ಇಂದು ನೂತನ ಸಚಿವರ ಪ್ರಮಾಣವಚನ: ಯಾರಿಗೆ ಯಾವ್ಯಾವ ಖಾತೆ?
ಬೆಂಗಳೂರು: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಯಾವ್ಯಾವ ಖಾತೆ ಹಂಚಿಕೆಯಾಗಬಹುದು? ಯಾವೆಲ್ಲಾ ಸಚಿವರಿಗೆ ಯಾವ್ಯಾವ ಖಾತೆ ದಕ್ಕಬಹುದು? ಬೈಎಲೆಕ್ಷನ್ ಗೆದ್ದವರ ಪೈಕಿ ಯಾರಿಗೆ ಯಾವ ಖಾತೆ? ಮೂಲ ಬಿಜೆಪಿಗರ ಪೈಕಿ ಯಾರಿಗೆ ಯಾವ ಸಚಿವ ಸ್ಥಾನ? ಈ ಕುರಿತ ಸಂಭಾವ್ಯ ಖಾತೆ ಪಟ್ಟಿ ಇಲ್ಲಿದೆ. ಸಂಪುಟ ವಿಸ್ತರಣೆಗೆ ಕೌಂಟ್ಡೌನ್ ಶುರುವಾಗಿದೆ. ಬೈ ಎಲೆಕ್ಷನ್ನಲ್ಲಿ ಗೆದ್ದ ಹತ್ತು ಅರ್ಹ ಶಾಸಕರು ಮಂತ್ರಿಪಟ್ಟ ಅಲಂಕರಿಸಿ ಬಿಎಸ್ವೈ ಕ್ಯಾಬಿನೆಟ್ ಸೇರಲಿದ್ದಾರೆ. ಆದ್ರೆ, ಯಾರಿಗೆ ಯಾವ ಖಾತೆ ಅನ್ನೋದು ಇನ್ನೂ […]

ಬೆಂಗಳೂರು: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಯಾವ್ಯಾವ ಖಾತೆ ಹಂಚಿಕೆಯಾಗಬಹುದು? ಯಾವೆಲ್ಲಾ ಸಚಿವರಿಗೆ ಯಾವ್ಯಾವ ಖಾತೆ ದಕ್ಕಬಹುದು? ಬೈಎಲೆಕ್ಷನ್ ಗೆದ್ದವರ ಪೈಕಿ ಯಾರಿಗೆ ಯಾವ ಖಾತೆ? ಮೂಲ ಬಿಜೆಪಿಗರ ಪೈಕಿ ಯಾರಿಗೆ ಯಾವ ಸಚಿವ ಸ್ಥಾನ? ಈ ಕುರಿತ ಸಂಭಾವ್ಯ ಖಾತೆ ಪಟ್ಟಿ ಇಲ್ಲಿದೆ.
ಸಂಪುಟ ವಿಸ್ತರಣೆಗೆ ಕೌಂಟ್ಡೌನ್ ಶುರುವಾಗಿದೆ. ಬೈ ಎಲೆಕ್ಷನ್ನಲ್ಲಿ ಗೆದ್ದ ಹತ್ತು ಅರ್ಹ ಶಾಸಕರು ಮಂತ್ರಿಪಟ್ಟ ಅಲಂಕರಿಸಿ ಬಿಎಸ್ವೈ ಕ್ಯಾಬಿನೆಟ್ ಸೇರಲಿದ್ದಾರೆ. ಆದ್ರೆ, ಯಾರಿಗೆ ಯಾವ ಖಾತೆ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಯಾಕಂದ್ರೆ, ಯಾರಿಗೆ ಯಾವ ಖಾತೆ ನೀಡಬೇಕು ಅನ್ನೋದು ಬಿಎಸ್ವೈ ಕೈಲಿ ಇಲ್ಲ. ಅಸಲಿಗೆ ಇದನ್ನ ಬಿಎಸ್ವೈ ನಿರ್ಧಾರ ಮಾಡೋಕೆ ಆಗೋದೇ ಇಲ್ಲ. ಅದನ್ನ ಮಾಡೋದು ಒನ್ಸ್ ಅಗೇನ್ ಬಿಜೆಪಿ ಹೈಕಮಾಂಡ್.
ಸಂಪುಟ ವಿಸ್ತರಣೆ ಹೊಸ್ತಿಲಲ್ಲೇ ಶುರುವಾಗಿದೆ ಖಾತೆ ಕ್ಯಾತೆ! ಯೆಸ್, ಇಂದು ಸಂಪುಟ ವಿಸ್ತರಣೆ ಆದ್ರೂ, ಖಾತೆ ಹಂಚಿಕೆ ಮಾಡಲು ಹೈಕಮಾಂಡ್ ಒಪ್ಪಿಗೆ ನೀಡಬೇಕಿದೆ. ಈಗಾಗಲೇ ಸಿಎಂ ಯಾರಿಗೆ ಯಾವ ಖಾತೆ ಅನ್ನೋದನ್ನ ಲಿಸ್ಟ್ ರೆಡಿ ಮಾಡಿದ್ರೂ, ಅದಕ್ಕೆ ಅಂತಿಮ ಮುದ್ರೆ ಹಾಕೋದು ಹೈಕಮಾಂಡ್. ಹೀಗಾಗಿ, ಶೀಘ್ರದಲ್ಲೇ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಬಿಜೆಪಿ ಅಧ್ಯಕ್ಷ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಒಪ್ಪಿದ ಬಳಿಕವೇ ಖಾತೆ ಹಂಚಿಕೆ ಫೈನಲ್ ಆಗಲಿದೆ.
ನೂತನ ಸಚಿವರಲ್ಲಿ ಯಾಱರಿಗೆ ಯಾವ ಖಾತೆ? ನೂತನ ಸಚಿವರಾಗಿ ಬಿಎಸ್ವೈ ಸಂಪುಟ ಸೇರಲಿರೋರಿಗೆ ಯಾವ ಖಾತೆ ಹಂಚಿಕೆಯಾಗಬಹುದು? ಪ್ರಮುಖ ಖಾತೆಗಳು ಯಾರ ಬುಟ್ಟಿಗೆ ಸೇರಲಿದೆ? ಇಂಥದ್ದೊಂದು ಪ್ರಶ್ನೆ ಈಗ ಸಹಜವಾಗಿಯೇ ಎಲ್ಲರನ್ನೂ ಕಾಡ್ತಿದೆ. ಹಾಗಿದ್ರೆ ಸಂಪುಟ ಸೇರಲಿರೋ ಶಾಸಕರಿಗೆ ಯಾವೆಲ್ಲಾ ಖಾತೆ ಸಿಗಬಹುದು ಅನ್ನೋ ಸಂಭಾವ್ಯ ಪಟ್ಟಿ ಇಲ್ಲಿದೆ.
ಸಂಭಾವ್ಯ ಖಾತೆ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ಸಿಗೋ ಸಾಧ್ಯತೆ ಇದೆ. ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್ಗೆ ಅರಣ್ಯ ಅಥವಾ ನಗರಾಭಿವೃದ್ಧಿ ಖಾತೆ ಸಿಗೋ ಸಾಧ್ಯತೆ ಇದೆ. ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯಗೆ ನಗರಾಭಿವೃದ್ಧಿ ಅಥವಾ ಕಾರ್ಮಿಕ ಖಾತೆ ಸಿಗೋ ಚಾನ್ಸ್ ಇದೆ.
ಇನ್ನು ಚಿಕ್ಕಬಳ್ಳಾಪುರ ಶಾಸಕ ಡಾಕ್ಟರ್ ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವರಾಗೊ ಸಾಧ್ಯತೆ ದಟ್ಟವಾಗಿದೆ. ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ಗೆ ಸಹಕಾರ ಖಾತೆ ಸಿಗೋ ಸಾಧ್ಯತೆ ಇದೆ. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಸಕ್ಕರೆ ಸಚಿವರಾಗೊ ಚಾನ್ಸ್ ಇದೆ.
ಇನ್ನು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅರಣ್ಯ ಅಥವಾ ಗೃಹ ಸಚಿವರಾಗಬಹುದು. ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ನಾಗರಿಕ ಮತ್ತು ಆಹಾರ ಸರಬರಾಜು ಸಚಿವರಾಗೋ ಚಾನ್ಸ್ ಇದೆ. ಇನ್ನು ಯಲ್ಲಾಪುರ ಶಾಸಕ ಕ್ರೀಡಾ ಮತ್ತು ಯುವಜನ ಸಬಲೀಕರಣ ಅಥವಾ ಪೌರಾಡಳಿತ ಸಚಿವರಾಗಬಹುದು ಎನ್ನಲಾಗ್ತಿದೆ. ವಿಜಯನಗರ ಶಾಸಕ ಆನಂದ್ ಸಿಂಗ್ಗೆ ಕೌಶಲ್ಯಾಭಿವೃದ್ಧಿ ಅಥವಾ ಕ್ರೀಡಾ ಯುವಜನ ಸಬಲೀಕರಣ ಖಾತೆ ಸಿಗೋ ಸಾಧ್ಯತೆ ಇದೆ.
‘ಡಿಕೆಶಿಗಿದ್ದ ಎಲ್ಲಾ ಸವಲತ್ತೂ ನನಗಿರಬೇಕು’ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ಸಮರ ಸಾರಿರೋದು ಮೇಲ್ನೋಟಕ್ಕೆ ಗೋಚರವಾಗ್ತಿದೆ. ಯಾಕಂದ್ರೆ ಈ ಹಿಂದಿನ ಸರ್ಕಾರದಲ್ಲಿ ಡಿಕೆಶಿ ಕೈಯಲ್ಲಿದ್ದ ಜಲಸಂಪನ್ಮೂಲ ಖಾತೆಗಾಗಿ ರಮೇಶ್ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಕಳೆದ ಸರ್ಕಾರದಲ್ಲಿ ಡಿಕೆಶಿಗಿದ್ದ ಎಲ್ಲಾ ಸವಲತ್ತೂ ನನಗಿರಬೇಕು. ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಬಳಸಿದ್ದ ಕೊಠಡಿ. ಡಿಕೆಶಿ ಸರ್ಕಾರಿ ಬಂಗಲೆ ಎಲ್ಲವೂ ಬೇಕು ಅಂತಾ ಸಿಎಂ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಹಿಂದೇಟು..! ರಮೇಶ್ ಜಾರಕಿಹೊಳಿಯೇನೊ ಜಲಸಂಪನ್ಮೂಲ ಖಾತೆ ಸೇರಿ ಡಿಕೆಶಿಗಿದ್ದ ಎಲ್ಲಾ ಸವಲತ್ತೂ ಬೇಕು ಅಂತಾ ಪಟ್ಟು ಹಿಡಿದು ಕುಂತಿದ್ದಾರೆ. ಆದ್ರೆ ಇತ್ತ ಸಿಎಂ ಬಿಎಸ್ವೈ ಮಾತ್ರ ಜಲಸಂಪನ್ಮೂಲ ಬಿಟ್ಟು ಡಿ.ಕೆ.ಶಿವಕುಮಾರ್ಗಿದ್ದ ಎಲ್ಲಾ ಸವಲತ್ತೂ ನೀಡ್ತೀವಿ ಅಂದಿದ್ದಾರಂತೆ. ಈಗಾಗ್ಲೇ ಈ ಖಾತೆ ನಿಭಾಯಿಸುತ್ತಿರೋ ಬಸವರಾಜ್ ಬೊಮ್ಮಾಯಿಗೆ ಅನುಭವ ಇದೆ. ಈ ಖಾತೆಯನ್ನ ಸಮರ್ಥವಾಗಿ ನಿಭಾಯಿಸ್ತಿದ್ದಾರೆ. ಇದಲ್ದೇ ಇನ್ನೂ ಅನೇಕ ಲೆಕ್ಕಾಚಾರಗಳೂ ಇವೆ.
ರಮೇಶ್ಗೆ ನೀರಾ‘ವರಿ’..? ಜಲಸಂಪನ್ಮೂಲ ಸಚಿವರು ನೀರಿನ ವಿಚಾರವಾಗಿ ಅಂತಾರಾಜ್ಯ ಸಮಸ್ಯೆಯನ್ನ ಸರಿಯಾಗಿ ನಿರ್ವಹಿಸಬೇಕು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಜತೆ ಸರಿಯಾಗಿ ಚರ್ಚಿಸಬೇಕಾಗುತ್ತೆ. ಇದನ್ನ ಸರಿಯಾಗಿ ನಿಭಾಯಿಸದಿದ್ದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತೆ.
ರಾಜ್ಯ ಬಿಜೆಪಿ ಸರ್ಕಾರಕ್ಕೂ ಕೆಟ್ಟ ಹೆಸರು ಅಂಟಿಕೊಳ್ಳುತ್ತೆ. ಹೀಗಾಗಿ ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಖಾತೆಯನ್ನು ರಮೇಶ್ ಜಾರಕಿಹೊಳಿಗೆ ನೀಡದಂತೆ ಮೂಲ ಬಿಜೆಪಿಗರು ಸಿಎಂ ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ. ಇದ್ರ ಜತೆಗೆ ಪ್ರಮುಖ ಖಾತೆಯನ್ನ ತಮ್ಮ ಆಪ್ತರಿಗಷ್ಟೇ ಕೊಡೋ ಅಭ್ಯಾಸ ಸಿಎಂ ಯಡಿಯೂರಪ್ಪರದ್ದು. ಈ ಹಿಂದೆ ಜಲಸಂಪನ್ಮೂಲ ಖಾತೆಯನ್ನ ಆಪ್ತ ಬಸವರಾಜ ಬೊಮ್ಮಾಯಿಗೆ ನೀಡಿದ್ರು.
ಈ ಮಧ್ಯೆ, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ಕೊಡಲೇಬೇಕು ಅಂತಾ ಸಾಹುಕಾರ್ ಅತ್ಯಾಪ್ತ ಮಹೇಶ್ ಕುಮಟಳ್ಳಿ ಒತ್ತಾಯಿಸಿದ್ದಾರೆ. ಒಟ್ನಲ್ಲಿ, ಇನ್ನೇನು ಕೆಲ ಗಂಟೆಗಳಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಚಿವರು ಪ್ರಮಾಣವಚನ ಸ್ವೀಕರಿಸುತ್ತಲೇ ಖಾತೆ ಹಂಚಿಕೆ ಕಸರತ್ತು ಶುರುವಾಗಲಿದೆ. ಇದ್ರ ಮಧ್ಯೆ ಯಾರಿಗೆ ಯಾವ ಖಾತೆ ಸಿಗಲಿದೆ ಅನ್ನೋದೇ ಸದ್ಯದ ಕುತೂಹಲ.
Published On - 7:06 am, Thu, 6 February 20