AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಪ್ರಯಾಣಿಕರಿಗೆ ಬ್ಯಾಡ್​​ ನ್ಯೂಸ್​​: ಮೀಟರ್​ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ

ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದು, ಆಟೋ ಚಾಲಕರು ಮೀಟರ್ ದರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಇದು ಪ್ರಯಾಣಿಕರಿಗೆ ಹೊರೆಯಾದರೂ, ಚಾಲಕರ ಸಂಕಷ್ಟ ಅರಿತ ಕೆಲವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್​​ಗೆ 18 ರೂ. ನಿಗದಿಪಡಿಸಲಾಗಿದೆ.

ಆಟೋ ಪ್ರಯಾಣಿಕರಿಗೆ ಬ್ಯಾಡ್​​ ನ್ಯೂಸ್​​: ಮೀಟರ್​ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ
ಸಾಂದರ್ಭಿಕ ಚಿತ್ರ
Kiran Surya
| Edited By: |

Updated on:May 07, 2026 | 7:32 PM

Share

ಬೆಂಗಳೂರು, ಮೇ 07: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ ಕಂಡಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡುವಂತೆ ಆಗ್ರಹಿಸಿ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧಕ್ಕೂ ಮುನ್ನ ಒಂದು ಲೀಟರ್ ಆಟೋ ಎಲ್ಪಿಜಿ ದರ 56 ರೂ. ಇತ್ತು. ಬಳಿಕ ಅದು ಕಳೆದ ಒಂದು ವಾರದ ಹಿಂದೆ 90 ರೂ.ಗಳಿಗೆ ಏರಿತ್ತು. ಆದರೆ ಸದ್ಯ ಬೆಂಗಳೂರಲ್ಲಿ ಒಂದು ಲೀಟರ್ ಆಟೋ ಎಲ್ಪಿಜಿ ದರವೀಗ 95 ರೂಪಾಯಿಗಳಿಗೆ ತಲುಪಿದೆ. ಹೀಗಾಗಿ ಮೀಟರ್​​ ದರ ಏರಿಕೆ ಅನಿವಾರ್ಯ ಎಂಬುದು ಆಟೋ ಚಾಲಕರ ಅಭಿಪ್ರಾಯ.

  • ಯುದ್ಧದ ಪರಿಣಾಮ ಆಟೋ ಎಲ್ಪಿಜಿ ದರ ನಿರಂತರವಾಗಿ ಏರಿಕೆ
  • ಆಟೋ ಮೀಟರ್ ದರ ಏರಿಕೆಗೆ ಚಾಲಕ ಸಂಘಟನೆಗಳಿಂದ ಮನವಿ
  • ಮೀಟರ್​​ ದರ ಎಷ್ಟು ಹೆಚ್ಚಳಕ್ಕೆ ಆಟೋ ಚಾಕರಿಂದ ಪ್ರಸ್ತಾಪ?

ಇದನ್ನೂ ಓದಿ: ಬೆಂಗಳೂರು ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ? ಎಲ್.ಪಿ.ಜಿ ದರ ಹೆಚ್ಚಳಕ್ಕೆ ಚಾಲಕರ ಆಕ್ರೋಶ!

ಎಷ್ಟು ದರ ಹೆಚ್ಚಳಕ್ಕೆ ಮನವಿ?

ಆಟೋ ಮೀಟರ್ ಕನಿಷ್ಠ ದರವನ್ನು 50 ರೂ. ಹಾಗೂ ಆ ನಂತರದ ರೇಟ್​​ ಕಿಲೋ ಮೀಟರ್​​ಗೆ 25 ರೂ.ಗೆ ಹೆಚ್ಚಿಸಲು ಆಟೋ ಚಾಲಕ ಸಂಘಟನೆಗಳು ಬೇಡಿಕೆ ಇಟ್ಟಿವೆ. ಬೆಂಗಳೂರಲ್ಲಿ ಸದ್ಯ ಆಟೋ ಮೀಟರ್ ಕನಿಷ್ಠ ದರ 36 ರೂ. ಇದ್ದು, ಆ ನಂತರದ ಪ್ರತಿ ಕಿಲೋ ಮೀಟರ್​​ಗೆ 18 ರೂ. ನಿಗದಿಪಡಿಸಲಾಗಿದೆ. ಮೊದಲೇ ಆಟೋ ಎಲ್ಪಿಜಿ ಅಗತ್ಯಕ್ಕೆ ತಕ್ಕಂತೆ ಸಿಗ್ತಿಲ್ಲ. ಈ ನಡುವೆ ಗ್ಯಾಸ್​​ ದರವನ್ನೂ ಕೇಂದ್ರ ಸರ್ಕಾರ ದಿಢೀರ್​​ ಏರಿಸಿರೋದು ಚಾಲಕರನ್ನು ಸಂಕಷ್ಟ ತಳ್ಳಿದೆ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಚಾಲಕ ಸಂಘಟನೆಗಳ ಆಗ್ರಹದ ಬಗ್ಗೆ ಪ್ರಯಾಣಿಕರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ಯಾಸ್​​ ರೇಟ್​​ ಹೆಚ್ಚಳದ ಕಾರಣಕ್ಕೆ ಆಟೋ ಚಾಲಕರ ಬೇಡಿಕೆಯೇನೋ ಸರಿಯಿದೆ. ಆದರೆ ದರ ಏರಿಕೆ ಮಾಡಿದಲ್ಲಿ ಅದು ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಇನ್ನು ಹಲವರು ಆಟೋ ಎಲ್ಪಿಜಿ ದರ ದುಪ್ಪಟ್ಟಾಗಿರುವ ಕಾರಣ ದರ ಏರಿಕೆ ಆಗಲಿ ಎಂದು ತಿಳಿಸಿದ್ದಾರೆ. ಈ ನಡುವೆ ಸಾರಿಗೆ ಸಚಿವರಿಗೂ ತಮ್ಮ ಬೇಡಿಕೆ ಒಳಗೊಂಡ ಮನವಿಯನ್ನು ನೀಡೋದಾಗಿ ಆಟೋ ಚಾಲಕ ಸಂಘಟನೆಗಳು ತಿಳಿಸಿವೆ. ಅಂತಿಮವಾಗಿ ನಿರ್ಧಾರ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:30 pm, Thu, 7 May 26

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!