ಹಳತು ಹೊನ್ನು: ಹೊಸ ಫಂಡ್​ಗಳ ಘೋಷಣೆ ಕಾಲದಲ್ಲಿ ಒಎಫ್​ಒ ಮೂಲಕ ಹಳೇ ಫಂಡ್ ನೆನಪಿಸಿದ ಡಿಎಸ್​ಪಿ ಮ್ಯೂಚುವಲ್ ಫಂಡ್

ಸಾಕಷ್ಟು ಉತ್ತಮ ಹಳೆಯ ಫಂಡ್​ಗಳೂ ಭಾರತೀಯ ಮ್ಯೂಚುವಲ್ ಫಂಡ್​ ಮಾರುಕಟ್ಟೆಯಲ್ಲಿವೆ ಎಂದು ಸಾರಿ ಹೇಳಲು ಪ್ರಯತ್ನಿಸಿದೆ.

ಹಳತು ಹೊನ್ನು: ಹೊಸ ಫಂಡ್​ಗಳ ಘೋಷಣೆ ಕಾಲದಲ್ಲಿ ಒಎಫ್​ಒ ಮೂಲಕ ಹಳೇ ಫಂಡ್ ನೆನಪಿಸಿದ ಡಿಎಸ್​ಪಿ ಮ್ಯೂಚುವಲ್ ಫಂಡ್
ಹಳೇ ಫಂಡ್ ಪರಿಚಯಿಸುವ ಯತ್ನ
Follow us
TV9 Web
| Updated By: ಆಯೇಷಾ ಬಾನು

Updated on: Aug 30, 2021 | 7:17 AM

ಷೇರುಪೇಟೆಯು ಪ್ರತಿದಿನ ಹೊಸಹೊಸ ದಾಖಲೆಗಳನ್ನು ಬರೆಯುತ್ತಿದೆ. ಪ್ರತಿ ಸಲ ಷೇರುಪೇಟೆಯ ಸಾಧನೆ ಉನ್ನತಮಟ್ಟದಲ್ಲಿದ್ದಾಗ ಮ್ಯೂಚುವಲ್ ಫಂಡ್ ಕಂಪನಿಗಳು ಹೊಸ ಫಂಡ್​ಗಳನ್ನು ಪರಿಚಯಿಸುವುದು ವಾಡಿಕೆ. ಈ ವರ್ಷವು ಇದು ಮುಂದುವರಿದಿದೆ. ಐಸಿಐಸಿಐ, ಕೆನರಾ ರೊಬೆಕೊ, ಎಸ್​ಬಿಐ ಸೇರಿದಂತೆ ಹಲವು ಕಂಪನಿಗಳು ಎನ್​ಎಫ್​ಒಗಳ (New Fund Offer -NFO) ಮೂಲಕ ಹೊಸ ಫಂಡ್​ಗಳನ್ನು ಘೋಷಿಸಿವೆ. ಎಸ್​ಬಿಐ ಮ್ಯೂಚುವಲ್ ಫಂಡ್​ನ ಬ್ಯಾಲೆನ್ಸ್​ಡ್ ಅಡ್ವಾಂಟೇಟ್ ಫಂಡ್ ಎನ್​ಎಫ್​ಒ ಮೂಲಕ ₹ 13,000 ಕೋಟಿ ನಿಧಿ ಸಂಗ್ರಹಿಸಿ ಇತಿಹಾಸವನ್ನೇ ನಿರ್ಮಿಸಿತು.

ಈ ಎನ್​ಎಫ್​ಒಗಳ ಭರಾಟೆಯಲ್ಲಿ ಡಿಎಸ್​ಪಿ ಮ್ಯೂಚುವಲ್ ಫಂಡ್ ಕಂಪನಿಯು ವಿಭಿನ್ನ ಪ್ರಯತ್ನದಿಂದ ಗಮನ ಸೆಳೆಯುತ್ತಿದೆ. ಹಲವು ವರ್ಷಗಳಿಂದ ಉತ್ತಮ ಸಾಧನೆ ತೋರಿರುವ ಡಿಎಸ್​ಪಿ ಫ್ಲೆಕ್ಸಿಕ್ಯಾಪ್ ಫಂಡ್​ನ (ಹಿಂದಿನ ಡಿಎಸ್​ಪಿ ಈಕ್ವಿಟಿ) ಒಎಫ್​ಒ (Old Fund Offer – OFO) ಘೋಷಿಸಿದೆ. 1997ರಿಂದ ಅಸ್ತಿತ್ವದಲ್ಲಿರುವ ಈ ಫಂಡ್​ ಅನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸದಾಗಿ ಬರುವುದಷ್ಟೇ ಒಳಿತಲ್ಲ, ಸಾಕಷ್ಟು ಉತ್ತಮ ಹಳೆಯ ಫಂಡ್​ಗಳೂ ಭಾರತೀಯ ಮ್ಯೂಚುವಲ್ ಫಂಡ್​ ಮಾರುಕಟ್ಟೆಯಲ್ಲಿವೆ ಎಂದು ಸಾರಿ ಹೇಳಲು ಪ್ರಯತ್ನಿಸಿದೆ.

ಒಎಫ್​ಒ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಎಸ್​ಪಿ ಇನ್​ವೆಸ್ಟ್​ಮೆಂಟ್​ ಮ್ಯಾನೇಜರ್ಸ್​ ಕಂಪನಿಯ ಎಂಡಿ ಮತ್ತು ಸಿಇಒ ಕಲ್ಪೆನ್ ಪಾರೇಖ್, ‘ಒಳ್ಳೆಯದಾಗಿದ್ದರೂ ಹಳೆಯದು ಎನ್ನುವ ಕಾರಣಕ್ಕೆ ಹಲವು ಸಲ ಕೆಲವನ್ನು ನಾವು ನಿರ್ಲಕ್ಷಿಸುತ್ತೇವೆ. ಒಎಫ್​ಒ ಪ್ರಯತ್ನದ ಮೂಲಕ ನಾವು ಸುಮಾರು 25 ವರ್ಷಗಳ ಅವಧಿಯಲ್ಲಿ ಮಾರುಕಟ್ಟೆ ಏರಿಳಿತಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಫಂಡ್​ ಒಂದನ್ನು ಹೂಡಿಕೆದಾರರಿಗೆ ಮತ್ತೆ ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ. ಲಾಭಕರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಉತ್ತಮ ಮ್ಯಾನೇಜ್​ಮೆಂಟ್ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಈ ಫಂಡ್​ನ ಉದ್ದೇಶ’ ಎಂದು ಹೇಳಿದರು.

55ರಿಂದ 65 ಕಂಪನಿಗಳ ಷೇರುಗಳು ಈ ಫಂಡ್​ನ ಪೋರ್ಟ್​ಫೋಲಿಯೊದಲ್ಲಿದ್ದು, ಶೇ 60-70ರಷ್ಟು ಲಾರ್ಜ್​ಕ್ಯಾಪ್, ಶೇ 30ರಿಂದ 40ರಷ್ಟು ಮಿಡ್​ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಿವೆ. ಫಂಡ್​ ಆರಂಭದಿಂದ ಇಲ್ಲಿಯವರೆಗೆ ಶೇ 19.3ರ ಪ್ರತಿಫಲ ನೀಡಿದೆ. 29ನೇ ಏಪ್ರಿಲ್ 1997ರಲ್ಲಿ ಆರಂಭವಾದ ಈ ಫಂಡ್​ನಲ್ಲಿ ಪ್ರಸ್ತುತ ₹ 5687 ಕೋಟಿ ನಿಧಿ, ಅಂದರೆ ಎಯುಎಂ (Asset Under Manangement – AUM) ಸಂಗ್ರಹವಾಗಿವೆ. ಅತುಲ್ ಭೋಲೆ ಮತ್ತು ಅಭಿಷೇಕ್ ಘೋಷ್ ಈ ಫಂಡ್​ನ ಮ್ಯಾನೇಜರ್​ಗಳು. ಬ್ಯಾಂಕ್ (ಶೇ 20), ಗ್ರಾಹಕ ಉತ್ಪನಗನಳು (ಶೇ 9), ವಿಮೆ (8), ಹಣಕಾಸು (ಶೇ 7) ಮತ್ತು ಸಾಫ್ಟ್​ವೇರ್ (ಶೇ 7) ಕ್ಷೇತ್ರಗಳಲ್ಲಿ ಈ ಫಂಡ್​ನ ಹೂಡಿಕೆ ಗಮನಾರ್ಹ ಪ್ರಮಾಣದಲ್ಲಿದೆ.

(ಸೂಚನೆ: ಈಕ್ವಿಟಿ ಆಧರಿತ ಮ್ಯೂಚುವಲ್ ಫಂಡ್​ಗಳು ಷೇರುಪೇಟೆ ಏರಿಳಿತಗಳಿಂದ ಪ್ರಭಾವಿತವಾಗುತ್ತವೆ. ಈ ಬರಹದ ಮೂಲಕ ಯಾವುದೇ ಫಂಡ್​ನಲ್ಲಿ ಹೂಡಿಕೆ ಮಾಡಬೇಕು ಎಂದು ಟಿವಿ9 ಕನ್ನಡ ಡಿಜಿಟಲ್ ಶಿಫಾರಸು ಮಾಡುತ್ತಿಲ್ಲ)

(Old Fund Offer from DSP Flexicap Fund a new Initiative from a fund house)

ಇದನ್ನೂ ಓದಿ: SBI NFO: 13 ಸಾವಿರ ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿ ಹೊಸ ದಾಖಲೆ ಬರೆದ ಎಸ್​ಬಿಐ ಮ್ಯೂಚುವಲ್ ಫಂಡ್

ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್​ ಎನ್​ಎಫ್​ಒಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗುತ್ತಾ?

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್