AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡಿಎಗೆ ಸೇರಿದ 160 ಕೋಟಿ ರೂ. ಮೌಲ್ಯದ ಜಾಗ ಕಬಳಿಕೆ ಯತ್ನ: ಐವರ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರಿನ ಕೊತ್ತನೂರಿನಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 160 ಕೋಟಿ ರೂ. ಮೌಲ್ಯದ ಜಾಗವನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ಆರೋಪದಲ್ಲಿ ಐವರ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಡಿಎ ಅಧಿಕಾರಿಗಳ ತನಿಖೆಯಿಂದ ಈ ಬೃಹತ್ ಹಗರಣ ಬಯಲಿಗೆ ಬಂದಿದೆ.

ಬಿಡಿಎಗೆ ಸೇರಿದ 160 ಕೋಟಿ ರೂ. ಮೌಲ್ಯದ ಜಾಗ ಕಬಳಿಕೆ ಯತ್ನ: ಐವರ ವಿರುದ್ಧ ಎಫ್‌ಐಆರ್ ದಾಖಲು
ಬಿಡಿಎಗೆ ಸೇರಿದ 160 ಕೋಟಿ ರೂ. ಮೌಲ್ಯದ ಜಾಗ ಕಬಳಿಕೆ ಯತ್ನImage Credit source: tv9
ಗಣಪತಿ ಶರ್ಮಾ
|

Updated on:May 02, 2026 | 12:35 PM

Share

ಬೆಂಗಳೂರು, ಮೇ 2: ಬೆಂಗಳೂರಿನಲ್ಲಿ (Bengaluru) 160 ಕೋಟಿ ರೂ. ಮೌಲ್ಯದ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಜಮೀನನ್ನು ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಕಬಳಿಕೆ ಮಾಡಲು ಯತ್ನಿಸಿದ ಪ್ರಕರಣವು ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣದ ಕೊತ್ತನೂರಿನಲ್ಲಿರುವ ಬಿಡಿಎ ಆಸ್ತಿ ಕಬಳಿಕೆ ಆರೋಪ ಸಂಬಂಧ ಲಕ್ಷ್ಮೀನಾರಾಯಣ, ಮಾರುತಿ ಕುಮಾರ್ ಸೇರಿದಂತೆ ಐವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದೆ.

ಬಿಡಿಎ ಆಸ್ತಿ ಕಬಳಿಕೆ ಯತ್ನ ಪ್ರಕರಣದ ಹಿನ್ನೆಲೆ

ಡಿವೈಎಸ್‌ಪಿ ಹನುಮಂತರಾಯ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಸರ್ಕಾರಿ ಜಾಗವನ್ನು ನಕಲಿ ದಾಖಲೆಗಳ ಮೂಲಕ ಗುಳುಂ ಮಾಡಲು ಯತ್ನಿಸಿದ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ 160 ಕೋಟಿ ರೂ. ಮೌಲ್ಯದ ಜಾಗವು ಸರ್ವೆ ನಂಬರ್ 177/1 ಮತ್ತು 176/1 ರಲ್ಲಿ ಬರುವ 10 ಗುಂಟೆ ಆಸ್ತಿಯಾಗಿದೆ. ಬಿಡಿಎ ಈ ಆಸ್ತಿಯನ್ನು 1994ರ ಅಕ್ಟೋಬರ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿತ್ತು. 1995ರ ಡಿಸೆಂಬರ್‌ನಲ್ಲಿ ಇದಕ್ಕೆ ಸಂಬಂಧಿಸಿದ ತೀರ್ಪು ಅನುಮೋದನೆಗೊಂಡಿತ್ತು ಮತ್ತು 1999ರಲ್ಲಿ ಇದನ್ನು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.

ನಕಲಿ ದಾಖಲೆ ಸೃಷ್ಟಿಸಿ ಕೃತ್ಯ

ಈ ಜಮೀನು ಬಿಡಿಎಗೆ ಸೇರಿದ್ದೆಂದು ಕರ್ನಾಟಕ ಹೈಕೋರ್ಟ್ ಸಹ ಆದೇಶ ನೀಡಿತ್ತು. ಅಷ್ಟೇ ಅಲ್ಲದೆ, 1996ರಲ್ಲಿ ವಾರಸುದಾರರಾದ ಮಾರಿಯಮ್ಮ ಅವರಿಗೆ ಬಿಡಿಎ ಕಡೆಯಿಂದ ಪರಿಹಾರವನ್ನೂ ನೀಡಲಾಗಿತ್ತು. ಆದರೂ, ಆರೋಪಿಗಳು ನಕಲಿ ಜಿಪಿಎ ದಾಖಲೆಗಳನ್ನು ಸೃಷ್ಟಿಸಿ ಈ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ್ದಾರೆ. ಇತ್ತೀಚೆಗೆ ಹರ್ಷವರ್ಧನ್ ಎಂಬುವರು ಬಿಡಿಎ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದ್ದರು. ಡಿವೈಎಸ್‌ಪಿ ಹನುಮಂತರಾಯ ಅವರು ಈ ದೂರಿನ ತನಿಖೆ ನಡೆಸಿ, ನಕಲಿ ದಾಖಲೆಗಳ ಸೃಷ್ಟಿ ನಡೆದಿರುವುದನ್ನು ಖಚಿತಪಡಿಸಿಕೊಂಡ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ

ಪ್ರತ್ಯೇಕ ಸರ್ವೆ ನಂಬರ್‌ಗಳ ಕಾರಣದಿಂದ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Sat, 2 May 26

Follow Us
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ