ಕಾಂಕ್ರೀಟ್ ಕಾಡು ನೋಡಿ ಬೇಸರವಾಗಿದ್ಯಾ? ಹಾಗಾದ್ರೆ ಇಲ್ಲಿದೆ ಪಕ್ಕಾ ಹಳ್ಳಿ ಜೀವನ ಸಾರುವ ಚಿತ್ರಣ
ಬಾಗಲಕೋಟೆ: ಅದು ಹಚ್ಚಹಸಿರಿನಿಂದ ಕೂಡಿದ ಗುಡ್ಡದಲ್ಲಿ ಅರಳಿ ನಿಂತಿರುವ ಸುಂದರವಾದ ಹಳ್ಳಿ. ಅಲ್ಲಿ ನೀವು ಕಳೆದುಕೊಂಡ ಹಳ್ಳಿಯ ಜೀವನಚಿತ್ರಣವಿದೆ. ನಿಮ್ಮ ಹಿರಿಯರು ಜೀವಿಸುತ್ತಿದ್ದ ಜೀವನ ಶೈಲಿಯಿದೆ. ಸದಾ ಕಾಂಕ್ರೀಟ್ ಕಾಡನ್ನೇ ನೋಡಿ ಸುಸ್ತಾದ ಕಣ್ಣುಗಳಿಗೆ ತಂಪೆರೆಯುವ ಹಳ್ಳಿ ಸೊಗಡಿನ ಮಧುರವಾದ ಹಂದರವಿದೆ. ಹಿರಿಯರ ಜೀವನ ಪದ್ಧತಿ ಚಿತ್ರಣ: ಇಂಥಾ ಸುಂದರ ಹಳ್ಳಿ ಇರೋದು ಜಮಖಂಡಿ ನಗರದ ಪಕ್ಕ ಇರುವ ಸುಂದರ ಅರಣ್ಯ ಪ್ರದೇಶದಲ್ಲಿ. ನಗರೀಕರಣ ಹೆಚ್ಚಾದಂತೆ ಹಳ್ಳಿ ಜೀವನ ಮಾಯವಾಗುತ್ತಿರುವ ಈ ಕಾಲದಲ್ಲಿ ನಮ್ಮ ಹಿರಿಯರ ಜೀವನ […]
ಬಾಗಲಕೋಟೆ: ಅದು ಹಚ್ಚಹಸಿರಿನಿಂದ ಕೂಡಿದ ಗುಡ್ಡದಲ್ಲಿ ಅರಳಿ ನಿಂತಿರುವ ಸುಂದರವಾದ ಹಳ್ಳಿ. ಅಲ್ಲಿ ನೀವು ಕಳೆದುಕೊಂಡ ಹಳ್ಳಿಯ ಜೀವನಚಿತ್ರಣವಿದೆ. ನಿಮ್ಮ ಹಿರಿಯರು ಜೀವಿಸುತ್ತಿದ್ದ ಜೀವನ ಶೈಲಿಯಿದೆ. ಸದಾ ಕಾಂಕ್ರೀಟ್ ಕಾಡನ್ನೇ ನೋಡಿ ಸುಸ್ತಾದ ಕಣ್ಣುಗಳಿಗೆ ತಂಪೆರೆಯುವ ಹಳ್ಳಿ ಸೊಗಡಿನ ಮಧುರವಾದ ಹಂದರವಿದೆ.
ಹಿರಿಯರ ಜೀವನ ಪದ್ಧತಿ ಚಿತ್ರಣ: ಇಂಥಾ ಸುಂದರ ಹಳ್ಳಿ ಇರೋದು ಜಮಖಂಡಿ ನಗರದ ಪಕ್ಕ ಇರುವ ಸುಂದರ ಅರಣ್ಯ ಪ್ರದೇಶದಲ್ಲಿ. ನಗರೀಕರಣ ಹೆಚ್ಚಾದಂತೆ ಹಳ್ಳಿ ಜೀವನ ಮಾಯವಾಗುತ್ತಿರುವ ಈ ಕಾಲದಲ್ಲಿ ನಮ್ಮ ಹಿರಿಯರ ಜೀವನ ಪದ್ಧತಿ ಚಿತ್ರಣ ನೆಲೆ ನಿಂತಿದೆ. ಪಕ್ಕಾ ಹಳ್ಳಿ ಜೀವನ ಚಿತ್ರಣ ಸಾರುವ ಹತ್ತು ಹಲವಾರು ಮೂರ್ತಿಗಳು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
2 ಎಕರೆ ಜಾಗದಲ್ಲಿ ಸುಂದರ ಹಳ್ಳಿ: ಈ ಗುಡ್ಡದಲ್ಲಿ ಅರಳಿ ನಿಂತಿರುವ ಹಳ್ಳಿಯಲ್ಲಿ ನಮ್ಮ ಗ್ರಾಮೀಣ ಜೀವನದ ಸಂಪೂರ್ಣ ಸೆಲೆಯಿದೆ. ನಮ್ಮ ಪೂರ್ವಜರು ಪ್ರೀತಿಯಿಂದ ಕಾಪಾಡಿಕೊಂಡು ಬರುತ್ತಿದ್ದ ಸಾಂಪ್ರದಾಯಿಕ ಕಲೆಯಿದೆ. ಹಚ್ಚಹಸಿರಿನ ಗುಡ್ಡದಲ್ಲಿ ಹಳ್ಳಿ ಜನರ ದೇಶಿ ಶೈಲಿಯ ಮನೆಗಳು. ಹಳ್ಳಿಗಾಡಿನ ಜನ ನಿತ್ಯ ಮಾಡುವ ಕೆಲಸ ಕಾರ್ಯಗಳು, ದೇಸಿ ಆಟ, ಕುಂಬಾರಿಕೆ, ಬಡಿಗೆ, ಕೃಷಿ ಕೆಲಸಗಳು, ಮಕ್ಕಳಿಗೆ ಪಾಠ, ಆಟ ಹೀಗೆ ಒಂದು ಸುಂದರ ಹಳ್ಳಿಯ ಜೀವನದ ಚಿತ್ರಣ ಅರಳಿ ನಿಂತಿದೆ. ಎಲ್ಲವೂ ಜೀವಂತ ಚಿತ್ರಣಗಳಂತೆ ಕಾಣುತ್ತವೆ. ಅರಣ್ಯ ಇಲಾಖೆ 40 ಲಕ್ಷ ವೆಚ್ಚದಲ್ಲಿ ಈ ಹಳ್ಳಿಯನ್ನು ನಿರ್ಮಾಣ ಮಾಡ್ತಿದ್ದು, ಎರಡು ಎಕರೆ ಜಾಗದಲ್ಲಿ ಸುಂದರ ಹಳ್ಳಿ ನೆಲೆ ನಿಂತಿದೆ.
ಒಟ್ಟಾರೆ ಆಧುನಿಕ ಭರಾಟೆಗೆ ಸಿಲುಕಿ ಕಳೆದು ಹೋಗ್ತಿರುವ ನಮ್ಮ ಹಳ್ಳಿ ಜೀವನ, ಗುಡ್ಡದಲ್ಲಿ ಸೊಂಪಾಗಿ ಬೆಳೆದು ನಿಲ್ಲುತ್ತಿದೆ. ದಿನ ಕಾಂಕ್ರೀಟ್ ಕಾಡನ್ನ ನೋಡುವ ನಾವು ಇದನ್ನ ನೋಡ್ತಿದ್ರೆ, ಹಳ್ಳಿ ಜೀವನ ಎಷ್ಟೋಂದು ಸುಂದರ ಅನ್ಸುತ್ತೆ ಅಲ್ವಾ. ಕಣ್ಣಿಗೆ ಕಟ್ಟಿದ ಹಾಗೇ ಇವುಗಳನ್ನ ನಿರ್ಮಾಣ ಮಾಡಿದ ಕಲೆಗಾರರಿಗೆ ನಮ್ಮ ಸಲಾಂ.