AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: 1 ಲಕ್ಷಕ್ಕೆ ಮಾಸಿಕ ಶೇ.3 ಬಡ್ಡಿ ಆಸೆ ತೋರಿಸಿ ಮಕ್ಮಲ್​​ ಟೋಪಿ

ಬೆಳಗಾವಿಯ ನಿಪ್ಪಾಣಿಯಲ್ಲಿ ಮಾಸಿಕ ಶೇ.3 ಬಡ್ಡಿ ಆಮಿಷವೊಡ್ಡಿ ತಾಯಿ-ಮಗ ಸೇರಿ 133 ಕೋಟಿ ರೂ. ವಂಚಿಸಿರುವ ಬಹುಕೋಟಿ ಹಗರಣ ಬಯಲಾಗಿದೆ. ಒಟ್ಟು 12 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮೊಕದ್ದಮೆ ದಾಖಲಾಗುತ್ತಿದ್ದಂತೆ ಬಹುಕೋಟಿ ವಂಚಕರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಬೆಳಗಾವಿ SP ರಾಮರಾಜನ್ ವಿಶೇಷ ತಂಡ ರಚಿಸಿದ್ದು, ಖದೀಮರಿಗಾಗಿ ಹುಡುಕಾಟ ಮುಂದುವರಿದಿದೆ.

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: 1 ಲಕ್ಷಕ್ಕೆ ಮಾಸಿಕ ಶೇ.3 ಬಡ್ಡಿ ಆಸೆ ತೋರಿಸಿ ಮಕ್ಮಲ್​​ ಟೋಪಿ
ಆರೋಪಿಗಳಾದ ನಂದಾ ಪಾಟೀಲ್, ಪ್ರಸಾದ್ ಪಾಟೀಲ್‌
ಸಹದೇವ್​ ಮಾನೆ
| Edited By: |

Updated on:Nov 26, 2026 | 11:25 AM

Share

ಬೆಳಗಾವಿ, ನವೆಂಬರ್​​ 26: ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾವಿರಾರು ಜನರಿಗೆ ತಾಯಿ-ಮಗ ವಂಚನೆ ನಡೆಸಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಜನರು 133 ಕೋಟಿ ರೂ. ಹೂಡಿಕೆ ಮಾಡಿದ್ದರು ಎಂಬುದು ಗೊತ್ತಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕಚೇರಿಗಳನ್ನ ತೆರೆದಿದ್ದ ಆರೋಪಿಗಳು ನಂದಾ ಟ್ರೇಡರ್ಸ್, ಲೂನಾರ್ಸ್ ಎಜುಕೇಷನ್ ಆ್ಯಂಡ್ ಟ್ರೈನಿಂಗ್‌ ಮತ್ತು ಸೆಲ್ಯೂಷನ್ ಪ್ರೈವೇಟ್‌ ಲಿಮಿಟೆಡ್ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಳ್ತಿದ್ರು ಎಂಬುದು ತಿಳಿದುಬಂದಿದೆ. ನಿಪ್ಪಾಣಿಯ ನಂದಾ ಪಾಟೀಲ್, ಪುತ್ರ ಪ್ರಸಾದ್ ಪಾಟೀಲ್‌ ಪ್ರಮುಖ ಆರೋಪಿಗಳಾಗಿದ್ದಾರೆ.

ನೀಲಣ್ಣನವರ ಜತೆ ಕೆಲಸ ಮಾಡಿದ್ದ ನಂದಾ ಪಾಟೀಲ್

1 ಲಕ್ಷ ರೂಪಾಯಿ ಹೂಡಿದ್ರೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವ ಆಮಿಷವನ್ನು ಆರೋಪಿಗಳು ಹೂಡಿಕೆದಾರರಿಗೆ ಒಡ್ಡಿದ್ದರು. ಬಳಿಕ ಲಾಭಾಂಶ ಬಿಡಿ ಅಸಲು ಕೇಳಿದರೂ ಧಮ್ಕಿ ಹಾಕುತ್ತಿದ್ದರು. ಮೊದಲು ಶಿವಾನಂದ ನೀಲಣ್ಣನವರ ಜತೆ ಕೆಲಸ ಮಾಡ್ತಿದ್ದ ನಂದಾ ಪಾಟೀಲ್, ವ್ಯವಹಾರಿಕ ಮನಸ್ತಾಪ ಬಳಿಕ ನಿಪ್ಪಾಣಿಯಲ್ಲಿ ಕಚೇರಿ ಓಪನ್‌ ಮಾಡಿದ್ದರು. ಹೂಡಿಕೆ ಹಣದಲ್ಲೇ ಜಮೀನು, ಆಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಳಗಾವಿ, ಪುಣೆ, ನಾಸಿಕ್ ಹಾಗೂ ಮುಂಬೈನಲ್ಲಿ ಆಸ್ತಿ ಹೊಂದಿದ್ದಾರೆ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ’: ಬಾಲಚಂದ್ರ ಜಾರಕಿಹೊಳಿ‌

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

ಇನ್ನು ಇವರ ಬಣ್ಣದ ಮಾತುನಂಬಿ ಹೂಡಿಕೆ ಮಾಡಿದವರ ಪೈಕಿ ಮಹಾರಾಷ್ಟ್ರದ‌ ನಾಸಿಕ್ ಜಿಲ್ಲೆಯ ಜನರೇ ಅತಿ ಹೆಚ್ಚು ಎಂಬುದು ಗೊತ್ತಾಗಿದೆ. ವಂಚನೆ ಸಂಬಂಧ ನಂದಾ, ಪ್ರಸಾದ್, ಸೌರಬ್ ಮಾಳಿ ಸೇರಿ 12 ಜನರ ವಿರುದ್ಧ ನಿಪ್ಪಾಣಿಯ ಬಸವೇಶ್ವರ ಪೋಲಿಸ್ ಚೌಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೊಕದ್ದಮೆ ದಾಖಲಾಗುತ್ತಿದ್ದಂತೆ ಬಹುಕೋಟಿ ವಂಚಕರು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಬೆಳಗಾವಿ SP ರಾಮರಾಜನ್ ವಿಶೇಷ ತಂಡ ರಚಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:23 am, Thu, 26 November 26

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More