Raibag Election Results: ರಾಯಭಾಗ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಸ್ಥಾನ ಉಳಿಸಿಕೊಂಡ ಬಿಜೆಪಿಯ ದುರ್ಯೋಧನ ಮಹಾಲಿಂಗಪ್ಪ ಐಹೊಳೆ
Raibag Assembly Election Result 2023 Live Counting Updates: ಇದುವರೆಗೂ 15 ಶಾಸಕರನ್ನು ಆಯ್ಕೆ ಮಾಡಿರುವ ರಾಯಬಾಗ ಕ್ಷೇತ್ರದಲ್ಲಿ ಕಾಂಗ್ರೆಸ್ 6 ಬಾರಿ, ಜನತಾ ಪಕ್ಷ ಮತ್ತು ಬಿಜೆಪಿ ತಲಾ ಮೂರು ಬಾರಿ ಗೆದ್ದಿದೆ. ಅದೇ ವೇಳೆ ಪಕ್ಷೇತರರು, ಎಸ್‌ಸಿಎಫ್, ಜೆಡಿಯು ತಲಾ ಒಂದು ಬಾರಿ ಗೆಲುವು ಸಾಧಿಸಿವೆ.

Raibag Assembly Election Results 2023: ಒಂದು ಕಾಲದಲ್ಲಿ ರಾಯಬಾಗ (Raibag Constituency)ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, 2008ರಲ್ಲಿ ನಡೆದ ಕ್ಷೇತ್ರಮರುವಿಂಗಡಣೆಯ ರಾಯಬಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುಸಿದು, ಬಿಜೆಪಿ ಅಧಿಪತ್ಯ ಸಾಧಿಸಿತು. ಈ ಬಾರಿ ಬಿಜೆಪಿಯಿಂದ ದುರ್ಯೋಧನ ಐಹೊಳೆ ಇಲ್ಲಿ ಗೆದ್ದಿದ್ದಾರೆ. 2018ರಲ್ಲಿ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ 16,548 ಮತಗಳ ಅಂತರದಿಂದ ಇಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದ ಪ್ರದೀಪ್ ಕುಮಾರ್ ಮಳಗಿ ಎರಡನೇ ಸ್ಥಾನಗಳಿಸಿದ್ದು ಪಕ್ಷೇತರ ಅಭ್ಯರ್ಥಿಯಾಗಿದ್ದ ಮಹಾವೀರ್ ಮೋಹಿತ್ ಮೂರನೇ ಸ್ಥಾನಗಳಿಸಿದ್ದರು. ಈ ಬಾರಿ ಚುನಾವಣಾ ಕಣದಲ್ಲಿ ಜೆಡಿಎಸ್ ಪಕ್ಷದ ಪ್ರದೀಪ ಮಾಳಗಿ, ಕಾಂಗ್ರೆಸ್ ಪಕ್ಷದ ಮಹಾವೀರ್ ಮೋಹಿತ್ ಮತ್ತು ಬಿಜೆಪಿಯಿಂದ ದುರ್ಯೋಧನ ಐಹೊಳೆ ಇದ್ದಾರೆ.
ಆರಂಭದಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ರಾಯಬಾಗ, ಎರಡನೇ ವಿಧಾನಸಭಾ ಚುನಾವಣೆ ವೇಳೆಗೆ ಎಸ್‌ಸಿ ಮೀಸಲು ಕ್ಷೇತ್ರವಾಗಿತ್ತು. ಮೂರನೇ ಚುನಾವಣೆ ಹೊತ್ತಿಗೆ ಸಾಮಾನ್ಯ ಕ್ಷೇತ್ರವಾದ ಇದು, 1978ರಲ್ಲಿ ಮತ್ತೆ ಎಸ್‌ಸಿ ಮೀಸಲು ಕ್ಷೇತ್ರವೇ ಆಯಿತು.ಈಗಲೂ ರಾಯಬಾಗ ಮೀಸಲು ವಿಧಾನಸಭಾ ಕ್ಷೇತ್ರವಾಗಿದೆ. ಇದುವರೆಗೂ 15 ಶಾಸಕರನ್ನು ಆಯ್ಕೆ ಮಾಡಿರುವ ರಾಯಬಾಗ ಕ್ಷೇತ್ರದಲ್ಲಿ ಕಾಂಗ್ರೆಸ್ 6 ಬಾರಿ, ಜನತಾ ಪಕ್ಷ ಮತ್ತು ಬಿಜೆಪಿ ತಲಾ ಮೂರು ಬಾರಿ ಗೆದ್ದಿದೆ. ಅದೇ ವೇಳೆ ಪಕ್ಷೇತರರು, ಎಸ್‌ಸಿಎಫ್, ಜೆಡಿಯು ತಲಾ ಒಂದು ಬಾರಿ ಗೆಲುವು ಸಾಧಿಸಿವೆ.
Published On - 2:00 am, Sat, 13 May 23