Horoscope 15 April: ರಾಶಿ ಭವಿಷ್ಯ; ಸಂಯಮದಿಂದ ವರ್ತಿಸುವುದು ಮುಖ್ಯ, ಸಾಮಾನ್ಯರಂತೆ ವರ್ತಿಸುವುದು ಇಷ್ಟವಾಗುವುದು
Rashi Bhavishya: 2024 ಏಪ್ರಿಲ್ 15 ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:26ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:59 ರಿಂದ 12:33 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:06 ರಿಂದ 05:39ರ ವರೆಗೆ.
ಮೇಷ ರಾಶಿ: ಇಂದು ಯಾರ ಜೊತೆಗಾದರುಯ ಸ್ಪರ್ಧೆಗಿಳಿದರೆ ಸೋಲಾಗಬಹುದು. ಜನರ ಮಾತಿಗೆ ನಿಮ್ಮ ಪ್ರತಿಕ್ರಿಯೆ ಬೇಡ. ಗುರಿಯೇ ನಿಮಗೆ ಮುಖ್ಯವಾಗಿರಲಿ. ನಿಮ್ಮ ಕಾರ್ಯದ ಶಿಸ್ತಿಗೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ಮಾಡುವುದು ಸರಿ ಕಾಣದು. ಯಾವುದೇ ಕೆಲಸವು ತಪ್ಪಾಗಿದ್ದರೆ, ಅನಂತರ ನಿಧಾನವಾಗಿ ವಿವರಿಸಿ. ಯಂತ್ರದ ವ್ಯಾಪಾರವು ಲಾಭದಾಯಕವಾಗುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಹಣಕಾಸಿನ ವಿಚಾರದಲ್ಲಿ ನೀವು ನಾಜೂಕುತನವನ್ನು ಇಟ್ಟುಕೊಳ್ಳುವಿರಿ. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು. ಅದನ್ನು ಕ್ಷಮಾಪಣೆಯಿಂದ ಸರಿಮಾಡಿಕೊಳ್ಳಿ.
ವೃಷಭ ರಾಶಿ: ಇಂದು ನೀವಂದುಕೊಂಡಂತೆ ವೇಗವಾಗಿ ಸಮಯಕ್ಕೆ ಸರಿಯಾಗಿ ಕೆಲಸ ಆಗಲಿದ್ದು, ಅನಂತರ ಸ್ವಲ್ಪ ವಿಶ್ರಾಂತಿಯನ್ನೂ ಪಡೆಯುವಿರಿ. ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ವಿವಾದಿತ ವಿಷಯಗಳಲ್ಲಿ ಸದ್ಯಕ್ಕೆ ಶಾಂತವಾಗಿದ್ದು, ನೀವದನ್ನು ಪುನಃ ಆರಂಭಿಸುವುದು ಬೇಡ. ಇತರರ ತಪ್ಪುಗಳು ನಿಮಗೆ ತೊಂದರೆಯನ್ನು ಹೆಚ್ಚಿಸಬಹುದು. ಕಡಿಮೆ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸು ಪಡೆಯುವ ಸಾಧ್ಯತೆಗಳಿವೆ. ಮಕ್ಕಳು ಮತ್ತು ಕುಟುಂಬದವರ ಜೊತೆಗೆ ಉತ್ತಮ ಸಮಯವನ್ನು ಕಳೆಯುವಿರಿ. ಸಂಗಾತಿಯ ಅಪನಂಬಿಕೆಯನ್ನು ಪ್ರಶ್ನಿಸುವ ಮನಸ್ಸು ಮಾಡುವಿರಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು.
ಮಿಥುನ ರಾಶಿ: ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲ ಉಂಟಾಗುವುದು. ಹೊಸ ಕೆಲಸವನ್ನು ಪ್ರಾರಂಭಿಸಲು ಸಹ ಇದು ಉತ್ತಮ ಸಮಯ. ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಪರಿಣಾಮಗಳನ್ನು ಪರಿಗಣಿಸಿ ಮುನ್ನಡೆಯಬೇಕು. ಅಸಂಬದ್ಧ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಿ ಇರುವುದು. ಸಂಗಾತಿಯನ್ನು ಎಲ್ಲಿಗಾದರೂ ದೂರ ಕರೆದುಕೊಂಡು ಹೋಗಲು ಆಸೆಯಾಗುವುದು. ಹಣಕಾಸಿನ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಿಕೊಳ್ಳಿ. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. ವಿದೇಶದಲ್ಲಿ ಇರವವರಿಗೆ ಅಸಮಾಧಾನ ಹೆಚ್ಚಿರುವುದು.
ಕರ್ಕ ರಾಶಿ: ಇಂದು ಯಾವುದೇ ವಿಘ್ನಗಳು ಬಾರದೇ ನಿಮ್ಮ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುವುದು. ಪದೇ ಪದೇ ಒಂದರ ಬಗ್ಗೆ ಯೋಚಿಸಿ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳಬೇಡಿ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ಶೀಘ್ರದಲ್ಲೇ ಸಂಬಂಧಗಳನ್ನು ಸುಧಾರಿಸುವ ಅವಕಾಶವನ್ನು ನೀವು ಪಡೆಯಬಹುದು. ಪೂರಕ ವಾತಾವಾರಣದಿಂದ ಆತ್ಮವಿಶ್ವಾಸ ಬಲಗೊಳ್ಳಲಿದೆ. ಇಂದು ನೀವು ಕಾನೂನಾತ್ಮಕ ವಿಚಾರಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಸರಿಯಾದ ಮಾಹಿತಿ ದೊರಕದೇ ಬೇಸರಿಸುವಿರಿ. ಮನಸ್ಸಿಗೆ ನೆಮ್ಮದಿಯು ಬೇಕೆಂದು ಅನ್ನಿಸುವುದು. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಯಾರಾದರೂ ಪ್ರಾಬಲ್ಯವನ್ನು ಸಾಧಿಸಬಹುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು.
ಸಿಂಹ ರಾಶಿ: ಇಂದು ನೀವು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲು ಹಿಂಜರಿಯುವಿರಿ. ನೀವು ಆತ್ಮವಿಶ್ವಾಸವು ಶಕ್ತಿಯಿಂದ ತುಂಬಿರುವಿರಿ. ಬಹಳ ದಿನಗಳ ಅನಂತರ ಹೊರಗಿನ ಸುತ್ತಾಟವು ಹಿತವೆನಿಸುವುದು. ಕೆಲವೊಮ್ಮೆ ನಿಮ್ಮ ಭಾವನಾತ್ಮಕ ಸ್ವಭಾವವು ನಿಮಗೆ ತೊಂದರೆ ಉಂಟುಮಾಡುತ್ತದೆ. ನಿಮ್ಮ ಗುಣಮಟ್ಟವು ನಿಮ್ಮದೇ ಕಾರಣದಿಂದ ತಗ್ಗಬಹುದು. ಆಡಳಿತದಲ್ಲಿ ಆಗಬೇಕಾದ ಬದಲಾವಣೆಯನ್ನು ನೀವು ತರುವಿರಿ. ಒಮ್ಮೆಲೇ ಎಲ್ಲವನ್ನೂ ಮಾಡಿ ಮುಗಿಸಬೇಕು ಎನ್ನುವ ಆತುರವು ಬೇಡ. ದೈನಂದಿನ ಬಳಕೆಯ ಉತ್ಪನ್ನಗಳ ವ್ಯಾಪಾರಿಗಳು ಲಾಭ ಗಳಿಸುವರು. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಬಹಳ ಕೆಲಸವಿದ್ದರೂ ಒತ್ತಡದಲ್ಲಿ ಇರುವಂತೆ ತೋರಸಲಾರಿರಿ.
ಕನ್ಯಾ ರಾಶಿ: ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ತಂದುಕೊಂಡು ಸಂತೋಷಿಸುವಿರಿ. ಯಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ , ಇಂದು ಅನುಕೂಲಕರ ಸಮಯ. ಅನಗತ್ಯ ಮೋಜಿನಲ್ಲಿ ಸಮಯ ವ್ಯರ್ಥ ಮಾಡಬಾರದು. ವೈವಾಹಿಕ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ಇಂದು ಅನಿವಾರ್ಯ ಓಡಾಟವು ಬರಲಿದ್ದು ವಾಹನ ಚಲಾಯಿಸುವಾಗ ನಿಮಗೆ ಜಾಗರೂಕತೆ ಬೇಕಾಗುವುದು. ಕೊಡಬೇಕಾದವರಿಗೆ ಸರಿಯಾದ ಗೌರವವನ್ನು ಕೊಡಿ. ವೈದ್ಯರು ಇಂದು ಒತ್ತಡದಲ್ಲಿ ಇರುವರು. ಕೆಲಸಕ್ಕೆ ಅನುಗುಣವಾಗಿ ಸಮಯವನ್ನು ಹೊಂದಿಸಿಕೊಳ್ಳಿ. ಯಾರನ್ನೋ ಮೆಚ್ಚಿಸಲು ಕೆಲಸಮಾಡಬೇಕಾಗುವುದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಹಣಕಾಸಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.
ತುಲಾ ರಾಶಿ: ನಿಮ್ಮ ಕೆಲವು ನಡತೆಗಳು ಪ್ರಗತಿಗೆ ಮಾರಕವಾಗುವುದು. ಹೊಸ ಕೆಲಸವನ್ನು ಪ್ರಾರಂಭಿಸುವುದು ನಿಮಗೆ ಸಂತೋಷವನ್ನು ನೀಡುತ್ತದೆಯಾದರೂ ಕ್ರಮಬದ್ಧ ಮಾಡಿಕೊಳ್ಳದಿದ್ದರೆ ಅದೂ ಗೊಂದಲವಾದೀತು. ಕೆಲಸಕ್ಕೆ ಸಂಬಂಧಿಸಿದ ಆಸಕ್ತಿಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಕುಟುಂಬಕ್ಕೆ ನಿಮ್ಮ ಸಂಗಾತಿಯ ಸಮರ್ಪಣೆಯು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಹಳೆಯ ಅನುಭವವನ್ನು ಪಾಠವಾಗಿಸಿಕೊಳ್ಳಿ. ಕಲಾವಿದರು ಬಹಳ ಸಂತೋಷವನ್ನು ಅನುಭವಿಸುವರು. ಸಂಗಾತಿಯ ಹೂಡಿಕೆಯನ್ನು ನೀವು ಬಳಸಿಕೊಳ್ಳುವಿರಿ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ನೇರವಾಗಿ ಯಾರನ್ನೂ ದೂರುವುದಿಲ್ಲ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ಇಂದು ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಅನ್ನಿಸುವುದು.
ವೃಶ್ಚಿಕ ರಾಶಿ: ಅನವಶ್ಯಕ ಸಮಸ್ಯೆಗಳನ್ನು ನಿಮ್ಮಮೇಲೆ ಬೇಕೆಂದೇ ಎಳೆದುಕೊಳ್ಳುವಿರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮಸ್ಥೈರ್ಯವು ಕುಸಿಯದಂತೆ ನೋಡಿ. ನಿಮ್ಮನ್ನು ಸಕಾರಾತ್ಮಕವಾಗಿ ಇಟ್ಟುಕೊಂಡು ಮುಂದಾಗಿ. ವೈವಾಹಿಕ ಜೀವನ ಸುಖಮಯವಾಗಿರಲು ನಿಮ್ಮ ಮಾತುಗಳೂ ಮುಖ್ಯ. ನಿಮ್ಮ ಮನೆ ಮತ್ತು ಕುಟುಂಬದಲ್ಲಿ ಹೊರಗಿನವರಿಗೆ ಹಸ್ತಕ್ಷೇಪ ಮಾಡಲು ಬಿಡುವುದು ಬೇಡ. ನೀವು ಇಂದು ಉದ್ಯಮದ ಕಾರಣಕ್ಕೆ ಸ್ನೇಹಬಂಧವನ್ನು ಬಿಗಿ ಮಾಡಿಕೊಳ್ಳುವಿರಿ. ಕಚೇರಿಯಲ್ಲಿ ನೀವು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ಹಿರಿಯರ ಸೇವೆಯನ್ನು ಮಾಡುವ ಅವಕಾಶವು ಸಿಗಲಿದ್ದು, ಅದನ್ನು ಕಳೆದುಕೊಳ್ಳುವುದು ಬೇಡ. ತಾಳ್ಮೆಯಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಿ. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ.
ಧನು ರಾಶಿ: ನೀವು ತೆಗೆದುಕೊಳ್ಳುವ ನಿರ್ಧಾರವು ಕುಟುಂಬಕ್ಕೆ ಪೂರಕವಾಗಿ ಇರಲಿ. ವಿದ್ಯಾಭ್ಯಾಸಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ನಿಮ್ಮನ್ನು ನೀವೇ ಏಕಾಂಗಿ ಎಂದು ಲೆಕ್ಕಿಸುವುದು ಬೇಡ. ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಮಾರ್ಗದರ್ಶನವನ್ನು ಪಡೆಯುತ್ತೀರಿ. ಬಹು ಮೌಲ್ಯದ ವಸ್ತುಗಳನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಉದ್ಯಮಿಗಳು ಇಂದು ಹಣವನ್ನು ಗಳಿಸುವ ಸಾಧ್ಯತೆಯಿದೆ, ಉತ್ಪಾದದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು. ನಿಮ್ಮ ಧಾರ್ಮಿಕ ಶ್ರದ್ಧೆಗೆ ಇನ್ನಷ್ಟು ಬಲವು ಬರಲಿದೆ. ಭೂಮಿಯನ್ನು ಭೋಗ್ಯಕ್ಕಾಗಿ ಯಾರಿಗಾದರೂ ನೀಡಬಹುದು. ನಿಮ್ಮ ವಿದ್ಯಾಭ್ಯಾಸದ ಸಾಮರ್ಥ್ಯವನ್ನು ತೋರಿಸುವಿರಿ. ನಿಮ್ಮ ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಅಂದುಕೊಂಡಷ್ಟು ಸರಳವಾಗಿ ಇಂದಿನ ಕಾರ್ಯವು ಸಮಾಪ್ತಿಯಾಗದು.
ಮಕರ ರಾಶಿ: ನಕಾರಾತ್ಮಕ ಆಲೋಚನೆಗಳು ಅನ್ಯರ ಕಾರಣದಿಂದ ಬರಬಹುದು. ದೊಡ್ಡ ಮಾಡುವುದು ಬೇಡ. ನಿಮ್ಮ ಸಾಂಸಾರಿಕ ತೊಂದರೆಗೆ ನಿಮ್ಮ ಸಹೋದರ ಸಹೋದರಿಯರಿಂದ ಸರಿಯಾದ ಪರಿಹಾರವು ಪ್ರಾಪ್ತವಾಗಲಿದೆ. ಆದ್ದರಿಂದ ಅವರೊಂದಿಗೂ ಸೌಹಾರ್ದ ಸಂಬಂಧವನ್ನು ಕಳೆದುಕೊಳ್ಳುವುದು ಬೇಡ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೂರದೃಷ್ಟಿಯ ಅಗತ್ಯವಿದೆ. ಕುಟುಂಬ ಸದಸ್ಯರ ಜೊತೆ ಚರ್ಚಿಸಿದ ಅನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅತಿಯಾದ ದುರಾಸೆಯಿಂದ ನೀವು ಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಸಂಬಂಧವನ್ನು ಚೆನ್ನಾಗಿ ನಿಭಾಯಿಸುವ ಕಲೆಯು ಗೊತ್ತಿದೆ. ಯಾರಾದರೂ ಹೊಸ ಯೋಜನೆಗಳ ಬಗ್ಗೆ ಸಲಹೆಯನ್ನು ಕೊಡುವರು, ಉದ್ಯೋಗದ ಕಾರಣದಿಂದ ನೀವು ಓಡಾಟವನ್ನು ಮಾಡಬೇಕಾಗುವುದು. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ.
ಕುಂಭ ರಾಶಿ: ನೀವು ಇಂದು ಅನಗತ್ಯ ಖರ್ಚುಗಳನ್ನು ನಿಯಂತ್ರಿಸಲು ಹೋಗಿ ಎಡವಟ್ಟು ಮಾಡಿಕೊಳ್ಳಬಹುದು. ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆದು ನೆಮ್ಮದಿಯನ್ನು ಪಡೆಯುವಿರಿ. ಕಷ್ಟಪಟ್ಟು ಕೆಲಸ ಮಾಡುವುದರಿಂದ ನಿಮ್ಮ ಆದಾಯದ ಸ್ಥಿತಿಯೂ ಸುಧಾರಿಸುತ್ತದೆ. ವ್ಯವಹಾರದಲ್ಲಿ ಕಠಿಣ ಪರಿಶ್ರಮವಿರುತ್ತದೆ, ಯೋಜನೆಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಕಛೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ನಿಮ್ಮ ವರ್ತನೆ ಬದಲಾದೀತು. ನಿಮಗೆ ಅನೇಕರು ಪ್ರಭಾವಿತರಾಗಬಹುದು. ಮೇಲಿಂದ ಮೇಲೆ ಒತ್ತಡಗಳು ಕಾಣಿಸಿಕೊಳ್ಳುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ.
ಮೀನ ರಾಶಿ; ಇಂದು ನೀವು ಕಾರ್ಯದ ಸರಿಯಾದ ಫಲವನ್ನು ಪಡೆಯದಿದ್ದರೂ ಸಂಯಮದಿಂದ ವರ್ತಿಸುವುದು ಮುಖ್ಯವಾಗಲಿದೆ. ಯಾರಾದರೂ ಸಾಲವನ್ನು ಕೇಳಿ ಬರಬಹುದು. ಕೋಪಗೊಳ್ಳುವ ಬದಲು ಶಾಂತರೀತಿಯಿಂದ ಸಮಸ್ಯೆಯನ್ನು ಪರಿಹರಿಸಿ. ಪತಿ-ಪತ್ನಿಯರ ನಡುವಿನ ಸಂಬಂಧವು ಸೌಹಾರ್ದಯುತವಾಗಿರುತ್ತದೆ. ಕೆಲಸವನ್ನು ಸುಲಭವಾಗಿ ಮಾಡಲು ನೀವು ಮಾರ್ಗವನ್ನು ಕಂಡುಕೊಳ್ಳುವಿರಿ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವು ಬಂದೀತು, ನಿಮಗೆ ಸಾಮಾನ್ಯರ ಜೊತೆ ಸಾಮಾನ್ಯರಂತೆ ವರ್ತಿಸುವುದು ಇಷ್ಟವಾಗುವುದು. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ಕುಟುಂಬದ ಜೊತೆ ಸಮಯವನ್ನು ಕಳೆಯಬೇಕು ಎಂದುಕೊಂಡರೂ ಆಗದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿಯಾಗುವುದು.
-ಲೋಹಿತ ಹೆಬ್ಬಾರ್ -8762924271 (what’s app only)