AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಸತ್ತೇ ಹೋಗ್ತಿದ್ದೀನಿ’: ಮಹಿಳೆಯ ಚಿನ್ನ ಕೊಂಡೊಯ್ದ ಬಳಿಕ ಎಐ ವಿಡಿಯೋ ಕಳುಹಿಸಿ ವಂಚಿಸಿದ್ದ ಖದೀಮ ಕೊನೆಗೂ ಅರೆಸ್ಟ್

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಜ್ಯೋತಿಷ್ಯ ಹೇಳುವ ನೆಪದಲ್ಲಿ 62 ವರ್ಷದ ಶಾಂತಮ್ಮ ಅವರಿಗೆ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ವಂಚಿಸಿದ ಆರೋಪದ ಮೇಲೆ ವೆಂಕಟೇಶ್ ಬಂಧಿತನಾಗಿದ್ದಾನೆ. ಒಡವೆಗಳನ್ನು ವಾಪಸ್ ಕೇಳಿದಾಗ ಎಐ ವಿಡಿಯೋ ಮೂಲಕ ಅಪಘಾತದ ಕಥೆ ಕಟ್ಟಿದ್ದ ಎನ್ನಲಾಗಿದ್ದು, ಪೊಲೀಸರು 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

‘ನಾನು ಸತ್ತೇ ಹೋಗ್ತಿದ್ದೀನಿ’: ಮಹಿಳೆಯ ಚಿನ್ನ ಕೊಂಡೊಯ್ದ ಬಳಿಕ ಎಐ ವಿಡಿಯೋ ಕಳುಹಿಸಿ ವಂಚಿಸಿದ್ದ ಖದೀಮ ಕೊನೆಗೂ ಅರೆಸ್ಟ್
ಸಾಂದರ್ಭಿಕ ಚಿತ್ರImage Credit source: tv9
ಪ್ರದೀಪ್​ ಚಿಕ್ಕಾಟಿ
| Edited By: |

Updated on:Oct 14, 2026 | 1:52 PM

Share

ಮುಖ್ಯಾಂಶಗಳು

  • ಜ್ಯೋತಿಷ್ಯದ ನೆಪದಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ
  • ಎಐ ವಿಡಿಯೋ ಕಳುಹಿಸಿ ಅಪಘಾತದ ನಾಟಕವಾಡಿದ್ದ ಆರೋಪಿ
  • ಬ್ಯಾಟರಾಯನಪುರ ಪೊಲೀಸರಿಂದ 200 ಗ್ರಾಂ ಚಿನ್ನಾಭರಣ ವಶ

ಬೆಂಗಳೂರು, ಅಕ್ಟೋಬರ್ 14: ಜ್ಯೋತಿಷ್ಯ ಹೇಳುವ ನೆಪದಲ್ಲಿ 62 ವರ್ಷದ ಮಹಿಳೆಯನ್ನು ನಂಬಿಸಿ, ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ವೆಂಕಟೇಶ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ವೃದ್ಧೆಯಿಂದ ಪಡೆದಿದ್ದ 300 ಗ್ರಾಂ ಚಿನ್ನಾಭರಣಗಳ ಪೈಕಿ 200 ಗ್ರಾಂ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚನೆ ಬಳಿಕ ಅಪಘಾತದ ಕಥೆ ಕಟ್ಟಿ, ಕೃತಕ ಬುದ್ಧಿಮತ್ತೆ (AI) ಮೂಲಕ ಸಿದ್ಧಪಡಿಸಿದ ವಿಡಿಯೋ ಕಳುಹಿಸಿ ಆರೋಪಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ.

ಅನಾರೋಗ್ಯದ ಸಮಸ್ಯೆ ಹೇಳಿಕೊಂಡಿದ್ದ ಶಾಂತಮ್ಮ

62 ವರ್ಷದ ಶಾಂತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಾಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಅವರಿಗೆ ಜ್ಯೋತಿಷಿ ವೆಂಕಟೇಶ್ ಪರಿಚಯವಾಗಿದ್ದ. ಪದೇಪದೆ ಅನಾರೋಗ್ಯ ಕಾಡುತ್ತಿರುವ ಬಗ್ಗೆ ಶಾಂತಮ್ಮ ಭವಿಷ್ಯ ಕೇಳಿದಾಗ, ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ವೆಂಕಟೇಶ್ ಹೇಳಿದ್ದ. ನಂತರ ಶಾಂತಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು.

ಇದರಿಂದ ಜ್ಯೋತಿಷಿಯ ಮಾತಿನ ಮೇಲೆ ನಂಬಿಕೆ ಬೆಳೆಸಿಕೊಂಡಿದ್ದ ಶಾಂತಮ್ಮ, ಬಳಿಕ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಸಲಹೆ ಪಡೆಯಲು ಆತನನ್ನು ಹುಡುಕಿಕೊಂಡು ಬಂದಿದ್ದರು. ಆದರೆ, ಜ್ಯೋತಿಷಿ ಸಿಗದ ಕಾರಣ ಆಟೋ ಚಾಲಕನ ಬಳಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ತೆರಳಿದ್ದರು.

ನಿಂಬೆಹಣ್ಣು ನೀಡಿ ಚೌಡೇಶ್ವರಿ ಪೂಜೆ ನೆಪದಲ್ಲಿ ವಂಚನೆ

ನಂತರ ಶಾಂತಮ್ಮ ಅವರ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ವೆಂಕಟೇಶ್, ಅವರಿಗೆ ಕರೆ ಮಾಡಿ ಬ್ಯಾಟರಾಯನಪುರದಲ್ಲಿರುವ ಮನೆ ಬಳಿ ಬರುವಂತೆ ತಿಳಿಸಿದ್ದ. ಮನೆಗೆ ಬಂದ ಶಾಂತಮ್ಮ ಅವರಿಗೆ ನಿಂಬೆಹಣ್ಣು ನೀಡಿ, ಚೌಡೇಶ್ವರಿ ಪೂಜೆ ಮಾಡಬೇಕು ಎಂದು ಹೇಳಿದ್ದ. ಮನೆಯಲ್ಲಿದ್ದ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ ಎನ್ನಲಾಗಿದೆ.

ಇದೇ ನೆಪದಲ್ಲಿ ಪ್ರತಿ ಅಮಾವಾಸ್ಯೆಯಂದು ಶಾಂತಮ್ಮ ಅವರ ಮನೆಗೆ ಬರುತ್ತಿದ್ದ ವೆಂಕಟೇಶ್, ಒಡವೆಗಳನ್ನು ಪಡೆದುಕೊಂಡು ಹೋಗುತ್ತಿದ್ದ. ಹೀಗೆ ಸುಮಾರು ಒಂದು ವರ್ಷದಲ್ಲಿ ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ವರಮಹಾಲಕ್ಷ್ಮೀ ಹಬ್ಬದಂದು ಒಡವೆ ಕೇಳಿದಾಗ ಅಪಘಾತದ ಕಥೆ

ಆಗಸ್ಟ್ 19ರಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಶಾಂತಮ್ಮ ಚಿನ್ನಾಭರಣಗಳನ್ನು ವಾಪಸ್ ಕೇಳಿದ್ದರು. ಆದರೆ, ಅದೇ ದಿನ ವೆಂಕಟೇಶ್ ಅಪಘಾತವಾಗಿದೆ ಎಂಬ ಕಥೆ ಕಟ್ಟಿದ್ದ. ತಾನು ಅಪಘಾತಕ್ಕೀಡಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಬಿಂಬಿಸುವ ಎಐ ಮೂಲಕ ಸಿದ್ಧಪಡಿಸಿದ ವಿಡಿಯೋವೊಂದನ್ನು ಶಾಂತಮ್ಮ ಅವರಿಗೆ ಕಳುಹಿಸಿದ್ದ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.

ಇದರಿಂದ ಆತಂಕಗೊಂಡ ಶಾಂತಮ್ಮ, ಈ ವಿಚಾರವನ್ನು ಮಗಳ ಬಳಿ ಹೇಳಿಕೊಂಡಿದ್ದರು. ಮಗಳು ವಿಡಿಯೋ ಪರಿಶೀಲಿಸಿದಾಗ ಅದು ಎಐ ಮೂಲಕ ಸಿದ್ಧಪಡಿಸಿದ ಕೃತಕ ವಿಡಿಯೋ ಎಂಬುದು ಪತ್ತೆಯಾಗಿತ್ತು. ಬಳಿಕ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ಪೊಲೀಸರಿಗೆ ದೂರು ನೀಡಲಾಗಿತ್ತು.

ಆರೋಪಿ ಬಂಧನ, 200 ಗ್ರಾಂ ಚಿನ್ನಾಭರಣ ವಶಕ್ಕೆ

ಪ್ರಕರಣದ ತನಿಖೆ ನಡೆಸಿದ ಬ್ಯಾಟರಾಯನಪುರ ಪೊಲೀಸರು ಆರೋಪಿ ವೆಂಕಟೇಶ್‌ನನ್ನು ಬಂಧಿಸಿದ್ದಾರೆ. ವೃದ್ಧೆಯಿಂದ ಪಡೆದಿದ್ದ 300 ಗ್ರಾಂ ಚಿನ್ನಾಭರಣಗಳ ಪೈಕಿ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 am, Wed, 14 October 26

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು