Us
Web contact
Web contact

TV9 Kannada

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!