ಸೂರಿಲ್ಲದೇ ಬಿದ್ದು ಹೋಗಿರೋ ಮನೆಯಲ್ಲಿ ವಿಶೇಷ ಚೇತನ ಕುಟುಂಬ ವಾಸ; ಮಗ್ಗಲು ಮುಳ್ಳಾದ ಪಂಚಾಯಿತಿ
ಸಿಂಧುತ್ವ ಪತ್ರ ಸಿಗದ್ದಕ್ಕಾಗಿ ನಿನ್ನೆ ಓರ್ವ ಬಸ್ ಡ್ರೈವರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕುಮಾರ್ ಸಿಂಚೊಳ್ಳಿ ಗ್ರಾಮದ ಓಂಕಾರ ಮೃತ ವ್ಯಕ್ತಿ. ನಿನ್ನೆ ತಮ್ಮ ಹೊಲದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಾಯಚೂರು: ವಿಶೇಷ ಚೇತನನ ಕುಟುಂಬಕ್ಕೆ ಪಂಚಾಯಿತಿ (Panchayat) ಮಗ್ಗಲು ಮುಳ್ಳಾಗಿದೆ. ಸೂರಿಲ್ಲದೇ ಬಿದ್ದು ಹೋಗಿರೋ ಮನೆಯಲ್ಲೇ ವಾಸವಾಗಿದ್ದು, ಜೀವ ಕೈಯಲ್ಲಿ ಹಿಡಿದು ವಿಶೇಷ ಚೇತನ ಹಾಗೂ ಆತನ ತಾಯಿ ಬದುಕುತ್ತಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡದೇ ಪಂಚಾಯಿತಿ ಮೊಂಡಾಟವಾಡುತ್ತಿದೆ. ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಘಟನೆ ನಡೆದಿದೆ. ಧನಂಜಯ ರೆಡ್ಡಿ ಅನ್ನೊ ವಿಶೇಷ ಚೇತನನ ನೆರವಿಗೆ ಪಂಚಾಯಿತಿ ಬಂದಿಲ್ಲ. ಯಾಪಲದಿನ್ನಿ ಪಂಚಾಯಿತಿಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಧನಂಜಯ ಹೆಸರಿಗೆ ಮಂಜೂರಾಗಿರೊ ಮನೆ ಬೇರೆಯವರ ಪಾಲಾಗಿದೆ. ಹಣ ಪಡೆದು ಬೇರೆಯವರಿಗೆ ಮನೆ ಮಂಜೂರು ಮಾಡಿರೊ ಆರೋಪ ಮಾಡಲಾಗಿದ್ದು, 80 ವರ್ಷದ ಹಳೆ ಮನೆಯಲ್ಲಿರೊ ಧನಂಜಯ ರೆಡ್ಡಿ ಹಾಗೂ ಆತನ ತಾಯಿ ಗೌರಮ್ಮ ವಾಸವಾಗಿದ್ದಾರೆ. ಮೂರು ವರ್ಷದ ಹಿಂದೆ ಮಳೆಗೆ ಬಿದ್ದು ಹೋಗಿರೊ ಮನೆ, ಇಡೀ ಮನೆ ಸೋರುತ್ತಿದ್ದರೂ ಪಂಚಾಯಿತಿಯಿಂದ ಒಂದು ಮನೆ ಸ್ಯಾಂಕ್ಷನ್ ಇಲ್ಲ.
ಪರಿಶೀಲನೆ ಬಳಿಕ ಮನೆ ಸ್ಯಾಂಕ್ಷನ್ ಮಾಡೋದಾಗಿ ಪಿಡಿಓ ಪಂ. ಸದಸ್ಯರು ಹೇಳಿದ್ದಾರೆ. ಕಳೆದ ವರ್ಷ ಮನೆ ಸ್ಯಾಂಕ್ಷನ್ ಆದರೂ ಬೇರೆಯವರಿಗೆ ನೀಡಿಲಾಗಿತ್ತು. ಇದೇ ರೀತಿ ಮೂರು ವರ್ಷಗಳಿಂದ ವಿಶೇಷ ಚೇತನನ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ. ಬಿದ್ದು ಹೋಗಿರೊ ಮನೆಯ ಜಿಪಿಎಸ್ ಮಾಡಿಯೂ ಮನೆ ಮಂಜೂರು ಮಾಡದ ಆರೋಪ ಮಾಡಲಾಗಿದೆ. ಬಿದ್ದು ಹೋಗಿರೊ ಮನೆಯಲ್ಲೇ ವೃದ್ಧ ತಾಯಿ ಜೊತೆ ಮಗನ ವಾಸ ಮಾಡುತ್ತಿದ್ದಾರೆ. ಪ್ರತಿ ಬಾರೀ ಲಿಸ್ಟ್ ನಲ್ಲಿ ಹೆಸರಿದ್ದರೂ,ಕೊನೆಗೆ ಬೇರೆಯವರ ಹೆಸರಿಗೆ ಮನೆ ಮಂಜೂರು ಮಾಡಲಾಗುತ್ತಿದೆ. ಈ ಬಾರೀ ಮಳೆಯಲ್ಲಿ ಇಡೀ ಮನೆ ಬಿದ್ದು ಹೋಗೊ ಭಯ ಉಂಟಾಗಿದ್ದು, ಧನಂಜಯ ರೆಡ್ಡಿ ಮನೆಯ ಪರಿಸ್ಥಿತಿ ಗೊತ್ತಿದ್ದರೂ ಯಾಪಲದಿನ್ನಿ ಪಂಚಾಯಿತಿಯಿಂದ ಮಹಾನ್ ಮೋಸ ಮಾಡುತ್ತಿದೆ. ಮೂರು ವರ್ಷಗಳಿಂದ ಪಂಚಾಯತಿಗೆ ಅಲೆದು ಅಲೆದು ವಿಶೇಷ ಚೇತನ ಧನಂಜಯ ಕಣ್ಣೀರು ಹಾಕಿದರು ಯಾವುದೇ ಉಪಯೋಗವಾಗಿಲ್ಲ.
ಬೀದರ್: ಸಿಂಧುತ್ವ ಪತ್ರ ಸಿಗದ್ದಕ್ಕಾಗಿ ನಿನ್ನೆ ಓರ್ವ ಬಸ್ ಡ್ರೈವರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕುಮಾರ್ ಸಿಂಚೊಳ್ಳಿ ಗ್ರಾಮದ ಓಂಕಾರ ಮೃತ ವ್ಯಕ್ತಿ. ನಿನ್ನೆ ತಮ್ಮ ಹೊಲದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನಷ್ಟು ಜನ ಬಲಿಯಾಗುವ ಮುನ್ನ ಸರಕಾರ ಆದೇಶ ಹಿಂಪಡೆಯುವಂತೆ ಮನವಿ ಮಾಡಲಾಗುತ್ತಿದೆ. ಸರ್ಕಾರಿ ಹುದ್ದೆಗೆ ಆಯ್ಕೆಯಾದರು ಸಿಂಧುತ್ವ ಪ್ರಮಾಣ ಪತ್ರ ಸಿಗದೆ ಪರದಾಡುವಂತಾಗಿದೆ. ಬೀದರ್ ಜಿಲ್ಲೆಯ ನೂರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ ಆತಂಕ ಎದುರಾಗಿದೆ. ಪೊಲೀಸ್ FDA PSI ಲೋಕೋಪಯೋಗಿ ಇಲಾಖೆಗೆ ಆಯ್ಕೆಯಾದವರು ಅತಂತ್ರವಾಗಿದೆ. ಸಿಂಧುತ್ವ (ST) ಪ್ರಮಾಣ ಪತ್ರಕ್ಕಾಗಿ ಟೊಕರಿ ಕೊಳಿ ಕುರುಬ ಸಮುದಾಯ ಅಭ್ಯರ್ಥಿಗಳು ಕಾಯುತ್ತಿದ್ದಾರೆ. ನೇಮಕಾತಿ ಇಲಾಕೆಗೆ ಸಿಂಧುತ್ವ ಪತ್ರ ಕೊಡದೆ ಹೋದರೆ ಸರಕಾರಿ ಕನಸು ಕಮರುವ ಆತಂಕ ಉಂಟಾಗಿದೆ. 2021 ಜನೆವರಿ 16 ರಂದು ಸರಕಾರ ಹೊರಡಿಸಿರುವ ಆದೇಶದಿಂದ ಇಕ್ಕಟ್ಟಿಗೆ ಅಭ್ಯರ್ಥಿಗಳು ಸಿಲುಕಿದ್ದಾರೆ. ಕೆಲ ಸಮುದಾಯದ ಗುರಿಯಾಗಿಸಿಕೊಂಡು ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ:
Published On - 1:33 pm, Mon, 14 March 22