AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮ ಉನ್ನತ ಸ್ಥಾನದ ಅರಿವು ಮರೆಯಾಗಬಹುದು..

Horoscope Today 02 November: ನಿತ್ಯ ಭವಿಷ್ಯವು ರಾಶಿಗಳ ದೈನಂದಿನ ಫಲವನ್ನು ವಿವರಿಸುತ್ತದೆ. ಇಂದು ಆರೋಗ್ಯ, ಹಣಕಾಸು, ಸಂಬಂಧಗಳು, ಮತ್ತು ವೃತ್ತಿಜೀವನದಲ್ಲಿ ವಿವಿಧ ಸವಾಲುಗಳು ಎದುರಾಗಬಹುದು. ಕೆಲವರಿಗೆ ಮಕ್ಕಳಿಂದ ಕಷ್ಟ, ಕೆಲವರಿಗೆ ಆರ್ಥಿಕ ಒತ್ತಡವಿರಬಹುದು. ಇನ್ನು ಕೆಲವರಿಗೆ ಜಯ, ಪ್ರಾಮಾಣಿಕತೆಗೆ ಪ್ರಶಂಸೆ ಹಾಗೂ ಶಿಕ್ಷಣದಲ್ಲಿ ಅವಕಾಶಗಳು ಸಿಗಲಿವೆ. ಪ್ರತಿಯೊಂದು ರಾಶಿಗಳ ಸ್ಥಿತಿಯನ್ನು ವಿವರವಾಗಿ ತಿಳಿಸುತ್ತದೆ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮ ಉನ್ನತ ಸ್ಥಾನದ ಅರಿವು ಮರೆಯಾಗಬಹುದು..
ಸಾಂದರ್ಭಿಕ ಚಿತ್ರ Image Credit source: Tv9 kannada
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Nov 02, 2026 | 4:00 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಸೋಮವಾರದಂದು ಪರರಿಗೆ ಅಲ್ಪ ಸಹಾಯ, ದೌರ್ಬಲ್ಯದ ಅರಿವು, ಅನಿರೀಕ್ಷಿತ ತಿರುಗಾಟ, ಮಾತಿನಲ್ಲಿ ದೋಷ, ದೇಹದಂಡನೆ, ಸಂಪಾದನೆಯಲ್ಲಿ ವೈಫಲ್ಯ, ರಾಜಕೀಯ ತಿರುವು ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಸಾಧ್ಯ, ಕರಣ : ಬಾಲವ, ಸೂರ್ಯೋದಯ – 06 – 14 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:09 ಯಮಗಂಡ ಕಾಲ 10:36 – 12:03, ಗುಳಿಕ ಕಾಲ 13:30 – 14:57

ಮೇಷ ರಾಶಿ : ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಅನಿವಾರ್ಯ ಕಾರಣದಿಂದ ನಿಮಗೆ ಅಧಿಕಾರ ಲಾಭವಾಗಬಹುದು. ಉದ್ಯೋಗದಲ್ಲಿ ಒತ್ತಡದಿಂದ ಕೆಲವು ಸಮಸ್ಯೆಗಳು ಆಗಬಹುದು. ಜವಾಬ್ದಾರಿಗಳು ನಿಮ್ಮನ್ನು ಕಟ್ಟಿಹಾಕಬಹುದು. ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ಭೂಮಿಗೆ ಸಂಬಂಧಿಸಿದ ನಿಮ್ಮ ಕಲಹವು ನ್ಯಾಯಾಲಯಕ್ಕೆ ಹೋಗಬಹುದು. ನಿಮ್ಮ ಬಳಿ ಯಾರಾದರೂ ಹೇಳದೇ ಬರಬಹುದು. ಪ್ರೀತಿಯಲ್ಲಿ ನಿಮಗೆ ಸೋಲಾಗಲಿದೆ.

ವೃಷಭ ರಾಶಿ : ವೃತ್ತಿಯ ಕಾರಣಕ್ಕೆ ನೀವು ವಿದೇಶಪ್ರಯಾಣವನ್ನು ಮಾಡಲಿದ್ದೀರಿ. ಬಂಧುಗಳ ನೋವಿಗೆ ಸ್ಪಂದಿಸುವಿರಿ. ಪ್ರಯಾಣದಿಂದ ನಿಮಗೆ ಆಲಸ್ಯವಿರಲಿದೆ. ನಿಮ್ಮ ಅಪಮಾನವನ್ನು ಸಹಿಸಲಾರಿರಿ. ಕೋಪವನ್ನು ಮಾಡಿಕೊಳ್ಳಲು ನಿಮಗೆ ಕಾರಣವೇ ಬೇಕಾಗದು. ಇಂದು ಕೆಲಸವನ್ನು ಮುಗಿಸಿ ಆರಾಮಾಗಿ ಇರಬೇಕು ಎಂದು ಅಂದುಕೊಳ್ಳುವಿರಿ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ಎಲ್ಲ ಸಂದರ್ಭಗಳೂ ಆಸ್ವಾದನೀಯವಾಗಿ ಇರುವಂತೆ ಮಾಡುವಿರಿ.

ಮಿಥುನ ರಾಶಿ : ದೈಹಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ಉದ್ಯೋಗದ‌ ಸ್ಥಳದಲ್ಲಿ ಪಕ್ಷಪಾತವನ್ನು ಮಾಡಿ ದ್ವೇಷವನ್ನು ಬಿತ್ತುವ ಸಾಧ್ಯತೆ ಇದೆ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಆರ್ಥಿಕ ವ್ಯವಹಾರವನ್ನು ನಡೆಸುವಾಗ ನಿಮ್ಮವರೆನಿಸಿಕೊಂಡವರನ್ನು ಕೇಳಿ, ಮುಂದುವರಿಯಿರಿ. ಏಕಾಂತವನ್ನು ಇಂದು ಹೆಚ್ಚು ಇಷ್ಟಪಡುವಿರಿ. ನಿಮ್ಮ ತೂಕ ಎಷ್ಟೇ ಇದ್ದರೂ ಮಾತಿನಲ್ಲಿ ಬರುವಂತೆ ನೋಡಿಕೊಳ್ಳಿ.

ಕರ್ಕಾಟಕ ರಾಶಿ : ನಿಮ್ಮ ಕೆಲಸದಲ್ಲಿ ನಿಮಗೆ ತಪ್ಪು ಕಾಣಿಸಬಹುದು. ಸಮ್ಮಾನವನ್ನು ನೀವು ಇಷ್ಟಪಡುವುದಿಲ್ಲ. ಇನ್ನೊಬ್ಬರ ಕುರಿತಾದ ನಿಮ್ಮ ಕಲ್ಪನೆಗಳು ಸುಳ್ಳಾಗುವುದು. ಮನಸ್ಸಿನ ನಿಯಂತ್ರಣವನ್ನು ಸಾಧಿಸಲು ನಿಮಗೆ ಆಗದು. ಕ್ಷಿಪ್ರ ನಿರ್ಧಾರಗಳನ್ನು ಹೇಳಿದರೆ ನಿಮ್ಮ ಉಸಗಯೋಗ ವೇಗ ಪಡೆಯುವುದು. ವಿದ್ಯಾಭ್ಯಾಸಕ್ಕೆ ನೀವು ಇಷ್ಟಪಟ್ಟ ವಿಚಾರವೇ ಸಿಗಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ.

ಇದನ್ನೂ ಓದಿ: ನವೆಂಬರ್ ತಿಂಗಳ ಮಾಸಿಕ ರಾಶಿಫಲ: ತುಲಾ, ಧನು ರಾಶಿಗೆ ಅದೃಷ್ಟದ ಬಾಗಿಲು ಓಪನ್; ನಿಮ್ಮ ರಾಶಿಗೆ ಈ ತಿಂಗಳು ಶುಭವೋ? ಅಶುಭವೋ?

ಸಿಂಹ ರಾಶಿ : ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾದೀತು. ಯಾರನ್ನಾದರೂ ರಕ್ಷಿಸಿ ನೆಮ್ಮದಿ ಪಡೆಯುವಿರಿ. ನಿಮ್ಮ ಆಸೆಯನ್ನು ಪೂರೈಸಲು ಇಂದಿನಿಂದ‌ ಆರಂಭಸುವಿರಿ. ಹೊಸ ಉದ್ಯಮಕ್ಕೆ ಆಪ್ತರ ಹಾಗೂ ಅನುಭವಿಗಳ ಸಲಹೆಯನ್ನು ಪಡೆಯಿರಿ. ಕಲಹಕ್ಕೆ ಯಾರಾದರೂ ಬಂದರೆ ಮೌನ ವಹಿಸಿ. ಸಣ್ಣ ಪ್ರಯಾಣವಾದರೂ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರವಾಗಲಿದೆ.

ಕನ್ಯಾ ರಾಶಿ : ಕೈಗೊಂಡ ಕಾರ್ಯಗಳಲ್ಲಿ ನಿಮಗೆ ಜಯವು ಸಿಗಲಿದೆ. ಪ್ರಾಮಾಣಿಕತೆಗೆ ನಿಮಗೆ ಪ್ರಶಂಸೆಯು ಸಿಗಲಿದೆ. ಯಾರನ್ನೋ ಮೆಚ್ಚಿಸಲು ನೀವು ದೇಹವನ್ನು ದಂಡಿಸಿ ಕೆಲಸ ಮಾಡುವಿರಿ. ಪ್ರಾರಬ್ಧಕರ್ಮವನ್ನು ಪೂರ್ಣಫಲವನ್ನು ಕೊಟ್ಟು ಮುಕ್ತಾಯ ಆಗುವುದು. ಕಾರ್ಯದಲ್ಲಿ ನಿರಾಸಕ್ತಿಯು ಇರಲಿದೆ‌. ಕಾರ್ಯದ ನಡುವೆ ವಿಶ್ರಾಂತಿ ಇರಲಿ. ನಿಮ್ಮವರ ಜೊತೆ ಕಾಲ ಕಳೆಯಲು ಇಷ್ಟವಾಗದು. ನಿಮಗೆ ಆಗದುದನ್ನು ನೇರವಾಗಿ ಹೇಳುವಿರಿ. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ.

ತುಲಾ ರಾಶಿ : ನಿಮ್ಮ ಮಾತನಂತೆ ನಡೆಯುತ್ತಿಲ್ಲ ಎಂಬ ಬೇಸರ ಇರುವುದು. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು. ನಿಮಗೆ ಇಷ್ಟವಾಗದ ಕೆಲಸವನ್ನೇ ಮಾಡಬೇಕಾದ ಸ್ಥಿತಿಯು ಬರಬಹುದು. ಕಾನೂನಾತ್ಮಕವಾಗಿ ನಿಮ್ಮ ಹೋರಾಟವಿರುವುಧು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಶ್ರಮಿಸುವಿರಿ. ವಿದ್ಯಾರ್ಥಿಗಳು ಬಹಳ ಸೋಮಸರಿಗಳಾಗುವರು. ನಿಮ್ಮನ್ನು ಚುಚ್ಚುವ ಹಾಗೆ ನಿಮ್ಮವರು ಮಾತನಾಡುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳಿ.

ವೃಶ್ಚಿಕ ರಾಶಿ : ಉದ್ಯೋಗದಲ್ಲಿ ಒತ್ತಡ ಜೀವನವು ನಿಮಗೆ ಅಭ್ಯಾಸವಾಗಿ ಹೋಗಲಿದೆ. ಬಲವಂತ ವಿಚಾರಕ್ಕೆ ನೀವು ಒಪ್ಪಲಾರಿರಿ. ನಿಮ್ಮ ಕಷ್ಟಗಳಿಗೆ ದೈವದ ಮೊರೆ ಹೋಗುವುದು ಉತ್ತಮ. ಆಸ್ತಿಯನ್ನು ಉಳಿಸಿಕೊಳ್ಳ ಬಹಳ ಶ್ರಮವಹಿಸಬೇಕಾದೀತು. ಎಲ್ಲವನ್ನೂ ಸರಳವಾಗಿ ಸ್ವೀರಿಸುವ ಮನೋಭಾವದಲ್ಲಿನಿರಲಿದೆ. ನಿಮ್ಮ ದೃಷ್ಟಿ ನೇರವಾಗಿ ಇರಲಿ, ಕಿವಿಯ ಕಡೆ ಗಮನಬೇಡ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು.

ಧನು ರಾಶಿ : ಹೆಚ್ಚು ಶ್ರಮ‌ ಹಾಗು ಕಡಿಮೆ ಆದಾಯದಿಂದ ನೀವು ತೃಪ್ತರಾಗಬೇಕಾಗುವುದು. ಆರ್ಥಿಕತೆಯ ಬಗ್ಗೆಯೇ ಹೆಚ್ಚಿನ ಒಲವು ಇಲ್ಲದ್ದರಿಂದ ಒತ್ತಡವೂ ಸಹಜವಾಗಿ ಇರಲಿದೆ. ನಿಮ್ಮ ವಸ್ತುಗಳನ್ನು ಕಳೆದುಕೊಂಡು ಪಶ್ಚಾತ್ತಾ‌ಪ ಪಡುವಿರಿ. ಅತಿಯಾದ‌ ನಂಬಿಕೆಯಿಂದ‌ ನಿಮಗೆ ತೊಂದರೆ‌ ಆಗಬಹುದು. ಹೇಳಿ ಕೊಟ್ಟಿದ್ದನ್ನು ಚಾತು ತಪ್ಪದೇ ನಡೆಸುವಿರಿ. ವಿದ್ಯಾರ್ಥಿಗಳ ಆರೋಗದ ಬಗ್ಗೆ ಗಮನ ಅವಶ್ಯಕ. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು.

ಮಕರ ರಾಶಿ : ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಸವಾಲು ಬರಬಹುದು. ಹಣದ ಹೊಂದಾಣಿಯು‌ ಸ್ವಲ್ಪ ಕಷ್ಟವಾದೀತು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನೀವು ಹೋಗದಿರುವಿರಿ. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾದೀತು. ಸಿಕ್ಕಷ್ಟು ವಸ್ತುವನ್ನು ಜೋಪಾನವಾಗಿ ಇಟ್ಟಕೊಳ್ಳಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ.

ಕುಂಭ ರಾಶಿ : ಮೃದುವಾದ ಮಾತೂ‌ ನಿಮ್ಮಿಂದ ಬರಲಿದೆ. ನಿಮ್ಮ‌ ಕೆಲಸಗಳ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಸಹಯೋಗವು ನೀವು ದೂರ ಪ್ರಯಾಣವನ್ನು ಮಾಡಲಿದ್ದೀರಿ. ಸಣ್ಣ ಉದ್ಯೋಗಕ್ಕೆ ಸೇರಿ ನಿರುದ್ಯೋಗಕ್ಕೆ ವಿರಾಮ ಹೇಳುವಿರಿ. ಬಂಡವಾಳವನ್ನು ಸರಿಯಾದ ಕಡೆಯಲ್ಲಿ ಹೂಡಿ. ವಾಹನದ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗಬಹುದು. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ವಿದ್ಯಾಭ್ಯಾಸಕ್ಕೆ ಪ್ರೇರಣೆ ಸಿಗಬಹುದು.

ಮೀನ ರಾಶಿ : ನಿಮ್ಮ‌ ಬಳಿಯ‌ ಸಂಪತ್ತನ್ನು ಕೊಟ್ಟು ಬಿಡಬೇಕಾಗುವುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ಅಲಭ್ಯವಾದ ಸಮಯದಲ್ಲಿ ನಿಮ್ಮ ಬೇಡಿಕೆ ಹೆಚ್ಚಾಗಲಿದೆ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಚಟುವಟಿಕೆಯಿಂದ ನೀವು ಇರುವಿರಿ. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ, ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.

– ಲೋಹಿತ್ ಹೆಬ್ಬಾರ್ – 8762924271

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 am, Mon, 2 November 26

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!
ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು!
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಹುಟ್ಟಿದರೆ ಕನ್ನಡ ನಾಡಲಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಶಿವಲಿಂಗೇಗೌಡ
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಸುದೀಪ್ ಎದುರು, ಸೋನಿಕಾ-ಧನುಶ್​​ ಅವರ ಮಿಮಿಕ್ ಮಾಡಿದ ತಾಂಡವ್-ಪ್ರಶಾಂತ್
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಬೆಂಗಳೂರಿನಲ್ಲಿ ಮೈ ಹೋಮ್ ಗ್ರೂಪ್‌ನ ನೂತನ ಕಚೇರಿ ಉದ್ಘಾಟನೆ
ಬೆಂಗಳೂರಿನಲ್ಲಿ ಮೈ ಹೋಮ್ ಗ್ರೂಪ್‌ನ ನೂತನ ಕಚೇರಿ ಉದ್ಘಾಟನೆ
"ಹಿಟ್ ಅಂಡ್ ರನ್ ಮಾಡಲು ನಾನೇನು ಕುಮಾರಸ್ವಾಮಿನಾ?"
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ