ದಸರಾ ಹಿನ್ನೆಲೆ ಬೆಂಗಳೂರು ಏರ್ಪೋಟ್ನಲ್ಲಿ ಕಳೆಗಟ್ಟಿದ ಸಂಭ್ರಮ: ದೇಶ ವಿದೇಶದಿಂದ ಬರುವ ಪ್ರಯಾಣಿಕರಿಗೆ ಮಸ್ತ್ ಮನರಂಜನೆ
ದಸರಾ ಅಂಗವಾಗಿ ಏರ್ಪೊಟ್ ನ ಟರ್ಮಿನಲ್ ಹೊರ ಭಾಗದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ನಡೆಯುತ್ತಿದ್ದು ದಸರಾ ಅಂಗವಾಗಿ ಏರ್ಪೊಟ್ ಸಿಬ್ಬಂದಿ ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ಪ್ರಯಾಣಿಕರನ್ನ ರಂಜಿಸುತ್ತಿದ್ದಾರೆ.
ದೇವನಹಳ್ಳಿ: ದಸರಾ ಹಬ್ಬದ(Nadahabba Dasara) ಸಂಭ್ರಮ ನಾಡಿನೆಲ್ಲೆಡೆ ಮನೆ ಮಾಡಿದ್ದು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನವರಾತ್ರಿಯ ಸಂಭ್ರಮ ಜೋರಾಗೆ ಕಳೆಗಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport Bengaluru) ಟರ್ಮಿನಲ್ ಹೊರ ಭಾಗದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಪ್ರಯಾಣಿಕರು ಖುಷ್ ಆಗಿದ್ದಾರೆ.
ದಸರಾ ಅಂಗವಾಗಿ ಏರ್ಪೊಟ್ ನ ಟರ್ಮಿನಲ್ ಹೊರ ಭಾಗದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ನಡೆಯುತ್ತಿದ್ದು ದಸರಾ ಅಂಗವಾಗಿ ಏರ್ಪೊಟ್ ಸಿಬ್ಬಂದಿ ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ಪ್ರಯಾಣಿಕರನ್ನ ರಂಜಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿಯೇ ವಿವಿಧ ರೀತಿಯ ಉಡುಗೆಗಳ ತೊಟ್ಟು ಹಲವು ಹಾಡಿಗೆ ಕುಣಿದು ಎಲ್ಲರನ್ನ ರಂಜಿಸುತ್ತಿದ್ದಾರೆ. ಸಿಬ್ಬಂದಿಯ ಜೊತೆ ಸೇರಿಕೊಂಡು ಪ್ರಯಾಣಿಕರು ಸಹ ಮಸ್ತ್ ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಪ್ರತಿದಿನ ದಸರಾ ಹಿನ್ನಲೆ ಸಿಬ್ಬಂದಿಯಿಂದಲೇ ಮನರಂಜನಾ ಕಾರ್ಯಕ್ರಮ ನೀಡಲಾಗ್ತಿದೆ. ಇನ್ನೂ ಕೊರೊನಾ ನಂತರ ನಿರ್ಬಂಧನೆಗಳು ಸಡಲಿಕೆ ಹಿನ್ನಲೆ ಏರ್ಪೊಟ್ ನಲ್ಲಿ ದಸರಾ ಸಡಗರ ಮನೆ ಮಾಡಿದೆ. ಜೊತೆಗೆ ಸೋಮವಾರ ಮಂಗಳವಾರ ಏರ್ಪೋಟ್ನ ದೇಶ ವಿದೇಶಗಳ ಪ್ರಯಾಣಿಕರಿಗೆ ದಸರಾ ಸಾಂಸ್ಕೃತಿಕ ಅನಾವರಣಕ್ಕೆ ವೇದಿಕೆ ಕೂಡ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಏರ್ಪೋಟ್ನ ಉಪಾಧ್ಯಕ್ಷ ವೆಂಕಟರಮಣ ತಿಳಿಸಿದ್ದಾರೆ. ಇದನ್ನೂ ಓದಿ: Shocking News: ದುರ್ಗಾ ಪೂಜೆಗಿಟ್ಟ ಸೇಬು ಹಣ್ಣನ್ನು ತಿಂದಿದ್ದಕ್ಕೆ ಬಿಹಾರದ ಶಾಲೆಯಲ್ಲಿ 6 ವರ್ಷದ ಬಾಲಕನ ಕೊಲೆ!
ವಿದೇಶದಿಂದ ಅಕ್ರಮವಾಗಿ ಸಾಗಿಸ್ತಿದ್ದ 729 ಗ್ರಾಂ ಚಿನ್ನ ಜಪ್ತಿ
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಿದೇಶದಿಂದ ಅಕ್ರಮವಾಗಿ ಸಾಗಿಸ್ತಿದ್ದ 729 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ಗುದದ್ವಾರದಲ್ಲಿಟ್ಟುಕೊಂಡು 36.97 ಲಕ್ಷ ರೂಪಾಯಿ ಮೌಲ್ಯದ 729 ಗ್ರಾಂ ಚಿನ್ನವನ್ನು ದುಬೈನಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದು ಸಧ್ಯ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು ಖದೀಮರನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೆರೆಗೆ ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಆರೋಪಿಗಳು ಕಪ್ಪು ಬಣ್ಣದ ಪ್ಯಾಕೇಟ್ಗಳ ರೀತಿ ನಾಲ್ಕು ತುಂಡುಗಳಾಗಿಟ್ಟುಕೊಂಡು ಸಾಗಿಸುತ್ತಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಸ್ಮಗ್ಲಿಂಗ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ಖದೀಮರು ಸಿಕ್ಕಿ ಬಿದ್ದಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ