ವಸತಿ ಯೋಜನೆಯಲ್ಲಿ 55% ಬೆಲೆ ಏರಿಕೆ, ಮುಂಬರುವ ದುಬಾರಿ ಮನೆಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಸಿಗಲಿದೆ; ವರದಿ
2024 ರ ದ್ವಿತೀಯಾರ್ಧದಲ್ಲಿ ಬೆಂಗಳೂರು ಸರಾಸರಿ ಬಾಡಿಗೆ ಮೌಲ್ಯದಲ್ಲಿ ಶೇಕಡಾ 10 ರಷ್ಟು ಹೆಚ್ಚಳವನ್ನು ಕಂಡಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆಗಳು 55% ಬೆಲೆ ಏರಿಕೆಯನ್ನು ದಾಖಲಿಸಿವೆ. ಇದು ಧನಾತ್ಮಕ ಬದಲಾವಣೆಗಳನ್ನು ತಂದಿವೆ ಎಂದು ಆಸ್ತಿ ಸಲಹಾ ಸಂಸ್ಥೆ ಸ್ಯಾವಿಲ್ಸ್ ಇಂಡಿಯಾದ ವರದಿ ಹೇಳಿದೆ.
ಭಾರತದ ವಸತಿ ಮಾರುಕಟ್ಟೆಯು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು, 2024 ರ ಕೊನೆಯಲ್ಲಿ 3.05 ಲಕ್ಷ ಅಪಾರ್ಟ್‌ಮೆಂಟ್‌ಗಳು ಮಾರಾಟವಾಗುವ ಮೂಲಕ ಹೌಸಿಂಗ್ ಮಾರ್ಕೆಟ್ ಹೊಸ ದಾಖಲೆಯನ್ನು ಬರೆದಿತ್ತು. ಅದರಂತೆ ಈ ಬಾರಿಯೂ ವಸತಿ ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬಂದಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆಗಳು 55% ಬೆಲೆ ಏರಿಕೆಯನ್ನು ದಾಖಲಿಸಿವೆ. ಮುಂಬರುವ ದಿನಗಳಲ್ಲಿ ದುಬಾರಿ ಮನೆಗಳು ಸೇಲ್ ಆಗುವ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಲಭಿಸಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಸ್ಯಾವಿಲ್ಸ್ ಇಂಡಿಯಾದ ವರದಿ ಹೇಳಿದೆ.
ಸ್ಯಾವಿಲ್ಸ್ ಇಂಡಿಯಾದ ಜನವರಿ 3 ರ ವರದಿಯ ಪ್ರಕಾರ, “ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಳು ಕಳೆದ ಒಂದು ವರ್ಷದಲ್ಲಿ ಸುಮಾರು 55% ರಷ್ಟು ಬೆಲೆ ಏರಿಕೆಯನ್ನು ದಾಖಲಿಸಿವೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರೀಮಿಯಂ ವಸತಿ ಯೋಜನೆಗಳು ಸಹ 55% ವರೆಗೆ ಬೆಲೆ ಏರಿಕೆಯನ್ನು ಕಂಡಿವೆ . ಗುರುಗ್ರಾಮ 55% ಮತ್ತು ಮುಂಬೈ 10% ಹೆಚ್ಚಳದೊಂದಿಗೆ ನಿರ್ಮಾಣ ಹಂತದಲ್ಲಿರುವ ಆಸ್ತಿ ಮೌಲ್ಯಗಳಲ್ಲಿ ಏರಿಕೆಯನ್ನು ಕಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಂಗಳೂರು 25% ಮತ್ತು ಉತ್ತರ ಗೋವಾ 16% ರಷ್ಟು ಲಾಭವನ್ನು ಕಂಡಿವೆ.” ಉನ್ನತ ಮಟ್ಟದ ಸೌಕರ್ಯಗಳು, ಹೊಸ ಹೊಸ ಯೋಜನೆಗಳು ಇವೆಲ್ಲವೂ ಹೂಡಿಕೆ ಮಾಡಲು ಖರೀದಿದಾರರನ್ನು ಪ್ರೋತ್ಸಾಹಿಸಿತು ಎಂಬುದನ್ನು ಕೂಡಾ ಹೇಳಿದೆ.
ಇದನ್ನೂ ಓದಿ: ಹಣದ ವಿಚಾರವಾಗಿ ಭಾರತೀಯ ಮಹಿಳೆಯರು ತಮ್ಮ ಗಂಡಂದಿರನ್ನು ನಂಬಲ್ಲವಂತೆ; ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಬೆಂಗಳೂರಿನ ಪ್ರೀಮಿಯಂ ವಸತಿ ಮಾರುಕಟ್ಟೆಯು ನಿರ್ಮಾಣ ಹಂತದಲ್ಲಿರುವ ಪ್ರಾಜೆಕ್ಟ್‌ಗಳಲ್ಲಿ ಸರಾಸರಿ 25% YOY ಬೆಳವಣಿಗೆಯನ್ನು ಕಂಡಿದೆ, ಪೂರ್ಣಗೊಂಡ ಯೋಜನೆಗಳಲ್ಲಿ ಸುಮಾರು 19% YOY ಏರಿಕೆಯಾಗಿದೆ. ಅಲ್ಲದೆ 2024 ರ ದ್ವಿತೀಯಾರ್ಧದಲ್ಲಿ ಬೆಂಗಳೂರು ಸರಾಸರಿ ಬಾಡಿಗೆ ಮೌಲ್ಯದಲ್ಲಿ ಶೇ 10% ರಷ್ಟು ಹೆಚ್ಚಳವನ್ನು ಕಂಡಿದೆ. ಜೊತೆಗೆ ರೆಡಿ-ಟು-ಮೂವ್-ಇನ್ ಪ್ರಾಪರ್ಟಿಗಳಿಗೆ ಬಲವಾದ ಆದ್ಯತೆ ಇದೆ. ಇವೆಲ್ಲಾ ಅಂಶಗಳು . ಮುಂಬರುವ ದಿನಗಳಲ್ಲಿ ದುಬಾರಿ ಮನೆಗಳು ಸೇಲ್ ಆಗುವ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಲಭಿಸಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಸ್ಯಾವಿಲ್ಸ್ ಇಂಡಿಯಾದ ವರದಿ ಹೇಳಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ