AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ: ಜಂಟಿ ಕಾರ್ಯದರ್ಶಿ ಆನಂದ್

ಸರ್ಕಾರ ಕೂಟದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಈ ನೀತಿಯನ್ನು ಖಂಡಿಸುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ. ತರಬೇತಿ ನಿರತ ಸಾರಿಗೆ ನೌಕರರ ಅಮಾನತು ಮಾಡಿದ್ದೀರಿ ಎಂದು ಜಂಟಿ ಕಾರ್ಯದರ್ಶಿ ಆನಂದ್ ಹೇಳಿದರು.

ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ: ಜಂಟಿ ಕಾರ್ಯದರ್ಶಿ ಆನಂದ್
ಕೆಎಸ್​ಆರ್​ಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ
guruganesh bhat
| Updated By: preethi shettigar|

Updated on: Apr 10, 2021 | 9:44 AM

Share

ಬೆಂಗಳೂರು: ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಯತ್ನಿಸುತ್ತಿಲ್ಲ ಎಂದು ಹೇಳಿಕೆ ನೀಡಿದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್, ಕಾರ್ಮಿಕ ವಿವಾದ ಕಾಯ್ದೆಯಡಿ ನೌಕರರ ಮುಷ್ಕರವನ್ನು ಹತ್ತಿಕ್ಕುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ಏಪ್ರಿಲ್ 6 ರಂದು ಕಾರ್ಮಿಕ ಆಯುಕ್ತರ ಜೊತೆ ಸಂಧಾನ ಸಭೆಯಿತ್ತು. ಅಂದಿನ ಸಭೆಯಲ್ಲಿ ಏಕೆ ಮುಷ್ಕರ ತಡೆಗೆ ಪ್ರಯತ್ನ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

ನಂತರ ಮಾತನಾಡಿದ ಜಂಟಿ ಕಾರ್ಯದರ್ಶಿ ಆನಂದ್ ರಾಜ್ಯ ಸರ್ಕಾರವೇ ಮುಷ್ಕರಕ್ಕೆ ಪ್ರಚೋದನೆ ಕೊಟ್ಟಿದೆ. ಸರ್ಕಾರ ಕೂಟದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಈ ನೀತಿಯನ್ನು ಖಂಡಿಸುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ. ತರಬೇತಿ ನಿರತ ಸಾರಿಗೆ ನೌಕರರ ಅಮಾನತು ಮಾಡಿದ್ದೀರಿ. ಹಲವು ಸಾರಿಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದೀರಿ. ಸರ್ಕಾರ ಏನೇ ಮಾಡಿದರೂ ಮುಷ್ಕರವನ್ನು ಹಿಂಪಡೆಯಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಳಗಾವಿಗೆ ಪ್ರಯಾಣ ಬೆಳೆಸಿದ ಕೋಡಿಹಳ್ಳಿ ಚಂದ್ರಶೇಖರ್ ನಾಲ್ಕನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರೆದ ಹಿನ್ನೆಲೆ ಕಳೆದ ಮೂರು ದಿನಗಳ ಹಾಗೆ ಇಂದೂ ಪ್ರಯಾಣಿಕರು ಬಸ್ಗಳಿಗಾಗಿ ಪರದಾಟ ಪಡುತ್ತಿದ್ದಾರೆ. ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು ತಯಾರಿಯಾಗಿದ್ದಾರೆ. ಈ ಹಿನ್ನೆಲೆ ಇಂದು ಬೆಳಗಾವಿಗೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಯಾಣ ಬೆಳೆಸಿದ್ದು, ಇಂದು ಬೆಳಗಾವಿ ಹಾಗೂ ಗುಲ್ಬರ್ಗದಲ್ಲಿ ಸಾರಿಗೆ ಮುಖಂಡರು ಹಾಗೂ ನೌಕರರ ಸಭೆ ನಡೆಯಲಿದೆ.

ಇದನ್ನೂ ಓದಿ

Bus Strike: ಮುಗಿಯದ ಮುಷ್ಕರ.. ಸಾಲು ಸಾಲು ರಜೆ ಹಿನ್ನೆಲೆ ನೆರೆ ರಾಜ್ಯಗಳ ಸಾರಿಗೆ ಇಲಾಖೆ ಮೊರೆ ಹೋದ ಕೆಎಸ್​ಆರ್​ಟಿಸಿ

ಯುಗಾದಿ ಹಬ್ಬ, ಸಾರಿಗೆ ಸಿಬ್ಬಂದಿ ಮುಷ್ಕರ: ಸಾರ್ವಜನಿಕರ ನೆರವಿಗೆ ನೈರುತ್ಯ ರೈಲ್ವೆಯಿಂದ 20 ವಿಶೇಷ ರೈಲು

(Anand says strike would not be called off until the demand met)