Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಹಳೆಯ ಸಂಬಂಧವು ಮತ್ತೆ ಚಿಗುರಬಹುದು, ಎಚ್ಚರ ತಪ್ಪುವ ಸಾಧ್ಯತೆ

15 ಫೆಬ್ರವರಿ​​ 2025: ಶನಿವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಹೊಸ ಆರ್ಥಿಕ ವ್ಯವಹಾರಕ್ಕೆ ಮೊದಲು ಕಾನೂನಿನ ಜ್ಞಾನ ಅಗತ್ಯ. ವ್ಯಾಪಾರವನ್ನು ನೀವು ವಿಸ್ತಾರ ಮಾಡಿಕೊಳ್ಳುವ ಯೋಜನೆಯನ್ನು ಹೊಂದುವಿರಿ. ಹಾಗಾದರೆ ಫೆಬ್ರವರಿ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಹಳೆಯ ಸಂಬಂಧವು ಮತ್ತೆ ಚಿಗುರಬಹುದು, ಎಚ್ಚರ ತಪ್ಪುವ ಸಾಧ್ಯತೆ
ಹಳೆಯ ಸಂಬಂಧವು ಮತ್ತೆ ಚಿಗುರಬಹುದು, ಎಚ್ಚರ ತಪ್ಪುವ ಸಾಧ್ಯತೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 15, 2025 | 12:12 AM

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಹಸ್ತಾ, ಯೋಗ : ಅತಿಗಂಡ, ಕರಣ : ಗರಜ, ಸೂರ್ಯೋದಯ – 06 – 57 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:52 – 11:20, ಯಮಘಂಡ ಕಾಲ 14:14 – 15:41, ಗುಳಿಕ ಕಾಲ 06:58 – 08:25.

ತುಲಾ ರಾಶಿ: ನೈಪುಣ್ಯವೊಂದೇ ಸಾಲದು, ಅದೃಷ್ಟವೂ ಇದ್ದರೆ ಮಾತ್ರ ಸ್ಥಾನಮಾನಗಳು ಸಾಧ್ಯ. ನೀವು ಇಂದು ನಿರ್ದೋಷಿತ್ವವನ್ನು ಸಾಬೀತುಪಡಿಸುವ ಅವಶ್ಯಕತೆಯಿಲ್ಲ. ಸಂಗಾತಿಯ ಹೂಡಿಕೆಯನ್ನು ನೀವು ಬಳಸಿಕೊಳ್ಳುವಿರಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ಹಳೆಯ ಸಂಬಂಧವು ಮತ್ತೆ ಚಿಗುರಬಹುದು. ಆಕಸ್ಮಿಕವಾಗಿ ಶುಭ ಸಮಾಚಾರವು ಬರಬಹುದು ಎಂಬ ನಿರೀಕ್ಷೆಯು ಸುಳ್ಳಾಗುವುದು. ಏನು ಬೇಕಾದರೂ ಮಾಡಬಹುದು, ಆದರೆ ಏನೂ ಆಗದು. ನಿಮ್ಮ ಮಾತುಗಳು ಖಾರವಾಗುವುದು. ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಉದ್ಯೋಗವು ಸಿಗುವುದು. ಸಮಯದ ಮೌಲ್ಯವನ್ನು ಅರಿತು ಕಾರ್ಯಪ್ರವೃತ್ತರಾಗಿ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ಕೋಪಕ್ಕೆ ಸರಿಯಾದ ಕಾರಣವಿರಲಿ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುವುದು. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು.

ವೃಶ್ಚಿಕ ರಾಶಿ: ಪುಣ್ಯಸ್ಥಳಗಳ ದರ್ಶನದಿಂದ ಆಯಾಸಗೊಳ್ಳುವಿರಿ. ಹಿರಿಯರ ಸೇವೆಯನ್ನು ಮಾಡುವ ಅವಕಾಶವು ಸಿಗಲಿದ್ದು, ಅದನ್ನು ಕಳೆದುಕೊಳ್ಳುವುದು ಬೇಡ. ಸಾಲಗಾರರ ಬೆನ್ನು ಬಿಡದೇ ನೀವು ಬರುವ ಹಣವನ್ನು ಪಡೆದುಕೊಳ್ಳುವಿರಿ. ಉಪವಾಸದಿಂದ ಆರೋಗ್ಯವನ್ನು ಕೆಡಸಿಕೊಳ್ಳುವಿರಿ. ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಕರ್ತವ್ಯಪರರಾಗಿ ಕಾರ್ಯವನ್ನು ಮಾಡಿ. ಅನಿರೀಕ್ಷಿತ ಧನಾಗಮನವು ನಿಮ್ಮ ಕಾರ್ಯಗಳಿಗೆ ಸರಿಯಾಗಿ ದೊರೆತಂತೆ ಆಗುವುದು. ಈ ದಿನಗಳಲ್ಲಿ ವ್ಯವಹಾರದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೆ, ತಾಳ್ಮೆಯಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಿ. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ನಿಮ್ಮ ಜುಟ್ಟವನ್ನು ಅವರೇ ಹಿಡಿದುಕೊಂಡು ಆಡಿಸುವರು. ಉಗುಳಲೂ ನುಂಗಲೂ ಆಗದ ತುಪ್ಪದಂತೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ.

ಧನು ರಾಶಿ: ಖರೀದಿಸಿದ ಭೂಮಿಯಲ್ಲಿ ಗೃಹನಿರ್ಮಾಣಕ್ಕೆ ಸಿದ್ಧತೆ. ಕಛೇರಿಯ ಕೆಲಸದಲ್ಲಿ ಸಹೋದ್ಯೋಗಿಗಳ ಅಸಹಕಾರವು ಇರುವುದು. ನಿಮಗೆ ಗೊತ್ತಿಲ್ಲದೇ ಇರುವ ಕಾರ್ಯವನ್ನು ಮಾಡಬೇಕಾಗುವುದು. ಉದ್ಯಮಿಗಳು ಇಂದು ಹಣವನ್ನು ಗಳಿಸುವ ಸಾಧ್ಯತೆಯಿದೆ. ಸಿಹಿ ಎಷ್ಟೇ ಇಷ್ಟವಾದರೂ ಮಿತಿಯಲ್ಲಿ ಸೇವಿಸಿದರೆ ಆಪತ್ತಿಲ್ಲ. ನಿಮ್ಮ ಆಸ್ತಿಗೆ ಸಂಬಂಧಿಸಿದ ಕಾರ್ಯಗಳಿಗೆ ಹೆಚ್ಚು ಓಡಾಟವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದರೂ ಅದನ್ನು ನಗಣ್ಯ ಮಾಡುವಿರಿ. ಸಭೆಯಲ್ಲಿ ಮಾತನಾಡುವ ಅವಕಾಶವು ಸಿಗಲಿದೆ. ಉತ್ಪಾದದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಷ್ಟವನ್ನು ಭರಿಸಿಕೊಳ್ಳಲು ನೀವು ಮಾರ್ಗವನ್ನು ಬದಲಿಸಬೇಕಾಗುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲವು ಬರಲಿದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಸಂಕೋಚವಾಗುವುದು. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು.

ಮಕರ ರಾಶಿ: ಇರುವುದರಲ್ಲಿ ಸಂತೋಷಪಡುವುದು ಉತ್ತಮ. ಯಾರಾದರೂ ಹೊಸ ಯೋಜನೆಗಳ ಬಗ್ಗೆ ಸಲಹೆಯನ್ನು ಕೊಡುವರು, ಉದ್ಯೋಗದ ಕಾರಣದಿಂದ ನೀವು ಓಡಾಟವನ್ನು ಮಾಡಬೇಕಾಗುವುದು. ನೀವು ಯಾವುದನ್ನೂ ಗುಟ್ಟಾಗಿ ಇಡಲಾರಿರಿ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚನ್ನು ನಿಮ್ಮ ಯೋಜನೆಯು ತೆಗೆದುಕೊಂಡಿದ್ದು ನಿಮಗೆ ಚಿಂತೆಯಾಗಬಹುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿರುವಿರಿ. ಪ್ರೀತಿ ನಿಮ್ಮ ದಿಕ್ಕನ್ನು ಬದಲಿಸುವುದು. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ. ಕರಕುಶಲ ವಸ್ತುಗಳ ಮಾರಾಟವನ್ನು ನೀವು ಮಾಡಲು ಉತ್ಸಾಹದಿಂದ ಇರುವಿರಿ. ಕಛೇರಿಯ ಕೆಲಸದಲ್ಲಿ ಮೇಲಧಿಕಾರಿಗಳಿಂದ ಅಕ್ಷೇಪವು ಬರಬಹುದು.

ಕುಂಭ ರಾಶಿ: ದೂರ ಪ್ರಯಾಣದ ಕಾರಣ ವ್ಯವಹಾರಕ್ಕೆ ಯಾರಾನ್ನಾದರೂ ಜೋಡಿಸುವಿರಿ. ಸಂಶೋಧನಾ ಕಾರ್ಯದಲ್ಲಿ ನಿರತರಾಗಿರುವವರಿಗೆ ಮಾರ್ಗಗಳು ತೆರೆದುಕೊಳ್ಳುವುದು. ಸೌಂದರ್ಯದಿಂದ ಸ್ತ್ರೀಯರು ಆಕರ್ಷಕವಾಗಿ ಕಾಣುವಿರಿ. ಸಣ್ಣ ವ್ಯವಹಾರಗಳಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುವಿರಿ. ಮೇಲಿಂದ ಮೇಲೆ ಒತ್ತಡಗಳು ಕಾಣಿಸಿಕೊಳ್ಳುವುದು. ಎಂತಹ ಕಷ್ಟದಲ್ಲಿಯೂ ನೀವು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ. ನಿಮ್ಮಲ್ಲಿ ಯಾರೂ ಸಾಧಿಸದಿರುವ ಹಾಗೂ ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಕಾಣಿಸುವುದು.

ಮೀನ ರಾಶಿ: ಇಂದು ಸಂಗಾತಿಯ ಬೇಸರವನ್ನು ದೂರಮಾಡಿಸುವಿರಿ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವು ಬಂದೀತು, ನಿಮಗೆ ಸಾಮಾನ್ಯರ ಜೊತೆ ಸಾಮಾನ್ಯರಂತೆ ವರ್ತಿಸುವುದು ಇಷ್ಟವಾಗುವುದು. ಹೊಸ ಆರ್ಥಿಕ ವ್ಯವಹಾರಕ್ಕೆ ಮೊದಲು ಕಾನೂನಿನ ಜ್ಞಾನ ಅಗತ್ಯ. ವ್ಯಾಪಾರವನ್ನು ನೀವು ವಿಸ್ತಾರ ಮಾಡಿಕೊಳ್ಳುವ ಯೋಜನೆಯನ್ನು ಹೊಂದುವಿರಿ. ಪ್ರಭಾವೀ ವ್ಯಕ್ತಿಗಳ ಬಗ್ಗೆ ನಿಮಗೆ ಮುಜುಗರವಾಗಬಹುದು. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಆಗದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ವ್ಯವಹಾರದ ಅನುಕೂಲತೆಗೆ ಜನರನ್ನು ಸೇರಿಸಿಕೊಳ್ಳುವಿರಿ. ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿಯಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು. ಆದಾಯದ ಮೂಲದಲ್ಲಿ ಬದಲಾವಣೆಯಾಗಲಿದೆ. ಕೆಲವನ್ನು ನೀವು ಬೇಕೆಂದೇ ಬಿಟ್ಟುಕೊಳ್ಳುವಿರಿ. ಊಹಿಸದ ಬದಲಾವಣೆಯು ನಿಮ್ಮಿಂದಾಗಬಹುದು.

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ