AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದಯಾತ್ರೆ ಮಾಡಲು ಕಣ್ಣಿಲ್ಲದಿದ್ದರೇನು ಕಾಲಿದೆಯಲ್ಲ: ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಹೊರಟ ವಿಶೇಷಚೇತನರು

ವಿಶೇಷವಾಗಿ ಕಣ್ಣು ಕಾಣದೇ ಇರುವವರಿಗೆ ಸರ್ಕಾರದಿಂದ ಬರಬೇಕಾದ ಯಾವ ಸವಲತ್ತುಗಳು ಬರುತ್ತಿಲ್ಲ. ಜೊತೆಗೆ ಸಾರಿಗೆ ನೌಕರರ, ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಹೋಂಗಾರ್ಡ್ ನೌಕರರ ಖಾಯಂ ಮಾಡಬೇಕೆನ್ನುವುದು ಸೇರಿದಂತೆ ಧ್ವನಿ ಇಲ್ಲದ 9 ವರ್ಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಕಣ್ಣು ಕಾಣದ ವಿಶೇಷಚೇತನರು ಹೊಸಪೇಟೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಿದ್ದಾರೆ.

ಪಾದಯಾತ್ರೆ ಮಾಡಲು ಕಣ್ಣಿಲ್ಲದಿದ್ದರೇನು ಕಾಲಿದೆಯಲ್ಲ: ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ಹೊರಟ ವಿಶೇಷಚೇತನರು
ಅಂಧರ ಪಾದಯಾತ್ರೆ
TV9 Web
| Edited By: |

Updated on: Oct 16, 2023 | 10:46 PM

Share

ಬಳ್ಳಾರಿ, ಅಕ್ಟೋಬರ್​​​ 16: ಸಾಮಾನ್ಯವಾಗಿ ತಮಗೆ ಇರುವ ಸಮಸ್ಯೆ ಬಗ್ಗೆ ಹೋರಾಟ ಮಾಡುವುದನ್ನು, ಪ್ರತಿಭಟನೆ ಮಾಡುವುದನ್ನು ಅಥವಾ ಬೇಡಿಕೆ ಈಡೇರಿಕೆಗೆ ಪಾದಯಾತ್ರೆ ಮಾಡುವರರನ್ನು ನೀವು ನೋಡಿರುತ್ತೀರಾ. ಆದರೆ ಕಣ್ಣು ಕಾಣದ ವಿಶೇಷಚೇತನರು (Differently-abled people) ಅವರ ಸಮಸ್ಯೆ ಜೊತೆಗೆ ಸಾರಿಗೆ ನೌಕರರ, ಅಂಗನವಾಡಿ, ಹೋಮ್ ಗಾರ್ಡ್, ಆಶಾ ಕಾರ್ಯಕರ್ತೆರ ಸಮಸ್ಯೆಗಳ ಈಡೇರಿಕೆಗೆ ಹೊಸಪೇಟೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದಾರೆ.

ಹೊಸಪೇಟೆಯ ಪುನೀತ್ ರಾಜಕುಮಾರ್​ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರ ಸ್ಪೂರ್ತಿಯಿಂದ ಕಣ್ಣು ಕಾಣದ ವಿಶೇಷಚೇತನರು ಪಾದಯಾತ್ರೆ ಆರಂಭಿಸಿದ್ದಾರೆ. ತಮಗಿರುವ ನ್ಯೂನತೆಯನ್ನು ಬದಿಗೊತ್ತಿ ಇದೀಗ ಹೋರಾಟದ ದಾರಿಯಲ್ಲಿದ್ದಾರೆ. ಅಂಗವಿಕಲರಿಗೆ ಅದರಲ್ಲೂ ವಿಶೇಷವಾಗಿ ಕಣ್ಣು ಕಾಣದೇ ಇರೋರಿಗೆ ಸರ್ಕಾರದಿಂದ ಬರಬೇಕಾದ ಯಾವ ಸವಲತ್ತುಗಳು ಬರುತ್ತಿಲ್ಲ.

ಕಚೇರಿಯಿಂದ ಕಚೇರಿ ಅಲೆದ ಇವರೆಲ್ಲರೂ ಇದೀಗ ಹೊಸಪೇಟೆಯಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಕೇವಲ ತಮ್ಮ ಸಮಸ್ಯೆ ಅಷ್ಟೇ ಅಲ್ಲದೇ ಸಾರಿಗೆ ನೌಕರರ, ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಹೋಂಗಾರ್ಡ್ ನೌಕರರ ಖಾಯಂ ಮಾಡಬೇಕೆನ್ನುವುದು ಸೇರಿದಂತೆ ಧ್ವನಿ ಇಲ್ಲದ 9 ವರ್ಗದ ಜನರ ಸಮಸ್ಯೆ ಪರಿಹಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಡತನ ಮೆಟ್ಟಿ ನಿಂತು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ತಂದ ಯುವತಿ; ಹಠ ಬಿಡದ ಗಟ್ಟಿಗಿತ್ತಿಯ ಸಾಧನೆಯ ಕತೆ ಇಲ್ಲಿದೆ

ಅಂಗವಿಕಲರ ಈ ಹೋರಾಟಕ್ಕೆ ಇತರೆ ಸಂಘ ಸಂಸ್ಥೆಗಳು ಬೆಂಬಲ ನೀಡುವ ಮೂಲಕ ಸುದೀರ್ಘ ಪಾದಯಾತ್ರೆಯಲ್ಲಿ ಅಲ್ಲಲ್ಲಿ ಜೊತೆಗೂಡಲಿದ್ದಾರೆ. ಸಾಮಾನ್ಯವಾಗಿ ಅಂಗವಿಕಲರ ಹೋರಾಟವೆಂದ್ರೇ, ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆಯೋ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಮಾಡೋದು ವಾಡಿಕೆ. ಅದರಲ್ಲೂ ಅಂಗವಿಕಲರ ಶಕ್ತಿಯಲ್ಲದವರು ಇವರ ಹೋರಾಟವಿಷ್ಟೇ ಇರುತ್ತದೆ ಎಂದು ಹಂಗಿಸುವವರಿಗೆ ತಿರುಗೇಟು ನೀಡುವ ಮೂಲಕ ಬೆಂಗಳೂರುವರೆಗೂ ಪಾದಯಾತ್ರೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಾಲಶ್ರೀ ಮಠದಲ್ಲಿ 56 ಲಕ್ಷ ರೂ. ಹಣ ಇಟ್ಟು ಹೋದ ಅನಾಮಿಕ ವ್ಯಕ್ತಿ

ಒಂದುವರೆ ತಿಂಗಳ ಕಾಲ ನಡೆಯೋ ಈ ಪಾದಯಾತ್ರೆ ಪೂರ್ಣಗೊಳಿಸೋದು ಅಷ್ಟು ಸುಲಭದ ಮಾತಲ್ಲ. ಕಣ್ಣಿದ್ದವರೇ ಎಡವೋ ಈ ಕಾಲದಲ್ಲಿ ಸರಿ ಸುಮಾರು ಮೂನ್ನೂರ ಐವತ್ತು ಕಿ.ಲೋ ಮೀಟರ್ವರೆಗೂ ಕಣ್ಣಿಲ್ಲದೇ ಸಾಗುವ ಈ ಪಾದಯಾತ್ರೆ ನಿಜಕ್ಕೂ ಸಾಧನೆ ಮಾಡಿದಂತೆಯೇ ಎನ್ನುಬಹುದು.

ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿದ್ರೂ ಅದು ಸರಿಯಿಲ್ಲ. ಇದು ಸರಿಯಿಲ್ಲ ಎನ್ನುವ ಮೂಲಕ ವ್ಯವಸ್ಥೆಯ ಬಗ್ಗೆ ಮಾತನಾಡಿ ಕೈಕಟ್ಟಿ ಕುಳಿತುಕೊಳ್ಳುವ ಅದೆಷ್ಟೋ ಜನರ ಮಧ್ಯೆ, ಈ ಅಂಗವಿಕಲರ ಹೋರಾಟ ಮತ್ತು ಪಾದಯಾತ್ರೆ ಮಾದರಿ ಮತ್ತು ಸ್ಪೂರ್ತಿಯಾಗಿದೆ. ಸರ್ಕಾರ ಇವರ ಬೇಡಿಕೆಗೆ ಸರ್ಕಾರ ಎಷ್ಟರಮಟ್ಟಿಗೆ ಸ್ಪಂದನೆ ನೀಡುತ್ತದೆ, ಇಲ್ವೋ ಗೊತ್ತಿಲ್ಲ. ಆದರೆ ಇವರ ಪಾದಯಾತ್ರೆ ಮಾತ್ರ ಇತಿಹಾಸ ಪುಟ ಸೇರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.