ರಾಜ್ಯದಲ್ಲಿ ಇದೇ ಮೊದಲು, ಒಂದೇ ದಿನ ಹೆಚ್ಚು ಕೇಸ್ ದೃಢವಾಗಿರೋದು!
ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕೇಸ್ಗಳು ದೃಢಪಟ್ಟಿದ್ದು, ಸಂಜೆ ವೇಳೆಗೆ ಹೊಸದಾಗಿ 63 ಜನರಿಗೆ ಕೊರೊನಾ ಕ್ರಿಮಿ ಅಂಟಿಕೊಂಡಿದೆ. ಬಾಗಲಕೋಟೆ 15, ದಾವಣಗೆರೆ 12, ಧಾರವಾಡ 9, ಕೋಲಾರ 5, ಹಾಸನ 5, ಬೆಂಗಳೂರು 4, ಗದಗ 3, ಯಾದಗಿರಿ, ದಕ್ಷಿಣ ಕನ್ನಡ, ಬೀದರ್ ಜಿಲ್ಲೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ಮಂಡ್ಯ, ಬಳ್ಳಾರಿ, ಕಲಬುರಗಿ ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗ್ರೀನ್ ಜೋನ್ ಕೋಲಾರಕ್ಕೂ ಕೊರೊನಾ ಎಂಟ್ರಿ! ಇಷ್ಟು ದಿನ ಗ್ರೀನ್ […]
ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕೇಸ್ಗಳು ದೃಢಪಟ್ಟಿದ್ದು, ಸಂಜೆ ವೇಳೆಗೆ ಹೊಸದಾಗಿ 63 ಜನರಿಗೆ ಕೊರೊನಾ ಕ್ರಿಮಿ ಅಂಟಿಕೊಂಡಿದೆ. ಬಾಗಲಕೋಟೆ 15, ದಾವಣಗೆರೆ 12, ಧಾರವಾಡ 9, ಕೋಲಾರ 5, ಹಾಸನ 5, ಬೆಂಗಳೂರು 4, ಗದಗ 3, ಯಾದಗಿರಿ, ದಕ್ಷಿಣ ಕನ್ನಡ, ಬೀದರ್ ಜಿಲ್ಲೆಯಲ್ಲಿ ತಲಾ 2, ಚಿಕ್ಕಬಳ್ಳಾಪುರ, ಮಂಡ್ಯ, ಬಳ್ಳಾರಿ, ಕಲಬುರಗಿ ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಗ್ರೀನ್ ಜೋನ್ ಕೋಲಾರಕ್ಕೂ ಕೊರೊನಾ ಎಂಟ್ರಿ! ಇಷ್ಟು ದಿನ ಗ್ರೀನ್ ಜೋನ್ನಲ್ಲಿದ್ದ ಕೋಲಾರಕ್ಕೂ ಕಿಲ್ಲರ್ ಕೊರೊನಾ ಎಂಟ್ರಿ ಕೊಟ್ಟಿದೆ. ಒಡಿಶಾಗೆ ಹೋಗಿ ಬಂದಿದ್ದ 27 ವರ್ಷದ ಚಾಲಕ, 21 ವರ್ಷದ ಕ್ಲೀನರ್, ಚೆನ್ನೈ ಮಾರ್ಕೆಟ್ಗೆ ಹೋಗಿ ಬಂದಿದ್ದ 27 ವರ್ಷದ ಚಾಲಕ ಹಾಗೂ 70 ವರ್ಷದ ವೃದ್ಧೆ, 22 ವರ್ಷದ ವಿದ್ಯಾರ್ಥಿನಿಗೆ ಸೋಂಕು ತಗುಲಿದೆ. ಜಿಲ್ಲಾಡಳಿತ ಹೈಅಲರ್ಟ್ ಆಗಿದೆ.
Published On - 5:30 pm, Tue, 12 May 20