ಹಬ್ಬಗಳು ಬಂದ್ರೆ ದೇವಸ್ಥಾನಗಳಿಗೆ ಬಿಲ್ವಪತ್ರೆ-ಹೂವು ಬರ್ತಾವೆ, ಆದ್ರೆ ನನಗೆ ಪೊಲೀಸ್ ನೋಟಿಸ್ ಬರುತ್ತೆ: ಸಿದ್ದಲಿಂಗ ಸ್ವಾಮೀಜಿ
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಿವರಾತ್ರಿ ಸೇರಿದಂತೆ ಇನ್ನಿತರ ಹಬ್ಬಗಳು ಬಂದರೆ ದೇವಸ್ಥಾನಗಳಿಗೆ ಬಿಲ್ವಪತ್ರೆ ಮತ್ತು ಹೂವು ಬರುತ್ತವೆ. ಆದರೆ ನನಗೆ ಪೊಲೀಸರಿಂದ ನೋಟಿಸ್ ಬರುತ್ತದೆ ಎಂದು ಹೇಳಿದ್ದಾರೆ. ಹಿಂದೂ ಧರ್ಮದ ಉಳಿವಿಗಾಗಿ ನಾವು ಹೋರಾಟ ಆರಂಭಿಸಿದ್ದೇವೆ. ಹಿಂದೂತ್ವದ ಗೆಲುವು ಬಿಜೆಪಿ ಹಿರಿಯ ನಾಯಕರಿಗೆ ಅರ್ಪಿಸುತ್ತೇವೆ ಎಂದಿದ್ದಾರೆ.
ಕಲಬುರಗಿ, ಮಾರ್ಚ್ 08: ಶಿವರಾತ್ರಿ ಸೇರಿದಂತೆ ಇನ್ನಿತರ ಹಬ್ಬಗಳು ಬಂದರೆ ದೇವಸ್ಥಾನಗಳಿಗೆ ಬಿಲ್ವಪತ್ರೆ ಮತ್ತು ಹೂವು ಬರುತ್ತವೆ. ಆದರೆ ನನಗೆ ಪೊಲೀಸರಿಂದ ನೋಟಿಸ್ ಬರುತ್ತದೆ ಎಂದು ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ (Andola Sri Siddalinga Swamiji) ಹೇಳಿದ್ದಾರೆ. ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ಹಿಂದೂತ್ವದ ಸೂನಾಮಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎದ್ದಿದೆ. ಹಿಂದೂ ಧರ್ಮದ ಉಳಿವಿಗಾಗಿ ನಾವು ಹೋರಾಟ ಆರಂಭಿಸಿದ್ದೇವೆ. ಹಿಂದೂತ್ವದ ಗೆಲುವು ಬಿಜೆಪಿ ಹಿರಿಯ ನಾಯಕರಿಗೆ ಅರ್ಪಿಸುತ್ತೇವೆ. 2022 ರಲ್ಲಿ ಆಳಂದದಲ್ಲಿ ದೊಡ್ಡಮಟ್ಟದ ದಂಗಲ್ ಎಬ್ಬಿಸಲಾಗಿತ್ತು. ನಮ್ಮ ಮೇಲೆ ದಾಳಿ ಮಾಡಲು ಬಾಬರನ ಮೊಮ್ಮಕ್ಕಳು ಹೊಂಚು ಹಾಕಿದ್ದರು. 100 ಜನರಿಗೆ ಪೂಜೆ ಮಾಡಲು ವಕ್ಫ್ ಬೋರ್ಡ್ ಗೆ ಅರ್ಜಿ ಸಲ್ಲಿಸಿದ್ದೆವು ಎಂದು ಹೇಳಿದ್ದಾರೆ.
ಆಳಂದ ಪಟ್ಟಣದ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿದ್ದೆವು. ಆದರೆ ನಮ್ಮ ಮನವಿಯನ್ನ ವಕ್ಫ್ ಬೋರ್ಡ್ ತಿರಿಸ್ಕರಿಸಿತ್ತು. ಆದರೆ ಕಲಬುರಗಿ ಹೈಕೋರ್ಟ್ ಪೀಠ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು. ಭಾರತ ಮಾತೆ ಜನ್ಮಕೊಟ್ಟಂತಹ ಈ ರಕ್ತ ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದ್ದಾರೆ.
ನಾನು ದೇಶದ ಭಾಷಣ ಮಾಡುತ್ತಿದ್ದೇನೆ
ಸಿದ್ದರಾಮಯ್ಯರ ಗ್ಯಾರಂಟಿಗಳನ್ನ ಬೆನ್ನತ್ತಿ ಜನ ಎಲ್ಲವನ್ನ ಕಳೆದುಕೊಳ್ಳುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ವಾದ ಮಂಡಿಸಿ ದರ್ಗಾದಲ್ಲಿ ಶ್ರೀ ರಾಘವ ಚೈತನ್ಯ ದೇವಸ್ಥಾನ ಸ್ಥಾಪಿಸುತ್ತೇವೆ. ಆ ದೇವಸ್ಥಾನವನ್ನ ಯುಪಿ ಸಿಎಂ ಯೋಗಿ ಆದಿತ್ಯಾನಾಥ್‌ರಿಂದ ಉದ್ಘಾಟಿಸಲಾಗುವುದು. ನಾನು ದ್ವೇಷದ ಭಾಷಣ ಮಾಡುವುದಿಲ್ಲ. ನಾನು ದೇಶದ ಭಾಷಣ ಮಾಡುತ್ತಿದ್ದೇನೆ.
ಇದನ್ನೂ ಓದಿ: ಯತ್ನಾಳ್ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಜ್ಯೋತಿಷ್ಯ ಹೇಳಲಿ -ಮಧು ಬಂಗಾರಪ್ಪ
ರಾಹುಲ್ ಬಾಬಾ ಪ್ರಧಾನಿಯಾಗಿದ್ದರೆ ಮೇಲೆ ರಾಮಮಂದಿರ, ಕೆಳಗೆ ಬಾಬರ್ನ ಮಂದಿರ ಮಾಡುತ್ತಿದ್ದರು. ಪಾಕಿಸ್ತಾನ್ ಜಿಂದಾಬಾದ್ ಹೇಳೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಆದರೆ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ನಿಜವಾಗಿದೆ. ಇದೀಗ ಪ್ರಿಯಾಂಕ್ ಖರ್ಗೆರ ಮುಖ ಕಪ್ಪೆ ಥರ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಸಿಕ್ತು ಅವಕಾಶ
ಪಾಕಿಸ್ತಾನ ಜಿಂದಾಬಾದ್ ಎಂದವರನ್ನ ರಕ್ಷಿಸಲು ಸರ್ಕಾರ ಮುಂದಾಗಿದೆ. ನಾನು ದೇಶಪ್ರೇಮಿ ಎಂದ ಬಡ್ಡಿಮಗನೇ ಇಂದು ದೇಶದ್ರೋಹಿ ಕೃತ್ಯ ಎಸಗಿದ್ದಾನೆ. ನಾಶಿಪುಡಿಗೆ ಖಾರದ ಪುಡಿ ಹಾಕೋ ಕೆಲಸ ಪೊಲೀಸರು ಮಾಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.