AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿ , ಸಚಿವ ಸಂತೋಷ್ ಲಾಡ್ ಘೋಷಣೆ!

ಬಳ್ಳಾರಿಯಲ್ಲಿ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಆಹಾರ, ವಸತಿ ಸೇರಿದಂತೆ ಮೂಲಭೂತ ಅಗತ್ಯತೆ ಆಧಾರವಾಗಿ ವೇತನ ನಿಗದಿ ಮಾಡುವ ಯೋಜನೆ ಜಾರಿಗೆ ಚಿಂತನೆಯಿದ್ದು, ಅಸಂಘಟಿತ ಕಾರ್ಮಿಕರ ಕಲ್ಯಾಣ, ಗಿಗ್ ವರ್ಕರ್ಸ್ ರಕ್ಷಣೆ, ಸ್ಮಾರ್ಟ್ ಕಾರ್ಡ್ ವಿತರಣೆ ಸೇರಿದಂತೆ ಹೊಸ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಕಾರ್ಮಿಕರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿ , ಸಚಿವ ಸಂತೋಷ್ ಲಾಡ್ ಘೋಷಣೆ!
ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿImage Credit source: MediaForge AI
ಭಾವನಾ ಹೆಗಡೆ
|

Updated on: Apr 27, 2026 | 1:06 PM

Share

ಬಳ್ಳಾರಿ, ಏಪ್ರಿಲ್ 27: ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ರಾಜ್ಯದ ಕಾರ್ಮಿಕರಿಗೆ ಹೊಸ ಕನಿಷ್ಠ ವೇತನವನ್ನು (Minimum wage) ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ತಿಳಿಸಿದ್ದಾರೆ. ಆಹಾರ, ಬಟ್ಟೆ ಮತ್ತು ವಸತಿ ಅಗತ್ಯತೆಗಳನ್ನು ಪರಿಗಣಿಸಿ ಈ ವೇತನವನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.

ಅಸಂಘಟಿತ ವಲಯದ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಬದ್ಧ

ಸಂಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಪ್ರಸ್ತುತ ಮಾಸಿಕ ಕನಿಷ್ಠ ವೇತನ ಸರಾಸರಿ 19,000 ರೂಪಾಯಿಗಳಷ್ಟಿದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಬದ್ಧವಾಗಿದ್ದು, ‘ಅಂಬೇಡ್ಕರ್ ಸಹಾಯ ಹಸ್ತ’ ಎಂಬಂತೆಯೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಗಿಗ್ ವರ್ಕರ್ಸ್ (ಡೆಲಿವರಿ ಸಿಬ್ಬಂದಿ) ಹಿತರಕ್ಷಣೆಗಾಗಿ ಮಸೂದೆ ಮಂಡಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಇದನ್ನೂ ಓದಿ 8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು – ಇಲ್ಲಿದೆ ಸಂಪೂರ್ಣ ವಿವರ

ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಣೆ

ಇದೇ ವೇಳೆ ಚಾಲಕರು ಮತ್ತು ಕ್ಲೀನರ್‌ಗಳ ಕಲ್ಯಾಣಕ್ಕಾಗಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಹಾಗೂ ಚಲನಚಿತ್ರ ಮತ್ತು ಮನೆಗೆಲಸದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೊಸ ಶಾಸನಗಳನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಡೂರು ಶಾಸಕಿ ಇ. ಅನ್ನಪೂರ್ಣ ಅವರು ತಾಲೂಕಿನ 175 ಶಾಲೆಗಳ ಪೈಕಿ 65 ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು. ಸಂಸದ ಇ. ತುಕಾರಾಂ ಮಾತನಾಡಿ, ‘ಕ್ಲಿನಿಕ್ ಆನ್ ವೀಲ್ಸ್’ ಯೋಜನೆಯಡಿ 13 ಮೊಬೈಲ್ ಘಟಕಗಳ ಮೂಲಕ 8.3 ಲಕ್ಷ ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us