ಹಾಲು ಮಾರುತಿದ್ದವನಿಗೆ ಕೊರೊನಾ, ಜಿಂದಾಲ್ ನಂಟಿನಿಂದ ವಕ್ಕರಿಸಿತು ವೈರಸ್!

ಬಳ್ಳಾರಿ: ಜ್ಯುಬಿಲೆಂಟ್ ನಂಜಿನ ನಂತರ ರಾಜ್ಯಕ್ಕೆ ಪ್ರಮುಖ ತಲೆನೋವಾಗಿರೋದು ಬಳ್ಳಾರಿಯ ಜಿಂದಾಲ್ ಕಂಪನಿಯ ನೌಕರರಲ್ಲಿ ದಿನೇದಿನೆ ಪತ್ತೆಯಾಗುತ್ತಿರುವ ಕೊರೊನಾ ಕೇಸ್​ಗಳು. ಈವರೆಗೆ 97 ಉದ್ಯೋಗಿಗಳಿಗೆ ಸೋಂಕು ತಗುಲಿದ್ದು ಮುಂಬರುವ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಕಂಪನಿಯಲ್ಲಿ ಸರಿಸುಮಾರು 10 ಸಾವಿರ ನೌಕರರಿದ್ದು ಅವರಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಸೋಂಕು ಹರಡುವ ಸಾಧ್ಯತೆಯ ಬಗ್ಗೆ ಎಲ್ಲರ ಮನಸ್ಸಲ್ಲೂ ಸಂಶಯವಿತ್ತು. ಜಿಂದಾಲ್ ನೌಕರನಿಂದ ಹಾಲು ಮಾರುತ್ತಿದ್ದವನಿಗೆ ಸೋಂಕು! ಇದೀಗ ಈ ಗುಮಾನಿ ನಿಜವಾದಂತೆ ಕಾಣುತ್ತಿದೆ. ಇಷ್ಟು ದಿನ ಜಿಂದಾಲ್ ಉದ್ಯೋಗಿಗಳಲ್ಲಿ […]

ಹಾಲು ಮಾರುತಿದ್ದವನಿಗೆ ಕೊರೊನಾ, ಜಿಂದಾಲ್ ನಂಟಿನಿಂದ ವಕ್ಕರಿಸಿತು ವೈರಸ್!
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 13, 2020 | 3:57 PM

ಬಳ್ಳಾರಿ: ಜ್ಯುಬಿಲೆಂಟ್ ನಂಜಿನ ನಂತರ ರಾಜ್ಯಕ್ಕೆ ಪ್ರಮುಖ ತಲೆನೋವಾಗಿರೋದು ಬಳ್ಳಾರಿಯ ಜಿಂದಾಲ್ ಕಂಪನಿಯ ನೌಕರರಲ್ಲಿ ದಿನೇದಿನೆ ಪತ್ತೆಯಾಗುತ್ತಿರುವ ಕೊರೊನಾ ಕೇಸ್​ಗಳು. ಈವರೆಗೆ 97 ಉದ್ಯೋಗಿಗಳಿಗೆ ಸೋಂಕು ತಗುಲಿದ್ದು ಮುಂಬರುವ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಕಂಪನಿಯಲ್ಲಿ ಸರಿಸುಮಾರು 10 ಸಾವಿರ ನೌಕರರಿದ್ದು ಅವರಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಸೋಂಕು ಹರಡುವ ಸಾಧ್ಯತೆಯ ಬಗ್ಗೆ ಎಲ್ಲರ ಮನಸ್ಸಲ್ಲೂ ಸಂಶಯವಿತ್ತು.

ಜಿಂದಾಲ್ ನೌಕರನಿಂದ ಹಾಲು ಮಾರುತ್ತಿದ್ದವನಿಗೆ ಸೋಂಕು! ಇದೀಗ ಈ ಗುಮಾನಿ ನಿಜವಾದಂತೆ ಕಾಣುತ್ತಿದೆ. ಇಷ್ಟು ದಿನ ಜಿಂದಾಲ್ ಉದ್ಯೋಗಿಗಳಲ್ಲಿ ನಿಧಾನವಾಗಿ ವ್ಯಾಪಿಸುತ್ತಿದ್ದ ಸೋಂಕು ಈಗ ಕಂಪನಿಯ ಹೊರಗೂ ಕಾಲಿಟ್ಟಿದೆ. ಹೌದು, ಜಿಂದಾಲ್ ಕಂಪನಿಯ ವಿದ್ಯಾನಗರದಲ್ಲಿ ಹಾಲು ಮಾರುತ್ತಿದ್ದ ವ್ಯಕ್ತಿಯೊಬ್ಬರಿಗೂ ಈಗ ಸೋಂಕು ತಗುಲಿದೆ. ಇವರಿಗೆ ಸೋಂಕಿತ ಜಿಂದಾಲ್ ಉದ್ಯೋಗಿ ಓರ್ವರಿಂದ ತಗುಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳುತ್ತಿದ್ದಾರೆ.

 100ಕ್ಕೂ ಹೆಚ್ಚು ಮನೆಗಳಿಗೆ ಹಾಲು ಸರಬರಾಜು ಮಾಡ್ತಿದ್ರಂತೆ! ಬಳ್ಳಾರಿ ಜಿಲ್ಲೆಯ ತಿಮ್ಮಲಾಪುರ ಗ್ರಾಮಕ್ಕೆ ಸೇರಿರುವ ಇವರು ವಿದ್ಯಾನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಹಾಲು ಸರಬರಾಜು ಮಾಡ್ತಿದ್ರಂತೆ. ಹಾಗಾಗಿ ಈಗ ವಿದ್ಯಾನಗರದ ನಿವಾಸಿಗಳಿಗೆ ಸೋಂಕು ತಗಲುವ ಭೀತಿ ಶುರುವಾಗಿದೆ.

Published On - 1:21 pm, Sat, 13 June 20