Gift To Employees: ಚಿನ್ನದ ನಾಣ್ಯ, ಐಫೋನ್ ನೀಡಿದ್ದ ಐಟಿ ಕಂಪೆನಿಯಿಂದ ಈ ಬಾರಿ ಕಾರಿನ ಉಡುಗೊರೆ
ಚೆನ್ನೈ ಮೂಲದ ಈ ಐಟಿ ಕಂಪೆನಿಯು ತನ್ನ ಉದ್ಯೋಗಿಗಳಿಗೆ ಕಾರು ಉಡುಗೊರೆಯಾಗಿ ನೀಡಿದೆ. ಕಂಪೆನಿಗೆ ಉದ್ಯೋಗಿಗಳು ನೀಡಿದ ಕೊಡುಗೆಗೆ ಪ್ರತಿಯಾಗಿ ಹೀಗೆ ಮಾಡಲಾಗಿದೆ.
ನೀವೇನೇ ಹೇಳಿ, ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಬಳದ ಆಚೆಗೆ ಪ್ರೋತ್ಸಾಹ ನೀಡುವಂಥ ವಾತಾವರಣ ಉದ್ಯೋಗದಾತರು ಸೃಷ್ಟಿಸಬೇಕು. ಈಚೆಗೆ ಚೆನ್ನೈ ಮೂಲದ ಕಿಸ್‌ಫ್ಲೋ ತನ್ನ ಐವರು ಟಾಪ್ ಮ್ಯಾನೇಜ್ಮೆಂಟ್ ಸಿಬ್ಬಂದಿಗೆ ಹೊಚ್ಚಹೊಸ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ ನಂತರ, ಸಿಲಿಕಾನ್ ವ್ಯಾಲಿ ಮೂಲದ ಐಟಿ ಕಂಪೆನಿ Ideas2IT ಕಂಪೆನಿಯ ಯಶಸ್ಸಿಗೆ ‘ಸಾಟಿಯಿಲ್ಲದ’ ಕೊಡುಗೆ ನೀಡಿದ್ದಕ್ಕಾಗಿ ತನ್ನ ಉದ್ಯೋಗಿಗಳಿಗೆ ಮಾರುತಿ ಸುಜುಕಿಯ 100 ಕಾರುಗಳನ್ನು ಉಡುಗೊರೆಯಾಗಿ (Gift) ನೀಡಿದೆ. ಐಡಿಯಾಸ್2ಐಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ವಿವೇಕಾನಂದನ್ ಅವರು ಮೆಗಾ ಸಂಪತ್ತು ಹಂಚಿಕೆ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ-ಅಧ್ಯಕ್ಷ ಮುರಳಿ ವಿವೇಕಾನಂದನ್ ಅವರ ಸಮ್ಮುಖದಲ್ಲಿ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದರು.
ಕಾರುಗಳು ಎಸ್-ಕ್ರಾಸ್‌ನಿಂದ ಬಲೆನೊವರೆಗೆ ಮತ್ತು ಕಂಪನಿಯ ಒಟ್ಟು ವೆಚ್ಚ ಸುಮಾರು ರೂ. 15 ಕೋಟಿ “Ideas2IT ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಉನ್ನತ-ಮಟ್ಟದ ಉತ್ಪನ್ನ ಎಂಜಿನಿಯರಿಂಗ್ ಸಂಸ್ಥೆಯು ತನ್ನ 100 ಉದ್ಯೋಗಿಗಳಿಗೆ 100 ಕಾರುಗಳನ್ನು ಉಡುಗೊರೆಯಾಗಿ ನೀಡಿತು. ನಿರಂತರ ಬೆಂಬಲ ಮತ್ತು ಆ ಮೂಲಕ ಕಂಪೆನಿಯ ಯಶಸ್ಸು ಹಾಗೂ ಬೆಳವಣಿಗೆಗೆ ಸಾಟಿಯಿಲ್ಲದ ಕೊಡುಗೆಯನ್ನು ನೀಡಿದ್ದಕ್ಕಾಗಿ ಈ ಉಡುಗೊರೆ ನೀಡಿದ್ದೇವೆ,” ಎಂದು ಹೇಳಿದೆ. “10 ವರ್ಷಗಳಿಗಿಂತ ಹೆಚ್ಚು ಕಾಲ ನಮ್ಮ ಭಾಗವಾಗಿರುವ 100 ಉದ್ಯೋಗಿಗಳಿಗೆ 100 ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ನಮ್ಮಲ್ಲಿ 500 ಉದ್ಯೋಗಿಗಳಿದ್ದಾರೆ. ನಾವು ಪಡೆದ ಸಂಪತ್ತನ್ನು ಉದ್ಯೋಗಿಗಳಿಗೆ ಹಿಂದಿರುಗಿಸುವುದು ನಮ್ಮ ಪರಿಕಲ್ಪನೆಯಾಗಿದೆ ಎಂದು ಐಡಿಯಾಸ್2ಐಟಿ ಮಾರ್ಕೆಟಿಂಗ್ ಮುಖ್ಯಸ್ಥರಾದ ಹರಿ ಸುಬ್ರಮಣಿಯನ್ ಹೇಳಿದ್ದಾರೆ.
ಸಂಸ್ಥಾಪಕ ಮುರಳಿ ವಿವೇಕಾನಂದನ್ ಮಾತನಾಡಿ, ಕಂಪೆನಿಯ ಸುಧಾರಣೆಗಾಗಿ ಉದ್ಯೋಗಿಗಳು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಕಂಪೆನಿಯು ಅವರಿಗೆ ಕಾರುಗಳನ್ನು ನೀಡುತ್ತಿದೆ ಎಂದುಕೊಳ್ಳಬೇಕಿಲ್ಲ, ಬದಲಿಗೆ ಅವರು ತಮ್ಮ ಪರಿಶ್ರಮದಿಂದ ಅದನ್ನು ಗಳಿಸಿದ್ದಾರೆ. “ಏಳು-ಎಂಟು ವರ್ಷಗಳ ಹಿಂದೆ ನಾವು ಭಾರೀ ಗುರಿಗಳನ್ನು ಪಡೆದಾಗ ನಮ್ಮ ಸಂಪತ್ತನ್ನು ಹಂಚಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದೇವೆ. ಈ ಕಾರುಗಳನ್ನು ನೀಡಿರುವುದು ಕೇವಲ ಮೊದಲ ಹೆಜ್ಜೆ. ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಉಪಕ್ರಮಗಳನ್ನು ಹೊರತರಲು ನಾವು ಯೋಜಿಸಿದ್ದೇವೆ,” ಎಂದು ವಿವೇಕಾನಂದನ್ ಹೇಳಿದ್ದಾರೆ.
Tamil Nadu | An IT firm, Ideas2IT, in Chennai, gifts 100 cars to 100 of its employees
"It's always great to receive gifts from the organization; on every occasion, company shares its happiness with gifts like gold coins, iPhones. Car is a very big thing for us," said an employee pic.twitter.com/iiTF9NHIJ7
— ANI (@ANI) April 11, 2022
“ಸಂಸ್ಥೆಯಿಂದ ಉಡುಗೊರೆಗಳನ್ನು ಪಡೆಯುವುದು ಯಾವಾಗಲೂ ಅದ್ಭುತವಾದ ಅನುಭವ. ಪ್ರತಿ ಸಂದರ್ಭದಲ್ಲಿ ಕಂಪೆನಿಯು ಚಿನ್ನದ ನಾಣ್ಯಗಳು, ಐಫೋನ್‌ಗಳಂತಹ ಉಡುಗೊರೆಗಳೊಂದಿಗೆ ತನ್ನ ಸಂತೋಷವನ್ನು ಹಂಚಿಕೊಳ್ಳುತ್ತದೆ. ನಮಗೆ ಕಾರು ಎಂದರೆ ಬಹಳ ದೊಡ್ಡ ವಿಷಯ,’ ಎಂದು ಕಂಪೆನಿಯಿಂದ ಉಡುಗೊರೆ ಸ್ವೀಕರಿಸಿದ ಉದ್ಯೋಗಿ ಪ್ರಸಾದ್ ಹೇಳಿದ್ದಾರೆ. Ideas2IT 2009 ರಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ 6 ಇಂಜಿನಿಯರ್‌ಗಳ ಆಯ್ಕೆಯ ತಂಡದೊಂದಿಗೆ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಸಲಹಾ ಸಂಸ್ಥೆಯಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಈಗ, ಕಂಪೆನಿಯು ಯುಎಸ್ಎ, ಮೆಕ್ಸಿಕೋ ಮತ್ತು ಭಾರತ ಸೇರಿದಂತೆ ಅನೇಕ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ತಂತ್ರಜ್ಞರನ್ನು ಹೊಂದಿದೆ.
ಇದನ್ನೂ ಓದಿ: ಹೊಸ ವರ್ಷದ ಉಡುಗೊರೆ: ಈ ಕಂಪನಿಯು ಎಲೆಕ್ಟ್ರಿಕ್ ವಾಹನ ಖರೀದಿಗೆ ಉಚಿತವಾಗಿ 3 ಲಕ್ಷ ರೂ. ನೀಡುತ್ತಿದೆ..!
Published On - 11:57 am, Tue, 12 April 22