Nitya Bhavishya: ಈ ರಾಶಿಯವರಿಗೆ ಸಂಗಾತಿಯ ಸಹಾಯದಿಂದ ಧನ ಲಾಭ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು
2023 ಫೆಬ್ರವರಿ 06 ಸೋಮವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 06 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಆಶ್ಲೇಷ, ಯೋಗ : ಸೌಭಾಗ್ಯ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 32 ನಿಮಿಷಕ್ಕೆ. ರಾಹು ಕಾಲ 08:28 – 09:54, ಯಮಘಂಡ ಕಾಲ 11:20 ರಿಂದ 12 : 47, ಗುಳಿಕ ಕಾಲ 02:12 ರಿಂದ 3: 38.
ಮೇಷ: ನಿಮ್ಮ ಶ್ರಮಕ್ಕೆ ತಕ್ಕುದಾದ ಫಲವು ದೊರೆಯುವುದು. ಪ್ರಗತಿಯನ್ನು ಕಾಣದೇ ಇರುವ ಕೆಲಸಗಳು ವೇಗವನ್ನು ಪಡೆದು ಗುರಿಯತ್ತ ಸಾಗುವುವು. ವ್ಯಾಪಾರ ವಹಿವಾಟುಗಳು ಸಮಾಧಾನವನ್ನು ತರುವುವು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳು ಸಹಾಯ ಮಾಡಲಿದ್ದಾರೆ. ಮನೆಗೆ ಸಂಬಂಧಿಸಿದ ವಸ್ತಗಳು ಖರೀದಿಯು ಅಗಲಿದೆ. ನಿಮ್ಮ ವಿರೋಧಿಗಳೊಂದಿಗೆ ಎಚ್ಚರಿಕೆಯಿಂದ ಇರಿ. ಆರ್ಥಿಕವಾಗಿ ಸುಧಾರಣೆ ಆಗಲಿದೆ. ವಿದ್ಯಾರ್ಥಿಗಳ ಓದಿನಲ್ಲಿ ಪ್ರಗತಿ ಇರಲಿದೆ. ಸಂಸಾರವು ಸಾಕೆನಿಸಬಹುದು.
ವೃಷಭ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಧನಾತ್ಮಕವಾಗಿ ಚಿಂತಿಸಿ. ವೃತ್ತಿಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡುವುದು. ಸಹವಾಸದಿಂದ ನೀವು ವ್ಯಕ್ತಿತ್ವವು ಬದಲಾವಣೆಯನ್ನು ಹೊಂದುವುದು. ಸಮಾರಂಭದಲ್ಲಿ ಸಕ್ರಿಯರಾಗಿ ಪಾತ್ರವನ್ನು ನಿರ್ವಹಿಸುವಿರಿ. ಹೂಡಿಕೆಯನ್ನು ಮಾಡುವ ಮನಸ್ಸಿದ್ದರೆ ಇಂದೇ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಮನೋಬಲವನ್ನು ಹೊಂದಿದ್ದೀರಿ. ಸಂಗಾತಯ ಜೊತೆ ಸಮಯ ಕಳಯಬಹುದು.
ಮಿಥುನ: ಸಂಗಾತಿಯ ಸಹಾಯದಿಂದ ಇಂದು ಧನಲಾಭವಾಗಬಹುದು. ಆದಾಯದ ಮೂಲಗಳು ಒಂದೊಂದಾಗಿ ತೆರೆದುಕೊಳ್ಳಬಹುದು. ಅಲ್ಪಮತಿಯರಾಗದೇ ವಿಶಾಲವಾದ ಮನಃಸ್ಥಿತಿಯನ್ನು ಬೆಳಿಸಿಕೊಳ್ಳಿ. ದೂರದ ಊರಿಗೆ ಪ್ರಯಾಣ ಹೋಗುವ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನೀವು ಶತ್ರುಗಳನ್ನು ಹುಟ್ಟುಹಾಕಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಬೇಡಿ. ಶಿಕ್ಷಣಕ್ಷೇತದಲ್ಲಿ ಇರುವವರು ತಮ್ಮ ಸ್ಥಾನದ ಬಗ್ಗೆ ಜಾಗರೂಕರಾಗಿರಿ ಇರುವರು. ನಿಮ್ಮ ಮಟ್ಟವನ್ನು ಏರಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗುವಿರಿ.
ಕಟಕ: ಉದ್ಯೋಗಾವಕಾಶಗಳು ನಿಮ್ಮ ಪಾಲಿಗೆ ತೆರೆದಿರುತ್ತದೆ. ಉತ್ತಮವಾದ ಆಯ್ಕೆಗಳನ್ನು ಮಾಡಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಆತುರರಾಗುವುದು ಬೇಡ. ದುಪ್ಪಟ್ಟು ವ್ಯಯಿಸುವ ಸನ್ನಿವೇಶಗಳು ಬರಬಹುದು. ಉದ್ವೇಗದಿಂದ ಕೆಲವೊಂದು ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಉದ್ಯಮಿಗಳಿಗೆ ನೂತನ ಕಾರ್ಯವು ಸಿಗಲಿದೆ. ಸಂಬಂಧಗಳ ವಿಚಾರದಲ್ಲಿ ನೀವು ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮ್ಮಿಷ್ಟ ಕೆಲಸು ಸಿಗಲಿದ್ದು, ಉತ್ಸಾಹದಿಂದ ಮಾಡುವಿರಿ.
ಸಿಂಹ: ಸಂಪತ್ತಿನ ಆಗಮನವು ಇಂದು ನಿಮ್ಮ ಸಾಮರ್ಥ್ಯದ ಮೇಲಿರಲಿದೆ. ಶ್ರಮವನ್ನು ವಹಿಸಿ, ಆಧಿಕಸಂಪತ್ತನ್ನು ಪಡೆಯಿರಿ. ನಿಮ್ಮ ವಿರೋಧಗಳು ನಿಮ್ಮ ಶ್ರಮದ ಫಲವನ್ನು ಪಡೆಯಬಹುದು. ಶ್ರೇಷ್ಠ ವ್ಯಕ್ತಿಗಳ ಭೇಟಿಯಾಗಲಿದೆ. ಮನಸ್ಸಿಂದು ನಿರಾಳವಾಗುವುದು. ಮನೆಯ ಕಟ್ಟುವ ಕೆಲಸದಲ್ಲಿ ನೀವಿಂದು ತೊಡಗಿಕೊಳ್ಳುವಿರಿ. ಧನಾಸಹಾಯವು ಅನಿರೀಕ್ಷಿತವಾಗಿ ಬಂಧುಗಳ ಕಡೆಯಿಂದ ಸಿಗಲಿದೆ. ನಿಮ್ಮನ್ನು ಆಡಿಕೊಳ್ಳಬಹುದು. ಆದಷ್ಟು ಕಿವಿಗೊಡದಿರಿ. ವ್ಯಾಪಾರವು ನಿಮಗೆ ಲಾಭವನ್ನು ತರುವುದು.
ಕನ್ಯಾ: ನಿಮ್ಮ ಉದ್ಯಮವು ಪ್ರಗತಿಯನ್ನು ಕಾಣುವುದು. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಉದ್ಯೋಗವನ್ನು ಹೊಸದಾಗಿ ವಿದ್ಯಾಭ್ಯಾಸ ಮಾಡಿದವರಿಗೆ ಸಿಗುವುದು ಕಷ್ಟವಾದೀತು. ಹೆಚ್ಚು ಓಡಾಟಗಳು ಇರಲಿವೆ. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಿರಂತರ ಯತ್ನವನ್ನು ಮಾಡುವಿರಿ. ಉತ್ತಮವಾದ ಆಹಾರವನ್ನು ತಿನ್ನಬೇಕು ಎಂದು ಬಯಸಿ ಮನೆಯಿಂದ ದೂರ ಹೋಗುವಿರಿ. ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡುವುವು.
ತುಲಾ: ತ್ಯಾಗದ ಮನೋಭಾವವು ಬರಲಿದೆ. ದೇಶಕ್ಕೋಸ್ಕರ ನಿಮ್ಮನ್ನು ನೀವು ಕೊಟ್ಟುಕೊಳ್ಳುವ ಅಥವಾ ಮಹದುದ್ದೇಶಕ್ಕೆ ಮೀಸಲಾಗಿ ಇಡುವಿರಿ. ಮಾತಗಾರರಾಗಿದ್ದರೆ ನಿಮಗೆ ಪ್ರಶಂಸೆಗಳು ಸಿಗಬಹುದು. ಅಪವಾದಗಳಿಂದ ದೂರವಿರಲು ಪ್ರಯತ್ನಿಸಿದರೂ ಅದು ನಿಮ್ಮನ್ನೇ ಹುಡುಕಿಬರಲಿದೆ. ಹೊಸ ವಸ್ತ್ರಗಳನ್ನು ಧರಿಸುವಿರಿ. ಆಭರಣಗಳ ಖರೀದಿಯನ್ನು ಮಾಡುವ ಮನಸ್ಸಾಗಿರುತ್ತದೆ. ಶ್ರಮವಹಿಸದೇ ಫಲವನ್ನು ಅಪೇಕ್ಷಿಸುವುದು ನಿಮಗೆ ನಿಮ್ಮ ಅಸಾಮರ್ಥ್ಯವನ್ನು ತೋರಿಸುವುದು.
ವೃಶ್ಚಿಕ: ಅಪರಿಚಿತರ ಜೊತೆ ವ್ಯವಹರಿಸುವುದು ಯೋಗ್ಯವಲ್ಲ. ನಿಮ್ಮ ಆಪ್ತವಲಯಕ್ಕೆ ಸೇರಿಸಿಕೊಳ್ಳಬೇಡಿ. ವ್ಯಾಪರ ಅಥವಾ ಉದ್ಯಮವು ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಇಟ್ಟು ಮೇಲೇರಬಹುದು. ತಾಳ್ಮೆ ಇರಲಿ. ಕೃಷಿಯ ಕಾರ್ಯದಲ್ಲಿ ಮನಸ್ಸಾಗಿ ಕೆಲವು ಅಪರೂಪದ ಸಸ್ಯಗಳನ್ನು ನೆಡಲಿದ್ದೀರಿ. ಸಂಗಾತಿಯನ್ನು ಹುಡುಕುವ ಕೆಲಸವು ನಿಮಗೆ ಬೇಸರವನ್ನು ತರಿಸುವುದು. ಮಾನಕ್ಕೆ ಅಂಜಿ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ. ಮನೆಯಿಂದ ದೂರವಿರಲು ಯೋಚಿಸುವಿರಿ.
ಧನು: ಉದ್ಯೋಗಸ್ಥರು ಬದಲಾವಣೆಯ ನಿರೀಕ್ಷೆಯಲ್ಲಿ ಇರುತ್ತಿರಿ. ನಿರೀಕ್ಷೆಯು ಫಲಿಸಲಿದೆ. ರಾಜಕೀಯ ಕುಟಂಬದ ಸಂಪರ್ಕವು ಉಂಟಾಗುವುದು. ಅತಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ನೀವಿರುವಿರಿ. ಬಂಧುಗಳ ಆಗಮನವು ಸಂಕಟವನ್ನು ತಂದರೂ ಹೇಳಿಕೊಳ್ಳಲಾಗದ ಸ್ಥಿತಿ ಇರುವುದು. ಸ್ವಾವಲಂಬಿಗಳಾಗಿ ಇರುವಿರಿ. ಯಂತ್ರೋದ್ಯಮವು ನಿಮಗೆ ಲಾಭವನ್ನು ಕೊಡುವುದು. ವೈವಾಹಿಕ ಜೀವನವು ನಿಮಗೆ ಸಾಕೆನಿಸಬಹುದು.
ಮಕರ: ನಿಮ್ಮ ವ್ಯಕ್ತಿತ್ವವು ಹಲವರಿಗೆ ಆದರ್ಶವಾಗಬಹುದು. ಉತ್ತಮಲಾಭದ ಆಸೆಯಿಂದ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ನಿಮ್ಮವರಿಂದ ಅವಮಾನವಾಗುವ ಸಾಧ್ಯತೆ ಇದೆ. ವೈದ್ಯವೃತ್ತಿಯವರು ಇಂದು ಒತ್ತಡದಲ್ಲಿ ಇರುವರು. ಪುತ್ರೋತ್ಸವದ ವಾರ್ತೆಯಿಂದ ಆನಂದವಾಗುವುದು. ಸಂಪತ್ತನ್ನು ಅಪರಿಚಿತ ಸ್ಥಳದಲ್ಲಿ ಇಟ್ಟು ಕಳೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಹೋದರಿಂದ ಸಂಪತ್ತಿನ ಸಹಾಯವು ಸಿಗಲಿದೆ.
ಕುಂಭ: ಯಾರಿಂದಲೂ ಆಗದು ಎನ್ನುವ ಕೆಲಸವನ್ನು ಅನಾಯಾಸವಾಗಿ ಮಾಡುವಿರಿ. ನಿಮಗೆ ಪ್ರಶಂಸೆಗಳು ಸಿಗಲಿವೆ. ಯಾವುದನ್ನೂ ಪರಿಶೀಲಿಸದೇ ಸ್ವೀಕರಿಸಬೇಡಿ. ಆತ್ಮಗೌರವಕ್ಕೆ ಧಕ್ಕೆ ಬರುವ ಕಾರ್ಯಗಳನ್ನು ಬಿಡುವಿರಿ. ನಿಮ್ಮ ತಲೆಯಲ್ಲಿ ಇರುವ ನೂರಾರು ಯೋಜನೆಯನ್ನು ಹೇಳಲು ಹೋಗಿ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು. ತಂದೆಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ಕುಗ್ಗುವಿರಿ.
ಮೀನ: ಮನಸ್ಸು ಚಂಚಲವಾಗಿದ್ದು ಒಂದೇ ಕಡೆಯಲ್ಲಿ ನಿಲ್ಲದು. ಉದ್ಯೋಗ ಬದಲಿಸುವುದನ್ನು ನಿಮ್ಮ ಸ್ವಭಾವವಾಗಿರಿಸಿಕೊಂಡಿದ್ದೀರಿ. ಅವಮಾನವಾಗು ಸಂದರ್ಭವಿದ್ದರೆ ಅಲ್ಲಿಂದ ದೂರನಡೆಯಿರಿ. ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ಒಳ್ಳೆಯ ಕೆಲಸವು ಆಗಿಲ್ಲ ಎಂಬ ನೋವು ಇರಲಿದೆ. ತಾಳ್ಮೆಯನ್ನು ಇಟ್ಟುಕೊಂಡು ವ್ಯವಹರಿಸವುದು ಉತ್ತಮ. ಪ್ರಯಾಣವು ಸುಖಕೊಟ್ಟರೂ ವ್ಯರ್ಥಭಾವವು ನಿಮ್ಮನ್ನು ಕಾಡುವುದು.
ಲೋಹಿತಶರ್ಮಾ ಇಡುವಾಣಿ