AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀವ್ರಗೊಂಡ ಸಚಿವ ಸಂಪುಟ ಪುನಾರಚನೆ ಕೂಗು: ದಿಲ್ಲಿ ಯಾತ್ರೆ ಕೈಗೊಂಡಿರುವ ಶಾಸಕರು ಯಾರ್ಯಾರು?

ನಾಯಕತ್ವ ಗೊಂದಲ, ದಾವಣಗೆರೆ ಬೈ ಎಲೆಕ್ಷನ್ ಜಟಾಪಟಿ ನಡುವೆ ಹಿರಿಯ ಶಾಸಕರು ಮಂತ್ರಿಗಿರಿ ಬೇಡಿಕೆಯೊಂದಿಗೆ ಇಂದು (ಏಪ್ರಿಲ್ 12) ದೆಹಲಿ ಫ್ಲೈಟ್ ಹತ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಸುಮಾರು 30 ಶಾಸಕರು ಮಂತ್ರಿಗಿರಿಗೆ ಹಕ್ಕೊತ್ತಾಯ ಮಾಡಲು ಬೆಂಗಳೂರಿನಿಂದ (Bengaluru) ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿಲಿದ್ದಾರೆ. ಹಾಗಾದ್ರೆ ದೆಹಲಿ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಶಾಸಕರು ಯಾರ್ಯಾರು ಎನ್ನುವ ಪಟ್ಟಿ ಇಲ್ಲಿದೆ.

ತೀವ್ರಗೊಂಡ ಸಚಿವ ಸಂಪುಟ ಪುನಾರಚನೆ ಕೂಗು: ದಿಲ್ಲಿ ಯಾತ್ರೆ ಕೈಗೊಂಡಿರುವ ಶಾಸಕರು ಯಾರ್ಯಾರು?
ರಮೇಶ್ ಬಿ. ಜವಳಗೇರಾ
|

Updated on: Apr 12, 2026 | 9:03 PM

Share

ಬೆಂಗಳೂರು, (ಏಪ್ರಿಲ್ 12): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆ (Cabinet reshuffle) ಆಗಬೇಕು, ಸಮಯ ಮೀರುತ್ತಿದೆ, ಸರ್ಕಾರ ರಚನೆಯಾಗಿ 3 ವರ್ಷ ಕಳೆಯುತ್ತಾ ಬಂದಿದೆ. ಇನ್ನೂ ವಿಳಂಬ ಆದ್ರೆ. ಸಚಿವ ಸ್ಥಾನ ಸಿಕ್ಕಿದ್ರೂ ಪ್ರಯೋಜನ ಏನು ಎಂದು ಸಚಿವಾಕಾಂಕ್ಷಿಗಳು ಪ್ರಶ್ನಿಸಿದ್ದು, ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್​ಗೆ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಈ ಸಂಬಂಧ ಇದೀಗ ಮೊದಲ ಹೆಜ್ಜೆಯಾಗಿ ಕಾಂಗ್ರೆಸ್​ನ ಹಿರಿಯ ಶಾಸಕರ ದಂಡು ದೆಹಲಿ (New Delhi) ಯಾತ್ರೆ ಕೈಗೊಂಡಿದೆ. ಈ ಬಾರಿ ಅಶೋಕ್ ಪಟ್ಟಣ್, ಟಿ.ಬಿ.ಜಯಚಂದ್ರ ನೇತೃತ್ವ ವಹಿಸಿದ್ದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಣದೀಪ್​ ಸಿಂಗ್ ಸುರ್ಜೇವಾಲರನ್ನ ಭೇಟಿಯಾಗಿ ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಮಾಡಲಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ನ ಸುಮಾರು 25 ರಿಂದ 30 ಹಿರಿಯ ಶಾಸಕರ ದಂಡು ಭಾನುವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗೆ ತೆರಳುವ ಮುನ್ನವೇ ಈ ಶಾಸಕರ ಗುಂಪು ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕನಿಷ್ಠ ಮೂರಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಹಾಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಈ ಹಿರಿಯ ಶಾಸಕರು, ಎರಡ್ಮೂರು ದಿನಗಳ ಕಾಲ ದೆಹಲಿಯಲ್ಲಿಯೇ ಮೊಕ್ಕಾಂ ಹೂಡಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಲಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರ ಭೇಟಿಗೂ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ನೋಡಿ: ಮಂತ್ರಿಗಿರಿ ಬೇಡಿಕೆಯೊಂದಿಗೆ ಶಾಸಕರ ದೆಹಲಿ ಯಾತ್ರೆ ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು

ಕುತೂಹಲ ಕೆರಳಿಸಿದ ಡಿಕೆಶಿ ಬಣದ ಗೈರು

ಹೌದು…ಸಚಿವ ಪುನಾರಚನೆ ಸಂಬಂಧ ಬಣ ರಾಜಕೀಯ ಶುರುವಾದಂತಿದೆ. ಯಾಕಂದ್ರೆ, ಈಗಾಗಲೇ ಸಂಪುಟ ಪುನಾರಚನೆ ಮಾಡಬೇಕೆಂದು ದೆಹಲಿಗೆ ತೆರಳಿರುವ ಬಹುತೇಕ ಶಾಸಕರು ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವವರು. ಆದ್ರೆ, ಡಿಸಿಎಂ ಡಿಕೆ ಶಿವಕುಮಾರ್ ಬಣದ ಶಾಸಕರು ದೆಹಲಿ ತೆರಳು ಹಿಂದೇಟು ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಯಕತ್ವ ಬದಲಾವಣೆಗೆ ಧ್ವನಿ ಎತ್ತಿದ್ದ ಡಿಕೆಶಿ ಬಣದ ಶಾಸಕರು ಇದೀಗ ಸಂಪುಟ ಪುನಾರಚನೆ ಹಕ್ಕೊತ್ತಾಯದಿಂದ ದೂರ ಉಳಿದುಕೊಂಡಿರುವು ಹಲವು ಚರ್ಚೆಗೆ ಗ್ರಾಸವಾಗಿದೆ.

ನಾಯಕತ್ವ ಬದಲಾವಣೆ ಕೂಗಿಗೆ ಪ್ರತಿಯಾಗಿ ದಾಳ ಹೂಡಿದ್ರಾ ಸಿಎಂ?

ದಾವಣಗೆರೆ ದಕ್ಷಿಣ, ಬಾಗಲಕೋಟೆ ಬೈಎಲೆಕ್ಷನ್‌ ಮುಗಿಯುವವರೆಗೂ ಸೈಲೆಂಟ್‌ ಆಗಿದ್ದ ನಾಯಕತ್ವ ಬದಲಾವಣೆ ಕಿತ್ತಾಟ ಈಗ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಉಪಚುನಾವಣೆ ಮುಗಿಯುವವರೆಗೂ ಶಾಂತವಾಗಿದ್ದರು, ಯಾಕಂದ್ರೆ ಇವರ ಕಿತ್ತಾಟ ಚುನಾವಣೆ ಮೇಲೆ ಎಫೆಕ್ಟ್‌ ಆಗಬಾರದು ಎಂದು. ಆದ್ರೆ, ಈಗ ಮತದಾನ ಮುಗಿಯುತ್ತಿದ್ದಂತೆಯೇ ಡಿಕೆಶಿ ಬಣ ನಾಯಕತ್ವ ಬದಲಾವಣೆ ವಿಚಾರವನ್ನು ಕೈಗೆತ್ತಿಕೊಳ್ಳುತ್ತೆ ಎನ್ನುವಷ್ಟರಲ್ಲಿ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಹೆಸರಲ್ಲಿ ಸಿಎಂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಒಂದು ಕಡೆ ಕಾದು ಕಾದು ಸುಸ್ತಾಗಿರುವ ಡಿಕೆಶಿ. ಇತ್ತ ಕುರ್ಚಿ ಬಿಟ್ಟು ಏಳದ ಸಿದ್ದರಾಮಯ್ಯ, ಒಂದು ಹೆಜ್ಜೆ ಮುಂದೆ ಹೋಗಿದ್ದು, ನಾಯಕತ್ವ ಬದಲಾವಣೆ ಕಿತ್ತಾಟ ಮುನ್ನಲೆಗೆ ಬರುವ ಮುನ್ನವೇ ಸಂಪುಟ ಪುನಾರಚನೆ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ.

ಶಾಸಕರ ದೆಹಲಿಯಾತ್ರೆ ಹಿಂದೆ ಸಿದ್ದರಾಮಯ್ಯ?

ಹೀಗೊಂದು ಚರ್ಚೆ ನಡೆದಿವೆ. ಸಂಪುಟ ಪುನಾರಚನೆ ಮಾಡಬೇಕೆಂದು ಶಾಸಕರು ಕೈಗೊಂಡಿರುವ ದೆಹಲಿ ಯಾತ್ರೆಯಿಂದ ಸಿಎಂ ಸಿದ್ದರಾಮಯ್ಯನವರು ಇದ್ದಾರೆ. ಅವರೇ ದೆಹಲಿಗೆ ಹೋಗುವಂತೆ ಶಾಸಕರನ್ನು ಕಳುಹಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದಕ್ಕೆ ಪೂರಕವೆಂಬಂತೆ ಶಾಸಕರು ದೆಹಲಿ ಹೋಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನಿಗೆ ಉತ್ತರಿಸಿರುವ ಸಿದ್ದರಾಮಯ್ಯ, ದೆಹಲಿಗೆ ಹೋದ್ರೆ ತಪ್ಪೇನು, ಬೇಡ ಅಂದೋರು ಯಾರು? ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕಿತ್ತು. ಪಂಚ ರಾಜ್ಯಗಳ ಚುನಾವಣೆ, ಬೈಎಲೆಕ್ಷನ್‌ನಿಂದ ವಿಳಂಬವಾಗಿದೆ ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರು ಪರೋಕ್ಷವಾಗಿ ಶಾಸಕರ ದೆಹಲಿ ಯಾತ್ರೆಗೆ ಬೆಂಬಲಿಸಿದ್ದಾರೆ.

ದೆಹಲಿಗೆ ಹೋದವರು ಯಾರ‍್ಯಾರು?

1.ಟಿಬಿ ಜಯಚಂದ್ರ – ಶಿರಾ ಕ್ಷೇತ್ರ 2.ಅಶೋಕ್ ಪಟ್ಟಣ್ – ರಾಮದುರ್ಗ ಕ್ಷೇತ್ರ 3.ಎಸ್.ಎನ್ ಸುಬ್ಬಾರೆಡ್ಡಿ – ಬಾಗೇಪಲ್ಲಿ ಕ್ಷೇತ್ರ 4.ಸಿ ಪುಟ್ಟರಂಗಶೆಟ್ಟಿ – ಚಾಮರಾಜನಗರ ಕ್ಷೇತ್ರ 5.ಹಂಪನಗೌಡ ಬಾದರ್ಲಿ – ಸಿಂಧನೂರು ಕ್ಷೇತ್ರ 6.ಡಿಜಿ ಶಾಂತನಗೌಡ – ಹೊನ್ನಾಳ್ಳಿ ಕ್ಷೇತ್ರ 7.ಬಸವರಾಜ್ ಶಿವಣ್ಣನವರ್ – ಬ್ಯಾಡಗಿ ಕ್ಷೇತ್ರ 8.ಎ.ಆರ್ ಕೃಷ್ಣಮೂರ್ತಿ – ಕೊಳ್ಳೇಗಾಲ ಕ್ಷೇತ್ರ 9.ಪ್ರಸಾದ್ ಅಬ್ಬಯ್ಯ – ಹು-ಧಾ ಪೂರ್ವ ಕ್ಷೇತ್ರ 10.ಯುಬಿ ಬಣಕರ್ – ಹಿರೇಕೆರೂರು ಕ್ಷೇತ್ರ 11.ಜಿ.ಎಸ್ ಪಾಟೀಲ್ – ರೋಣ ಕ್ಷೇತ್ರ 12.ಯಶವಂತರಾಯ ಗೌಡ ಪಾಟೀಲ್ – ಇಂಡಿ ಕ್ಷೇತ್ರ 13.ಷಡಕ್ಷರಿ – ತಿಪಟೂರು ಕ್ಷೇತ್ರ 14.ಎಸ್.ಎನ್ ನಾರಾಯಣಸ್ವಾಮಿ – ಬಂಗಾರಪೇಟೆ ಕ್ಷೇತ್ರ 15.ಲಕ್ಷ್ಮಣ ಸವದಿ – ಅಥಣಿ ಕ್ಷೇತ್ರ 16.ಅಪ್ಪಾಜಿ ನಾಡಗೌಡ – ಮುದ್ದೇಬಿಹಾಳ ಕ್ಷೇತ್ರ 17.ಪ್ರಿಯಕೃಷ್ಣ – ಗೋವಿಂದರಾಜನಗರ ಕ್ಷೇತ್ರ 19.ರಮೇಶ್ ಬಂಡಿ ಸಿದ್ದೇಗೌಡ – ಶ್ರೀರಂಗಪಟ್ಟಣ ಕ್ಷೇತ್ರ 20.ಬಿ. ಶಿವಣ್ಣ – ಆನೇಕಲ್ ಕ್ಷೇತ್ರ 21.ರಾಘವೇಂದ್ರ ಹಿಟ್ನಾಳ್ – ಕೊಪ್ಪಳ ಕ್ಷೇತ್ರ 22.ಬೇಳೂರು ಗೋಪಾಲಕೃಷ್ಣ- ಸಾಗರ ಕ್ಷೇತ್ರ

ಬಹುತೇಕ ಸಿಎಂ ಬಣದ ಶಾಸಕರು ಸಂಪುಟ ಪುನಾರಚನೆಯಾಗಲೇಬೇಕೆಂದು ಹೈಕಮಾಂಡ್ ಮುಂದೆ ಹಕ್ಕೋತ್ತಾಯ ಮಾಡಲು ದೆಹಲಿ ತೆರಳಿದ್ದು, ಇತ್ತ ಡಿಕೆ ಶಿವಕುಮಾರ್ ಹಾಗೂ ಅವರ ಬಣದ ಶಾಸಕರು ಸೈಲೆಂಟ್ ಇರುವುದು ತೀವ್ರ ಕುತೂಹಲ ಮೂಡಿಸಿದೆ. ಆದ್ರೆ, ಈ ಸಂಪುಟ ಪುನಾರಚನೆ ಒತ್ತಾಯಕ್ಕೆ ಹೈಕಮಾಂಡ್ ಸೊಪ್ಪು ಹಾಕುತ್ತಾ? ಅಥವಾ ಶಾಸಕರ ಒತ್ತಡಕ್ಕೆ ಮಣಿದ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಕೊಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us