ಬೆಂಗಳೂರು ಸೇರಿ ಹಲವು ಮಾರ್ಗಗಳಲ್ಲಿ ಇಂದು, ನಾಳೆ ರೈಲು ಸಂಚಾರ ವ್ಯತ್ಯಯ: ಯಾವುದು ರದ್ದು, ಯಾವುದರ ಮಾರ್ಗ ಬದಲಾವಣೆ? ಇಲ್ಲಿದೆ ವಿವರ
ತುಮಕೂರು ಜಿಲ್ಲೆಯ ತಿಪಟೂರು–ಹೊನ್ನವಳ್ಳಿ ರಸ್ತೆ ನಿಲ್ದಾಣಗಳ ನಡುವೆ ಗರ್ಡರ್ ಅಳವಡಿಕೆ ಕಾಮಗಾರಿ ನಡೆಯಲಿರುವುದರಿಂದ ಅಕ್ಟೋಬರ್ 27 ಮತ್ತು 28ರಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಕೆಲವು ರೈಲುಗಳು ರದ್ದಾಗಲಿದ್ದು, ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ಮೂರು ಎಕ್ಸ್‌ಪ್ರೆಸ್ ರೈಲುಗಳ ನಿರ್ಗಮನ ಸಮಯ ಮರುನಿಗದಿಯಾಗಿದೆ. ವಿವರಗಳು ಇಲ್ಲಿವೆ.

ಮುಖ್ಯಾಂಶಗಳು
- ಕಾಮಗಾರಿಯ ಕಾರಣ ಎರಡು ದಿನ ರೈಲು ವ್ಯತ್ಯಯ
- ಹಲವು ಪ್ಯಾಸೆಂಜರ್ ರೈಲುಗಳ ಸಂಚಾರ ಸಂಪೂರ್ಣ ರದ್ದು
- ಜನಶತಾಬ್ದಿ ಸೇರಿ ಹಲವು ರೈಲುಗಳ ಮಾರ್ಗ ಬದಲಾವಣೆ
ಬೆಂಗಳೂರು, ಅಕ್ಟೋಬರ್ 27: ತುಮಕೂರು ಜಿಲ್ಲೆಯ ತಿಪಟೂರು ಮತ್ತು ಹೊನ್ನವಳ್ಳಿ ರಸ್ತೆ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 88ರಲ್ಲಿ ಕಾಂಪೋಸಿಟ್ ಗರ್ಡರ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರೈಲು ಮಾರ್ಗ ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಅಕ್ಟೋಬರ್ 27 ಮತ್ತು 28ರಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಕೆಲವು ರೈಲುಗಳನ್ನು ರದ್ದುಪಡಿಸಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ಪ್ರಯಾಣ ಆರಂಭದ ಸಮಯದಲ್ಲಿ ಮರುನಿಗದಿಯಾಗಿದೆ.
ಅಕ್ಟೋಬರ್ 27ರಂದು ರದ್ದಾಗುವ ರೈಲುಗಳ ವಿವರ
- 56224: ಅರಸೀಕೆರೆ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್
- 56229: ಕೆಎಸ್‌ಆರ್ ಬೆಂಗಳೂರು–ಚನ್ನಪಟ್ಟಣ ಪ್ಯಾಸೆಂಜರ್
- 56230: ಚನ್ನಪಟ್ಟಣ–ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್
- 56223: ಕೆಎಸ್‌ಆರ್ ಬೆಂಗಳೂರು–ಅರಸೀಕೆರೆ ಪ್ಯಾಸೆಂಜರ್
ಅಕ್ಟೋಬರ್ 28ರಂದು ರದ್ದಾಗುವ ರೈಲುಗಳು
- 66505: ಯಲಹಂಕ–ಅರಸೀಕೆರೆ ಮೆಮು
- 66506: ಅರಸೀಕೆರೆ–ಯಲಹಂಕ ಮೆಮು
ಅಕ್ಟೋಬರ್ 27ರಂದು ಮಾರ್ಗ ಬದಲಾವಣೆಯಾಗುವ ರೈಲುಗಳು
- 12090 ಶಿವಮೊಗ್ಗ ಟೌನ್–ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್: ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- 56519 ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್: ಅಕ್ಟೋಬರ್ 27 ಮತ್ತು 28ರಂದು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ದೊಡ್ಡಬೆಲೆ, ಕ್ಯಾತ್ಸಂದ್ರ, ತುಮಕೂರು, ಗುಬ್ಬಿ, ಅಮಸಂದ್ರ ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- 11006 ಪುದುಚೇರಿ–ದಾದರ್ ಎಕ್ಸ್‌ಪ್ರೆಸ್: ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಅಕ್ಟೋಬರ್ 28ರಂದು ಮಾರ್ಗ ಬದಲಾವಣೆಯಾಗುವ ರೈಲುಗಳು
- 12079 ಕೆಎಸ್‌ಆರ್ ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್: ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಮೂರು ರೈಲುಗಳ ಪ್ರಯಾಣ ಆರಂಭದ ಸಮಯ ಬದಲಾವಣೆ
- 17310 ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್: ಅಕ್ಟೋಬರ್ 27ರಂದು ವಾಸ್ಕೋ ಡ ಗಾಮಾದಿಂದ ಹೊರಡುವ ಸಮಯವನ್ನು 120 ನಿಮಿಷ ಮುಂದೂಡಲಾಗಿದೆ.
- 20652 ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್: ಅಕ್ಟೋಬರ್ 28ರಂದು ತಾಳಗುಪ್ಪದಿಂದ ಹೊರಡುವ ಸಮಯವನ್ನು 140 ನಿಮಿಷ ಮುಂದೂಡಲಾಗಿದೆ.
- 16239 ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್: ಅಕ್ಟೋಬರ್ 28ರಂದು ಚಿಕ್ಕಮಗಳೂರಿನಿಂದ ಹೊರಡುವ ಸಮಯವನ್ನು 60 ನಿಮಿಷ ಮುಂದೂಡಲಾಗಿದೆ.
ರೈಲು ಸಂಚಾರದಲ್ಲಿ ಬದಲಾವಣೆ ಇರುವುದರಿಂದ ಪ್ರಯಾಣಿಕರು ರೈಲಿನ ಸಂಖ್ಯೆ, ಸಂಚಾರದ ದಿನಾಂಕ, ಮಾರ್ಗ ಮತ್ತು ನಿಲುಗಡೆಗಳ ವಿವರಗಳನ್ನು ಪರಿಶೀಲಿಸಿಕೊಂಡು ಪ್ರಯಾಣ ಯೋಜನೆ ರೂಪಿಸಿಕೊಳ್ಳಬೇಕೆಂದು ರೈಲ್ವೆ ಇಲಾಖೆ ವಿನಂತಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




