Horoscope 11 Mar: ದಿನಭವಿಷ್ಯ; ನಿಮ್ಮ ಮಾತುಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದು, ಪ್ರೀತಿಯಲ್ಲಿ ನಿಮಗೆ ಮೋಸವಾಗಬಹುದು
Nitya Bhavishya: 2024 ಮಾರ್ಚ್ 11ರ ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಭ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:14 ರಿಂದ 09:43ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:13 ರಿಂದ ಮಧ್ಯಾಹ್ನ 12:43ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:42ರ ವರೆಗೆ.
ಮೇಷ ರಾಶಿ: ಇಂದು ನೀವು ಪ್ರಭಾವಶಾಲಿ ವ್ಯಕ್ತಿಗಳ ಜೊತೆ ಸಂವಹನವಿರುವುದು. ಮಾತಿನಲ್ಲಿ ಅಂಜಿಕೆಯು ಕಾಣಿಸುವುದು. ದ್ವೇಷದ ಸ್ವಭಾವವು ನಿಮ್ಮನ್ನು ಬದಲಿಸಬಹುದು. ದೀರ್ಘಕಾಲದ ಅನುಮಾನಕ್ಕೆ ಇಂದು ತೆರೆ ಬೀಳಬಹುದು. ಸಂದರ್ಭೋಚಿತ ಮಾತುಗಳಿಂದ ಗೆಲುವುದು ಸಿಗಬಹುದು. ನಂಬಿಕೆ ದ್ರೋಹಹವು ನಿಮಗಾಗಲಿದೆ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಎಲ್ಲದರಿಂದ ದೂರಾಗಿ ಹೊಸತನ್ನು ಹುಡುಕುವ ಆಸಕ್ತಿ ಇರುವುದು. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ.
ವೃಷಭ ರಾಶಿ: ನಿಮಗೆ ಎಲ್ಲವೂ ಇಂದ್ರಜಾಲದಂತೆ ಆಗಬೇಕು ಎಂಬ ಮಾನಸಿಕತೆಯಲ್ಲಿ ಇರುವಿರಿ. ಕಛೇರಿಯಲ್ಲಿ ನಿಮ್ಮ ವರ್ತನೆಗಳು ಅಸಹಜದಂತೆ ತೋರುವುದು. ಕೆಲಸದಲ್ಲಿ ನಿಮ್ಮ ಯಶಸ್ಸಿಗೆ ನಿಮ್ಮ ಕುಟುಂಬದ ಬೆಂಬಲವು ಕೊಡುಗೆ ನೀಡುತ್ತದೆ. ಹೊಸತನ್ನು ಕಲಿಯುವ ಬಗ್ಗೆ ಆಸಕ್ತಿಯು ಹೋಗುವುದು. ಆಲಸ್ಯವನ್ನು ಬಿಡುವುದು ಇಷ್ಟವಾಗದು. ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟವಾದೀತು. ಭವಿಷ್ಯದ ನಿಮ್ಮ ಕಲ್ಪನೆಗೆ ಒಂದು ರೂಪವು ಸಿಕ್ಕಂತೆ ತೋರುವುದು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಹೊಸ ಮನೆಯನ್ನು ಖರೀದಿಸುವ ಬಗ್ಗೆ ಸಂಗಾತಿಯ ಜೊತೆ ಚರ್ಚಿಸುವಿರಿ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ.
ಮಿಥುನ ರಾಶಿ: ನಿಮ್ಮ ಕನಸಿಗೆ ಸ್ಪಷ್ಟವಾದ ರೂಪವನ್ನು ಕೊಡಿ. ನಿಮ್ಮ ಪರಿಣಾಮಾತ್ಮಕ ಮಾತುಗಳಿಂದ ಯಾರಾದರೂ ಬದಲಾಗಬಹುದು. ದೂರದ ಸಂಬಂಧಿಕರಿಂದ ಅನಿರೀಕ್ಷಿತ ಸಂದೇಶವು ಇಡೀ ಕುಟುಂಬಕ್ಕೆ ಉತ್ಸಾಹವನ್ನು ತರುತ್ತದೆ. ಅನಿರೀಕ್ಷಿತವಾಗಿ ಸಂಬಂಧವೊಂದು ಬೆಳೆಯಬಹುದು. ವೈವಾಹಿಕ ಮಾತುಕತೆಗೆ ನಿಮ್ಮ ಕಡೆಯಿಂದ ಸ್ಪಂದನೆ ಅಗತ್ಯವಾಗಿರುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಕಛೇರಿಯಲ್ಲಿ ನಿಮಗೆ ಆರಾಮಾಗಿ ಇರುವ ಯೋಚನೆ ಇರುವುದು. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಬಹುದು. ದೂರದ ಊರಿಗೆ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ಮೋಸದ ಜಾಲಕ್ಕೆ ಸಿಕ್ಕಬಹುದು, ಸಾಧ್ಯತೆ ಇದೆ. ಆಭರಣ ಖರೀದಿಯಿಂದ ಮುಂದಕ್ಕೆ ಬಳಕೆಯಾಗಬಹುದು. ಎಲ್ಲವನ್ನೂ ನೀವು ಕಳೆದುಕೊಂಡು ಹಗುರಾಗುವಿರಿ.
ಕಟಕ ರಾಶಿ: ಇಂದು ನಿಮಗೆ ಯಾರ ಹಂಗೂ ಇಲ್ಲದೇ ಸ್ವೇಚ್ಛೆಯಿಂದ ವರ್ತಿಸುವಿರಿ. ವಿದೇಶಕ್ಕೆ ಹೋಗುವ ಬಗ್ಗೆ ನಿಮಗೆ ಅತಿಯಾದ ಮೋಹವು ಇರುವುದು. ಮನೆಯನ್ನು ನಿರ್ಮಾಣ ಮಾಡುವ ಬಗ್ಗೆ ಆಸೆಯನ್ನು ಹೇಳಿಕೊಳ್ಳುವಿರಿ. ಸಂಗಾತಿಯ ಮೇಲಿನ ಮುನಿಸನ್ನು ಇನ್ನೊಬ್ಬರ ಮೇಲೆ ತೋರಿಸುವಿರಿ. ಅಪ್ರಾಮಾಣಿಕತೆಯು ನಿಮಗೆ ಇಷ್ಟವಾಗದೇ ಹೋಗಬಹುದು. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಹಿತಶತ್ರುಗಳು ನಿಮ್ಮ ಸಂಪತ್ತನ್ನು ಬಳಸಿಕೊಳ್ಲಕುವರು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ತಪ್ಪನ್ನು ಇತರರ ಮೇಲೆ ಹಾಕುವುದು ಸರಿಯಾಗದು.
ಸಿಂಹ ರಾಶಿ: ಇಂದು ನೀವು ಸ್ವಯಂ ಸ್ಫೂರ್ತಿಯಿಂದ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವಿರಿ. ಕೆಲವನ್ನು ಅನುಭವದ ಮೂಲಕ ಪಡೆದುಕೊಳ್ಳುವಿರಿ. ಆಪ್ತರನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿಯು ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಇಂದು ಸಮಯವನ್ನು ಕಳೆಯುವುದು ಕಷ್ಟವಸದೀತು. ಮಾತಿನ ಮೇಲೆ ಹಿಡಿತ ತಪ್ಪಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಇರುವುದು ನಿಮಗೆ ಸ್ಪಷ್ಟವಾಗಿ ಕಾಣಿಸುವುದು.
ಕನ್ಯಾ ರಾಶಿ: ಇಂದು ಬಹಳ ಚುರುಕುತನದಿಂದ ಎಲ್ಲರ ಕಾರ್ಯವನ್ನು ಮಾಡುವಿರಿ. ಸೌಂದರ್ಯಪ್ರಜ್ಞೆಯು ಇಂದು ಅಧಿಕವಾಗಲಿದೆ. ಹೂಡಿಕೆಯನ್ನು ಕ್ರಮಬದ್ಧವಾಗಿ ಮಾಡುವಿರಿ. ಪ್ರೀತಿಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದು. ವಿವಾದಾತ್ಮಕ ವಿಷಯಗಳಿಂದ ದೂರವಿರಲು ಒತ್ತಾಯ ಮಾಡಬಹುದು. ಅಹಂಕಾರದಿಂದ ನಿಮ್ಮ ಬಗ್ಗೆ ಇರುವ ಅಭಿಪ್ರಾಯವು ಬದಲಾಗುವುದು. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ಹಳೆಯ ಉದ್ಯೋಗಕ್ಕೆ ಪುನಃ ಮರಳುವಿರಿ. ನಿರಂತರ ಕೆಲಸವನ್ನು ಮಾಡುವುದು ಇಷ್ಟವಾಗಲಿದೆ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ.
ತುಲಾ ರಾಶಿ: ಇಂದು ಆಡಿದ ಕೆಲವರ ಮಾತು ನಿಮಗೇ ಹೇಳಿದಂತೆ ಅನ್ನಿಸಬಹುದು. ತಪ್ಪುಗಳನ್ನು ಸರಿಮಾಡಿಕೊಳ್ಳುವ ಯೋಚನೆ ಬಂದರೆ ನಿಮ್ಮ ಹಾದಿಸುಗಮ. ನಿಮ್ಮ ಕುಟುಂಬದ ಜೊತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಯಾರ ನಿಂದನೆಯನ್ನೂ ತಲೆಗೆ ತೆಗೆದುಕೊಳ್ಳುವುದು ಬೇಡ. ನಿರ್ಲಕ್ಷ್ಯವೂ ಒಂದು ಮದ್ದು ಎನ್ನುವುದು ಗೊತ್ತಿರಬೇಕು. ನೌಕರರನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯವಾಗುವುದು. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಬಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ವ್ಯಾಪಾರದ ನಷ್ಟವನ್ನು ನಿಮಗೆ ಅರಗಿಸಿಕೊಳ್ಳಲಾಗದು.
ವೃಶ್ಚಿಕ ರಾಶಿ: ನೀವು ದೈಹಿಕವಾಗಿ ಸದೃಢರಾಗಲು ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳಬೇಕಾದೀತು. ಮಕ್ಕಳಿಗೆ ಕೊಡಬೇಕಾದ ಆಸ್ತಿಯ ಬಗ್ಗೆ ಚರ್ಚೆ ಮಾಡುವಿರಿ. ಹಿಂಸೆಯಿಂದ ಏನನ್ನೂ ಪಡೆಯಲಾಗದು. ಯಾರ ಮನಸ್ಸಿಗೂ ಬೇಕೆಂದೇ ನೋವನ್ನು ಕೊಡುವುದು ಬೇಡ. ದೂರ ಬಂಧುಗಳ ಭೇಟಿಯಾಗುವಿರಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಸಿದ್ಧತೆಯನ್ನು ನಡೆಸುವಿರಿ. ಆದಾಯದಿಂದ ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಮನೆಯ ಮುಂದೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು ಬೇಡ. ಏನಾದರೂ ಕೊಟ್ಟು ಕಳುಹಿಸಿ. ಹಣಕಾಸಿನ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಅವಕಾಶವು ಸಿಗುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಭಕ್ತಿಯು ಕಡಿಮೆ ಆದಂತೆ ನಿಮಗೆ ಅನ್ನಿಸುವುದು.
ಧನು ರಾಶಿ: ಇಂದು ನಿಮ್ಮ ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರವು ಸಿಗುದೆಂಬ ನಂಬಿಕೆ ಹೆಚ್ಚಿರುವುದು. ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ಉಳಿತಾಯದ ಭಾಗವು ಸೇರಿಕೊಳ್ಳಬಹುದು. ಸಾಮಾಜಿಕ ವ್ಯವಹಾರದಲ್ಲಿ ಆಸಕ್ತಿಯು ಕಡಿಮೆ ಆದಂತೆ ತೋರುವುದು. ಧನಸಹಾಯ ಮಾಡುವ ಮಾತನ್ನು ಉಳಿಸಿಕೊಳ್ಳಲು ನೀವು ಸೋಲಬಹುದು. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ. ಅಧಿಕೃತ ಮಾಡಿಕೊಳ್ಳದೇ ಯಾವುದನ್ನೂ ಹೇಳುವುದು ಬೇಡ. ಅನಾರೋಗ್ಯವು ಚಿಕಿತ್ಸೆಯಾಗಿ ಪರಿಣಮಿಸಬಹುದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಸ್ವಂತ ಕೆಲಸಕ್ಕೆ ಸಮಯವು ಸಿಗದೇ ಎಲ್ಲವನ್ನೂ ಉಳಿಸಿಕೊಳ್ಳುವಿರಿ. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ. ಭವಿಷ್ಯವು ಅಸ್ಪಷ್ಟವಾಗಿ ಇರುವುದು ನಿಮಗೆ ಆತಂಕವಾಗಬಹುದು.
ಮಕರ ರಾಶಿ: ನಿಮ್ಮ ಸಂಗಾತಿಯ ಕೋಪಕ್ಕೆ ಎದುರು ಮಾತನಾಡದೇ ಸ್ವಲ್ಪ ಸಮಯ ಸುಮ್ಮನಿರಿ. ತಾನಾಗಿಯೇ ಶಾಂತವಾಗುವುದು. ನಿಮ್ಮ ಕುಟುಂಬದ ನಡುವೆ ಬೇರೆ ಯಾರೋ ಮಧ್ಯಪ್ರವೇಶಿಸುವುದು ಇಷ್ಟವಾಗದು. ನಿಮ್ಮ ಇಂದಿನ ಮಾತುಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದು. ನಿಮಗೆ ಶತ್ರುಗಳ ಚಿಂತೆಯೇ ಅಧಿಕವಾಗಿರುವುದು. ನೀವಾಗಿಯೇ ಏನನ್ನು ಮಾಡಿಕೊಳ್ಳಲು ಹೋಗುವುದು ಬೇಡ. ಪಾಲುದಾರಿಕೆಯಲ್ಲಿ ನಿಮ್ಮ ಪಾಲುದಾರಿಕೆಯೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಅಸಂಬದ್ಧ ಮಾತುಗಳ ನಿಮ್ಮನ್ನು ವ್ಯಕ್ತಿತ್ವವನ್ನು ತಿಳಿಸುವುದು.
ಕುಂಭ ರಾಶಿ: ಇಂದು ನೀವು ಹಲವು ಒತ್ತಡಗಳಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಬಗ್ಗೆ ಅಸಮಾಧಾನವನ್ನು ಹೊಂದುವ ಬದಲು, ಶಾಂತಚಿತ್ತರಾಗಿ ವರ್ತಿಸಿ. ನಿಮ್ಮ ಭಾವವನ್ನು ತೋರಿಸಿ. ನಿಮ್ಮ ಉದ್ಯೋಗದ ಬಗ್ಗೆ ತಂದೆಯವರು ವಿಚಾರಿಸಬಹುದು. ಮುಚ್ಚುಮರೆ ಇಲ್ಲದೇ ಹೇಳಿ. ಸಂಗಾತಿಯ ಜೊತೆಗಿನ ಕೆಲವು ಸಂದರ್ಭಗಳನ್ನು ಎದುರಿಸುವುದು ಕಷ್ಟವಾದೀತು. ಸಿಗು ಸಂತೋಷದ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳುವಿರಿ. ನಿಮ್ಮ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಓಡಾಟದ ಕೆಲಸಕ್ಕೆ ನಿಮ್ಮನ್ನು ಬಳಸಿಕೊಳ್ಳಬಹುದು. ಉತ್ಸಾಹವೂ ಇರಲಿದೆ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ. ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದೆ.
ಮೀನ ರಾಶಿ: ಇಂದು ನೀವು ಕುಟುಂಬದ ಸದಸ್ಯರಿಗೆ ಹಣವನ್ನು ನೀಡುವಾಗ ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಿ. ಹೊಸ ಪರಿಚಿತರ ಜೊತೆ ಮಾತನಾಡಲು ಮುಜುಗರವಾಗಬಹುದು. ಮಕ್ಕಳಿಗೆ ಉತ್ತಮ ವಿದ್ಯೆಯನ್ನು ಕೊಡುಸುವ ಆಸೆ ಇರುವುದು. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾದೀತು. ಪ್ರಯಾಣವನ್ನು ಕುಟಂಬದ ಜೊತೆ ಮಾಡುವಿರಿ. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಯಾರದೋ ಬೇಸರವನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ಪೂರಕ ವಾತಾವರಣದಲ್ಲಿ ಕೊರತೆ ಇರುವುದು. ಸುಮ್ಮನೇ ಆಪ್ತರ ಮೇಲೆ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಅಪ್ರಯೋಜಕ ಸಂಗತಿಗಳು ಮುಖ್ಯವಾದೀತು. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು. ನಿಮ್ಮದೇ ಸರಿ ಎಂಬ ಭಾವ ನಿಮ್ಮಲ್ಲಿ ಇರುವುದು.
ಲೋಹಿತ ಹೆಬ್ಬಾರ್ – 8762924271 (what’s app only)