AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದರೂ ಡೇಟಿಂಗ್ ಆ್ಯಪ್ ಬಳಸುವವರಲ್ಲಿ ಬೆಂಗಳೂರಿಗೆ ನಂಬರ್ 1 ಸ್ಥಾನ!

ಬೆಂಗಳೂರು ಐಟಿ-ಬಿಟಿ ಸಿಟಿ, ಸಿಲಿಕಾನ್ ಸಿಟಿ, ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಹೀಗೆ ಏನೇನೋ ಕಾರಣಗಳಿಂದ ವಿಶ್ವದ ಗಮನ ಸೆಳೆಯುತ್ತಲೇ ಇದೆ. ಅಂದಹಾಗೆ, ಬೆಂಗಳೂರು ಈಗ ಮತ್ತೊಂದು ಕಾರಣಕ್ಕೆ ಭಾರೀ ಸುದ್ದಿಯಾಗುತ್ತಿದೆ. ಮದುವೆಯಾದರೂ ಲೈಂಗಿಕ ತೃಪ್ತಿ ಹೊಂದಲು ಸಾಧ್ಯವಾಗದೆ ಇರುವವರು ವಿವಾಹೇತರ ಡೇಟಿಂಗ್ ಆ್ಯಪ್ ಬಳಸುವ ಪ್ರಮಾಣ ವಿಪರೀತ ಹೆಚ್ಚಾಗಿದೆಯಂತೆ. ಈ ಆ್ಯಪ್ ಬಳಸುವವರಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹಾಗೇ, ಈ ಸಂಖ್ಯೆಯಲ್ಲಿ ಶೇ. 54ರಷ್ಟು ಬೆಂಗಳೂರಿಗರು ಎಐ ಲೈಂಗಿಕ ಸಂಗಾತಿಯನ್ನು ಹೊಂದಿದ್ದಾರಂತೆ!

ಮದುವೆಯಾದರೂ ಡೇಟಿಂಗ್ ಆ್ಯಪ್ ಬಳಸುವವರಲ್ಲಿ ಬೆಂಗಳೂರಿಗೆ ನಂಬರ್ 1 ಸ್ಥಾನ!
Dating AppImage Credit source: iStock
ಸುಷ್ಮಾ ಚಕ್ರೆ
|

Updated on: Apr 01, 2026 | 5:06 PM

Share

ಬೆಂಗಳೂರು, ಏಪ್ರಿಲ್ 1: ಮದುವೆಯಾದರೂ ಡೇಟಿಂಗ್ ಆ್ಯಪ್ (Dating App) ಬಳಸುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ಸಮೀಕ್ಷೆಯೊಂದು ಬೆಳಕಿಗೆ ತಂದಿದೆ. ಮದುವೆಯಾದರೂ ತಮ್ಮ ಅಕ್ರಮ ಸಂಬಂಧಕ್ಕಾಗಿ ಡೇಟಿಂಗ್ ಆ್ಯಪ್ ಮೂಲಕ ಸಂಗಾತಿಯನ್ನು ಹೊಂದುವವರ ಸಂಖ್ಯೆಯಲ್ಲಿ ಬೆಂಗಳೂರು (Bengaluru) ಭಾರತದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದರಲ್ಲಿ 30-45 ವರ್ಷ ವಯಸ್ಸಿನ ಬಳಕೆದಾರರ ಸಂಖ್ಯೆ ಗಣನೀಯವಾಗಿದೆ. ಗ್ಲೀಡೆನ್‌ ಎಂಬ ಆ್ಯಪ್ ಮಾಡಿರುವ ಸಮೀಕ್ಷೆ ಈ ವಿಷಯವನ್ನು ಬಹಿರಂಗಪಡಿಸಿದೆ. ತಂತ್ರಜ್ಞಾನ ಮುಂದುವರೆದಂತೆ ಅದರಿಂದಾಗುವ ಅಡ್ಡಪರಿಣಾಮಗಳೂ ಕಡಿಮೆಯೇನಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ಈ ಅಧ್ಯಯನ ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಂವಹನ, ಭಾವನಾತ್ಮಕ ಅತೃಪ್ತಿ ಮತ್ತು ಸ್ವಾತಂತ್ರ್ಯದ ಬಯಕೆ ಈ ರೀತಿ ವಿವಾಹೇತರ ಸಂಬಂಧಕ್ಕಾಗಿ ಹಪಹಪಿಸಲು ಕಾರಣವಾಗುತ್ತವೆ ಎಂದು ಸೂಚಿಸುತ್ತವೆ. ಏಕೆಂದರೆ, ನಗರ ಪ್ರದೇಶಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಈ ರೀತಿಯ ಆ್ಯಪ್​ಗಳ ಬಳಕೆ ತೀರಾ ಇಲ್ಲವೇ ಇಲ್ಲ ಎನ್ನಬಹುದು.

ಗ್ಲೀಡೆನ್ ಎಂಬುದು ಒಂದು ವಿವಾಹೇತರ ಡೇಟಿಂಗ್ ಪ್ಲಾಟ್​ಫಾರ್ಮ್. ಗ್ಲೀಡೆನ್‌ನ 2025ರ ಸಮೀಕ್ಷೆಯ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 1.35 ಲಕ್ಷ ಬಳಕೆದಾರರು ಈ ಆ್ಯಪ್​ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹೆಚ್ಚಾಗಿ ದೈಹಿಕ ಅನ್ಯೋನ್ಯತೆಗಿಂತ ಭಾವನಾತ್ಮಕತೆಯನ್ನು ಬಯಸುತ್ತಾರೆ ಎಂದು ಈ ಅಧ್ಯಯನ ಸೂಚಿಸಿದೆ.

ಇದನ್ನೂ ಓದಿ: ಸದ್ದಿಲ್ಲದೆ 2ನೇ ಮದುವೆ: ತಾಳಿ ಕಟ್ಟೋ ಟೈಮಿಗೆ ಮೊದಲ ಹೆಂಡ್ತಿ ಎಂಟ್ರಿ, ಮುಂದೇನಾಯ್ತು?

ಬೆಂಗಳೂರು ನಗರದಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ, ಈ ಆ್ಯಪ್ ಬಳಕೆದಾರರು ಸಾಮಾನ್ಯವಾಗಿ ತಮ್ಮ ಸಂಗಾತಿಯ ಜೊತೆ ಭಾವನಾತ್ಮಕ ಸಂಬಂಧ ಇಲ್ಲದಿರುವುದು, ಅನ್ಯೋನ್ಯತೆಯ ಕೊರತೆಯ ಕಾರಣದಿಂದ ಈ ಆ್ಯಪ್ ಬಳಸುತ್ತಿರುವುದಾಗಿ ಹೇಳಕೊಂಡಿದ್ದಾರೆ.

2025ರ ಅಂತ್ಯದ ವೇಳೆಗೆ ಗ್ಲೀಡೆನ್‌ನ ಭಾರತೀಯ ಬಳಕೆದಾರರ ಸಂಖ್ಯೆಯನ್ನು ಬೆಂಗಳೂರಿನ ಬಳಕೆದಾರರು ಸರಿಸುಮಾರು ಶೇ. 17 ರಷ್ಟಿದ್ದಾರೆ. ಇವರಲ್ಲಿ ಹೆಚ್ಚಿನ ಬಳಕೆದಾರರು ಹಣಕಾಸು, ಕಾನೂನು, ಎಂಜಿನಿಯರಿಂಗ್ ಮತ್ತು ಉದ್ಯಮಶೀಲತೆಯಂತಹ ಶ್ರೀಮಂತ ಹಿನ್ನೆಲೆಯಿಂದ ಬಂದ 30ರಿಂದ 45 ವರ್ಷ ವಯಸ್ಸಿನ ವೃತ್ತಿಪರರು.

ಇದನ್ನೂ ಓದಿ: ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ಟೆಕ್ಕಿಗೆ ಪಂಗನಾಮ

ವಿವಾಹೇತರ ಡೇಟಿಂಗ್ ವೇದಿಕೆಯಾದ ಗ್ಲೀಡೆನ್ ತನ್ನ ಭಾರತೀಯ ಬಳಕೆದಾರರ ನೆಲೆಯಿಂದ ಸಮೀಕ್ಷೆಯ ಡೇಟಾವನ್ನು ಬಿಡುಗಡೆ ಮಾಡಿದೆ. ಇದು 2026ರಲ್ಲಿ ಭಾರತೀಯರು ಸಂಬಂಧಗಳು, ಅನ್ಯೋನ್ಯತೆ ಮತ್ತು ಒಂಟಿತನವನ್ನು ಹೇಗೆ ಹೆಚ್ಚಾಗಿ ಅನುಭವಿಸುತ್ತಿದ್ದಾರೆ ಎಂಬುದರ ವಿವರವಾದ ಚಿತ್ರಣವನ್ನು ನೀಡುತ್ತಿದೆ. ಈ ವೇದಿಕೆಯು ಭಾರತದಲ್ಲಿ 4 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಶೇ. 54ರಷ್ಟು ಬೆಂಗಳೂರಿನ ಬಳಕೆದಾರರು ಎಐ ಲೈಂಗಿಕ ಪಾರ್ಟನರ್​ ಅನ್ನು ಕೂಡ ಹೊಂದಿದ್ದಾರೆ ಎಂದು ಸಮೀಕ್ಷೆ ಸೂಚಿಸಿದೆ. ಬೆಂಗಳೂರು ಗ್ಲೀಡೆನ್‌ನಲ್ಲಿ ಬೇರೆ ಭಾರತೀಯ ನಗರಕ್ಕಿಂತ ಅತಿ ಹೆಚ್ಚು ಸೈನ್-ಅಪ್‌ಗಳನ್ನು ಹೊಂದಿದೆ. ಇದು ಪ್ರಮುಖ ಮೆಟ್ರೋ ನಗರಗಳಾದ ಹೈದರಾಬಾದ್ ಮತ್ತು ದೆಹಲಿಗಿಂತ ಮೇಲ್ಭಾಗದಲ್ಲಿದೆ.

ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಟೈಯರ್-2 ನಗರದ ದತ್ತಾಂಶ. ಲಕ್ನೋ, ನೋಯ್ಡಾ, ಚಂಡೀಗಢ, ಸೂರತ್, ಕೊಯಮತ್ತೂರು, ಭುವನೇಶ್ವರ, ಪಾಟ್ನಾ, ಗುವಾಹಟಿ ಮತ್ತು ರಾಯ್‌ಪುರಗಳು ಈ ಆ್ಯಪ್ ಬಳಸುವವರ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತಿವೆ. ಹಾಗೇ, ಕಳೆದ 2 ವರ್ಷಗಳಲ್ಲಿ ಮಹಿಳಾ ಬಳಕೆದಾರರ ಸಂಖ್ಯೆ ಶೇ. 148ರಷ್ಟು ಹೆಚ್ಚಾಗಿದೆ ಎಂಬುದು ಇನ್ನಷ್ಟು ಮುಖ್ಯವಾದ ಸಂಗತಿ. ಇವೆಲ್ಲವೂ ಭಾರತದಲ್ಲಿ ಆಧುನಿಕತೆ ಹೆಚ್ಚಾದಂತೆ ಅದು ಸಂಬಂಧಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ