ದೇಶಕ್ಕೆ ಮಾದರಿಯಾದ ಬೆಂಗಳೂರಿನ ಅದೊಂದು ಗ್ರಾಮ: ಬೋರ್ವೆಲ್ಗೂ ಸಿಕ್ತು ಸೋಲಾರ್ ಪವರ್
ಬೆಂಗಳೂರಿನ ಹೊರವಲಯದ ಗ್ರಾಮವೊಂದರಲ್ಲಿ ಸೌರಶಕ್ತಿಯನ್ನು ಬಳಸಿ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಅಕ್ವಾ ಶೈನ್ ಟೆಕ್ನಾಲಜಿ ಸಂಸ್ಥೆ ಅಂತರ್ಜಲವನ್ನು ಸೌರಶಕ್ತಿಯಿಂದ ಮೇಲಕ್ಕೆತ್ತಿ 24 ಗಂಟೆಗಳ ಕಾಲ ನೀರು ಪೂರೈಸುತ್ತಿದೆ. ಇದು ಕಡಿಮೆ ವೆಚ್ಚ ಮತ್ತು ಪರಿಸರ ಸ್ನೇಹಿ ಆಗಿದೆ. ಸದ್ಯ ಈ ಗ್ರಾಮ ಗ್ರಾಮೀಣ ಪ್ರದೇಶಗಳಿಗೆ ಮಾದರಿಯಾಗಿದೆ.

ದೇವನಹಳ್ಳಿ, ಏಪ್ರಿಲ್ 13: ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆ (summer) ಶುರುವಾಗಿದೆ. ಹಾಗಾಗಿ ಸಾಕಷ್ಟು ಕಡೆ ಕರೆಂಟ್ ಸೇರಿದಂತೆ ನೀರಿಗೂ ಹಾಹಾಕಾರ ಶುರುವಾಗುತ್ತಿದ್ದು, ಜನ ಪರದಾಡುತ್ತಿದ್ದಾರೆ. ಇಂತಹ ಪರದಾಟದ ನಡುವೆಯೂ ಸಿಲಿಕಾನ್ ಸಿಟಿಯ (bangaluru) ಇಲ್ಲೊಂದು ಹಳ್ಳಿಯಲ್ಲಿ ಮಾತ್ರ ಇದಕ್ಕೆಲ್ಲಾ ಬ್ರೇಕ್ ಬಿದ್ದಿದ್ದು, ಕರೆಂಟ್ನ ಅವಶ್ಯಕತೆ ಇಲ್ಲದೆ ಬಿರು ಬೇಸಿಗೆಯಲ್ಲೂ ಗ್ರಾಮದ ಜನರಿಗೆ ದಿನದ 24 ಗಂಟೆಯೂ ನೀರು ಸರಾಗವಾಗಿ ಹರಿದು ಬರುತ್ತಿದೆ. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.
ಬೆಂಗಳೂರಿನ ಹೊರವಲಯದ ಯಲಹಂಕ ತಾಲೂಕಿನ ಸುರದೇನಪುರ ಗ್ರಾಮದಲ್ಲಿ ಸದ್ಯ ನೀರಿನ ಕೊರತೆ ಇಲ್ಲ. ಗ್ರಾಮಗಳಲ್ಲಿ ನಿತ್ಯ ಓವರ್ ಹೆಡ್ ಟ್ಯಾಂಕ್ಗೆ ನೀರು ಹರಿಯಲು ಕರೆಂಟ್ನ ಅವಶ್ಯಕತೆಯಿದ್ದು, ಕರೆಂಟ್ ಕಟ್ ಆದರೆ ನೀರು ಹರಿಸುವುದು ಅಸಾಧ್ಯವಾಗ್ತಿತ್ತು. ಹೀಗಾಗಿ ದೇಶದಲ್ಲೇ ಮೊದಲ ಬಾರಿಗೆ ಅಕ್ವಾ ಶೈನ್ ಟೆಕ್ನಾಲಜಿ ಸಂಸ್ಥೆ ವಿದೇಶಿ ತಂತ್ರಜ್ಞಾನ ಬಳಸಿಕೊಂಡು ಸಿಎಸ್ಆರ್ ನಿಧಿಯಲ್ಲಿ ನೂರಾರು ಅಡಿ ಆಳದಲ್ಲಿರುವ ಅಂತರ್ಜಲವನ್ನ ಸೋಲಾರ್ ಪವರ್ ಮೂಲಕ ಮೇಲಕ್ಕೆತ್ತಿ ಓವರ್ ಹೆಡ್ ಟ್ಯಾಂಕ್ಗೆ ಹರಿಸುತ್ತಿದ್ದಾರೆ. ಜೊತೆಗೆ ನಿತ್ಯ ಕರೆಂಟ್ ಅವಶ್ಯಕತೆಯಿಲ್ಲದೆ ಸೋಲಾರ್ ಪವರ್ನಿಂದ ಟ್ಯಾಂಕ್ಗೆ ನೀರು ಹರಿಯುತ್ತಿದ್ದು, ಬಿರು ಬೇಸಿಗೆಯಲ್ಲೂ ಕರೆಂಟ್ನ ಅವಶ್ಯಕತೆಯಿಲ್ಲದೆ ಗ್ರಾಮದ ಜನರಿಗೆ ದಿನದ 24 ಗಂಟೆ ನೀರು ಸರಾಗವಾಗಿ ಹರಿದು ಬರುತ್ತಿದೆ.
ಇದನ್ನೂ ಓದಿ: ಬೆಂಗಳೂರು 2ನೇ ಏರ್ಪೋರ್ಟ್: ಬಿಡದಿ ಔಟ್, ಈ ಎರಡು ಸ್ಥಳಗಳ ಬಗ್ಗೆ ಚರ್ಚೆ, ಜಟಾಪಟಿ!
ಬೋರ್ವೆಲ್ನಿಂದ ನೀರು ಮೇಲಕ್ಕೆತ್ತುವುದು ಮಾತ್ರವಲ್ಲದೆ ಅತ್ಯಾಧುನಿಕ ತಂತ್ರಜ್ಞಾನದಿಂದ ಓವರ್ ಹೆಡ್ ಟ್ಯಾಂಕ್ನಲ್ಲಿ ಎಷ್ಟು ಸಾಮರ್ಥ್ಯದ ನೀರಿದೆ, ಎಷ್ಟು ನೀರು ಟ್ಯಾಂಕ್ಗೆ ಬರುತ್ತಿದೆ, ಎಷ್ಟು ನೀರು ಟ್ಯಾಂಕ್ ನಿಂದ ಹೊರಗಡೆ ಹೋಗುತ್ತಿದೆ ಎಲ್ಲವನ್ನು ಡಿಸ್‌ಪ್ಲೇ ಮೂಲಕ ತೋರಿಸುತ್ತಿದೆ. ಅಲ್ಲದೆ ಗ್ರಾಮಗಳಲ್ಲಿ ವಾಟರ್ ಮ್ಯಾನ್ಗಳು ಟ್ಯಾಂಕ್ ಬಳಿಗೆ ಬಂದು ನೀರು ಆನ್-ಆಪ್ ಮಾಡುವುದು ಮತ್ತು ಟ್ಯಾಂಕ್ ತುಂಬಿದರೆ ನೀರು ಪೋಲಾಗುತ್ತದೆ ಅನ್ನೂ ಆತಂಕವಿಲ್ಲದೆ, ಇದ್ದ ಕಡೆಯಿಂದಲೇ ಮೊಬೈಲ್ ಆ್ಯಪ್ ಮೂಲಕ ಸೋಲಾರ್ ಪವರ್ ಆನ್ ಆ್ಯಂಡ್ ಆಪ್ ಸಹ ಮಾಡುವ ತಂತ್ರಜ್ಞಾನ ಹೊಂದಿದೆ.

ಇದರಿಂದ ಗ್ರಾಮಕ್ಕೆ ವಾಟರ್ ಮ್ಯಾನ್ ಬಂದಿಲ್ಲ, ನೀರು ಪೋಲಾಗುತ್ತಿದೆ ಅನ್ನೂ ಆತಂಕವಿಲ್ಲದೆ ಕೆಲಸ ಮಾಡುಬಹುದಾಗಿದೆ. ಇನ್ನೂ ವಿಶೇಷವಾಗಿ ಈ ಸೋಲಾರ್ ಪ್ಯಾನೆಲ್ಗಳು ಮಳೆಗಾಲದ ಸಂದರ್ಭದಲ್ಲೂ ಅಲ್ಪ ಸ್ವಲ್ಪ ಬೆಳಕಿನಿಂದಸೋಲಾರ್ ಪವರ್ ಜನರೇಟರ್ ಮಾಡುವ ವಿಶೇಷತೆಯನ್ನ ಹೊಂದಿದ್ದು, ಸೋಲಾರ್ನಿಂದ ಪ್ರತಿ ತಿಂಗಳು ಬರ್ತಿದ್ದ 8 ಸಾವಿರ ರೂ ಕರೆಂಟ್ ಬಿಲ್ ಹೊರೆ ಕಡಿತವಾಗಿದೆ. ಅಲ್ಲದೆ ವಿದ್ಯುತ್ನಿಂದ 08 ಗಂಟೆ ಕಾಲ ತುಂಬುತ್ತಿದ್ದ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್, ಸೋಲಾರ್ ಪವರ್ನಿಂದ 3 ರಿಂದ 4 ಗಂಟೆಯಲ್ಲೇ ತುಂಬುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬೆಲೆ ಏರಿಕೆಯ ಪರ್ವಕಾಲ: ಏಕಾಏಕಿ ಮಕ್ಕಳ ಶಾಲಾ ಫೀಸ್ನಲ್ಲಿ ಶೇ 50 ರಷ್ಟು ಏರಿಕೆ
ಒಟ್ಟಾರೆ ಬಿರು ಬೇಸಿಗೆ ಬಂತ್ತು ಅಂದರೆ ಕರೆಂಟ್ ಇಲ್ಲ, ಸಮಯಕ್ಕೆ ನೀರು ಬರಲ್ಲ ಅಂತ ಪರದಾಡುವ ಗ್ರಾಮಗಳ ನಡುವೆ ಸೋಲಾರ್ ಪವರ್ನಿಂದ ನಮ್ಮ ಸಿಲಿಕಾನ್ ಸಿಟಿ ಹೊರ ವಲಯದ ಗ್ರಾಮದ ದೇಶಕ್ಕೆ ಮಾದರಿಯಾಗಿರುವುದು ನಿಜಕ್ಕೂ ನಮ್ಮ ಹೆಮ್ಮೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.