AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಪಿಎಸ್ ಇಲ್ಲದರೂ ಹಡಗು, ವಿಮಾನ ಪತ್ತೆ: ಬೆಂಗಳೂರಿನ ಸ್ಟಾರ್ಟ್‌ಅಪ್ ಹೊಸ ಪ್ರಯತ್ನ!

ಬೆಂಗಳೂರಿನ ಸ್ಟಾರ್ಟ್‌ಅಪ್ ಕ್ಸೋವಿಯನ್ ಏರೋಸ್ಪೇಸ್ GPS ಇಲ್ಲದೆಯೂ ಹಡಗು ಮತ್ತು ವಿಮಾನಗಳನ್ನು ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಅಕ್ರಮ ಮೀನುಗಾರಿಕೆ, ಕಳ್ಳಸಾಗಣೆ ಮತ್ತು 'ಡಾರ್ಕ್ ಶಿಪ್ಪಿಂಗ್' ತಡೆಯಲು ಇದು ಸಹಾಯಕವಾಗಿದೆ. ISRO ಮಾಜಿ ವಿಜ್ಞಾನಿಗಳ ತಂಡ ಸಿದ್ಧಪಡಿಸಿದ ಈ ತಂತ್ರಜ್ಞಾನವು ರಕ್ಷಣಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಲಿದೆ.

ಜಿಪಿಎಸ್ ಇಲ್ಲದರೂ ಹಡಗು, ವಿಮಾನ ಪತ್ತೆ: ಬೆಂಗಳೂರಿನ ಸ್ಟಾರ್ಟ್‌ಅಪ್ ಹೊಸ ಪ್ರಯತ್ನ!
Bengaluru Startup Tracks Ships, Aircraft Even With Gps OffImage Credit source: google
ಭಾವನಾ ಹೆಗಡೆ
|

Updated on: Apr 05, 2026 | 12:44 PM

Share

ಬೆಂಗಳೂರು, ಏಪ್ರಿಲ್ 05: ಪಶ್ಚಿಮ ಏಷ್ಯಾ ಸಂಕಷ್ಟದ ಹಿನ್ನೆಲೆ ಕಳ್ಳ ಸಾಗಣೆ, ಅಕ್ರಮ ಮೀನುಗಾರಿಕೆ ಹಾಗೂ ‘ಡಾರ್ಕ್ ಶಿಪ್ಪಿಂಗ್’ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ, ಬೆಂಗಳೂರಿನ (Bengaluru) ಸ್ಟಾರ್ಟ್‌ಅಪ್ ಕ್ಸೋವಿಯನ್ ಏರೋಸ್ಪೇಸ್ ಜಿಪಿಎಸ್ ಆಫ್ ಇದ್ದರೂ ಹಡಗು ಮತ್ತು ವಿಮಾನಗಳನ್ನು ಪತ್ತೆಹಚ್ಚುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಕೃತಕ ಬುದ್ಧಿಮತ್ತೆ (AI) ಆಧಾರಿತ ರೇಡಿಯೋ ಫ್ರೀಕ್ವೆನ್ಸಿ ಸಾಧನವು ಹಡಗುಗಳು, ವಿಮಾನಗಳು, ರಕ್ಷಣಾ ಕ್ಷೇತ್ರ ಹಾಗೂ ಕೈಗಾರಿಕಾ ಬಳಕೆಗೆ ಉಪಯುಕ್ತವಾಗಿದೆ. ವಾಣಿಜ್ಯ ಶಿಪ್ಪಿಂಗ್ ಕಂಪನಿಗಳೊಂದಿಗೆ ಪೈಲಟ್ ಯೋಜನೆಗಳು ನಡೆಯುತ್ತಿದ್ದು, ಭಾರತೀಯ ರಕ್ಷಣಾ ವಲಯದೊಂದಿಗೆ ಚರ್ಚೆಗಳು ಮುಂದುವರಿದಿವೆ ಎಂದು ಕಂಪನಿಯ ಸಹ-ಸ್ಥಾಪಕ ಅಂಕಿತ್ ಭಾತೇಜಾ ತಿಳಿಸಿದ್ದಾರೆ.

ನಿವೃತ್ತ ವಿಜ್ಞಾನಿಗಳ ತಂಡದಿಂದ ಕಾರ್ಯ

ಐಎಸ್ಆರ್‌ಒ ನಿವೃತ್ತ ವಿಜ್ಞಾನಿಗಳನ್ನೊಳಗೊಂಡ 14 ಸದಸ್ಯರ ತಂಡ ಎರಡು ವರ್ಷಗಳ ಪರಿಶ್ರಮದ ಬಳಿಕ ಈ ತಂತ್ರಜ್ಞಾನವನ್ನು ಪರಿಚಯಿಸಿದೆ. ಸಾಮಾನ್ಯವಾಗಿ ಟ್ರ್ಯಾಕಿಂಗ್ ಜಿಪಿಎಸ್ ಮತ್ತು ಉಪಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಜಿಪಿಎಸ್ ಆಫ್ ಮಾಡಿದರೂ, ಈ ಸಾಧನವು ಹಡಗು ಅಥವಾ ವಿಮಾನಗಳಿಂದ ಹೊರಬರುವ ರೇಡಿಯೋ ಫ್ರೀಕ್ವೆನ್ಸಿ ಸಿಗ್ನಲ್‌ಗಳನ್ನು ಹಾಗೂ ಅವು ಬಿಟ್ಟಿರುವ ಎಲೆಕ್ಟ್ರೋಮ್ಯಾಗ್ನೆಟಿಕ್ ಗುರುತುಗಳನ್ನು ವಿಶ್ಲೇಷಿಸಿ ಪತ್ತೆಹಚ್ಚುತ್ತದೆ.

ಹಡಗುಗಳು ಸಾಮಾನ್ಯವಾಗಿ AIS ಬ್ಯಾಂಡ್‌ನಲ್ಲಿ 160 MHz ಫ್ರೀಕ್ವೆನ್ಸಿಯಲ್ಲಿ ಸಿಗ್ನಲ್ ನೀಡುತ್ತವೆ. AIS ಆಫ್ ಮಾಡಿದರೂ, ಇತರ ಸಾಧನಗಳಿಂದ ಹೊರಬರುವ ಸಿಗ್ನಲ್‌ಗಳ ಮೂಲಕ ಅವುಗಳನ್ನು ಗುರುತಿಸಲು ಸಾಧ್ಯ. ಎಲ್ಲಾ ಸಂಪರ್ಕ ವ್ಯವಸ್ಥೆಗಳು ಆಫ್ ಇದ್ದರೂ ಕೊನೆಯ ಸ್ಥಳ ಮಾಹಿತಿ ಹಾಗೂ ಸುತ್ತಮುತ್ತಲಿನ ಚಲನವಲನ ಆಧರಿಸಿ ಲೊಕೇಶನ್ ಅಂದಾಜು ಮಾಡುತ್ತದೆ ಎಂದು ಹೇಳಲಾಗಿದೆ.

ಈಗ ಬಹುಮೂಲಗಳ ಡೇಟಾ ಬಳಕೆಯಿಂದ ಸುಮಾರು 20 ನಿಮಿಷಗಳ ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ವಂತ ಉಪಗ್ರಹವನ್ನು ಉಡಾಯಿಸಿದ ಬಳಿಕ ಈ ಸಮಯವನ್ನು ಕೆಲವೇ ನಿಮಿಷಗಳಿಗೆ ಇಳಿಸುವ ಯೋಜನೆ ಇದೆ.ಈ ಸಂಬಂಧ ISRO ಹಾಗೂ ಅಂತರರಾಷ್ಟ್ರೀಯ ಉಡಾವಣಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಭತೇಜಾ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us