Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆಯಾಗುವ ಸಂಭವವಿದೆ

Horoscope ಸೆಪ್ಟೆಂಬರ್ 14, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆಯಾಗುವ ಸಂಭವವಿದೆ
ದಿನ ಭವಿಷ್ಯ
Follow us
TV9 Web
| Updated By: ಆಯೇಷಾ ಬಾನು

Updated on: Sep 14, 2021 | 6:50 AM

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಶುಕ್ಲಪಕ್ಷ, ಅಷ್ಟಮಿ ತಿಥಿ, ಮಂಗಳವಾರ, ಸೆಪ್ಟೆಂಬರ್ 14, 2021. ಜ್ಯೇಷ್ಠ ನಕ್ಷತ್ರ, ರಾಹುಕಾಲ: ಇಂದು ಸಂಜೆ 03.15 ರಿಂದ ಇಂದು ಸಂಜೆ 4.47ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.03. ಸೂರ್ಯಾಸ್ತ: ಸಂಜೆ 6.19

ತಾ.14-09-2021 ರ ಮಂಗಳವಾರದ ರಾಶಿಭವಿಷ್ಯ.

ಮೇಷ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆಯಾಗುವ ಸಂಭವವಿದೆ. ಆದಾಯ ಉತ್ತಮವಾಗಿರುವುದು. ನೌಕರಿಯಲ್ಲಿ ಅಸಹಕಾರ ಎದುರಿಬೇಕಾಗುವುದು. ಗ್ರಹಸೌಖ್ಯವಿದ್ದರೂ ಮಾನಸಿಕ ನೆಮ್ಮದಿ ಇರಲಾರದು. ಶುಭ ಸಂಖ್ಯೆ: 9

ವೃಷಭ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು. ಶುಭ ಸಂಖ್ಯೆ: 1

ಮಿಥುನ: ಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ. ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವುದು. ಶುಭ ಸಂಖ್ಯೆ: 8

ಕಟಕ: ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 3

ಸಿಂಹ: ತಾಪತ್ರಯಗಳೆಲ್ಲ ದೂರವಾಗಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ವ್ಯಾಪಾರಾದಿ ಉದ್ಯಮಗಳು ಇಷ್ಟದಂತೆ ನಡೆಯುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳಿಗೂ ಭಯ ತೋರಿದರೂ ಹಾನಿಯಿಲ್ಲ. ಶುಭ ಸಂಖ್ಯೆ: 7

ಕನ್ಯಾ: ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ.ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ. ಶುಭ ಸಂಖ್ಯೆ: 4

ತುಲಾ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವುದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 6

ವೃಶ್ಚಿಕ: ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 5

ಧನು: ಧನಾರ್ಜನೆಯ ಮಾರ್ಗವು ಶ್ರೇಷ್ಠ ಮಟ್ಟದಲ್ಲಿದ್ದು, ಐಶ್ವರ್ಯ ಸಮೃದ್ಧಿಯಾಗುತ್ತದೆ. ಸಂಸಾರಿಕ ದೃಷ್ಟಿಯಲ್ಲೂ ಸುಖ, ಸಂಭ್ರಮಗಳಿದ್ದು ತೃಪ್ತಿ ಲಭಿಸಿದರೂ ಶತ್ರುಜನರ ಪೀಡೆ ಅಧಿಕವಾಗುತ್ತದೆ. ಅನಿವಾರ್ಯ ಪ್ರವಾಸ ಸಾಧ್ಯತೆ ಇದೆ. ಶುಭ ಸಂಖ್ಯೆ: 9

ಮಕರ: ವ್ಯಾಪಾರದಲ್ಲಿ ಅದೃಷ್ಟಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಶುಭ ಸಂಖ್ಯೆ: 2

ಕುಂಭ: ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವದು. ಶುಭ ಸಂಖ್ಯೆ: 5

ಮೀನ: ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿರಿ. ಹೊಸ ವ್ಯಾಪಾರ, ಉದ್ಯೋಗದ ಅವಕಾಶಗಳು ಕೂಡಿ ಬರುವವು. ಹಳೆಯ ಸವiಸ್ಯಗಳು ಪರಿಹಾರವಾಗುವವು. ಶುಭಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಶುಭ ಸಂಖ್ಯೆ: 3

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ