Horoscope 08 Oct: ದಿನಭವಿಷ್ಯ, ಈ ರಾಶಿಯವರಿಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷಿಸುವುದು ಬೇಡ, ನೀರೀಕ್ಷಿಸಿದಂತೆ ನಡೆಯದೇ ಇರಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದಶಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಶಿವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 16ಕ್ಕೆ, ರಾಹು ಕಾಲ ಸಂಜೆ 04:47 –06:16ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:20 –01:49ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:18 –04:47ರ ವರೆಗೆ.
ಮೇಷ ರಾಶಿ: ಪಾಲುದಾರಿಕೆಗೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಲು ಇಂದು ಒಳ್ಳೆಯದು. ಬಡ್ತಿಯಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು. ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಯಾರದೋ ಒತ್ತಡದಿಂದ ದಿನಚರಿಯನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷಿಸುವುದು ಬೇಡ. ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ. ಸಣ್ಣ ವಿಚಾರವೂ ವಾಗ್ವಾದದಿಂದ ದೊಡ್ಡ ಮಾಡಿಕೊಳ್ಳಬೇಡಿ. ನೀರೀಕ್ಷಿಸಿದಂತೆ ಎಲ್ಲವೂ ನಡೆಯದೇ ಇರಬಹುದು. ಉತ್ತಮವಾದ ಸಮಯವನ್ನು ಎದುರು ನೋಡುವಿರಿ.
ವೃಷಭ ರಾಶಿ: ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ನಾನಾ ಕಾರಣಗಳಿಂದ ನಿಮ್ಮ ವ್ಯವಹಾರದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಗದು. ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದು. ಕೂಡಿಟ್ಟ ಹಣದಿಂದ ನಿಮಗೆ ಇಂದು ಪ್ರಯೋಜನವಾದೀತು. ಹಳೆಯ ರೋಗವು ಮತ್ತೆ ಕಾಣಿಸಿಕೊಂಡು ಸಂಕಟಪಡುವಿರಿ. ಅನಿರೀಕ್ಷಿತ ಸುದ್ದಿಯು ನಿಮ್ಮ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ಮತ್ತೆ ಮತ್ತೆ ಒಂದೇ ಘಟನೆಗಳು ನಿಮಗೆ ಬೇಸರ ತರಿಸಬಹುದು. ಆರ್ಥಿಕ ಭದ್ರತೆಯ ಕಡೆ ಅಧಿಕ ಗಮನವನ್ನು ಕೊಡಿ.
ಮಿಥುನ ರಾಶಿ: ಈ ದಿನ ನೀವು ಅದೃಷ್ಟದ ಕಾರಣ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ. ನೀವು ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಬಹುದು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ನಿಮ್ಮ ಪ್ರಯತ್ನ ಮುಂದುವರಿಯಲಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದವು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ನಿಮಗೆ ಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ದೊರೆಯದೇ ನೋಯುವಿರಿ. ವಾಹನ ಸಂಚಾರದಲ್ಲಿ ನಿಮಗೆ ಭಯವಾಗಬಹುದು. ಆರ್ಥಿಕವಾಗಿ ನೀವು ಬಲವಾಗಿತ್ತಿರುವುದು ನಿಮಗೆ ಹೆಮ್ಮೆಯ ವಿಚಾರವಾಗುವುದು.
ಕರ್ಕ ರಾಶಿ: ವೃತ್ತಿಪರ ಮತ್ತು ಸಾಮಾಜಿಕ ವಲಯಗಳಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುವಿರಿ. ದಿನವು ಅನುಕೂಲಕರವಾಗಿದೆ. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಯಾರ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳುವಿರಿ. ಕಣ್ಣಿನ ತೊಂದರೆ ಹೆಚ್ಚಾದೀತು. ವಿವಾಹ ಸಂಬಂಧದಿಂದ ನಿಮಗೆ ಕಿರಿಕಿರಿ ಎನಿಸಬಹುದು. ಕೆಲಸದಲ್ಲಿ ಮಂದಗತಿಯು ಇರಲಿದೆ. ಬಂಧುಗಳನ್ನು ನೀವು ದೂರ ಮಾಡಿಕೊಳ್ಳುವಿರಿ. ಉದ್ಯೋಗವನ್ನೇ ನಂಬಿಕೊಂಡಿದ್ದರೆ ನಿಮಗೆ ಆತಂಕವು ಸೃಷ್ಟಿಯಾಗಬಹುದು.
ಸಿಂಹ ರಾಶಿ: ವ್ಯವಹಾರಗಳ ವಿಷಯದಲ್ಲಿ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ನೀವು ಜನಪ್ರಿಯತೆಯನ್ನು ಗಳಿಸುವಿರಿ. ಪ್ರೇಮಿಗಳಿಗೆ ಈ ಸಮಯವು ಶುಭವಲ್ಲ. ನಿಮ್ಮನ್ನು ಸ್ಥಾನದಿಂದ ಕೆಳಗೆ ಹಾಕಲು ನೋಡಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ನಿಮಗೆ ನಾನಾ ರೀತಿಯ ಸೌಲಭ್ಯಗಳು ಸಿಗಲಿದೆ. ಚೋರಭೀತಿಯು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರದಿಂದ ಸಂಬಂಧಗಳು ಹಾಳಾಗುವುದು. ನೀವು ಕೆಲವು ಸಮಸ್ಯೆಯನ್ನು ಅನಿರೀಕ್ಷಿತವಾಗಿ ಎದುರಿಸಬೇಕಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟಕೊಳ್ಳಬೇಕಾಗುವುದು.
ಕನ್ಯಾ ರಾಶಿ: ಇಂದು ನೀವು ಏನೇ ಮಾಡಿದರೂ ಉತ್ಸಾಹದಿಂದ ಮಾಡುವಿರಿ. ಚೆನ್ನಾಗಿ ಯೋಚಿಸಿದ ನಿರ್ಧಾರಗಳು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಆಸ್ತಿ ವ್ಯವಹಾರಗಳು ನಿಮಗೆ ಲಾಭವನ್ನು ನೀಡುವುದು. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆಗಳಿವೆ. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ನಿರಂತರ ಕಾರ್ಯದಿಂದ ನಿಮಗೆ ಫಲವು ಲಭ್ಯವಾಗುವುದು. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ದೈವದ ಬಗ್ಗೆ ಭಕ್ತಿಯ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ಸಮಯವನ್ನೂ ಕೊಡಬೇಕಾದೀತು. ನಿಮಗೆ ಇಂದಿನ ಕಾರ್ಯದಿಂದ ಪಾಪಪ್ರಜ್ಞೆಯು ಕಾಡಬಹುದು. ಮನಸ್ಸನ್ನು ನಿರ್ಲಿಪ್ತಗೊಳಿಸಲು ಪ್ರಯತ್ನಿಸುವಿರಿ. ಬಂಧುಗಳ ವಿಚಾರದಲ್ಲಿ ಅಸಮಾಧಾನವು ಇರುವುದು.
ತುಲಾ ರಾಶಿ: ಇಂದು ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಭವಿಷ್ಯಕ್ಕಾಗಿ ತಮ್ಮ ಮಾರ್ಗವನ್ನು ಪರಿಶೀಲಿಸಿಕೊಳ್ಳುವರು. ಪ್ರೇಮ ವ್ಯವಹಾರಗಳಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಬೆಂಬಲಿಸುವರು. ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕು. ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯವಾಗುವುದ್. ಅತಿಯಾದ ವಿಶ್ವಾಸದಿಂದ ವಂಚನೆಯಾಗಲಿದೆ. ವ್ಯಾಯಾಮದ ಮೂಲಕ ನೀವು ನಿಮ್ಮ ದುರ್ಬಲ ದೇಹವನ್ನು ಗಟ್ಟಿ ಮಾಡಿಕೊಳ್ಳುವಿರಿ. ಸಾಲದ ವಿಚಾರವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಉದ್ಯೋಗದ ಕಾರಣದಿಂದ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿರುವ ಶೀತಲಸಮರವು ಸ್ಫೋಟವಾಗಬಹುದು.
ವೃಶ್ಚಿಕ ರಾಶಿ: ಇಂದು ನೀವು ಹಠಮಾರಿಯಂತೆ ತೋರುವಿರಿ. ನೀವು ಕಷ್ಟಕರ ಸಂದರ್ಭಗಳಲ್ಲಿ ಸ್ವಲ್ಪ ತಾಳ್ಮೆಯಿಂದ ವರ್ತಿಸಿ. ಆದಷ್ಟು ವಾದಗಳಿಂದ ದೂರವಿರಿ. ನಿಮ್ಮ ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ನೀವು ಜೀವನ ಸಂಗಾತಿಯ ಬೆಂಬಲದಿಂದ ಖುಷಿಪಡುವಿರಿ. ಆರ್ಥಿಕ ದೃಷ್ಟಿಯಿಂದ ಈ ದಿನವು ಉತ್ತಮವಲ್ಲ. ನಿಮಗೆ ಸ್ನೇಹಿತರಿಂದ ಧನಸಹಾಯವಾಗುವುದು. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅದಕ್ಕೆ ಏನಾದರೂ ತೊಂದರೆ ಕೊಟ್ಟಾರು. ದೂರದ ಪ್ರಯಾಣಕ್ಕೆ ಇಂದು ಅನುಕೂಲವಲ್ಲ. ಕೆಲಸಗಳನ್ನು ಮಾಡಿಕೊಡಲು ನಿಮಗೆ ಹಣವನ್ನು ನೀಡುವರು. ಸ್ತ್ರೀಯರ ಸಹಾಯವನ್ನು ಪಡೆದು ನೀವು ಕಛೇರಿಯ ಕೆಲಸವನ್ನು ಬೇಗ ಮುಗಿಸುವಿರಿ. ನಿದ್ರೆಯ ವ್ಯತ್ಯಾಸದಿಂದ ನಿಮಗೆ ಕಿರಿಕಿರಿ. ಕಲಾವಿದರು ಹೆಚ್ಚಿನ ಆದಾಯವನ್ನು ಮಾಡಿಕೊಳ್ಳುವರು. ರಾಜಕೀಯಕ್ಕೆ ಹೋಗಲು ಆತುರದಿಂದ ಇರುವಿರಿ. ಹೊಸ ಜವಾಬ್ದಾರಿಗಳನ್ನು ಪಡೆಯಲೂ ಬಹಳ ಉತ್ಸುಕರಾಗಿ ಇರುವಿರಿ.
ಧನು ರಾಶಿ: ಇಂದು ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಜಾಣ್ಮೆಯಿಂದ ವ್ಯವಹರಿಸಿ. ಆಸ್ತಿ ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ಮನೆಯಲ್ಲಿಯೇ ಇದ್ದು ನೆಮ್ಮದಿ ಕಾಣುವಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂಜರಿಯುವಿರಿ. ಬಂಧುಗಳ ವಿಯೋಗವಾಗಬಹುದು. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಸರಿಮಾಡಿಕೊಳ್ಳುವಿರಿ. ಯಾರಿಗಾದರೂ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಇರಲಿದೆ. ನಿಮ್ಮ ಯೋಚನೆಯು ಬಲಿಷ್ಠವಾಗಿದ್ದರೂ ಅದನ್ನು ಕ್ರಿಯಾರೂಪಕ್ಕೆ ತರುವುದು ಕಷ್ಟವಾದೀತು.
ಮಕರ ರಾಶಿ: ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಕ್ಕಿ ಸಂತೋಷವಾಗವುದು. ಇಂದು, ನಿಮ್ಮ ಒಡಹುಟ್ಟಿದವರು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಸಂಪರ್ಕಿಸಬಹುದು. ಈ ದಿನ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು ಮತ್ತು ಸಮತೋಲಿತ ದಿನಚರಿಯನ್ನು ಅನುಸರಿಸಿ. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರನ್ನು ವಿರೋಧಿಸುವುದನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು, ಹೀಗಾಗಿ ಅದರ ಬಗ್ಗೆ ಗಮನಕೊಡಿ. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸರ್ಕಾರಿ ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ತಂದೆಯ ಸೇವೆಯನ್ನು ಮಾಡುವ ಮನಸ್ಸು ಆಗಲಿದೆ. ಬೇರೆಯವರ ಮಾತನ್ನು ಪೂರ್ಣವಾಗಿ ನಂಬಲು ನಿಮಗೆ ಆಗದು.
ಕುಂಭ ರಾಶಿ: ಆರ್ಥಿಕ ಅಡೆತಡೆಗಳು ಇಂದು ಕುಟುಂಬ ವೈಷಮ್ಯಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ಕುಟುಂಬದ ಸದಸ್ಯರ ಜೊತೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಉಳಿದ ಸಾಲವನ್ನು ತೀರಿಸುವಿರಿ. ಬೆನ್ನು ನೋವು ಅಧಿಕವಾಗಬಹುದು. ಸಹೋದರರ ಅಸಹಕಾರವು ನಿಮಗೆ ಹಿಂಸೆಯನ್ನು ಕೊಡುವುದು. ಅತಿಯಾದ ಅನಾರೋಗ್ಯದಿಂದ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳಿಂದ ನೀವು ಸಂತೋಷವಾಗಿ ಇರುವಿರಿ. ಇನ್ನೊಬ್ಬರ ಅನವಶ್ಯಕ ವಿಚಾರಕ್ಕೆ ನೀವು ತಲೆ ಹಾಕಬೇಡಿ. ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ಆಸ್ತಿಯ ಸಂರಕ್ಷಣೆಗೆ ಕಷ್ಡವಾದೀತು. ಮಂದಗತಿಯಲ್ಲಿ ಇರುವ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನವು ನಡೆಯುವುದು.
ಮೀನ ರಾಶಿ: ನಿಮ್ಮ ದೈಹಿಕ ಚೈತನ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಮಯವಲ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಿರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಕಾರಣವನ್ನು ದೈವಜ್ಞರಿಂದ ಪಡೆಯಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವರು. ಶಾಂತ ವಾತಾವರಣವನ್ನು ಓದಿಗಾಗಿ ಹುಡುಕುವಿರಿ. ನೀವು ಆಡಿದ ಮಾತೇ ನಿಮಗೆ ಬೇರೆಯವರ ಮೂಲಕ ಬರಲಿದೆ. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರುವುದು. ನಾಯಕರಿಗೆ ಕೆಲವು ತೊಂದರೆಗಳು ಬರಬಹುದು. ನಿಮಗೆ ಕಾರ್ಯದ ಒತ್ತಡ ನಡುವೆಯೂ ನಿಮ್ಮವರಿಗೆ ಸ್ವಲ್ಪ ಸಮಯ ಕೊಡುವಿರಿ.
-ಲೋಹಿತಶರ್ಮಾ – 8762924271 (what’s app only)