ಪೊಲೀಸರು ಎಂದು ಅಟ್ಯಾಕ್ ಮಾಡಿ ಪ್ರೀತಿಸಿ ಮದುವೆಯಾಗಿದ್ದ ವಧುವನ್ನು ಕಿಡ್ನಾಪ್ ಮಾಡಿದ ಪೋಷಕರು
ಗಂಗಾಧರ್ ಹಾಗೂ ಜಲಜಾ ಮೇ 25ರಂದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮೇ 30ಕ್ಕೆ ವಿವಾಹ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದರು.
ನೆಲಮಂಗಲ: ಪ್ರೀತಿಸಿ (Love) ಮದುವೆಯಾದ ವಧುವನ್ನ ಪೋಷಕರೇ ಕಿಡ್ನಾಪ್ (Kidnap) ಮಾಡಿರುವ ಘಟನೆ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ. ಪೋಷಕರ ವಿರೋಧದ ನಡುವೆ ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳಾದ ಗಂಗಾಧರ್ ಮತ್ತು ಜಲಜ ವಿವಾಹವಾಗಿದ್ದರು. ಮದುವೆಯಾದ ನಂತರ ವರನ ಅಕ್ಕನ ಮನೆಯಲ್ಲಿ ನವಜೋಡಿ ಇದ್ದರು. ಈ ವೇಳೆ 20 ಜನರ ಗುಂಪೊಂದು ಬಂದು ವಧುವನ್ನು ಅಪಹರಿಸಿದ್ದಾರೆ. ಮನೆಯವರಿಗೆಲ್ಲ ಥಳಿಸಿ ಹುಡುಗಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಗಂಗಾಧರ್ ಹಾಗೂ ಜಲಜಾ ಮೇ 25ರಂದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮೇ 30ಕ್ಕೆ ವಿವಾಹ ನೊಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ವರನ ಅಕ್ಕ ಸಾಕಮ್ಮ ಎಂಬುವವರ ಮನೆಗೆ ವಧು ತಂದೆ ದೇವರಾಜು, ಸಂಬಂಧಿ ಮಹೇಶ್ ಸೇರಿ ಸುಮಾರು 20ಕ್ಕೂ ಹೆಚ್ಚು ಜನರು ಬಂದಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಎಂದು ಅಟ್ಯಾಕ್ ಮಾಡಿದ್ದ ಗುಂಪು, ಮನೆಯಲ್ಲಿ ಇದ್ದವರಿಗೆಲ್ಲ ಥಳಿಸಿ ಹುಡುಗಿ ಜಲಜಾಳನ್ನ ಅಪಹರಿಸಿದ್ದಾರೆ.
ಇದನ್ನೂ ಓದಿ: Eye Care: ಬೇಸಿಗೆಯಲ್ಲಿ ನಿಮ್ಮ ಕಣ್ಣುಗಳನ್ನು ಜೋಪಾನ ಮಾಡುವುದು ಹೇಗೆ?
ಪ್ರಕರಣ ಬಗ್ಗೆ ಮಾಹಿತಿ ನೀಡಿದ ವರ ಗಂಗಾಧರ್, ಜಲಜ ನನ್ನ ಮಾವನ ಮಗಳು. ಎರಡು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಪ್ರೀತಿ ಬಗ್ಗೆ ನಿಮ್ಮ ಮನೆಯಲ್ಲಿ ಮಾತನಾಡು ಅಂತ ಆಕೆಗೆ ಹೇಳಿದ್ದೆ. ಅವಳು ನನ್ನ ತುಂಬಾ ಇಷ್ಟಪಡುತ್ತಿದ್ದಾಳೆ. ನಾವು ಮೇ 25ಕ್ಕೆ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ಆ ನಂತರ ಅವರ ಮನೆಯವರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು ಎಂದು ಹೇಳಿದರು.
ಇನ್ನು ವರನ ಅಕ್ಕ ಸಾಕಮ್ಮ ಮಾತನಾಡಿ, ನಾವು ಮನೆಯಲ್ಲಿ ನಾಲ್ಕು ಜನ ಇದ್ದೆವು. ಆಗ ಸುರೇಶ್ ಎಂಬುವವನು ಏಕಾಏಕಿ ಮನೆಗೆ ನುಗ್ಗಿದ. ನಮಗೆ ಹೊಡೆದು ಜಲಜನ ಎಳೆದುಕೊಂಡು ಹೋದ. ಅವರು ಸುಮಾರು 20 ಜನ ಇದ್ದರು. ನಮ್ಮಿಂದ ಅವಳನ್ನ ರಕ್ಷಿಸಕ್ಕೆ ಆಗಲಿಲ್ಲ ಅಂತ ಕ್ಯಾಮೆರಾ ಮುಂದೆ ಕಣ್ಣೀರು ಹಾಕಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:50 am, Wed, 1 June 22