ವಸತಿ ನಿಲಯದ ಮಕ್ಕಳೊಂದಿಗೆ ಯುಗಾದಿ ಹಬ್ಬ ಆಚರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

ವಸತಿ ನಿಲಯದ ಮಕ್ಕಳೊಂದಿಗೆ ಯುಗಾದಿ ಹಬ್ಬ ಆಚರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್
ವಸತಿ ನಿಲಯದ ಮಕ್ಕಳೊಂದಿಗೆ ಯುಗಾದಿ ಹಬ್ಬ ಆಚರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಭೇಟಿ ನೀಡಿ, ವಸತಿ ನಿಲಯದ ವಿದ್ಯಾರ್ಥಿಗಳ ಜೊತೆಗೆ ಊಟ ಮಾಡಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

TV9kannada Web Team

| Edited By: Ayesha Banu

Apr 03, 2022 | 9:23 PM

ನೆಲಮಂಗಲ: ಯುಗಾದಿ(Ugadi) ಹಬ್ಬದ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್(DC K Srinivas) ದೊಡ್ಡಬಳ್ಳಾಪುರ ತಾಲೂಕಿನ ಇಸ್ತೂರು ಮತ್ತು ಮಾಡೇಶ್ವರ ಹಾಗೂ ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಭೇಟಿ ನೀಡಿ, ವಸತಿ ನಿಲಯದ ವಿದ್ಯಾರ್ಥಿಗಳ ಜೊತೆಗೆ ಊಟ ಮಾಡಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮಕ್ಕಳಿಗೆ ಯುಗಾದಿ ಹಬ್ಬದ ಉಡುಗೊರೆಯಾಗಿ ವಾಚ್‌ನ್ನು ನೀಡಿದರು. ಯುಗಾದಿ ಹಬ್ಬವನ್ನು ತಮ್ಮೊಂದಿಗೆ ಜಿಲ್ಲಾಧಿಕಾರಿ ಆಚರಿಸಿದಕ್ಕೆ ವಿದ್ಯಾರ್ಥಿಗಳು ಸಂತಸಪಟ್ಟರು. ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಕೃಷ್ಣಪ್ಪ ಸೇರಿದಂತೆ ಅನೇಕರು ಡಿಸಿಯವರಿಗೆ ಸಾತ್ ನೀಡಿದ್ರು. ಹಬ್ಬ ಅಂದ್ರೆ ಸಾಕು ತಮ್ಮೂರುಗಳನ್ನ ಸೇರೋ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಸಿ ಕೆ.ಶ್ರೀನಿವಾಸ್ ಮಾದರಿಯಾಗಿದ್ದಾರೆ. ಹಿಜಾಬ್, ಅಲಾಲ್ ,ಜಟ್ಕಾ ಕಟ್,ಕಿತ್ತಾಟದ ಮಧ್ಯ ನಾಡಿದ್ಯಾಂತ ಸಂಭ್ರಮದ ಹಬ್ಬ ಯುಗಾದಿ ದಿನದಂದು ಜಿಲ್ಲಾಧಿಕಾರಿ ಜನ ಮೆಚ್ಚುಗೆ ಕೆಲಸ ಮಾಡಿ ಜಿಲ್ಲೆಯ ಜನರ ಪ್ರೀತಿಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

DC K Srinivas ugadi 1

ವಸತಿ ನಿಲಯದ ಮಕ್ಕಳೊಂದಿಗೆ ಯುಗಾದಿ ಹಬ್ಬ ಆಚರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

ಬೆಳ್ಳಂ ಬೆಳಗ್ಗೆ ಓಪನ್ ಆದ ಬಾರ್​ಗಳು, ಸ್ಥಳೀಯರ ಆಕ್ರೋಶ ಇನ್ನು ಇಂದು ಹೊಸ ತೊಡಕು ಹಿನ್ನೆಲೆ ನೆಲಮಂಗಲ ನಗರದಲ್ಲಿ ಬೆಳ್ಳಂ ಬೆಳಗ್ಗೆ ಬಾರ್​ಗಳು ಓಪನ್ ಆಗಿದ್ದವು. ಬಾರ್ ಮಾಲೀಕರು ಬೆಳಗ್ಗೆ 6 ಗಂಟೆಗೆಲ್ಲ ಬಾರ್​ಗಳನ್ನು ತೆರೆದಿಟ್ಟು ಫುಲ್ ಬಿಸಿನೆಸ್ ಮಾಡಿಕೊಂಡಿವೆ. ನೆಲಮಂಗಲ ಟೌನ್ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಬಾರ್ ಓಪನ್ ಆಗಿದ್ದು ಕಂಡು ಕಾಣದಂತೆ ವರ್ತನೆ ತೋರುತ್ತಿರುವ ಪೊಲೀಸರ ವಿರುದ್ಧ ಸ್ಥಳೀಯರ ಕಿಡಿಕಾರಿದ್ದಾರೆ.

ಬೆಳ್ಳಂ ಬೆಳಗ್ಗೆ ಓಪನ್ ಆದ ಬಾರ್​ಗಳು, ಸ್ಥಳೀಯರ ಆಕ್ರೋಶ

ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಮಲೈಕಾ ಆರೋಗ್ಯ ಈಗ ಹೇಗಿದೆ?

ದೇವರ ಉತ್ಸವ ವಿಚಾರದಲ್ಲಿ 2 ಗ್ರಾಮಗಳ ನಡುವೆ ಮಾರಾಮಾರಿ; 10 ಜನರು ಆಸ್ಪತ್ರೆಗೆ ದಾಖಲು, ಬಸವನಾಳು ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ

Follow us on

Related Stories

Most Read Stories

Click on your DTH Provider to Add TV9 Kannada